ನೆನಪು
ಮಹಾತ್ಮಾ ಗಾಂಧಿ
ಇದೀಗ ರಸ್ತೆಯ ಹೆಸರು
ಒಂದು ಬದಿಯೆಲ್ಲ
ಬಿಯರು ಬಾರು
ಇನ್ನೊಂದು ಬದಿ
ನಿಲ್ಲಿಸಿದ ವಿದೇಶಿ ಕಾರು
ನಡುವೆ ಹುಡುಗಿಯರ
ಹೆಗಲಿಗೆ ಜೋತು ನಡೆಯುವ
ಯುವಕರ ಯುವ
ಕರ ಕಾರುಭಾರು...
ಮಹಾತ್ಮಾ ಗಾಂಧಿ
ಇದೀಗ ಅಚಲ ಪ್ರತಿಮೆ
ಗಾಂಧಿ ಚೌಕ
ಎಲ್ಲರಿಗೂ ಸುಖ
ಖಜಾನೆ ನಮಗೆ ತೆರೆದು
ಉಪಕರಿಸಿದ ಮುದುಕ
ವರ್ಷಕ್ಕೆರಡು ಬಾರಿ
ನಮನ, ಹೂಗುಚ್ಛ
ಮತ್ತೆ ಕೇಳುವವರ್ಯಾರು
ನಮ್ಮ ದಾರಿ ಸ್ವಚ್ಛ..
- ಗೋಪೀನಾಥ ರಾವ್
raogopi@yahoo.com

- Login or register to post comments
- 813 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಮಹಾತ್ಮ ಗಾಂಧಿ
ಕವನ ಒಳ್ಳೆಯ ಸಮಯಕ್ಕೇ ಹಾಕಿದ್ದೀರಿ. ವಾಸ್ತವ ತಿಳಿಹೇಳುವ ಚೆಲುವಿನ ವಿಧಾನವಿದು
"ಯುವಕ ಯುವಕರ" -> "ಯುವಕ ಯುವತಿಯರ" ಎಂದಾಗಿದ್ದರೆ ಚೆನ್ನಾಗಿರುತ್ತಿತ್ತೇನೊ.
--
"ಹೊಸ ಚಿಗುರು, ಹಳೆ ಬೇರು"
ಹ್ಹೆ ಹ್ಹೆ
"ಯುವಕರ ಯುವ ಕರ ಕಾರುಬಾರು" ಇಲ್ಲಿಯ ವ್ಯಂಗ್ಯ ನಿಮಗೆ ತಿಳಿಯುಲಿಲ್ಲವೇನೊ; ಆ ವಾಕ್ಯದಲ್ಲಿ ಕಾರುಬಾರೆಲ್ಲ ಯುವಕರದ್ದೆ. ನಿಧಾನವಾಗಿ ಓದಿಕೊಳ್ಳಿ
ವೆಂ.
;)
--
"ಹೊಸ ಚಿಗುರು, ಹಳೆ ಬೇರು"
ಸಮಯೊಚಿತ ಚಿಂತನೆ
ಸಮಯೋಚಿತ ಚಿಂತನೆ. ಎಷ್ಟು ಮಂದಿ ಇಷ್ಟನ್ನಾದರೂ ಮಾಡಿಯಾರು? ಇನ್ನು ವರುಷಕ್ಕೆರಡು ಬಾರಿ ನಮ್ಮ ನಾಯಕರು ಅವರನ್ನು ನೆನೆದರೂ ಅವರ ಮನವೆಲ್ಲಾ ವೋಟು ಬ್ಯಾಂಕಿನ ಮೇಲೆಯೇ. ಆ ವೋಟು ಬ್ಯಾಂಕಿಗೆ ನಾಯಕರು ಕೊಡುವ ಸಾರಾಯಿ ಕಡೆಯೇ ಗಮನ. ಯಾರಾದರೂ ಮನ:ಪೂರ್ವಕವಾಗಿ ಆ ನೇತಾರನ ಚಿಂತನೆಗಳನ್ನು, ಹಾಕಿಕೊಟ್ಟ ದಾರಿಯನ್ನು ಸರಿಯಾದ ಮಾರ್ಗದಲ್ಲಿ ಅಳವಡಿಸಿಕೊಂಡದ್ದುಂಟೇ? ಅದಕ್ಕೇ ಅಲ್ಲವೇ ನಮ್ಮ ದೇಶ ಹೀಗಿರುವುದು.
ಹರಿಯವರೇ, ನನ್ನ ಪ್ರಕಾರ ಯುವಕರ ಎಂದರೆ ಯುವಕ ಮತ್ತು ಯುವತಿಯಿಬ್ಬರುನ್ನೂ ಉದ್ದೇಶಿಸಿದೆ. ನಂತರದ ಯುವ - ಕರ ಅಂದ್ರೆ ಕಸುವಿರುವ ಶಕ್ತಿಯುತ ಕೈಗಳು ಎಂಬರ್ಧ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
ಓಹ್!
ಯುವ - ಕರ ಅಂದ್ರೆ ಕಸುವಿರುವ ಶಕ್ತಿಯುತ ಕೈಗಳು ಎಂಬರ್ಧ.
ಓಹ್, ಈ ಪ್ರಯೋಗದ ಬಗ್ಗೆ ತಿಳಿದಿರಲಿಲ್ಲ.
--
"ಹೊಸ ಚಿಗುರು, ಹಳೆ ಬೇರು"
ಐರನಿ ಚೆನ್ನಾಗಿದೆ
ಸ್ವದೇಶಿ, ಪಾನ ನಿರೋಧ, ಬ್ರಹ್ಮಚರ್ಯ - ಮೂರಕ್ಕೂ ರಸ್ತೆಯುದ್ದದ ನಾಮ ಹಾಕಿ ರಸ್ತೆಗೆ ಹೆಸರನ್ನು ಮಾತ್ರ ಇಟ್ಟಿದ್ದೇವೆ.
ವೆಂ.