ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪೊಲೀಸರ ಮೇಲೆ ಅನುಮಾನ...ಸರೀನಾ?

July 8, 2007 - 3:47am — kuchela

ಮಲೆನಾಡಿನಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳನ್ನು ನಕ್ಸಲ್ ನಿಗ್ರಹ ಪಡೆ ಬಿಡುಗಡೆ ಮಾಡಿ ವಾರ ಕಳೆದಿದೆ. ಅದರ ಹಿಂದೆ ಗೃಹ ಮಂತ್ರಿ ಅದನ್ನು ವಾಪಸ್ಸು ಪಡೆದದ್ದೂ ಆಯಿತು.
ನಕ್ಸಲೀಯರ ಚಟುವಟಿಕೆಗಳನ್ನು ಪ್ರೆತ್ಸಾಹಿಸುತ್ತಿರುವ ವ್ಯಕ್ತಿಗಳ ಪಟ್ಟಿಯಲ್ಲಿದ್ದ ಇಬ್ಬರ ಹೆಸರನ್ನು ಮೊದಲು ತೆಗೆಸಲಾಗಿದೆ. ಪೊಲೀಸರ ಮೇಲೆ ದಾವೆ ಹೂಡುವ ಪ್ರಯತ್ನವೂ ಸಾಗಿತು. ಇದು ಒಂದು ಹಂತ.
ಪಟ್ಟಿ ಬಹಿರಂಗಗೊಂಡ ಕೆಲವೇ ಗಂಟೆಗಳಲ್ಲಿ ಗದ್ದಲ, ಪೊಲೀಸರ ಮೇಲೆ ಅನುಮಾನ ಹುಟ್ಟುವ ಸಂಗತಿಗಳು ನಡೆದವು. ಅದು ಯಾರಿಂದ ಹುಟ್ಟಿತು ಏಕೆ ಹುಟ್ಟಿತು ಎಂಬುದು ಬೇರೆ ಮಾತು. ಅದೂ ಒತ್ತಿಟ್ಟಿಗಿರಲಿ.
ಆದರೆ ಪೊಲೀಸರು ಇಟ್ಟ ಹೆಜ್ಜೆಯೇ ತಪ್ಪು ಎಂದು ಪ್ರತಿಭಟನೆ, ಹೇಳಿಕೆ ನೀಡುತ್ತಿರುವುದು ಸೋಜಿಗದ ಸಂಗತಿ.
ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿರುವ ಎಡಿಜಿಪಿ ಶಂಕರ್ ಬಿದಿರಿ ಅವರು ಬಿಡುಗಡೆ ಮಾಡಿರುವ ನಕ್ಸಲ್ ಕುರಿತ ವರದಿಯನ್ನು ಪಕ್ಕಕ್ಕೆ ತಳ್ಳುವ ಪರಿಸ್ಥಿತಿ ನಿರ್ಮಾಣ ಮಾಡುವ ಮಟ್ಟಿಗೆ ನಾವು ಇಳಿದಿದ್ದೇವೆ. ಅದಕ್ಕಾಗಿ ಪ್ರತಿಭಟನೆ, ಹೇಳಿಕೆ, ಪ್ರತಿಕೃತಿ ದಹನ ಮಾಡುವುದಕ್ಕೂ ಸಿದ್ಧ.
ಪೊಲೀಸ್ ಇಲಾಖೆಯನ್ನು ವಿವಿಧ ಘಟನೆಗಳಲ್ಲಿ ಅನುಮಾನಿಸುವುದು ಸಹಜ. ಆದರೆ ಇಂಥ ಒಂದು ಅಸಾಮಾನ್ಯವಾದ ವಿಷಯದಲ್ಲಿ ಪೊಲೀಸರ ಕಾರ್ಯವನ್ನು ಸಣ್ಣ ಮಕ್ಕಳಂತೆ ಬಿಂಬಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆ.
ಬಿಡುಗಡೆ ಮಾಡಲ್ಪಟ್ಟಿರುವ ಪಟ್ಟಿಯಲ್ಲಿ ನಕ್ಸಲರ ಹುಟ್ಟು, ಮಲೆನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ನಕ್ಸಲೀಯರ ವಿರುದ್ಧ ದಾಖಲಾದ ಪ್ರಕರಣಗಳ ವಿವರಗಳು, ಮಲೆನಾಡಿನಲ್ಲಿ ನಕ್ಸಲೀಯರ ಚಟುವಟಿಕೆಗಳನ್ನು ಪ್ರೆತ್ಸಾಹಿಸುತ್ತಿರುವ ಸಂಘಟನೆಗಳ ಮತ್ತು ವ್ಯಕ್ತಿಗಳ ವಿವರಗಳು, ನಕ್ಸಲೀಯರ ವೈಯಕ್ತಿಕ ಮಾಹಿತಿ ಹೀಗೆ ಇಂಚಿಂಚೂ ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಸಿದ್ಧಪಡಿಸಿದ್ದಾರೆ.
ಹೀಗಿರುವಾಗಿ ಏಕ್‌ದಮ್ ಆ ವರದಿಯ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರ್ವಥಾ ಸರಿಯಲ್ಲ.
ವರದಿಯ ಪ್ರಕಾರ ಮಲೆನಾಡಿನಲ್ಲಿ ನಕ್ಸಲೀಯರ ಚಟುವಟಿಕೆಗಳು ೨೦೦೧-೦೨ನೇ ಸಾಲಲ್ಲಿ ಪ್ರಾರಂಭವಾಯಿತು. ಇದಕ್ಕೂ ಮುಂಚೆ ಸಿಪಿಐ(ಎಂ.ಎಲ್) ಇವರು ಮಲೆನಾಡಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಒಂದು ಸಮೀಕ್ಷೆಯನ್ನು ಸಹಾ ಮಾಡಿರುವರೆಂದು ತಿಳಿದುಬಂದಿರುತ್ತದೆ. ಕರ್ನಾಟಕ ವಿಮೋಚನಾ ರಂಗ ಎಂಬ ಸಂಸ್ಥೆಯು ಮಲೆನಾಡಿನಲ್ಲಿ ದಳಗಳ ಸಂಘಟನೆಯನ್ನು ಮಾಡಿರುತ್ತಾರೆ. ಕಾಲ ಕ್ರಮೇಣ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೇ ಅಲ್ಲದೇ ರಾಜ್ಯದ ಇತರೆ ಜಿಲ್ಲೆಗಳಿಂದಲೂ ಯುವಕ ಯುವತಿಯರು ನಕ್ಸಲೀಯರು ಸೇರ್ಪಡೆಗೊಂಡಿರುತ್ತಾರೆ.
ಇದಕ್ಕೆ ಪುಷ್ಠಿ ನೀಡುವಂಥ ಪರಿಪೂರ್ಣ ಅನೇಕ ದಾಖಲೆಗಳು ಸಿಕ್ಕಿವೆ. ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಕಾರ್ಯ ಚಟುವಟಿಕೆಗೆ ಹುಟ್ಟಿಕೊಂಡಿದ್ದು ಅನೇಕ ಸಂಘಟನೆಗಳು. ನಕ್ಸಲೀಯರ ಚಟುವಟಿಕೆಗಳನ್ನೂ ಪ್ರೆತ್ಸಾಹಿಸುತ್ತಿರುವ ಸಂಘಟನೆಗಳನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ.
ಮುಖ್ಯವಾದುದ್ದೆಂದರೆ ನಕ್ಸಲ್ ವ್ಯಕ್ತಿಯ ಹೆಸರು, ತಂದೆ, ತಾಯಿ, ಎತ್ತರ, ವಯಸ್ಸು, ಕುಲ ಗೋತ್ರ, ಭಾಷೆ, ವೈವಾಹಿಕ ಜೀವನ ಸಂಪರ್ಕ ಹೊಂದಿರುವ ವ್ಯಕ್ತಿ, ಕಾರ್ಯಕ್ಷೇತ್ರ, ಅವರ ಬಳಿ ಈಗ ಇರುವ ಆಯುಧ, ಹೀಗೆ ಅಣುಅಣುವನ್ನು ಜಾಲಾಡಿದ್ದಾರೆ.
ಭಗತ್ ಸಿಂಗ್ ಯುವಜನ ವೇದಿಕೆ, ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಒಕ್ಕೂಟ, ಜಾತಿ ವಿನಾಶ ವೇದಿಕೆ, ಕರ್ನಾಟಕ ವಿಮೋಚನ ರಂಗ, ಮಹಿಳಾ ಜಾಗೃತಿ, ಜಾಗೃತ ವಿದ್ಯಾರ್ಥಿ ಯುವಜನ ವೇದಿಕೆ, ಶಾಂತಿಗಾಗಿ ನಾಗರಿಕ ವೇದಿಕೆ... ಹೀಗೆ ಪ್ರತಿ ಸಂಘಟನೆ ಹೆಜ್ಜೆಯನ್ನು ಪೊಲೀಸರು ಗಮನಿಸಿ ದಾಖಲಿಸಿದ್ದಾರೆ. ಕಣ್ಣಿನಲ್ಲಿ ಕಂಡಿದ್ದಾರೆ. ಅದನ್ನು ದಾಖಲಿಸಲಾಗಿದೆ.
ಹೀಗೆ ನಕ್ಸಲೀಯರನ್ನು ಪ್ರೆತ್ಸಾಹಿಸುವ ವ್ಯಕ್ತಿಗಳ ವಿವರವನ್ನು ಕಲೆ ಹಾಕಿದ್ದಾರೆ. ಆದರೆ ಇಷ್ಟು ವರ್ಷದಿಂದ ಕಾಡು ಮೇಡು, ನಗರ ಹಳ್ಳಿಗಳಲ್ಲಿ ತಿರುಗಿ ಸಂಗ್ರಹಿಸಿದ ಮಾಹಿತಿಗೆ ಬೆಲೆ ಇಲ್ಲವೆಂಬ ಎಂಬ ಮಾತು ಕೇಳಿಬರುತ್ತಿದೆ.
ಒಂದು ಸಣ್ಣ ಉದಾಹರಣೆ ಈ ರೀತಿ ಇದೆ. ಖ್ಯಾತ ವಿಚಾರವಾದಿ ಪ್ರೆ. ಗೋವಿಂದ ರಾವ್ ಹೇಳುವ ಪ್ರಕಾರ ತಾವು ‘ರೈತ ಮುಖಂಡ ಕಡಿದಾಳ್ ಶಾಮಣ್ಣ, ಲೇಖಕ ಪ್ರೆ. ರಾಜೇಂದ್ರ ಚೆನ್ನಿ, ನಾನು ಕೋಮು ಸೌಹಾರ್ದ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆವು. ಕರ್ನಾಟಕದಲ್ಲಿ ತಲೆ ಎತ್ತುತ್ತಿರುವ ಕೋಮುವಾದಕ್ಕೆ ಪ್ರತಿಯಾದ ಒಂದು ಸಶಕ್ತ ಸಂಘಟನೆ ಇದು ಎಂಬುದು ನಮ್ಮ ನಂಬಿಕೆ ಆಗಿತ್ತು. ಆದರೆ ಕೋಮು ಸೌಹಾರ್ದ ವೇದಿಕೆ ನಕ್ಸಲ್ ಸಿದ್ಧಾಂತದ ಸಂಘಟನೆಯ ಮತ್ತೊಂದು ರೂಪ ಎಂದು ನಮಗೆ ದೃಢವಾದ ಕೂಡಲೇ ನಾವೆಲ್ಲರೂ ಸಂಪೂರ್ಣವಾಗಿ ಈ ಸಂಘಟನೆಯೊಡನೆ ಸಂಬಂಧ ಕಳಚಿಕೊಂಡೆವು’.
ಹೀಗೆ ಆ ಸಂಘಟನೆಗಳಲ್ಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈಗ ಹೊರ ಬಂದಿರುವ ಅನೇಕರು, ನಕ್ಸಲರೊಂದಿಗೆ ಈ ಪಟ್ಟಿಯಲ್ಲಿರುವ ಅನೇಕ ಮುಖಂಡರು, ಸಂಘಟನೆಗಳ ನಿಜ ಬಣ್ಣವನ್ನು ರಾಜಾರೋಷವಾಗೇ ಬಯಲು ಮಾಡಿದ್ದಾರೆ. ಹೀಗಿದ್ದೂ ಪೊಲೀಸರ ವರದಿಯನ್ನು ಸರ್ಕಾರದ ಮಟ್ಟದಲ್ಲೇ ತುಳಿಯಲಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈಗಾಗಲೇ ಮಲೆನಾಡಲ್ಲಿ ರಕ್ತದ ಕಲೆ ಬಿದ್ದಿದೆ. ಅಶಾಂತಿ ನಿರ್ಮಾಣವಾಗಿದೆ. ಮತ್ತೆ ಮಲೆನಾಡನ್ನು ಶಾಂತಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮೊದಲ ಹೆಜ್ಜೆಯಾಗಿ ಕೈಗೊಂಡ ದಾಖಲೆ ಸಂಗ್ರಹಕ್ಕೆ ಪೆಟ್ಟುಕೊಟ್ಟು, ಅದನ್ನು ನಿಯಂತ್ರಿಸುವ ಕೆಲಸ ಮುಂದುವರಿದರೆ, ಕರ್ನಾಟಕ ಆಂಧ್ರವಾದಿತೂ.
ರಾಜಕೀಯ ಒತ್ತಡ ತಂದು, ಕಾನೂನಿನ ಮೊರೆ ಹೋಗಿ ಪಟ್ಟಿಯಿಂದ ಹೆಸರು ತೆಗೆಸಿದರೂ ಸತ್ಯ ಸುಳ್ಳಾಗದು. ಯಾರ ಮನೆಯಲ್ಲಿ ಯಾರ್‍ಯಾರು ಬಂದು ಉಳಿದು ಹೋಗಿದ್ದರು, ಯಾರ ಮುದ್ರಣಾಲಯದಲ್ಲಿ ಕರ ಪತ್ರಗಳು ಮುದ್ರಣಗೊಂಡಿದ್ದವು, ಯಾರು ಪ್ರಚೋದಿಸಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಪೊಲೀಸರ ಬಳಿ ನಿಖರವಾಗೇ ಇದೆ.
ಅಶಾಂತಿ ಹರಡಲು ಬಂದವರನ್ನು ಬುಡ ಸಮೇತ ಕಿತ್ತು ಮತ್ತೆ ಮಲೆನಾಡಲ್ಲಿ ಶಾಂತಿ ತರಲು ಹೊರಟ ಪೊಲೀಸರಿಗೆ ಬೇಕಿರುವುದು ಈಗ ಜನತೆಯ ಬೆಂಬಲ, ಸಹಕಾರ ಅಷ್ಟೇ.

  • ಪ್ರಚಲಿತ
~.~
  • Login or register to post comments
  • 493 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 8, 2007 - 7:57pm — ismail

ಉ: ಪೊಲೀಸರ ಮೇಲೆ ಅನುಮಾನ...ಸರೀನಾ?

ismail's picture
ನೀವು ಹೇಳುತ್ತಿರುವುದನ್ನೆಲ್ಲಾ ನಿಜವೆಂದೇ ಒಪ್ಪಿ ಕ್ರಮ ಕೈಗೊಂಡರೂ ನಕ್ಸಲೀಯರನ್ನು ಮಲೆನಾಡಿನಿಂದ ಹೊರಗಟ್ಟಲು ಸಾಧ್ಯವೇ?
 
ಆಂಧ್ರಪ್ರದೇಶ ನೀವು ಹೇಳಿರುವ ಎಲ್ಲಾ ಕೆಲಸಗಳನ್ನೂ ಚಾಚೂ ತಪ್ಪದೆ ಮಾಡಿತು. ಬಹಳಷ್ಟು ಜನರನ್ನು ಪೊಲೀಸರು ಕೊಂದರು. ಪೊಲೀಸರನ್ನು ನಕ್ಸಲೀಯರು ಕೊಂದರು. ಕೊನೆಗೇನಾಯಿತು. ಹಾವು ಸಾಯಲೂ ಇಲ್ಲ ಕೋಲು ಮುರಿಯಲೂ ಇಲ್ಲ. ಹಿಂಸೆ, ಪ್ರತಿಹಿಂಸೆ ಮತ್ತು ಹಿಂಸೆ ಅದಕ್ಕೆ ಪ್ರತಿಹಿಂಸೆ ಎಂಬ ಚಕ್ರವ್ಯೂಹವನ್ನು ಬೇಧಿಸುವ ಒಂದು ಉಪಾಯ ಕಂಡುಕೊಳ್ಳುವ ಅಗತ್ಯವಿದೆ. ಅದಕ್ಕೆ ಸಮಸ್ಯೆಯನ್ನು ಪರಿಹರಿಸ ಹೊರಡುವವರಿಗೆ ಅದರ ಸಮಗ್ರ ಗ್ರಹಿಕೆ ಬೇಕು. ನಮ್ಮ ಸರಕಾರಗಳೆಲ್ಲವೂ ಯುದ್ಧಕಾಲದ ಶಸ್ತ್ರಾಭ್ಯಾಸ ನಡೆಸುವಂಥವು. ರಾಜಕೀಯ ಪಕ್ಷಗಳೂ ಅಷ್ಟೇ. ನಕ್ಸಲ್ ವಾದಕ್ಕೆ ರಾಜಕೀಯವಾದ ಪ್ರತಿಕ್ರಿಯೆಯ ಅಗತ್ಯವೂ ಇದೆ ಎಂದು ಮನಗಾಣದೆ ತಮ್ಮದೇ ಆದ ಭ್ರಷ್ಟಾಚಾರದ ಕೂಪದೊಳಗೆ ಮುಳುಗಿ ಹೋಗಿವೆ. 
 
ಜನರ ಸಹಕಾರ ಬೇಕು ಎಂದು ಹೇಳುವುದು ಸುಲಭ. ಮಲೆನಾಡಿನ ಪೊಲೀಸರನ್ನು ಹೇಗೆ ನಂಬಿಯಾರು? ಸಹಕಾರ ಕೊಟ್ಟವರ ಗತಿ ಏನಾಯಿತು? ಜನ ಸಾಮಾನ್ಯ ಈಗ ರಾಜನ ಭಯ ಮತ್ತು ರಾಜನಿಲ್ಲದ ಭಯ ಎರಡನ್ನೂ ಅನುಭವಿಸಬೇಕಾಗಿದೆ. ಕುದುರೆಮುಖ ಅರಣ್ಯ ಪ್ರದೇಶದ ಹಳ್ಳಿಗಳವರಿಗೆ ಒಂದು ಕಡೆ ನಕ್ಸಲೀಯರ ಭಯ ಮತ್ತೊಂದು ಕಡೆ ಪೊಲೀಸರ ಭಯ. ಈವರೆಗೂ ಅವರಿಗಿದ್ದ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಸ್ಯೆಗಳು ಈ ಬಗೆಯ ತೊಂದರೆಯನ್ನಂತೂ ತಂದಿರಲಿಲ್ಲ. ಮಲೆನಾಡಿನ ತುಂಬಾ ಶೋಷಕರೇ ತುಂಬಿದ್ದಾರೆಂಬ ಅರ್ಥದಲ್ಲಿ ಮಾತನಾಡುವ 'ಕ್ರಾಂತಿಕಾರಿ'ಗಳಲ್ಲಿ ಬಹುತೇಕರಿಗೆ ಮಲೆನಾಡಿನಲ್ಲಿ ಕೇಳಿದಷ್ಟು ಕೂಲಿಕೊಟ್ಟರೂ ಕೆಲಸಕ್ಕೆ ಜನ ಸಿಗದ ಸ್ಥಿತಿ ಇದೆ ಎಂಬುದರ ಅರಿವಿಲ್ಲ. 
 
ಕೀಟನಾಶಕ ಸಿಂಪಡಿಸಿ ಬೆಳೆಗೆ ಹತ್ತಿದ ಕೀಟಗಳನ್ನು ಓಡಿಸುವಂತೆ ನಕ್ಸಲೀಯರನ್ನು ಕೊಂದು ಮುಗಿಸಬೇಕೆಂದು ವಾದಿಸುವವರಿಗೆ ನಕ್ಸಲೀಯರಿಗೆ ಮಲೆನಾಡಿನಲ್ಲಿ ಒಂದು ನೆಲೆ ಕಲ್ಪಿಸಿಕೊಟ್ಟ ಗಿರಿಜನರ ಅಭದ್ರತೆಯ ಅರಿವೂ ಇಲ್ಲ. ರಾಷ್ಟ್ರೀಯ ಉದ್ಯಾನವನ ಯೋಜನೆ ಎಂಬ ಗೌಡ್ಲು ಮತ್ತು ಮಲೆಕುಡಿಯ ಸಮುದಾಯದವರಲ್ಲಿ ಸೃಷ್ಟಿಸಿದ ಅಭದ್ರತೆಯನ್ನು 1995ರಿಂದ 2000ದವರೆಗಿನ ಅವಧಿಯಲ್ಲಿ (ಈ ಅವಧಿಯಲ್ಲಿ ನಾನು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರದಿಗಾರನಾಗಿದ್ದೆ) ನಾನೇ ಕಣ್ಣಾರೆ ಕಂಡಿದ್ದೇನೆ. ತಾವು ಕೃಷಿ ಮಾಡುತ್ತಿರುವ, ವಾಸಿಸುತ್ತಿರುವ ಭೂಮಿಗೆ ಸಂಬಂಧಿಸಿದಂತೆ ಅವರಲ್ಲಿ ದಾಖಲೆಗಳೇ ಇಲ್ಲ. ಸರಕಾರದ ಪುನರ್ವಸತಿ ಪ್ಯಾಕೇಜ್ ಗಳೆಲ್ಲವೂ ಭೂದಾಖಲೆಗಳನ್ನು ಹೊಂದಿದ್ದವರಿಗೆ ಮಾತ್ರ. ದಾಖಲೆಯೇ ಇಲ್ಲದೆ ಯಾವುದೋ ಕಾಲದಲ್ಲಿ ಯಾರಿಗೋ ಗೇಣಿಕೊಡುತ್ತಿದ್ದೆವು ಎಂದು ಹೇಳಿಕೊಂಡು ಬದುಕು ಕಟ್ಟಿಕೊಂಡಿರುವವರ ಗತಿಯಾದರೂ ಏನು?
 
ಈ ಕಾಡಿನ ಮಕ್ಕಳಿಗಾಗಿ ಸರಕಾರ ಸ್ಥಾಪಿಸಿರುವ ಗಿರಿಜನ ಆಶ್ರಮ ಶಾಲೆಗಳಲ್ಲಿ ಒಂದೆರಡಾದರೂ ಸರಿಯಾಗಿದ್ದಿದ್ದರೆ, ಗಿರಿಜನರ ಮಕ್ಕಳು ಆಧುನಿಕ ವಿದ್ಯಾಭ್ಯಾಸವನ್ನು ಪಡೆಯುವುದನ್ನು ಖಚಿತ ಪಡಿಸಿಕೊಂಡಿದ್ದರೆ ಕಳೆದ ಐವತ್ತು ವರ್ಷಗಳ ಅಭಿವೃದ್ಧಿ ಯಾತ್ರೆಯಲ್ಲಿ ಈ ಗಿರಿಜನರಲ್ಲಿ ಬಹುಪಾಲು ಜನ ಊರಜನರಾಗಿಬಿಡುತ್ತಿದ್ದರು. ಗಿರಿಜನಾಭಿವೃದ್ಧಿ ಯೋಜನೆಗಳೆಲ್ಲಾ ತಾಲೂಕು ಕೇಂದ್ರಗಳಾಚೆಗೆ ಹೋಗದೇ ಉಳಿದದ್ದರ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಬರುವ ಪ್ರತೀ ಕುಟುಂಬದ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣವೊಂದನ್ನು ಖಚಿತ ಪಡಿಸಿದರೆ ಸಮಸ್ಯೆಯಲ್ಲಿ ಅರ್ಧದಷ್ಟು ಪರಿಹಾರವಾಗುತ್ತದೆ. ಬದುಕಿನ ಕುರಿತ ಭರವಸೆಯೊಂದಿದ್ದರೆ ಮನುಷ್ಯ ಸುಲಭದಲ್ಲಿ ಬಂದೂಕು ಕೈಗೆತ್ತಿಕೊಳ್ಳುವವರನ್ನು ಒಪ್ಪುವುದಿಲ್ಲ. ಇದರ ಜತೆಗೆ ಕಾನೂನು ಪಾಲನೆಗೆ ಪೊಲೀಸರು ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಅರ್ಥವಿದೆ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.in
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 9, 2007 - 11:14am — jaiguruji

ಉ: ಪೊಲೀಸರ ಮೇಲೆ ಅನುಮಾನ...ಸರೀನಾ?

jaiguruji's picture

ಇಸ್ಮಾಯಿಲ್,

ನೀವು ಹೇಳಿರುವದೆಲ್ಲಾ ಸರಿ, ಗಿರಿಜನರ ಬಗ್ಗೆ ಸರ್ಕಾರ ಬರೀ ಪೇಪರ್ ನಲ್ಲಿ ಇರದಂತಹ ಯೋಜನೆಗಳನ್ನು ಮಾಡದೇ ಜಾರಿ ಮಾಡಲು ಸಾಧ್ಯವಾಗುವಂತಹ ಯೋಜನೆಗಳನ್ನು ಜಾರಿ ಮಾಡಬೇಕು. ಹಿಂಸೆಗೆ ಅಥವಾ ಬಂದೂಕಿನ ಸಪ್ಪಳಕ್ಕೆ ಎಚ್ಚೆತ್ತುಕೊಳ್ಳುವಷ್ಟು ಸರ್ಕಾರ ಕಿವುಡಾಗಬಾರದು. ಹಾಗೆ ಆಗದಂತೆ ನೋಡಿಕೊಳ್ಳಲು, ನಮ್ಮ ಜನಪರ ಹೋರಾಟಗಾರರು, ಸೇವಾ ಸಂಸ್ಥೆಗಳು ಈ ದಿಶೆಯಲ್ಲಿ ಕಾರ್ಯ ಮಾಡಬೇಕು.

ಮೇಲಿನ ಲೇಖನದಲ್ಲಿ ನೀವು ಒಂದು ವಿಷಯ ಗಮನಿಸಲಿಲ್ಲವೆನಿಸುತ್ತದೆ. ಪೋಲೀಸರು ತಯಾರಿಸಿದ ಪಟ್ಟಿಗೆ ವಿರೋಧ ವ್ಯಕ್ತವಾಗಿರುವದರ ಬಗ್ಗೆ ನಾವು ಸರಿಯಾಗಿ ವಿಚಾರಿಸಬೇಕು. ಕೇವಲ ಮಾಧ್ಯಮ ಮತ್ತು ಇತರೆ ಪ್ರಭಾವವನ್ನು ಉಪಯೋಗಿಸಿ ಪೋಲಿಸರ ಮೇಲೆಯೆ ಗೂಬೆ ಕೂಡಿಸುವ ಕೆಲಸ ಮಾಡಬಾರದು. ಈ ವಿಷಯದಲ್ಲಿ ಆಗಿರುವದು ಅದೆ. ಈ ಜನರಿಗೆ ನಕ್ಸಲ್ ರ ಹೆಣ ಮೆರವಣಿಗೆ ಮಾಡಲು, ಅವರನ್ನು ಜನರಿಗಾಗಿ ಹೋರಾಡಿ ವೀರಮರಣವನ್ನಪ್ಪಿದ ಮಹಾನ್ ಹುತಾತ್ಮರಂತೆ ಚಿತ್ರಿಸಲು, ಮಾಧ್ಯಮಗಳಲ್ಲಿ ನಕ್ಸಲರ ಕುಕೃತ್ಯಗಳೆನ್ನೆಲ್ಲಾ-ಹಿಂಸೆಯನ್ನು ಕೂಡಾ-ಯಾವುದೋ ಸಿದ್ಧಾಂತದ ತೆವಲಿಗೆ ಬಿದ್ದು ಸಮರ್ಥಿಸುವಾಗ-ವೈಭವಿಕರಿಸುವಾಗ ಯಾವುದೇ ಮುಜುಗರ ಅಥವಾ ಹೆದರಿಕೆಯಿಲ್ಲ. ಅದೇ ಪೋಲಿಸರ "ನೀವುಗಳೆಲ್ಲಾ ಊರಲ್ಲಿದ್ದುಕೊಂಡು, ಬೇರೆ ಬೇರೆ ಸಂಘಟನೆ ಹೆಸರಿನಡಿ ನಕ್ಸಲರನ್ನ, ಅವರ ಕೃತ್ಯ-ಸಿದ್ಧಾಂತಗಳನ್ನ ಸಮರ್ಥಿಸುತ್ತಿದ್ದೀರಿ" ಎಂದು ಅಧಿಕೃತವಾಗಿ ಹೇಳಿದರೆ ಸಾಕು ಪೋಲಿಸರ ಮೇಲೆಯೆ ಉರಿದು ಬಿಳುತ್ತಾರೆ. ಅಷ್ಟೆ ಅಲ್ಲ, ತಮ್ಮ ಸುರಕ್ಷತೆಗೋಸ್ಕರ ಅವರು ತಮ್ಮ ಹಳೆಯ ಚರಿತ್ರೆ, ’ಹೋರಾಟ’ಗಳನ್ನೆ ಅಲ್ಲಗಳೆಯುತ್ತಾರೆ! ರಾಜಕಾರಣಿಗಳನ್ನು ನಾಚಿಸುವಂತೆ ಈ ನಕ್ಸಲ್ ಸಮರ್ಥಕರು ಹೇಳಿಕೆಗಳನ್ನು ನೀಡುತ್ತಾರೆ. ಹೇಳಿದ್ದನ್ನೆ ತಿರುಚುತ್ತಾರೆ. ಇದು ತಪ್ಪಲ್ಲವೇ?

ಇಷ್ಟಕ್ಕೂ ಭಗತ್, ಸುಭಾಸ್, ವಿವೇಕಾನಂದ, ಅಂಬೇಡ್ಕರ್ ಇತ್ಯಾದಿ ರಾಷ್ಟ್ರ ನಾಯಕರ ಹೆಸರಿನಲ್ಲಿ, ಪರಿಸರ, ಕೋಮು ಸೌಹಾರ್ದ, ಜಾತ್ಯಾತೀತ ಇತ್ಯಾದಿಗಳ ನೆಪದಲ್ಲಿ ತೆಗೆದಿರುವ ಅನೇಕ ಸಂಘಟನೆಗಳು(ಪೋಲಿಸರ ಮಟ್ಟಿ ನೋಡಿ) ನಕ್ಸಲರು ಕಾಡಿನಲ್ಲಿ ಮಾಡಿದ್ದನ್ನು ನಾಡಿನಲ್ಲಿ ಕುಳಿತುಕೊಂಡು ಸಮರ್ಥಿಸುತ್ತಿವೆ. ನಾಡಿನಲ್ಲಿ ಸಭ್ಯರಂತೆ ಮುಖವಾಡ ಹಾಕಿಕೊಂಡು ನಕ್ಸಲರಿಗೆ ಮುಖವಾಣಿಯಾಗುವದು ಯಾವ ’ಲಾಭ’ಕ್ಕಾಗಿ? ಇದನ್ನು ಪ್ರಶ್ನಿಸಿ, ಕ್ರಮಕೈಗೊಳ್ಳುವದನ್ನ ಪೋಲಿಸರಲ್ಲದೇ ಇನ್ನಾರು ಮಾಡಬೇಕು?

ಸಂಘಟನೆಗಳ ದ್ವಂದ್ವ ನೀತಿಗೆ, ಗೋಸುಂಬೆ ಮುಖವಾಡಕ್ಕೆ ಅತ್ಯುತ್ತಮ ಉದಾಹರಣೆ ಇತ್ತೀಚಿಗಾದ ಪ್ರಸಂಗ. ಹಿರಿಯರಾದ ಕಡಿದಾಳ್ ಶಾಮಣ್ಣನವರ ಉದಾಹರಣೆಯನ್ನೆ ನೋಡಿ. ಮೊದಲೆಲ್ಲಾ ಪೋಲಿಸರ ಮೇಲೆ ನ್ಯಾಯಾಲಯದ ಮುಖಾಂತರ ಕ್ರಮ ಕೈಗೊಳ್ಳುವ ಮಾತನಾಡಿದ ಅವರು ನಂತರ ಅನೇಕ ಪತ್ರಿಕೆಗಳಲ್ಲಿ ಅವರು ನಕ್ಸಲರ ಜೊತೆಗೆ ಕುಳಿತಂತಹ ಫೋಟೊ ಪ್ರಕಟವಾದಾಗ ನಿರಾಕರಿಸದೆ ಸುಮ್ಮನಾದರೇಕೆ? ಉದಯ ಟೀವಿಯಲ್ಲಿ ದೀಪಕ್ ತಿಮ್ಮಯ್ಯ ಮಾಡಿದ ಸಂದರ್ಶನ ನೋಡಿದರೆ ಶಾಮಣ್ಣನವರು ಭಾರಿ ಸಿಟ್ಟಿಗೆದ್ದಂತೆ ಕಾಣುತ್ತಿತ್ತು. ಅಂತವರು ಸುಮ್ಮನಾದರೇಕೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 9, 2007 - 11:21am — jaiguruji

ಉ: ಪೊಲೀಸರ ಮೇಲೆ ಅನುಮಾನ...ಸರೀನಾ?

jaiguruji's picture

ಮೇಲಿನ ಪ್ರತಿಕ್ರಿಯೆಗೆ ಪೂರಕವಾಗಿ ಈ ಸಂಪದ ಬ್ಲಾಗ್ ನೋಡಿ. http://sampada.net/blog/jaiguruji/03/07/2007/4783
ಪೋಲಿಸ್ ಪಟ್ಟಿಯ ಮೇಲೆ ಹಾರಾಡುವದು, ಪೋಲಿಸರ ಮೇಲೆಯೆ ಗೂಬೆ ಕೂರಿಸುವದು - ಇವೆಲ್ಲಾ ನಕ್ಸಲ್ ರು ಮತ್ತು ಸಮರ್ಥಕರು ಹುಟ್ಟುಹಾಕಿರುವ, ನಕ್ಸಲ್ ಸಮರ್ಥಕರು ಆಡಳಿತ ನಡೆಸುವ ಮುಂಚೂಣಿ ಸಂಘಟನೆಗಳ ಕುತಂತ್ರಗಳಷ್ಟೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ನಲುಗುತ್ತಿರುವ ಮಲೆನಾಡು
  • ಸುರಿವ ಮಳೆ, ತಣ್ಣಗೆ ಬೀಸುವ ಗಾಳಿಯಲ್ಲೂ ಹರಿಯುತ್ತಿದೆ ಬೆವರು...!
  • ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
  • ಸಿಪಾಯಿ ದಂಗೆ-II
  • ಕೆಂಪಾದವೊ... ಎಲ್ಲ ಕೆಂಪಾದವೋ...
Syndicate content

ಲೇಖಕರು

kuchela's picture

ಪೂರ್ಣ ಹೆಸರು
ಶ್ರೀಕಾಂತ್

ಪರಿಚಯ

ಹಾಯ್, ಸಹೃದಯ ಗೆಳೆಯರಿಗೆ ನನ್ನ ನಮನ. ಶ್ರೀಕಾಂತ್ ನನ್ನ ಹೆಸರು. ವಾಸಸ್ಥಳ ಶಿವಮೊಗ್ಗ. ಊರು ಕೋಟ(ದ.ಕ). ಓದಿದ್ದು ಶಿವಮೊಗ್ಗ ಸಹ್ಯಾದ್ರಿ ಕಾಲೇಜ್ ನಲ್ಲಿ, ಬಿಬಿಎಂ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator