ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬೆಂಗಳೂರು ಟಾಪ್‌ಟೆನ್

September 24, 2005 - 4:01pm — pavanaja

ಇಂಟರ್‌ನೆಟ್ ಮೂಲಕ ಹರಿದಾಡುವ ಇಮೈಲ್ ಜೋಕುಗಳಲ್ಲಿ ಟಾಪ್‌ಟೆನ್‌ಗಳು ಅತಿ ಜನಪ್ರಿಯ. ಉದಾಹರಣೆಗೆ ಹಿಂದಿ ಚಲನಚಿತ್ರಗಳ ಟಾಪ್‌ಟೆನ್ ಡೈಲಾಗುಗಳು. ಅವೇ ಮಾದರಿಯಲ್ಲಿ ಬೆಂಗಳೂರಿನ ಟಾಪ್‌ಟೆನ್ ಡೈಲಾಗುಗಳು ಇಲ್ಲಿವೆ.

1997ರ ಜುಲೈ ತಿಂಗಳು. ನಾನು ಮುಂಬಯಿಯಿಂದ ಬೆಂಗಳೂರಿಗೆ ಶಾಶ್ವತವಾಗಿ ಬಂದು ನೆಲೆಸಿ ಒಂದು ತಿಂಗಳಾಗಿತ್ತಷ್ಟೆ. ಒಂದು ದಿನ ನನಗೆ ಸತ್ಯನಾರಾಯಣ ಅವರಿಂದ ಫೋನ್ ಬಂತು. “ಸಾರ್, ನಿಮ್ಮ ಆಫೀಸ್ ಎಲ್ಲಿ ಬರುತ್ತೆ?”. ನಾನು ಮೊದಲೇ ಸ್ವಲ್ಪ ತರಲೆ. ಇಂತಹ ಅವಕಾಶ ಬಿಡುತ್ತೇನೆಯೇ? “ನಮ್ಮ ಆಫೀಸು ಎಲ್ಲೂ ಬರಲ್ಲ. ನೀವೇ ಇಲ್ಲಿಗೆ ಬರಬೇಕು” ಎಂದು ಉತ್ತರಿಸಿದೆ. ಸತ್ಯನಾರಾಯಣ ಅವರು ಜೋರಾಗಿ ನಕ್ಕು ಹೇಳಿದರು “ಚೆನ್ನಾಗಿ ಜೋಕು ಮಾಡಿದಿರಿ”. ಈ ಘಟನೆಯನ್ನು ಇಲ್ಲಿ ನೆನಪಿಸಲು ಕಾರಣವಿದೆ. ನಾನು ಮೂಲತಃ ದಕ್ಷಿಣ ಕನ್ನಡದವನು. ಮುಂಬಯಿಯಲ್ಲಿ ದೀರ್ಘ ಕಾಲ ವಾಸವಾಗಿದ್ದೆ. ಬೆಂಗಳೂರಿಗೆ ಬಂದ ಹೊಸದರಲ್ಲಿ ಮಾತ್ರವಲ್ಲ ಈಗಲೂ ಇಲ್ಲಿ ಬಳಸುವ ಕೆಲವು ಪದ/ವಾಕ್ಯಗಳು ವಿಚಿತ್ರ ಅನ್ನಿಸುತ್ತವೆ. ಕೆಲವಂತೂ ಅಸಂಬದ್ಧ ಅನ್ನಿಸುವುದಿದೆ. ಇಲ್ಲಿನ ಜನ ಅತಿಯಾಗಿ ಬಳಸುವ ಕೆಲವು ಪದ/ವಾಕ್ಯಗಳನ್ನು ಯಾಕೆ ಪಟ್ಟಿ ಮಾಡಬಾರದು ಅನ್ನಿಸಿತು. ಸುಮಾರು ಆರೇಳು ವಾಕ್ಯಗಳು ಸಿಕ್ಕವೂ ಕೂಡ. ಅವುಗಳನ್ನು ಅಂತರಜಾಲದಲ್ಲಿ ಹಾಕಿ ಇತರರಿಗೂ ಸೇರಿಸಲು ಕೇಳಿಕೊಂಡೆ. ಕೆಲವರು ಉತ್ಸಾಹದಿಂದ ಪಟ್ಟಿ ದೊಡ್ಡದು ಮಾಡಿದರು. ಹೀಗೆ ತಯಾರಾದ ಟಾಪ್‌ಟೆನ್ ಪಟ್ಟಿ ಇಲ್ಲಿದೆ.

10. “ಡೋಂಟ್‌ವರಿ ಮಾಡ್ಕೋಬೇಡಿ ಸಾರ್.”
ತುಂಬಾ ತಳಮಳಿಸಿಕೊಂಡಾಗ ನಿಮ್ಮ ಸ್ನೇಹಿತ/ಸಹೋದ್ಯೋಗಿ ಹೇಳುವ ಮಾತು.

9. “ಸ್ಟ್ರೈಟ್ ಹೋಗಿ ರೈಟಿಗೆ ತಿರುಕ್ಕೊಳ್ಳಿ.”
ರಸ್ತೆಯಲ್ಲಿ ದಾರಿ ಕೇಳಿದಾಗ.

8. “ಸೂರ್ಯಂಗೇ ಟಾರ್ಚಾ?”
ಬುದ್ಧಿವಂತನಿಗೇ ಹೇಳಿಕೊಡಲು ಹೋದಾಗ.

7. “ಏನಮ್ಮಾ, ತುಂಬಾ ಚಮಕ್ಕಾ?”
ನೀನು ತುಂಬಾ ಮೋಸಗಾರ ಎನ್ನುವ ಅರ್ಥದಲ್ಲಿ.

6. “ಯಾಮಾರ್‌ಬಿಟ್ಟೆ!”
ಮೋಸಹೋದೆ ಎಂಬ ಅರ್ಥದಲ್ಲಿ. ಇದರ ಇತರೆ ರೂಪಗಳು - “ಯಾಮಾರಿಸ್ಬೇಡ, ಯಾಮಾರಿಸ್ಬಿಟ್ಟೆ, ಯಾಮಾರಿಸ್ತಾನೆ”.

5. “ಈಗೇನೂ ಆಗಿಲ್ಲ ತಾನೆ. ಸುಮ್ಮನೆ ಹೋಗ್ಬಿಡಿ ಸಾರ್.”
ಅಪಘಾತವಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದೀರಿ. ಅದಕ್ಕೆ ಕಾರಣೀಭೂತನಾದ ಚಾಲಕನಿಗೆ ಗುರ್ ಮಾಡಿದಾಗ ಆತ ಹೇಳುವ ಮಾತು.

4. “ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್.”
ನಾನು ಮಾಡಿದ ಮೋಸವನ್ನು ಸಹಿಸಿಕೊಳ್ಳಿ ಎಂಬ ಅರ್ಥದಲ್ಲಿ, ಬಸ್ಸಿನಲ್ಲಿ ಸೀಟಿಗಾಗಿ ಅಲ್ಲ.

3. “ನಿಮ್ಮನೆ ಎಲ್ಲಿ ಬರುತ್ತೆ?”
ಮನೆ ಬರುವುದನ್ನು ನೀವು ಎಲ್ಲಿಯಾದರೂ ಕಂಡಿದ್ದೀರಾ? ಕೇಳಿದ್ದೀರಾ?

2. “ನಮಗ್ಯಾಕ್ರಿ ಬಿಡ್ರಿ.”
ಸಾರ್ವಜನಿಕವಾಗಿ ನಮಗೆ ಸಂಬಂಧಿಸಿದ್ದರೂ ವೈಯಕ್ತಿತವಾಗಿ ಸಂಬಂಧಪಡದ ವಿಷಯದ ಬಗ್ಗೆ.

1. “ಅಯ್ಯೋ ಅದೆಲ್ಲ ಆಗೊಲ್ಲಾರೀ.”
ಎಲ್ಲರೂ ಒಟ್ಟು ಸೇರಿ ಸಾರ್ವಜನಿಕ ಕಾಳಜಿಯಿಂದ ಮಾಡಬೇಕಾದ ಕೆಲಸದ ಬಗ್ಗೆ ಜ್ಞಾಪಿಸಿದಾಗ.

ಈ ಪಟ್ಟಿಯಲ್ಲಿ ಸೇರದ ಆದರೆ ಸೇರಲು ಅರ್ಹತೆಯಿರುವ ಇನ್ನೂ ಹಲವು ಡೈಲಾಗುಗಳು ನಿಮ್ಮಲ್ಲಿದ್ದರೆ ಕೂಡಲೇ ಕಳುಹಿಸಿ.

-ಪವನಜ

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 1099 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 24, 2005 - 5:55pm — tvsrinivas41

ಬಸ್ ಹರಿದು

tvsrinivas41's picture

ಯಾಮಾರ್ ಬಗ್ಗೆ - ಇದರ ಮೂಲ ತಮಿಳು ಏಮಾತುಟ್ಟೆಯಾ ಎಂದರೆ ಮೋಸ ಹೋದೆಯಾ ಎಂದು.

ನನ್ನ ಸಂಗ್ರಹದಿಂದ ಕೆಲವು ಈ ಗುಂಪಿಗೆ ಸೇರಲಿ

೧. ಬಸ್ ಹರಿದು ನಾಲ್ವರ ಸಾವು
ಬಸ್ ಏನು ಬಟ್ಟೆಯೇ ಹರಿಯಲು?

೨. ಚಿಂದಿ ಚಿತ್ರಾನ್ನ, ಸಕ್ಕತ್ತಾಗಿದೆ
ತುಂಬಾ ಚೆನ್ನಾಗಿದೆ

೩. ಛತ್ರಿ
ತೀವ್ರ ಬುದ್ಧಿವುಳ್ಳವನು

೪. ಬೆಂಡು ಎತ್ತು
ಸುಸ್ತು ಮಾಡಿಸು

೫. ಕುಡುಮಿ
ಪುಸ್ತಕ ಹುಳು

೬. ತುಪ್ಪ ಇದ್ದ ಹಾಗಿದೆ
ಸುಲಭವಾಗಿ ಅರ್ಥವಾಗುವಂತಹದ್ದು

೭. ಬ್ಲೇಡು
ತಲೆಚಿಟ್ಟು ಹಿಡಿಸುವಂತ ಮಾತನಾಡುವುದು

೮. ಐನಾತಿ, ಪಾಕಡಾ, ಛತ್ರಿ
ಬುದ್ಧಿವಂತ (ಬೇರೆ ಅರ್ಥವಿದೆಯೇ)

೯. ಬೇಜಾನು
ಬಹಳ

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 25, 2005 - 11:59am — honnung

ಬೆಂಗಳೂರು ಕನ್ನಡದ ಶಬ್ದಕೋಶ

honnung's picture

ಬೆಂಗಳೂರು ಕನ್ನಡವು ಇಲ್ಲಿರುವ ನಾನಾ ಭಾಷೆಗಳಿಂದ ಅನೇಕ ಪದಗಳನ್ನು ಒಳ ಸೇರಿಸಿಕೊಂಡಿದೆ. ಇದೂ ಸಹ ಭಾಷೆಯ ವಿಸ್ತರಣೆ.
ಈ ಮೊದಲು ಆಂಗ್ಲ ಭಾಷೆಯಿಂದ 'ಬಸ್', 'ಕಾರ್', 'ರಬ್ಬರ್' ಇತ್ಯಾದಿ ಶಬ್ದಗಳು ಕನ್ನಡಕ್ಕೆ ಸೇರಿವೆ. ಹಿಂದಿ, ಸಂಸ್ಕೃತದಿಂದ ಹೀಗೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು. ಈ ಬಗ್ಗೆ 'ಪ್ರಜಾವಾಣಿ'ಯ 'ಇದೋ ಕನ್ನಡ' ತಪ್ಪದೇ ಓದಿ.

ಈಗ ಬೆಂಗಳೂರಲ್ಲಿ ಆಡು ಭಾಷೆಯಲ್ಲಿ ಗೆಳೆಯ ಎಂಬ ಅರ್ಥ ಬರುವ ಹಿಂದಿಯ 'ಯಾರ್' ಹಾಗೂ ತಮಿಳಿನ 'ಮಚ್ಚಾ' ಬಳಕೆಯನ್ನು ಕಾಣಬಹುದು. ಇವೂ ಸಹ ಕನ್ನಡದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬಹುದು.

ನಾವು ಹೀಗೇ ಮುಂದುವರೆದರೆ ಬೆಂಗಳೂರು ಕನ್ನಡದ ಶಬ್ದಕೋಶ ಶುರು ಮಾಡಬಹುದು. ಏನಂತೀರಿ?
-----
ಶಶಿಧರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 25, 2005 - 12:10pm — pavanaja

ಇಗೋ ಕನ್ನಡ

pavanaja's picture

> ಈ ಬಗ್ಗೆ 'ಪ್ರಜಾವಾಣಿ'ಯ 'ಇದೋ ಕನ್ನಡ' ತಪ್ಪದೆ ಓದಿ.

ಅದು 'ಇಗೋ ಕನ್ನಡ'. ಪ್ರೊ. ಜಿ. ವೆಂಕಟಸುಬ್ಬಯ್ಯನವರ ಈ ಕಾಲಂ ನನಗೆ ತುಂಬ ಇಷ್ಟ. ತಪ್ಪದೆ ಓದುತ್ತೇನೆ. ಈ ಕಾಲಂನಲ್ಲಿ ಬಂದಿರುವ ಲೇಖನಗಳ ಪುಸ್ತಕಳು ಭಾಗ-೧ ಮತ್ತು ೨ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿವೆ. ನನ್ನಲ್ಲೂ ಇವೆ.

ಈ ಪುಸ್ತಕಗಳನ್ನಾಧರಿಸಿ ಬೆಂಗಳೂರಿನ ವಿವಿಧಭಾರತಿ ರೇಡಿಯೋ ಕೇಂದ್ರದಿಂದ (FM 102.9 MHz) ಬೆಳಿಗ್ಗೆ ೮:೧೫ಕ್ಕೆ ಸಿರಿಗನ್ನಡ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದೂ ನನಗೆ ಇಷ್ಟ. ನೀವೂ ಕೇಳಿ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 25, 2005 - 2:32pm — hpn

ಪ್ರೊ. ವೆಂಕಟಸುಬ್ಬಯ್ಯನವರ ಇಗೋ ಕನ್ನಡ

hpn's picture

ಪ್ರೊ. ವೆಂಕಟಸುಬ್ಬಯ್ಯನವರ 'ಇಗೋ ಕನ್ನಡ'ದ ಮೊದಲನೆಯ ಪುಸ್ತಕ ನನ್ನ ಬಳಿಯೂ ಇದೆ Smiling
ವೆಂಕಟಸುಬ್ಬಯ್ಯನವರು ಶಬ್ದದ ಮೂಲವೂ ಸೇರಿದಂತೆ ಕನ್ನಡ ಪದಗಳ ಹಲವು ವಿಷಯಗಳನ್ನು ವಿವರಿಸುತ್ತಾರೆ.

ನನಗೆ ಜ್ಞಾಪಕವಿರುವಂತೆ ನಾನು ಶಾಲೆಯಲ್ಲಿದ್ದ ಸಮಯದಿಂದಲೂ ಇದು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಾ ಇದೆ. ಆಗ ನಾನು ಪೇಪರ್ ಕಟ್ ಮಾಡಿಟ್ಟುಕೊಳ್ಳುತ್ತಿದ್ದೆ, ಕಲೆಕ್ಟ್ ಮಾಡಲು. ಈಗ ಪುಸ್ತಕವಾಗಿಯೇ ಬಂದಿದೆ, ಪ್ರಜಾವಾಣಿಯ ಆನ್ಲೈನ್ ಆವೃತ್ತಿಯಲ್ಲೂ ಲಭ್ಯ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 30, 2005 - 6:06am — shreeharsha4u

ಪಟ್ಟಿಗೆ ಇನ್ನಷ್ಟು ಸೇರ್ಪಡೆ

shreeharsha4u's picture

"ಏನ್ ಮಗಾ, ಫುಲ್ ಗಲಾಟೆ ಎಬ್ಬಿಸ್ಕೊಂಡು ಓಡಾಡ್ತಾ ಇದೀಯ?"
ಹೊಸ ಬಟ್ಟೆ ಅಥವ ಹೊಸ ಶೂ ಹಾಕಿಕೊಂಡ ಸಂದರ್ಭದಲ್ಲಿ.

"ಅವ್ನು ಬಿಡು ಶೇಡಿ ನನ್ಮಗ"
ವಿಚಿತ್ರ ಅಭಿರುಚಿಯಿರುವ ಜನರ ಬಗ್ಗೆ ಮಾತಾಡುವಾಗ.

"Own body, single fighter"
ಯಾವುದಾದರೂ ಕೆಲಸವನ್ನು ಒಬ್ಬರೇ ಮಾಡಲು ಹೊರಟಾಗ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 30, 2005 - 12:36am — ಶ್ಯಾಮ ಕಶ್ಯಪ

ಬೆಂಗಳೂರ್ ಸ್ಪೆಷಲ್

ಶ್ಯಾಮ ಕಶ್ಯಪ's picture

ನಾನು ಈ ತರಹದ ಪ್ರಯೋಗವನ್ನ ಬೆಂಗಳೂರಿನವರಿಂದ ಸುಮಾರು ಕೇಳಿದೀನಿ
"ವಸಂತನಗರ ಬಂದು ವಿಧಾನಸೌಧದ ಹತ್ತಿರ ಬರತ್ತೆ" ಅದು ಎಲ್ಲಿಗೆ ಬಂದು ಬರತ್ತೋ ದೇವರಿಗೇ ಗೊತ್ತು Eye-wink

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 25, 2005 - 6:43am — olnswamy

ಸ್ಪೆಶಲ್ ಕನ್ನಡದ ಇನ್ನಷ್ಟು ಎಕ್ಸಾಂಪಲ್

olnswamy's picture

ಬೆಂಗಳೂರಿನ ಸ್ಪೆಶಲ್ ಕನ್ನಡದ ಚೂರು ಪಾರು:
೧) ಕಾಲ್ ಅವರ್ /ಮುಕ್ಕಾಲ್ ಅವರ್/ ಒಂದು ಅವರ್ ನಿಂದ ಕಾಯ್ತಿದೀನಿ ಬಸ್ಸೇ ಬರಲಿಲ್ಲ
೨) ಬೆಳಗ್‌ಬೆಳಗ್ಗೇನೆ ತಲೆ ತಿನ್ಬೇಡ
೩) ಕಿರಿಕ್ ಪಾಲ್ಟಿ
೪) ಟೈಮ್ ಸರೀ ಇಲ್ಲ
೫) ಸಖತ್ ಮಜಾ ತಗೊಂಡ
೬) ರೀಲ್ ಬಿಡು, ಪಿಚ್ಚರ್ ಬಿಡು
೭) ರೈಟ್ ಹೇಳು ಇಲ್ಲಿಂದ
೮) ಕಳಚ್ಕೋ
೯) ಸೀನ್‌ನಲ್ಲೇ ಇಲ್ಲ
೧೦) ಭಾಳ ದಿನದಿಂದ ಸೈಕಲ್ ಹೊಡೀತಾ ಇದಾನೆ, ಏನೂ ಗೀಟ್‌ಲಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 26, 2005 - 2:03pm — ಪ್ರಶಾಂತ.ಪಂಡಿತ

ಇನ್ನಷ್ಟು ...

ಪ್ರಶಾಂತ.ಪಂಡಿತ's picture

ನಾನು ಕೇಳಿದ (ಅರ್ಥ ಗೊತ್ತಿಲ್ಲದ) ಕೆಲವು ಪದಗಳು
1. ಊಷ್ಟು (ಊಸ್ಟು?)
2. ಮೀಟ್ರು ಗಿರಾಕಿ
3. ಇಲ್ದಿರ

ಇವುಗಳ ಪ್ರಯೋಗವನ್ನು ಬಲ್ಲವರು ತಿಳಿಸುವುದು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 26, 2005 - 2:30pm — Rohit

RE: ಇನ್ನಷ್ಟು

Rohit's picture

ಊಷ್ಟು......ಉಡೀಸ್ ನ ಪರ್ಯಾಯ ಪದ.
ಮೀಟ್ರು ಗಿರಾಕಿ ..... ತಲೆ ತಿನ್ನುವವನು ಎಂಬುದಕ್ಕೆ ಪರ್ಯಾಯ.
ಇಲ್ದಿರ....ಇಲ್ಲದೆ ಇರುವ, ಇಲ್ಲದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 26, 2005 - 7:59pm — ravikh

ತಿಳಿದ ಮಟ್ಟಿಗೆ..

ravikh's picture

ಊಷ್ಟು -> ಸುಸ್ತಾಗು, ಹಾಳಾಗು..
ಇಲ್ದಿರ -> ಹಾಗಿಲ್ಲದೇ, ಇಲ್ಲದೇ
ಮೀಟ್ರು ಗಿರಾಕಿ -> 'ಧೀರ' ಎಂದಿರಬಹುದು

ವಂದನೆಗಳೊಂದಿಗೆ,
ರವಿಶಂಕರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 28, 2005 - 9:33pm — hpn

ಮತ್ತಷ್ಟು

hpn's picture

ಇವತ್ತು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಓದಲು ಕೊಂಡ 'ಹಾಯ್ ಬೆಂಗಳೂರ್'ನಿಂದ ಒಂದೆರಡು ಪದಗಳು:

೧) ಗುರಾಯ್ಸು - ದಿಟ್ಟಿಸಿ ನೋಡೋದು ಎಂಬಂತೆ.
೨) ಕಡ್ದ್‌ಹಾಕು - ಮಚ್ಚೋ ಕತ್ತಿಯೋ ತೆಗೆದುಕೊಂಡು ಹಲ್ಲೆ ಮಾಡೋದು.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನೆಯೊಳಗಾಡೋ.... ಗೋವಿಂದ
  • ನಾನೂ ನನ್ನ ಬಾಸೂ
  • "ಎಲ್ಲಿ, ಬೇಗ್ ಬೇಗ್ ಹೇಳಿ ಏಳಿ ಸಾರ್!"
  • ಚಲ್ತಾ ಹೈ....ಬಿಡಿ ಸಾರ್ !
  • ಬಣ್ಣದ ಲೋಕಕ್ಕೆ ಬಂದ ಯುವಕರ ಬದುಕು- ರಘೋತ್ತಮ್ ಕೊಪ್ಪರ
Syndicate content

ಲೇಖಕರು

pavanaja's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator