ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬದುಕು-ಬವಣೆ

July 13, 2007 - 11:21am — girish.shetty

ಒಣ ಮರದ ಕೊನೆ ಕೊನೆಯಲಿ ಚಿಗುರೊಡೆದ ಎಳೆ ರೆಂಬೆ
ಸುಡು ಬಿಸಿಲ ಕಡು ಕೋಪಕೆ ಕರಟಿಹೊಯ್ತ ಮುರುಟಿ ಮುರುಟಿ
ಧರೆಗೊರಗುವ ನೋವ ನಡುವೆ ವಿಶಾದದ ನಗು, ಏನಿದು ಸತ್ವಹೀನ ಬದುಕು?

ಸುಗ್ಗಿ ಕಾಲದ ಕಂಪಿನಲಿ ಸೊಕ್ಕಿ ಬೆಳೆದ ದಪ್ಪನೆಯ ಕಬ್ಬು
ಕಬ್ಬಿನಾಲೆಯ ಗಾಣಕ್ಕೆ ಸಿಕ್ಕಿ ಹಿಂಡಿ ಹಿಪ್ಪೆಯಾಯ್ತು ಸೊರಟಿ ಸೊರಟಿ
ತೊಟ್ಟಿಯ ಸೇರಿದ ಕಬ್ಬಜಲ್ಲೆಗೊಂದು ಕಹಿ ನಗು, ಏನಿದು ರಸಹೀನ ಬದುಕು?

ಕಪ್ಪು ಕತ್ತಲೆಯಲಿ ಬೆತ್ತಲೆ ನೆಲವನಪ್ಪಿ ಮಲಗಿದ ತಬ್ಬಲಿ ದೇಹ
ಹಸಿದೊಡಲಿಗೆ ಸಂತ್ವಾನ ಹೇಳಲು ಬಿಕ್ಷೆಗಿಳಿಯಿತು ಊರು ಕೇರಿಗಳ ದಾಟಿ ದಾಟಿ
ಎಂಜಲನ್ನವ ತಿಂದ ತುಟಿಗಳಲೊಂದು ನೋವಿನ ನಗು, ಎನಿದು ಅರ್ಥಹೀನ ಬದುಕು?

ಬದುಕು ಬವಣೆಗಳ ನಡುವೆ ಅಲ್ಲೊಂದು ಇಲ್ಲೊಂದು ನಂಬಿಕೆಯ ಕಿಂಡಿ, ಭರವಸೆಯ ಬತ್ತಿ
ಮೂಕ ವೀಣೆಯಿಂದ ಸಂಗೀತ ಸಾಗರವ ಸ್ರಷ್ಟಿಸುವನೊಬ್ಬ ವೈಣಿಕ, ತಂತಿಯ ಮೀಟಿ ಮೀಟಿ
ನಿರ್ಜೀವ ಶಿಲೆಗೂ ಜೀವ ಕೊಡುವನೊಬ್ಬ ಶಿಲ್ಪಿ, ತನ್ನ ಚೇಣಿಂದ ಕಲ್ಲ ಕೆತ್ತಿ ಕೆತ್ತಿ
ಮನದ ಮೂಲೆಯಿಂದೊಂದು ಅಶರೀರವಾಣಿ,
ಕಾದಿದ್ದಳು ಅಂದು ಶಬರಿ ರಾಮನಿಗಾಗಿ, ಕಾಯುತ್ತಲಿರು ಇಂದು ನೀನು...

  • ಕಾವ್ಯ ಮತ್ತು ಕವನ
~.~
  • Login or register to post comments
  • 380 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 13, 2007 - 3:04pm — benaka

ಉ: ಬದುಕು-ಬವಣೆ

benaka's picture

ಕವನ ಚೆನ್ನಾಗಿದೆ. ವಿಷಾದದ ನಗುವನ್ನು ಚಿತ್ರಿಸುವ ನಿರಾಶಾವಾದ ಕವನದುದ್ದಕ್ಕೂ ಇಣುಕುತ್ತದೆಯಾದರೂ, ಸಂತಸದ ನಗುವಿಗಾಗಿ ಕಾಯುವ ಮನೋಭಾವದೊಂದಿಗೆ ಮುಗಿಯುತ್ತಾ ಪೂರ್ಣನಿರಾಶೆಯಿಂದ ಅಲ್ಪ ಆಶಾವಾದಕ್ಕೆ ವಾಲಿದಂತೆನಿಸುತ್ತದೆ. ಶಬರಿಯ ಉಪಮೆ ಕೊನೆಯ ಸಾಲನ್ನು ಎತ್ತಿಹಿಡಿಯುವಲ್ಲಿ ಸಫಲವಾಗಿದೆ. ಮುಂದುವರೆಸಿರಿ.

ಬಹುಶ: ನಿಮಗರಿವಿಲ್ಲದೆಯೇ ಅಲ್ಲಲ್ಲಿ ಒಳ್ಳೆಯ ಛಂದೋಶೈಲಿ ಬಿಗಿಗೊಂಡಿದೆಯೆನಿಸುತ್ತದೆ; ಉತ್ತಮ ಪ್ರಯತ್ನ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 13, 2007 - 7:46pm — Khavi

ಉ: ಬದುಕು-ಬವಣೆ

Khavi's picture

ಅಬ್ಬಾ ಮನಮುಟ್ಟುವಂತಿದೆ..
ನಿಮ್ಮ ಇತರೆ ಕವನಗಳನ್ನು ಓದಿದ್ದೀನಿ..
ಆದರೆ ಅದೆಲ್ಲಕ್ಕಿಂತ ಇದು ತುಂಬಾ ಚಿನ್ನಾಗಿ ಮೂಡಿ ಬಂದಿದೆ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 13, 2007 - 7:59pm — mahesha

ಉ: ಬದುಕು-ಬವಣೆ

mahesha's picture

ಚನ್ನಾಗಿದೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬದುಕು . . .
  • " ಬದುಕು "
  • ಬದುಕು ಬದುಕೆಲೋ
  • ಭಾವನೆಗಳಿಲ್ಲದವರಿಗೆ......
  • ಕ್ಷಣ - ಬದುಕು
Syndicate content

ಲೇಖಕರು

girish.shetty's picture

ಪೂರ್ಣ ಹೆಸರು
Girish Shetty

ಪರಿಚಯ

ಹುಟ್ಟಿ ಬೆಳೆದ ಊರು ಉಡುಪಿ, ಬೆಂಗಳೂರಿನಲ್ಲಿ ಕೆಲಸ, ಉದ್ಯೋಗ Software Engineer, ಸದ್ಯಕ್ಕೆ ನೋಕಿಯ ದಲ್ಲಿ.
ಕಥೆ-ಕವನ ಬರೆಯೊ ಹುಚ್ಚು ಒಮ್ಮೊಮ್ಮೆ, ಇನ್ನೂ ಅಂಬೆಗಾಲಿಡುವ ಪ್ರಯತ್ನ.
ತಪ್ಪುಗಳನ್ನ ಹುಡುಕಿ, ಸರಿ ದಾರಿಯಲ್ಲಿ ನಡೆಸುವವರ ಹುಡುಕಾಟದಲ್ಲಿ ಇಲ್ಲಿ ಬಂದಿದ್ದಿನಿ.

ಸದಾ ತಮ್ಮೆಲ್ಲರ ಚಿರಋಣಿ
ಗಿರೀಶ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 56 ಅತಿಥಿಗಳು ಆನ್ಲೈನ್ ಇರುವರು.


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator