ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೈಲಾರಲಿಂಗ

ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನೆ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನಿ ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊರತು ಕೆಡುಕು ಮಾಡಲಿಲ್ಲ. ಸಮರವೆಂಬುದು ಅಮಂಗಳ ಎಂಬ ಭಾವನೆ ಆತನದು. ಮಹಾಕವಿ ಕುವೆಂಪು ಅವರು ಶಿವ ಎಂಬ ಪದವನ್ನು ಸುಂದರವಾದದ್ದು, ಮಂಗಳಕರವಾದದ್ದು ಎಂಬುದಕ್ಕೆ ಸಂವಾದಿಯಾಗಿ ಬಳಸಿದ್ದಾರೆ. ಸತ್ಯ ಶಿವ ಸೌಂದರ್ಯಕ್ಕೆ ನಮಿಸುವ ನಾವು ನಮ್ಮ ದೇಶದಲ್ಲಿ ಶಿವನಿಗೆ ಮೇರುಸ್ಥಾನವನ್ನೇ ನೀಡಿದ್ದೇವೆ. ಪ್ರಕೃತಿಯ ಆರಾಧಕನಾದ ಮಾನವ ಪ್ರಕೃತಿಯಲ್ಲಿ ಸೌಂದರ್ಯವನ್ನು ಅಂದರೆ ಶಿವನನ್ನು ಕಂಡಿದ್ದಾನೆ. ಕಲ್ಲಬಂಡೆಗಳ ಲಿಂಗರೂಪವೆಲ್ಲ ಶಿವನೇ. ಲಿಂಗರೂಪದ ಬೆಟ್ಟಗಳೆಲ್ಲ ಶಿವನ ತಾಣಗಳು. ಆತ ಮಲೆಯವಾಸಿ. ಕನ್ನಡದ ಮಲೆ+ಅಯ್ಯ> ಮಲೆಯಯ್ಯ> ಮಲ್ಲಯ್ಯನಾಗಿ ವಿಜೃಂಭಿಸಿದ್ದಾನೆ. ಜನಪದರು ಅವನನ್ನು ಮಲೆಮಾದಯ್ಯ, ಪರ್ವತಪ್ಪ, ಗುಡ್ಡಯ್ಯ, ಗಿರಿಯಪ್ಪ, ಗಿರಿಗೌಡ ಇತ್ಯಾದಿಯಾಗಿ ಕರೆದಿದ್ದಾರೆ. ಆದರೆ ಎಲ್ಲೂ ಶಿವನನ್ನು ಮಲ್ಲಾರಿ, ಮೈಲಾರಿ ಎಂದು ಕರೆದ ಉದಾಹರಣೆಯಿಲ್ಲ.
ಈ ನಿಟ್ಟಿನಲ್ಲಿ ನಾವು ಸ್ವಲ್ಪ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳ ಹಿನ್ನೆಲೆ ಮುನ್ನೆಲೆಗಳನ್ನು ಮನನ ಮಾಡಬೇಕಾಗುತ್ತದೆ.
ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ೩ ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.
ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲುಗಳ ಕಥೆಯೂ ಹೀಗೇ ಆಗಿ ಇಂದು ಅವು ಶಕ್ತಿದೇವತೆಗಳ ಗುಡಿಗಳಾಗಿರುವುದು ವೇದ್ಯವಾದ ಸಂಗತಿಯೇ.
ಬಹುಶಃ ಮೈಲಾರಲಿಂಗವೂ ಇಂಥ ಒಂದು ವೀರಸ್ಮರಣೆಯ ಪ್ರತೀಕವಾಗಿದ್ದು ಅನಂತರ ದೈವೀರೂಪ ತಳೆದಿರಬೇಕು. ಈ ಮೈಲಾರಲಿಂಗನ ಭಕ್ತರು ಬ್ರಾಹ್ಮಣರಲ್ಲೂ ಇದ್ದಾರೆಂಬುದೇ ಮತ್ತೊಂದು ವಿಶೇಷ. ಮರಾಟಿಗರು ಪೂಜಿಸುವ ಖಂಡೋಬ (ಖಡ್ಗ ಹಿಡಿದ ವೀರ), ತೆಲುಗರು ಪೂಜಿಸುವ ಮಲ್ಲಿಕಾರ್ಜುನ ಹಾಗೂ ಕನ್ನಡಿಗರ ಮೈಲಾರ ಇವೆಲ್ಲ ವೀರಪುರುಷನೊರ್ವನ ವಿವಿಧ ರೂಪಗಳು. ಏಕೆಂದರೆ ನಮ್ಮ ದೇಶೀ ದೈವವಾದ ಶಿವನು ಎಂದು ಖಡ್ಗ ಹಿಡಿದವನಲ್ಲ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mahesha's picture

ಜೋಸೆಪರೇ...

ನಿಮ್ಮದು ಮತ್ತೊಂದು ಒಳ್ಳೆಯ ಬರಹ.!!

ವೀರಗಲ್ಲು, ಮಾಸ್ತಿಗಲ್ಲು, ಲಿಂಗ, ಶಿವ, ಇವುಗಳ ಬಗ್ಗೆ ಇಷ್ಟು ಆಳವಾಗಿ, ಸರಳವಾಗಿ ಹೇಳಿವ ನಿಮ್ಮೀ ಬರಹ ತುಂಬ ಚನ್ನಾಗಿದೆ.

ಈ ಸಂಗತಿಯನ್ನು ನೀವು ಹೇಗೆ ಪಡೆದಿರಿ ಎಂದು ಅರುಹುವಿರಾ?

ಈ ಬರಹಕ್ಕೆ ನನ್ನಿ!

muralihr's picture

ಏನ್ ಸ್ವಾಮಿ ಹಿ೦ಗ್ ಅ೦ದ್ರೀ !
ಕುಮಾರವ್ಯಾಸ ಭಾರತದಲ್ಲಿ ಕಿರಾತ ವೇಷ ಧರಿಸಿ ಕುಸ್ತಿ ಮಾಡೋದಿಲ್ವೇನು ?

*******************
ಅರ್ಜುನ : ಎಲೆ ಕಿರಾತ ಮದೀಯ ಬಾಣದ
ಬಲೆಗೆ ನೀ ಮೃಗ ವಾಗದಿರು ನಿ
ನ್ನಳವ ಮೆರೆಯಾ ಬನದ ನರಿ ಮೊಲ ಹುಲ್ಲೆ ಹರಿಣ ನಲಿ
ಗೆಲಿದ ಗರುವನು ನೀನು ನಿನ್ನ್
ಗ್ಗಳಿಕೆ ಗಾವ೦ಜುವೆವು ನಿನ್ನೀ
ದಳಕೆ ಪತಿಯು೦ಟಾದಡಾತನ ಕೊ೦ಡು ಬಾಯೆ೦ದ.\\

ಎನಲು ನಕ್ಕನು ಶ೦ಭು ಭಕ್ತನ
ಮನದ ಧೃತಿಯನು ಭುಜ ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ.

ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ.

ಪಾಪ ರಕ್ತ ಬರುವ ಹಾಗೇ ತನ್ನ ಭಕ್ತನನ್ನು ಹೊಡೆಯುವ ದೈವ ಶಿವನನ್ನು ಬಿಟ್ಟೂ ಮತ್ತೊಬ್ಬನಿಲ್ಲಾ.
ಅದಕ್ಕೆ ಈ ದೇವರುಗಳನ್ನು ಪೂಜಿಸುವ ಗೊಡವೆಗೆ ಹೋಗಿಲ್ಲಾ.

mahesha's picture

ಪಾಪ ರಕ್ತ ಬರುವ ಹಾಗೇ ತನ್ನ ಭಕ್ತನನ್ನು ಹೊಡೆಯುವ ದೈವ ಶಿವನನ್ನು ಬಿಟ್ಟೂ ಮತ್ತೊಬ್ಬನಿಲ್ಲಾ.
ಅದಕ್ಕೆ ಈ ದೇವರುಗಳನ್ನು ಪೂಜಿಸುವ ಗೊಡವೆಗೆ ಹೋಗಿಲ್ಲಾ.

ಸಿವ ಸಿವಾ!! ಹಿಂಗಲ್ಲ ಅನ್ನೋರ್‍ನ ಸಿವ ಸುಮ್ಕೆ ಬಿಡಕ್ಕಿಲ್ಲ. ಮುರುಳಿ ಆತ್ಮ.. ನಿಮ್ಗೆ ಏನೋ ಗರಚಾರ ಕಾದಯ್ತೆ! :)

ಕನ್ನಡದಲ್ಲಿ ಸಿವನ ಹೆಸರುಗಳು

ನಿಂಗ(ಲಿಂಗ), ಬೋರ(ಬೋಳ), ಮಲೆಯಪ್ಪ, ಮಲ್ಲಪ್ಪ, ಮಲ್ಲ, ಮಾದ, ಮಾದೇವ, ಮುಕ್ಕಣ್ಣ, ನಂಜ, ಬೆಟ್ಟಪ್ಪ, ಗುಡ್ಡಪ್ಪ, ಹಾವಪ್ಪ, ಈರ, ಬೀರ,

ಅಪ್ಪಗಳ ಜಾಗದಲ್ಲಿ ಅಯ್ಯಗಳೂ ಇವೆ.