ಹಳ್ಳಿ ಹುಚ್ಚು
ಹಳ್ಳಿ ಹುಚ್ಚು
ಅಂದು ನಾ ಹೊರಟಿದ್ದೆ ಗಿಜಿ ಗಿಜಿ ರಸ್ತೆಯಲ್ಲಿ ಎಂದಿನಂತೆ
ನನಗೆ ತಿಕ್ಕಲೋ-ಪ್ರಪಂಚಕ್ಕೋ ತಿಳಿಯದಾಗಿತ್ತು
ಹಳ್ಳ ಗುಂಡಿಗಳ ಕಪ್ಪು ಟಾರಿನ ರಸ್ತೆಯೊಂದು
ಹಳ್ಳಿಯ ಮಣ್ಣ ಹಾದಿಯಂತೆ ಕಂಡಿತ್ತು ನನಗೆ ಅಂದು
ಚೀಲ ಹಿಡಿದು ಕಛೇರಿಗೆ ಹೊರಟ ಜನರು
ಗುದ್ದಲಿ-ಸನಿಕೆ ಹಿಡಿದ ರೈತರಂತಿದ್ದರು
ಬೇಕಾದ್ದಕ್ಕಿಂತ ಹೆಚ್ಚೇ ಅಲಂಕೃತಳೀಕೆ - ನೋಡಲು ರತಿ
ಕಂಡಳಂದು ಗಂಡನಿಗಾಗಿ ಬುತ್ತಿ ಹೊತ್ತ ಗರತಿ
ಶಾಲೆಗೆ ಹೊರಟ ಪುಟ್ಟ ಮಕ್ಕಳೆಲ್ಲಾ
ನಗುವ ಸೂರ್ಯಕಾಂತಿಯಂತೆ ಕಂಡರಲ್ಲಾ
ನಗರದ ಕೊಳಚೆ ನೀರಿನ ಕೊಚ್ಚೆ ಕೂಡ
ತಿಳಿನೀರ ಹೊಳೆಯಾಗಿತ್ತು - ಏನಿದೀ ಪವಾಡ!
ದ್ವಿಚಕ್ರಗಳು "ಪೋಂ" "ಪೋಂ" ಶಬ್ದ ಮಾಡುತಿದ್ದರೆ
ಕೇಳಿಸಿತ್ತೆನಗೆ ಹಸುವಿನ "ಅಂಬಾ" ಕರೆ
ಭರ್ರನೆ ಕಾರುಗಳು ಸುತ್ತ ಹೋಗುತಿರಲು
ಎತ್ತಿನ ಬಂಡಿಗಳಂತೆ ಭಾಸವಾಗಿತ್ತು - ನನಗೆ ಖಂಡಿತಾ ಐಲು
ಜನರನ್ನು ಹೊಟ್ಟೆಯಲ್ಲಿರಿಸಿಕೊಂಡು ಬಸ್ಸಲ್ಲಿ ನಿಂತಿತ್ತು
ಒಣ ಹುಲ್ಲ ಗುಡ್ಡದಂತೆ - ಬಣವೆಯಾಗಿ ಕಂಡಿತ್ತು
ವಾಹನಗಳ ದಟ್ಟಣೆ - ವಾಯು ಮಾಲಿನ್ಯ
ಗೋಧೂಳಿಯಂತೆ ಗೋಚರಿಸಿತ್ತು - ನಾನಾಗ ಧನ್ಯ
ಕಂಠಕೌಪೀನಧಾರಿ ಧಿಮಾಕಿನ ಠೊಣಪ
ಕಟ್ಟೆ ಮೇಲೆ ಕಂಡನೆನಗೆ ಶಾಲು ಹೊದ್ದ ಭೂಪ
ರಸ್ತೆಯಲಿ ನಡೆಯುತಿರಲು ಹಲವು ದೀಪದ ಕಂಬ
ಕಂಗೊಳಿಸಿತ್ತು ನನಗದು ಸಾಲ ತೆಂಗ ಬಿಂಬ
ಧೂಮಪಾನ ಮಾಡುತ ನಿಂತ ಒಬ್ಬ ಯುವಕ
ಹಳ್ಳಿ ಕಿಟ್ಟನಂತೆ ಕಂಡಾಗ - ನನಗೆ ಮೈ ನಡುಕ
ಹುಚ್ಚೇ ಹಿಡಿಯಿತೆಂದು ಹೋದೆ ವೈದ್ಯರ ಬಳಿಗೆ
ಅಲ್ಲೂ ನನಗೆ ದಕ್ಕಿತ್ತು ಅಳಲೆಕಾಯ ಗುಳಿಗೆ!!!
(೨೫-ಜೂನ್-೨೦೦೬)

- Login or register to post comments
- 479 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹಳ್ಳಿ ಹುಚ್ಚು
ಯಾರಿಗೂ ಹಿಡಿಸಲಿಲ್ಲವೆ???
ಇಷ್ಟವಾಗಿದ್ದಾರೂ, ಇಲ್ಲದಿದ್ದರೂ, ನಿಮ್ಮ ಅಭಿಪ್ರಾಯಗಳನ್ನಾದರು ತಿಳಿಸಿ...
ಇನ್ನೂ ಉತ್ತಮ ಪ್ರಯತ್ನಕ್ಕೆ ಸಹಾಯವಾಗುತ್ತದೆ...
-ಶ್ರೀ
ಉ: ಹಳ್ಳಿ ಹುಚ್ಚು
ನೊಂದುಕೊಳ್ಳ ಬೇಡಿ...
ಈ ಓದಿದೆ.
ಇಂತಹ ಸಾಲುಗಳು ನನ್ನ "ಘನ ಗಂಭೀರ ಕವಿತ್ವ"ವನ್ನು ನೆನೆಸುತ್ತದೆ.
http://sampada.net/blog/mahesha/12/06/2007/4486
ಉ: ಹಳ್ಳಿ ಹುಚ್ಚು
ನೊಂದುಕೊಳ್ಳುವಂತಹದೇನಿಲ್ಲ...
ಕಲಿಯುವ ಇಚ್ಚೆ ಇದೆ...
ಕಲಿಸಲು ನೀವೆಲ್ಲ ಇದ್ದೀರಿ
ಆಶೀರ್ವಾದವಿರಲಿ...