ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪುಟ್ಟಣ್ಣ ಕಣಗಾಲ್ ಚಿತ್ರಗಳು

July 13, 2007 - 10:39pm — arunhegde

ಪುಟ್ಟಣ್ಣ ಕಣಗಾಲ್ (೧ ಡಿಸೆಂಬರ್ ೧೯೩೩ - ೫ ಜೂನ್ ೧೯೮೫) ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಮಹೋನ್ನತ ಚಿತ್ರಗಳನ್ನು ನಿರ್ದೇಶಿಸಿ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಮೇಧಾವಿ.

ಪುಟ್ಟಣ್ಣನವರ ಒಂದೊಂದು ಚಿತ್ರವೂ ಒಂದೊಂದು ಅನರ್ಘ್ಯ ರತ್ನವಿದ್ದಂತೆ.

ಪುಟ್ಟಣ್ಣನವರ ನಿರ್ದೇಶನದ ಚಿತ್ರಗಳನ್ನು ಮತ್ತೊಮ್ಮೆ ನೆನೆದು ಹೆಮ್ಮೆ ಪಡೋಣ........

ಕನ್ನಡ ಚಿತ್ರಗಳು

0 - ಬೆಟ್ಟದ ಹಾದಿ (ಬಿಡುಗಡೆಯಾಗಿಲ್ಲ)
1 ಬೆಳ್ಳಿಮೋಡ - (1966 - ಕಲ್ಪನಾ, ಕಲ್ಯಾಣ್ ಕುಮಾರ್)
2 ಮಲ್ಲಮ್ಮನ ಪವಾಡ (1969 - ಡಾ.ರಾಜ್ ಕುಮಾರ್, ಬಿ.ಸರೋಜಾ ದೇವಿ)
3 ಕಪ್ಪು ಬಿಳುಪು (1969 - ಕಲ್ಪನಾ)
4 ಗೆಜ್ಜೆ ಪೂಜೆ (1969 - (ಕಲ್ಪನಾ, ಗಂಗಾಧರ್, ಲೀಲಾವತಿ)
5 ಕರುಳಿನ ಕರೆ (1970 - ಡಾ.ರಾಜ್ ಕುಮಾರ್, ಕಲ್ಪನಾ)
6 ಸಾಕ್ಷಾತ್ಕಾರ (1971 - ಡಾ.ರಾಜ್ ಕುಮಾರ್, ಜಮುನ, ಪೃಥ್ವಿ ರಾಜ್ ಕಪೂರ್)
7 ಶರಪಂಜರ (1971 - ಕಲ್ಪನಾ, ಗಂಗಾಧರ್)
8 ನಾಗರ ಹಾವು (1972 - ವಿಷ್ಣುವರ್ಧನ್, ಆರತಿ, ಕೆ.ಎಸ್.ಅಶ್ವಥ್, ಜಯಂತಿ)
9 ಎಡಕಲ್ಲು ಗುಡ್ಡದ ಮೇಲೆ (1973 - ಜಯಂತಿ, ಆರತಿ, ಚಂದ್ರಶೇಖರ್)
10 ಉಪಾಸನೆ(1974 - ಆರತಿ, ಸೀತಾರಾಂ)
11 ಕಥಾ ಸಂಗಮ (1975 - ರಜನೀಕಾಂತ್, ಆರತಿ, ಬಿ.ಸರೋಜಾ ದೇವಿ)
12 ಶುಭ ಮಂಗಳ(1975 - ಶ್ರೀನಾಥ್, ಆರತಿ, ಅಂಬರೀಶ್, ಶಿವರಾಂ)
13 ಬಿಳಿ ಹೆಂಡ್ತಿ (1975 - ಆರತಿ, ಅನಿಲ್ ಕುಮಾರ್)
14 ಫಲಿತಾಂಶ(1976 -ಆರತಿ, ಜೈ ಜಗದೀಶ್)
15 ಕಾಲೇಜು ರಂಗ (1976 - ಕಲ್ಯಾಣ್ ಕುಮಾರ್, ಜಯಸಿಂಹ, ಲೋಕನಾಥ್, ಲೀಲಾವತಿ)
16 ಪಡುವಾರ ಹಳ್ಳಿ ಪಾಂಡವರು (1978 - ಅಂಬರೀಶ್, ಜೈ ಜಗದೀಶ್, ರಾಮಕೃಷ್ಣ, ಆರತಿ)
17 ಧರ್ಮಸೆರೆ (1979 - ಶ್ರೀನಾಥ್, ಆರತಿ)
18 ರಂಗನಾಯಕಿ (1981 - ಆರತಿ, ಅಶೋಕ್, ರಾಮಕೃಷ್ಣ, ಅಂಬರೀಶ್, ರಾಜಾನಂದ್)
19 ಮಾನಸ ಸರೋವರ (1983 - ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ)
20 ಧರಣಿ ಮಂಡಲ ಮಧ್ಯದೊಳಗೆ (1983 - ಶ್ರೀನಾಥ್, ಚಂದ್ರಶೇಖರ್, ರಾಮಕೃಷ್ಣ, ಟಿ.ಎನ್.ಸೀತಾರಾಂ)
21 ಅಮೃತ ಘಳಿಗೆ (1984 - ಶ್ರೀಧರ್, ಪದ್ಮಾವಾಸಂತಿ, ರಾಮಕೃಷ್ಣ)
22 ಋಣ ಮುಕ್ತಳು(1984 - ಭಾರತಿ, ಎಸ್.ಕೆ.ಅರಸ್,ರಾಮಕೃಷ್ಣ)
23 ಮಸಣದ ಹೂವು (1984 - ಅಂಬರೀಶ್, ಜಯಂತಿ, ಅಪರ್ಣಾ)
24 ಸಾವಿರ ಮೆಟ್ಟಿಲು (1967/2006 - ಕಲ್ಯಾಣ್ ಕುಮಾರ್, ವಜ್ರಮುನಿ, ಜಯಂತಿ, ಪಂಡರಿ ಬಾಯಿ, ಅಂಬರೀಶ್, ಅನು ಪ್ರಭಾಕರ್, ರಾಮಕೃಷ್ಣ, ಸುಂದರ್ ರಾಜ್, ಮಾ.ಹಿರಣ್ಣಯ್ಯ)

(1967 ರಲ್ಲಿ ಆರಂಭಗೊಂಡು ಅರ್ಧಕ್ಕೇ ನಿಂತಿದ್ದ ಚಿತ್ರವನ್ನು 38 ವರ್ಷಗಳ ನಂತರ ಅಂದರೆ, 2006ರಲ್ಲಿ ಕೆ.ಎಸ್.ಎಲ್.ಸ್ವಾಮಿ ಅವರಿಂದ ಪೂರ್ಣಗೊಳಿಸಿದರು)

ಹಿಂದಿ ಚಿತ್ರಗಳು
1. ಝಹ್ರೀಲಾ ಇನ್ಸಾನ್ (1974 - ರಿಶಿ ಕಪೂರ್, ನೀತು ಸಿಂಗ್; ನಾಗರ ಹಾವು ಚಿತ್ರದ ರೀಮೇಕ್)
2. ಹಂ ಪಾಂಚ್ (1981 - ಮಿಥುನ್ ಚಕ್ರವರ್ತಿ; ಪಡುವಾರಹಳ್ಳಿ ಪಾಂಡವರು ಚಿತ್ರದ ರೀಮೇಕ್)

ತಮಿಳು ಚಿತ್ರಗಳು
1. ಇರುಲುಂ ಒಲಿಯಂ
2. ಟೀಚರಮ್ಮಾ ತೇವಿಡಿಯಾ
3. ಸುದರುಂ ಸೂರವಲಿಯುಂ

ಮಲಯಾಳಂ ಚಿತ್ರ
1. ಪೂಚಿ ಕಣ್ಣೇ (1966 - ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ!!! .ಇದು ತ್ರಿವೇಣಿಯವರ ಕನ್ನಡ ಕಾದಂಬರಿ "ಬೆಕ್ಕಿನ ಕಣ್ಣು" ಆಧಾರಿತ.)


  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 502 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 13, 2007 - 11:29pm — ವೈಭವ

ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು

ವೈಭವ's picture

ನಾಗರಹಾವಿನ ಮೇಶ್ಟ್ರು ಪಾತ್ರದಲ್ಲಿ ಮಿಂಚಿರುವ ಅಶ್ವತ್ ನಟನೆ ಈ ಜನುಮದಲ್ಲಿ ಮರೆಯಲಾಗದು.
ಶರಪಂಜರದಲ್ಲಿ ಕಲ್ಪನಾ ನಟನೆ ಮೇರು ಮಟ್ಟದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 14, 2007 - 5:11am — anivaasi

ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು

anivaasi's picture

ಪುಟ್ಟಣ್ಣ ಕಣಗಾಲರ ಚಿತ್ರಗಳ ಹಕ್ಕಿನೋಟ ತುಂಬಾ ಚೆನ್ನಾಗಿದೆ. ಪುಟ್ಟಣ್ಣನವರ ಬಿಡುಗಡೆಯಾಗದ ಚಿತ್ರವಿರುವುದು ಅಚ್ಚರಿಯಲ್ಲವೆ? ಹಾಗೇ, ಅವರ ಮೇಲೆ ಮೊದಲು ನಂಬಿಕೆ ಇಟ್ಟು, ನೆಚ್ಚಿ ಚಿತ್ರ ಮಾಡಿಸಿದವರು ಮಲಯಾಳದವರು ಅನ್ನುವುದೂ ವಿಶೇಷವೆ! ಸಂಗತಿಗಳನ್ನು ಕಲೆಹಾಕಿದ್ದಕ್ಕೆ ಧನ್ಯವಾದ ನಿಮಗೆ.

Quote:
ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಮೇಧಾವಿ

ಇದು ಹೇಗೆ ಎಂದು ತಿಳಿಯಲಿಲ್ಲ, ದಯವಿಟ್ಟು ವಿವರಿಸುತ್ತೀರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 14, 2007 - 11:13am — kpbolumbu

ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು

kpbolumbu's picture

Quote:
ಮಲಯಾಳಂ ಚಿತ್ರ
1. ಪೂಚಿ ಕಣ್ಣೇ (1966 - ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ!!! .ಇದು ತ್ರಿವೇಣಿಯವರ ಕನ್ನಡ ಕಾದಂಬರಿ "ಬೆಕ್ಕಿನ ಕಣ್ಣು" ಆಧಾರಿತ.)

ಪೂಚಿ ಕಣ್ಣೇ ಅಲ್ಲ 'ಪೂಚಕಣ್ಣಿ' ಎಂದಾಗಬೇಕು.
ಆದರೆ ಇದು ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರವಲ್ಲ. ಅವರ ಮೊದಲ ಚಿತ್ರ 'ಸ್ಕೂಲ್‍ಮಾಸ್ಟರ್' [1964].
en.wikipedia.org/wiki/Puttanna_Kanagal ಈ ಕೊಂಡಿಯಲ್ಲಿ ಕಾಣಿಸುವ ವಿವರಗಳು ತಪ್ಪು. ಪೂರಕ ಓದಿಗಾಗಿ ಡಿ.ಬಿ.ಬಸವೇಗೌಡರ 'ಬೆಳ್ಳಿತೆರೆಯ ಭಾವಶಿಲ್ಪಿ' ಓದಬಹುದು.

ಮೂಲ ಕನ್ನಡ ಚಿತ್ರಕ್ಕೆ ಶ್ರೀ.ಬಿ.ಆರ್.ಪಂತುಲು ನಿರ್ದೇಶಕ,ನಿರ್ಮಾಪಕರಾಗಿದ್ದರು ಮತ್ತು ಪುಟ್ಟಣ್ಣ ಸಹಾಯಕ ನಿರ್ದೇಶಕರಾಗಿದ್ದರು.

[u]ಪುಟ್ಟಣ್ಣನವರ ಮಲಯಾಳಂ ಚಿತ್ರಗಳು:[/u]
೧.ಸ್ಕೂಲ್‍ಮಾಸ್ಟರ್ 1964
೨.ಕಳಜ್ಞು ಕಿಟ್ಟಿಯ ತಂಗಂ 1964
೨.ಮೇಯರ್ ನಾಯರ್ 1966
೩.ಪೂಚಕಣ್ಣಿ 1966
೪.ಸ್ವಪ್ನ ಭೂಮಿ.1968

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 14, 2007 - 2:45pm — suresh_k

ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು

suresh_k's picture

ಪುಟ್ಟಣ್ಣನವರ ಚಿತ್ರಗಳಲ್ಲಿ ನಮ್ಮ ಮಣ್ಣಿನ ಸೊಗಡು ಡಾಳಾಗಿ ಕಾಣಿಸುತ್ತದೆ. ಪಡುವಾರಹಳ್ಳಿ ಪಾಂಡವರು ಮತ್ತು ಸಾಕ್ಷಾತ್ಕಾರಗಳಂತೂ ಕ್ಲಾಸಿಕ್ಸ್. ಸಾಕ್ಷಾತ್ಕಾರ ತಾಂತ್ರಿಕವಾಗಿಯೂ ಒಂದು ಅದ್ಭುತ ಚಿತ್ರ. ಬಹುಪಾಲು ದುರಂತದ ಕತೆಗಳನ್ನೇ ಅವರು ನೆಚ್ಚಿಕೊಳ್ಳುತ್ತಿದ್ದದ್ದು ಯಾಕೆ ಅಂತ ಮಾತ್ರ ಗೊತ್ತಾಗ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 15, 2007 - 12:22am — hpn

ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು

hpn's picture

ಸಾಕ್ಷಾತ್ಕಾರ ಬಹಳ ಒಳ್ಳೆಯ ಚಿತ್ರ. ಪುಟ್ಟಣ್ಣ ದುರಂತದ ಕತೆಗಳನ್ನು ಆಯ್ದುಕೊಳ್ಳುತ್ತಿದ್ದುದು ನಿಜಕ್ಕೂ ಕುತೂಹಲದ ಸಂಗತಿಯೇ. ಪುಟ್ಟಣ್ಣ ಕಣಗಾಲರ ಜೀವನದ ಬಗ್ಗೆ, ನಿರ್ದೇಶನ ಶೈಲಿಯ ಬಗ್ಗೆ ಅಧ್ಯಯನ ನಡೆಸಿದವರು ಯಾರಾದರೂ ಇದ್ದರೆ ಅವರಿಗೆ ಇದರ ರಹಸ್ಯ ತಿಳಿದಿರಬಹುದು.

ಪುಟ್ಟಣ್ಣರ ಕುರಿತು ಯಾರಾದರೂ ಡಾಕ್ಯುಮೆಂಟರಿಗಳನ್ನು ಮಾಡಿದ್ದಾರೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2007 - 5:42pm — Khavi

ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು

Khavi's picture

ಅವರ ಚಿತ್ರದ ಹೆಸರೇ ತುಂಬಾ ಸೊಗಸಾಗಿವೆ..
ಅವರು ಬೇರೆ ಭಾಷೆಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಅಂತ ಗೊತ್ತಿರಲಿಲ್ಲ...
"ಝಹ್ರೀಲಾ ಇನ್ಸಾನ್" ಮತ್ತೆ "ಹಂ ಪಾಂಚ್" ಇವು ಅವರೇ ನಿರ್ದೇಶಿಸಿದ್ದೆ.. ಅಥವಾ ಬೇರೆಯವರು ಅವರ ಚಿತ್ರಗಳನ್ನು ರಿಮೇಕ್ ಮಾಡಿದ್ದೆ.. ಗೊತ್ತಾಗಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2007 - 5:47pm — arunhegde

ಉ: ಪುಟ್ಟಣ್ಣ ಕಣಗಾಲ್ ಚಿತ್ರಗಳು

arunhegde's picture

"ಝಹ್ರೀಲಾ ಇನ್ಸಾನ್" ಸ್ವತಃ ಅವರೇ ನಿರ್ದೇಶಿಸಿದ್ದು. ಈ ಚಿತ್ರ ಸಂಪೂರ್ಣವಾಗಿ ಚಿತ್ರದುರ್ಗದಲ್ಲೇ ಚಿತ್ರೀಕರಣಗೊಂಡಿತ್ತು. ಹಂ ಪಾಂಚ್ ನ ಚಿತ್ರಕಥೆ ಇವರದ್ದು. ನಿರ್ದೇಶಕರು ಬೇರೆಯವರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ
  • ಸಾಹಿತ್ಯ
  • *ಸ್ಪೂರ್ತಿಯ ಲೈಟು*
  • *ಆಹ್ವಾನ ಬರುವೆನೆಂದವಳಿಗೆ*
  • ಕನ್ನಡವೇ ಸತ್ಯ ಕನ್ನಡವೇ ನಿತ್ಯ !
Syndicate content

ಲೇಖಕರು

arunhegde's picture

ಪೂರ್ಣ ಹೆಸರು
ಅರುಣ್ ಹೆಗಡೆ

ಪರಿಚಯ

ನಾನು ಅರುಣ್ ಕುಮಾರ್ ಡಿ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಮೂಲತಃ ಉತ್ತರ ಕನ್ನಡ ಜಿಲ್ಲೆಗೆ ಸೇರಿದವನು. ಕನ್ನಡದ ಬಗ್ಗೆ ಗೌರವ ಅಭಿಮಾನವಿದ್ದು ಕನ್ನಡ ಅಂತರ್ಜಾಲ ತಾಣಗಳಿಗೆ ಭೇಟಿ ಕೊಡುವುದು, ಸಾಧ್ಯವಾದರೆ ನಾನೂ ಒಂದಿಷ್ಟು ಬರೆಯುವುದು ನನ್ನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator