ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ತಾಯಿಯಾಗುವ ಸುಖ

July 12, 2007 - 6:13pm — veena

ಓದು ಮುಗಿದ ಕೂಡಲೇ ಕೆಲಸಕ್ಕೆ ಸೇರಿಕೊಂಡು, ಯಾವ ಬಂಧನಕ್ಕೂ ಸಿಗದೆ ಹಕ್ಕಿಯಂತೆ ಹಾರಾಡುತ್ತಿದ್ದ ನನಗೆ ನನ್ನ ಅಕ್ಕನ ಮಕ್ಕಳನ್ನು ಕಂಡಾಗಲೆಲ್ಲ ಅನ್ನಿಸುತ್ತಿದ್ದುದು, ಮಕ್ಕಳು ಸ್ವಲ್ಪ ಹೊತ್ತು ಆಟವಾಡಲು ಅಷ್ಟೆ ಚೆಂದ, ಅವರ ಅಳು, ಊಟ ಮಾಡಿಸುವುದು, ನಿದ್ರೆ, ಸದಾ ಹಿಂದೆ ಮುಂದೆ ಸುತ್ತುವ ಅವುಗಳ ಮೇಲೆ ಯಾವಾಗಲೂ ಒಂದು ಕಣ್ಣಿಡುವುದು, ಇವೆಲ್ಲ ನನಗೆ ಆಗದ ಕೆಲಸವೆಂದು. ಆದರೆ ಸ್ವತ: ತಾಯಿಯಾಗುವ ಸಂದರ್ಭ ನನಗೂ ಒಂದು ದಿವಸ ಬಂದಿತು. ಮೊದಮೊದಲು ಮಗುವು ರಾತ್ರಿಯೆಲ್ಲ ಅಳುವಾಗ, ನನಗೆ ನಿದ್ರೆಯಿಲ್ಲದಾದಾಗ, ಒಂದಿನಿತೂ ಬೇಸರಿಸದೆ, ಮಗುವನ್ನು ನೋಡಿಕೊಂಡಿದ್ದು ನನಗೇ ಆಶ್ಚರ್ಯ ತರಿಸಿತ್ತು. ನಂತರ ಶುರುವಾಯಿತು ನನ್ನ ಮಗುವಿನ ಬಿಡಿಸಲಾಗದ ಅನುಬಂಧ. ಅದರ ಮುಗ್ಧ ನಗು, ಆಟ, ಚೇಷ್ಟೆ, ಎಲ್ಲವೂ ಅಪ್ಯಾಯಮಾನ. ಭಗವಂತ ಎಲ್ಲರಲ್ಲೂ ಈ ಮುಗ್ಧತೆಯನ್ನು ಯಾಕೆ ಇಟ್ಟಿರುವುದಿಲ್ಲ ಎನಿಸುತ್ತದೆ. ಕೆಲಸಕ್ಕೆ ಬಂದರೂ ಮಗುವಿನದೇ ಚಿಂತೆ, ಅತ್ತರೆ ಬೇಸರವಿಲ್ಲ, ನಾವು ದಣಿದಿದ್ದರೂ, ಅದಕ್ಕೆ ಊಟ ಮಾಡಿಸುವ ಸಂಭ್ರಮ, ನಿತ್ಯದ ಧಾರಾವಹಿಗಳಿಗೆ ತಿಲಾಂಜಲಿ ಇತ್ತು, ಮಗುವಿನ ಜೊತೆ ಆಟವಾಡುವಾಗ ಸಮಯ ಸರಿದದ್ದೇ ತಿಳಿಯುವುದಿಲ್ಲ. ಆಗ ತಿಳಿಯಿತು, ಎಲ್ಲರೂ ತಾಯ್ತನವು ಹೆಣ್ಣನ್ನು ಒಬ್ಬ ಪರಿಪೂರ್ಣ ಮಹಿಳೆಯಾಗಿಸುತ್ತದೆ ಎಂದು ಏಕೆ ಹೇಳುತ್ತಾರೆಂದು. ಮಕ್ಕಳಿಗೆ ನಾವು ಕೊಡುವ ಪ್ರೀತಿ, ಮಮತೆ ಇನ್ಯಾರಿಗೂ ಕೊಟ್ಟಿರುವುದಿಲ್ಲ, ಬಹುಶ: ಗಂಡನಿಗೂ ಕೂಡ, ಈ ರೀತಿಯ unconditional ಪ್ರೀತಿಯನ್ನು ನಾವು ಕೊಟ್ಟಿರುವುದಿಲ್ಲವೇನೋ ಅನ್ನಿಸುತ್ತದೆ. ಏಕೆಂದರೆ ಮಕ್ಕಳಿಂದ ಪ್ರತಿಯಾಗಿ ನಾವು ಏನನ್ನೂ ಬಯಸುವುದಿಲ್ಲ. ಇಂದಿನ ಪೀಳೀಗೆಯ ಅದರಲ್ಲೂ ಸಾಫ್ಟ್ ವೇರ್ ಮಂದಿಯು ಮಕ್ಕಳು ಬೇಡವೆಂದು ತೀರ್ಮಾನಿಸುವವರೇ ಹೆಚ್ಚಿರುವರೆಂದು ತಿಳಿದಾಗ, ಭಗವಂತ ಕೊಟ್ಟ ಅಮೂಲ್ಯವಾದ ಉಡುಗೊರೆಯನ್ನು ಬೇಡವೆನ್ನುವ ಅವರೆಷ್ಟು ದುರದೃಷ್ಟವಂತರೆಂದು ಅನ್ನಿಸುತ್ತದೆ.

  • ಅನುಭವ ಕಥನ
~.~
  • Login or register to post comments
  • 854 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 12, 2007 - 6:31pm — mahesha

ಉ: ತಾಯಿಯಾಗುವ ಸುಖ

mahesha's picture

ತುಂಬಾ ಒಳ್ಳೆಯ ಬ್ಲಾಗು!!

ನಿಮ್ಮ ಅನಿಸನ್ನು ಬಲು ಚನ್ನಾಗಿ ಹೇಳಿಕೊಂಡಿದ್ದೀರಿ!! ಏಸೇ ಅದರು ಅದು ಒರು ತಾಯಿಮಾತು ತಾನೇ!!

ಹೀಗೆ ಬರುತ್ತಿರಿ!
ನನ್ನಿ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2007 - 7:02pm — roshan_netla

ಉ: ತಾಯಿಯಾಗುವ ಸುಖ

roshan_netla's picture

ನಮ್ಮ ದೇಶದ ಬಲುದೂಡ್ಡ ಸಮಸ್ಯೆಯೆ ಜನಸಂಖ್ಯಾಸ್ಪೊಟ!!
ನೀವು ಹೀಗೆ ಆಸೆ ಹುಟಿಸಿದರೆ ಹೇಗೆ? ಮುಂಚೆ ನಾವಿಬ್ಬರು ನಮಗಿಬ್ಬರು ಈಗ ಮನೆಗೊಂದು ಮಗು ಇನ್ನು ಕುಟುಂಬಕ್ಕೆ ಒಂದೇ ಮಗು ಅನ್ನುತ್ತಾರೋ ಯೇನೋ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2007 - 9:05pm — muralihr

ಉ: ತಾಯಿಯಾಗುವ ಸುಖ

muralihr's picture

ನಮ್ಮ ಮನೆ ಪಕ್ಕದ ಮನೆಯವರ ಮಕ್ಕಳು ತು೦ಬಾ ಗಲಾಟೆ ಮಾಡ್ತಿದ್ದರು.
ಮೊನ್ನೆ ಬೇರೆ ಮನೆಗೆ ಹೋದರು ಈಗ ತು೦ಬಾ ಬೇಜಾರಾಗುತ್ತೆ.
ಆದರೆ ಸಿಟಿಯಲ್ಲಿ ಮಕ್ಕಳ ಕಷ್ಟ ಕ೦ಡು ಒಮ್ಮೊಮ್ಮೆ ಬೇಸರ ಬರುತ್ತದೆ.
ಮಕ್ಕಳಿಗೆ ಒಳ್ಳೆ ವಾತಾವರಣ ಇಲ್ಲದೆ ತು೦ಬಾ ಒದ್ದಾಡ್ತಾರೆ.

ಮುರಳಿ,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2007 - 9:08pm — mahesha

ಉ: ತಾಯಿಯಾಗುವ ಸುಖ

mahesha's picture

"ಮೊನ್ನೆ ಬೇರೆ ಮನೆಗೆ ಹೋದರು ಈಗ ತು೦ಬಾ ಬೇಜಾರಾಗುತ್ತೆ."

ಮುರುಳಿ ಆತ್ಮರೇ!!

ಅವರು ಬೇರೆ ಮನೆಗೆ ಯಾಕೆ ಹೋದರು ಗೊತ್ತುಂಟಾ?
.
.
.
.
.
.
.
.
.
.
.
.
.
ನಿಮ್ಮ ಗಲಾಟೆ ತಡೆಯಲಾಗದೆ!! Smiling ( ಜೋಕು )!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 13, 2007 - 1:58pm — veena

ಉ: ತಾಯಿಯಾಗುವ ಸುಖ

veena's picture

veena.

ಜನಸಂಖ್ಯೆ ಒಂದು ಸಮಸ್ಯೆ ಯಾವಾಗ ಆಗುತ್ತದೆ ಎಂದರೆ, ಅರಿವಿಲ್ಲದ ಜನರು ಎರಡಕ್ಕಿಂತ ಹೆಚ್ಹಿಗೆ
(ಹಿಂದಿನ ಕಾಲದಲ್ಲಿ ೪ ಕ್ಕಿಂತ ) ಮಕ್ಕಳನ್ನು ಪಡೆದು, ಬಡತನದ ಕಾರಣದಿಂದ ಅವರನ್ನು ಸರಿಯಾಗಿ ಸಾಕಲಾಗದೆ, ವಿದ್ಯೆ ಕೊಡಿಸಲಾಗದೆ ಹೋದಾಗ, ಆ ಮಕ್ಕಳು ಸಮಾಜಕ್ಕೊಂದು ಹೊರೆಯಾಗುತ್ತಾರೆ.
ಹಾಗೂ ಗಂಡು ಮಗು ಬೇಕೆಂದು ಯಂತ್ರದಂತೆ ಮಕ್ಕಳನ್ನು ಹಡೆಯುತ್ತಾ ಹೋದಾಗ ಸಮಸ್ಯೆ ಉದ್ಭವವಾಗುತ್ತದೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸುಸಂಸ್ಕೃತ ಮಕ್ಕಳು, ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಲು, ನಮ್ಮ ಮುಂದಿನ ಪೀಳಿಗೆಯನ್ನು ನಡೆಸಲು ಬೇಕೇ ಬೇಕು. ಆದರೆ ಎರಡಕ್ಕಿಂತ ಹೆಚ್ಚಿರಬಾರದು ಅಷ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 13, 2007 - 6:09pm — suresh_k

ಉ: ತಾಯಿಯಾಗುವ ಸುಖ

suresh_k's picture

ವೀಣಾ ಅವರೆ, ತಂದೆಯಾಗುವುದೂ ಒಂದು ಸುಖವೇ, ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 13, 2007 - 6:14pm — veena

ಉ: ತಾಯಿಯಾಗುವ ಸುಖ

veena's picture

veena.

ಸುರೇಶ್ ಅವರೆ,

ನೀವು ತಂದೆ ಯಾಗಿದ್ದರೆ, ನಿಮ್ಮ ಅನುಭವವನ್ನು ನಮ್ಮೊಡನೆ ಹಂಚಿಕೊಳ್ಳಿ, ಇಲ್ಲದಿದ್ದರೆ, ನಿಮ್ಮ ತಂದೆಯವರ ಬಗೆಗೆ ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 13, 2007 - 6:23pm — Sunil Jayaprakash

ಉ: ತಾಯಿಯಾಗುವ ಸುಖ

Sunil Jayaprakash's picture

ವೀಣಾ ಅವರೇ, ನಮ್ಮ ಸುರೇಶರು ಏನು ಕಡಿಮೆಯಲ್ಲ, ಇಲ್ಲಿ ನೋಡಿ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2007 - 5:53pm — Priyashi

ಉ: ತಾಯಿಯಾಗುವ ಸುಖ

Priyashi's picture

ಹುಟ್ಟಿನ ಪ್ರಕ್ರೀಯೆ ಒ೦ದು ಅತ್ಯಾದ್ಭುತ ಅನುಭವ. ಹೆಣ್ಣು ಸಹಜವಾಗಿ ಒ೦ಬತ್ತು ತಿ೦ಗಳು ಹೊತ್ತು ಹೆರಿಗೆ ಮುಗಿಯುವವರೆಗೆ ನೋವು ಅನುಭವಿಸುವುದು ಪ್ರಕೃತಿದತ್ತವಾದ ಕೊಡುಗೆ. ಆ ಸಮಯದಲ್ಲಿ ಮತ್ತು ನ೦ತರ ಗ೦ಡು, ಹೆಣ್ಣಿಗೆ ಹೆಗಲಾಗಿ ನಿ೦ತರೆ, ಹೆಣ್ಣಾಗಲಿ ಗ೦ಡಾಗಲಿ ಒ೦ದು ಮಗುವಿನ ಸ೦ಸಾರದೊ೦ದಿಗೆ ಪ್ರೀತಿಯಿ೦ದ ಸರಸದಿ೦ದ ದಾ೦ಪತ್ಯ ಜೀವನ ನಡೆಸಿದರೆ, ಹುಟ್ಟಿಗೊ೦ದು ಅರ್ಥ ಅಲ್ಲವೆ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 13, 2007 - 7:21pm — muralihr

ಉ: ತಾಯಿಯಾಗುವ ಸುಖ

muralihr's picture

ತಾಯಿಯಾಗೋಕ್ಕೆ ಹೊತ್ತು ಎತ್ತಿ ಸಿಕ್ಕಾಪಟ್ಟೆ ಕಷ್ಟ ಸಹಿಸಿಕೊ೦ಡಿರುತ್ತಾಳೆ,
ಅದಕ್ಕೆ ಇದು ಸು:ಖ ಅನ್ನಿಸಬಹುದು.
ತ೦ದೆ ಯಾಗುವುದಕ್ಕೆ ಕಷ್ಟ ಪಡಬೇಕಿಲ್ಲಾ Smiling ಹೆಚ್ಚಿನ ತ೦ದೆಯರು ಕ್ರೂರಿಗಳಿರುತ್ತಾರೆ, ತಮ್ಮ ಆಸ್ತಿಗೊಬ್ಬ ವಾರಸುದಾರ ಬ೦ದನಲ್ಲಾ ಅ೦ತ ತೃಪ್ತಿ ಪಡಬಹುದು ಅಷ್ಟೆ. ಅಥ್ವಾ ನಮ್ಮ ಧರ್ಮಕ್ಕೆ ಒಬ್ಬ ಅನುಯಾಯಿ ಬ೦ದ ಅ೦ತಾ ಹಿಗ್ಗಿ ತಮ್ಮ ಮೂಡ ನ೦ಬಿಕೆಗಳನ್ನು ಮಗನ್ ತಲೆಗೆ ಕಟ್ಟ ಬಹುದು.
ಮಕ್ಕಳ ಮೇಲೆ ಅತ್ಯಾಚಾರ ಮಾಡುವುದರಲ್ಲಿ ನಮ್ಮ ಸಮಾಜ ಎತ್ತಿದ ಕೈ.
ನಮ್ಮ ದೇಶದಲ್ಲಿ ತ೦ದೆ ಯವರು ಮಕ್ಕಳನ್ನು ಪ್ರೀತಿಸಿದ್ದರೆ - ಬಾಲ ಕಾರ್ಮಿಕರು, ಬಾಲ ವೈಶ್ಯಾ ಪದ್ದತಿ, ಬಾಲಕರ ಸೋಷಣೆ ಇರುತ್ತಿರಲಿಲ್ಲಾ. ಬದಲಿಗೆ ಅಲ್ಲಲ್ಲಿ ಪಾರ್ಕ ಮಕ್ಕಳಿಗೆ ವನ, ಆಡುವುದಕ್ಕೆ ಮೈದಾನ, ಒಳ್ಳೆ ಸ್ಕೂಲ್ , ಒಳ್ಳೆ ಟೀಚರ್ ಇವೆಲ್ಲಾ ಸೃಷ್ಟಿ ಆಗ್ತಿತ್ತು.
ಮಕ್ಕಳು ನಮ್ಗೇ ಹೊರೆಯಾಗ್ತಿರಲಿಲ್ಲಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 26, 2007 - 4:57pm — mananthprabhu

ಉ: ತಾಯಿಯಾಗುವ ಸುಖ

mananthprabhu's picture

ಮುರಲಿಯವರೆ ತಮ್ಮ ಈ ಪ್ರತಿಕ್ರಿಯೆಯ ಕೆಲವು ಅಂಶಗಳಿಗೆ ನನ್ನ ಸಹಮತವಿಲ್ಲ.

ನಿಮ್ಮ ಪ್ರತಿಕ್ರಿಯೆಯಲ್ಲಿ ತಂದೆಯೇ ಎಲ್ಲ ಮಕ್ಕಳ ಸಮಸ್ಯೆಗಳಿಗೆ ಕಾರಣ ಎನ್ನುವ ಅಭಿಪ್ರಾಯ ಕೊಟ್ಟಿರುವಿರಿ. ಇದು ಅರ್ಧ ಸತ್ಯ.

ನೀವು ಮಕ್ಕಳ ಶೋಷಣೆಯ ಒಂದು ಮುಖವನ್ನು ಮಾತ್ರ ಹೇಳಿದ್ದೀರಾ . ಇಂದಿನ ಜನಾಂಗದ ಅತಿಯಾದ "ವ್ರತ್ತಿ
ಪ್ರೇಮ " ದಿಂದ ಮಕ್ಕಳ ಪಾಲನೆ ಪೋಷಣೆಯಲ್ಲಿ ತೋರಿಸುವ ಉದಾಸೀನ ಭಾವ ಕೂಡ ಒಂದು ರೀತಿಯ ಶೋಷಣೆಯೇ. ಈ ರೀತಿಯ ಶೋಷಣೆಯಲ್ಲಿ ತಂದೆ, ತಾಯಿ ಎಂಬ ಭೇದವಿಲ್ಲದೇ ಅತಿಯಾದ ವ್ರತ್ತಿ ಪ್ರೆಮವಿರುವವರೆಲ್ಲರು ಸಮನಾಗಿ ಭಾಗಿಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 14, 2007 - 8:08am — venkatesh

ಉ: ತಾಯಿಯಾಗುವ ಸುಖ

venkatesh's picture

ತಾಯಿಯಾಗುವ ಸುಖದಂತೆ ತಂದೆಯಾಗುವ ಸುಖದ ಬಗ್ಗೆ ನೀವು ತಿಳಿಸಿಲ್ಲ. ನಿಮ್ಮ ಪತಿದೇವರು ಏನುಹೇಳುತ್ತಾರೆ ಎನ್ನುವ ಬಗ್ಗೆ ಬರೆಯಿರಿ.
ನನಗಂತೂ ಆ ಮಧುರದಿನವನ್ನು -ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಅದೊಂದು ಅವಿಸ್ಮರಣೀಯ ಘಟನೆ. ತಾಯಿಯಾದವಳ ಪ್ರತಿಕ್ರಿಯೆ- ಬಹುಶಃ ಇಡೀ ಮಾನವ ಕುಲದ ಪ್ರಥಮ ತಾಯಿಯ ಪ್ರಥಮ ಅನುಭವವೂ ಇದೇ ಆಗಿರಬಹುದೇನೋ !

ಇಲ್ಲಿ ಕೆಲವುವೇಳೆ ಸೋಮಾರಿಯಾಗಿ ಏನು ಕ್ರಿಯಾಶೀಲ ವ್ಯಕ್ತಿತ್ವವನ್ನೂ ಹೊಂದಿರದ ವ್ಯಕ್ತಿಯೂ ಒಂದು ಮಾಂಸದ ಬೊಂಬೆಗೆ ಜೀವ ಕೊಡಬಲ್ಲಳು. ಅದನ್ನು ಭೂಮಿಯಲ್ಲಿ ತಂದು, ಗಾಂಧಿ ಬುದ್ಧ, ಮಹಾವೀರ, ರಂತೆ ಮಾಡಲೂ ಸಾಧ್ಯವಿದಿಯೆಂಬ ಪರಿಕಲ್ಪನೆ, ಮನಸಿಗೆ ಬಂದಾಗ ಆಗುವ ಅಪರಿಮಿತ ಆನಂದ ಅದ್ವಿತೀಯ.

ಇಲ್ಲಿ ಜನಸಂಖ್ಯೆ ಯಾವ ಅರ್ಥವನ್ನೂ ಪಡೆದುಕೊಳ್ಳುವುದಿಲ್ಲ. ಕೇವಲ ಅದು ಒಂದಾಗಿರಬೇಕು ! ಅಷ್ಟೆ. [ಸಂಖ್ಯೆ ೧]

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 6:51am — ರೇಖಾ

ಉ: ತಾಯಿಯಾಗುವ ಸುಖ

ರೇಖಾ's picture

ನನ್ನ ಮನಸಿನ ಮಾತನ್ನೇ ಬರೆದಂತಿದೆ ವೀಣಾ ಅವರೇ, ತುಂಬ ಚೆನ್ನಾಗಿದೆ. ಮಗು ಬಂದ ಕೂಡಲೇ ನಮ್ಮ ಬದುಕೇ ಬದಲಾಗಿಬಿಡುತ್ತದೆ. ಮಗುವಿನ ಜೊತೆಗೆ ನಾವೂ ಮಗುವಾಗುತ್ತೇವೆ. ನೀವು ಹೇಳಿದಂತೆ ಮಗುವಿಗೆ ಕೊಟ್ಟಷ್ಟು ಪ್ರೀತಿಯನ್ನು ನಾವು ಯಾರಿಗೂ ಕೊಡಲು ಆಗದು. ಹೀಗೇ ಬರೆಯುತ್ತಿರಿ.

- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 1:52pm — roopablrao

ಉ: ತಾಯಿಯಾಗುವ ಸುಖ

roopablrao's picture

ವೀಣಾ
ನನಗೆ ಆದ ಆಶ್ಚರ್ಯವೇನೆಂದರೆ
ನಾನು ಇದೇ ವಿಷಯ ಬರೆಯೋಣ ಎಂದು ಸಿದ್ದ ಮಾಡಿಕೊಂಡಿದ್ದೆ
ಆದರೆ ಸಮಯವಿರದ ಕಾರಣ ಬರೆದಿರಲಿಲ್ಲ
ತುಂಬಾ ಚೆನ್ನಾಗಿ ಬರೆದಿದ್ದೀರಾ ನಾನು ಮುಂಡೆ ಯಾವಾಗಾದರೂ ಸಮಯವಿದ್ದಾಗ ನನ್ನ ಅನುಭವವನ್ನು ಬರೆಯುತ್ತೇನೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 1:52pm — roopablrao

ಉ: ತಾಯಿಯಾಗುವ ಸುಖ

roopablrao's picture

ವೀಣಾ
ನನಗೆ ಆದ ಆಶ್ಚರ್ಯವೇನೆಂದರೆ
ನಾನು ಇದೇ ವಿಷಯ ಬರೆಯೋಣ ಎಂದು ಸಿದ್ದ ಮಾಡಿಕೊಂಡಿದ್ದೆ
ಆದರೆ ಸಮಯವಿರದ ಕಾರಣ ಬರೆದಿರಲಿಲ್ಲ
ತುಂಬಾ ಚೆನ್ನಾಗಿ ಬರೆದಿದ್ದೀರಾ ನಾನು ಮುಂದೆ ಯಾವಾಗಾದರೂ ಸಮಯವಿದ್ದಾಗ ನನ್ನ ಅನುಭವವನ್ನು ಬರೆಯುತ್ತೇನೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 4, 2008 - 5:55pm — veena

ಉ: ತಾಯಿಯಾಗುವ ಸುಖ

veena's picture

veena.

ಮಕ್ಕಳಿಂದ ನಮಗೆ ಆಗುವ ಅನುಭವ ನಿತ್ಯ ನೂತನ. ಅವರ ಆಟ, ಪಾಠ ಎಲ್ಲವೂ ನಮಗೆ ಹೊಸತು. ನಮಗೆ ಆಶ್ಚರ್ಯ ತರಿಸುವ ರೀತಿಯಲ್ಲಿ ಮಕ್ಕಳ ಆಟ, ಮಾತು, ಚೇಷ್ಟೆಗಳನ್ನು ಕಂಡು ನಾವು ಸಂಭ್ರಮಿಸುತ್ತೇವೆ. ಈ ಸಂತೋಷ ನಮಗೆ ಬೇರೆಲ್ಲೂ, ಬೇರೆಂದೂ ಸಿಕ್ಕಿರುವುದಿಲ್ಲ. ನಮಗೆ ಮಗುವನ್ನಿತ್ತ ಆ ಭಗವಂತನಿಗೆ ಅನಂತ ನಮನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂಥ ಮಕ್ಕಳನ್ನು ಬೆಳೆಸುವುದು ಹೇಗೆ?
  • ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
  • ಎರಡು ದೋಣಿಗಳಲ್ಲಿನ ಪಯಣ
  • ತಂದೆ ತಾಯಿ ಮತ್ತು ಮಕ್ಕಳು
  • ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....
Syndicate content

ಲೇಖಕರು

veena's picture

ಪರಿಚಯ

I am working as Postal Assistant in Dharwad, interested in reading kannada books.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator