ಮುನಿಸು...
ಇದಾವ ಮೋಹ ಹೀಗೆ ಕಾಡುತಿದೆ ನನ್ನನು
ಕಪ್ಪು ಛಾಯೆಗಳ ಮಧ್ಯ ತೋರುತಿದೆ ಬೆಳಕನು.
ಸಾಕಿನ್ನು ಮುನಿಸು ದಣಿದಿಹೆನು ನಾನು,
ಬರಬಾರದೆ ಒಮ್ಮೆಯಾದರು ಮನ ತಣಿಸುವ
ತುಂತುರು ಮಳೆಯಾಗಿ ನೀನು.
ಮನಸು ಮನಸುಗಳ ನಡುವೆ ಬೇಲಿಗಳು ಬೆಳೆಯುತಿವೆ
ಸುರಿವ ಹನಿ ಹನಿ ಮಳೆಗೆ ಅಲ್ಲಲ್ಲಿ ಬೆಳೆವ ಕಾಟು ಗಿಡ-ಬಳ್ಳಿಗಳಂತೆ
ಮೂಂದೊಂದು ದಿನ ಮರೆಯಾಗಬಹುದು ನಾವು ,
ಅಳಿಸಿ ಹೋಗಬಹುದು ನೆನಪು ಕಾಲದ ಕೈಚಳಕದಲಿ,
ಕಳೆದು ಹೋಗಬಹುದು ಮತ್ತೆ ಸಿಗದ ವಸ್ತುಗಳಾಗಿ
ಬಾಡಿ ಹೋಗಬಹುದು ಮುಡಿದ ಮಲ್ಲಿಗೆಯಂತೆ
ಕೀಳದಿದ್ದರೆ ಇಂದು ಈ ಕಾಟು ಬೇಲಿಗಳನು...
ಪೂರ್ಣಿಮಾ ಹೆಬ್ಬಾರ್

- Login or register to post comments
- 372 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಮುನಿಸು...
ನಿಮ್ಮ ಕವನ ಚೆನ್ನಾಗಿದೆ ಪೂರ್ಣಿಮಾ ಹೆಬ್ಬಾರ್... ಹೀಗೆಯೇ ನಿಮ್ಮ ಕವನ ಬರೆಯುವ ಹವ್ಯಾಸ ಚೆನ್ನಾಗಿ ಸಾಗಲಿ..
ಉ: ಮುನಿಸು...
ಈ ಕವನವು "ಸ್ನೇಹ" ದ ಬಗ್ಗೆ ಬರೆದಿರುವಿರೆ೦ದು ನನ್ನ ಅನಿಸಿಕೆ. ಈ ಕವನ ಒದಿ ನನ್ನ ಅನೇಕ ಗೆಳೆಯರ, ಅವರೊಡನೆ ಕಳೆದ ಸಮಯದ ಸವಿನೆನಪುಗಳು ಮರುಕಳಿಸಿದವು.
ಹೀಗೆ ಬರೆಯುತ್ತಿರಿ
ಉ: ಮುನಿಸು...
ಕವನ ಚೆನ್ನಾಗಿದೆ!
ಪ್ರತಿಮೆಗಳು ಚೆನ್ನಾಗಿವೆ; ನಿರಾಶೆ ಹತಾಶೆಯಾಗುವ ಕೊನೆಯ ಚಣಗಳನ್ನು ಬಣ್ಣಿಸುವ ರೀತಿ - ಒಳ್ಳೆಯ ಪ್ರಯತ್ನ! ಹೀಗೆಯೇ ಮುಂದುವರೆಸಿ. ಆದರೆ ಪ್ರತಿಮೆಯಲ್ಲೊಂದು ಸಣ್ಣ ಬಿರುಕೆನಿಸುವ ಈ ಸಾಲು ಏಕೋ ಸಮಾಧಾನ ತರಲಿಲ್ಲ.
"ಬಾಡಿ ಹೋಗಬಹುದು ಮುಡಿದ ಮಲ್ಲಿಗೆಯಂತೆ"
=> ಬಾಡಿಹೋಗಬಹುದು ಸರಿ, ಹೂವಿನ ಹೆಸರಿಗೆ ಮಲ್ಲಿಗೆ - ಇರಲಿ ಒಪ್ಪಿದರೂ, "ಮುಡಿದ" ಎಂಬ ಪದ ಇಲ್ಲಿ ಸ್ವಲ್ಪ ದಿಕ್ಕುತಪ್ಪಿಸುತ್ತದೆ. ನಿಮ್ಮ ಉದ್ದೇಶ ಬೇಲಿಗಳನ್ನು ಕಿತ್ತೆಸೆಯಬೇಕೆಂದಿರುವುದರಿಂದ, ಮುಡಿದ ಹೂವಿಗೂ ಬೇಲಿಗೂ ಸಂಬಂಧ ಕಲ್ಪಿಸುವುದು ಅಸಾಧ್ಯ! ಬೇಲಿಯಿರುವುದು ಯಾವಾಗಲೂ "ಮುಡಿಯದ" ಹೂವಿಗೆ ಮಾತ್ರ!! ಆದರೂ ಕವನ ಒಂದು ಒಳ್ಳೆಯ ಪ್ರಯತ್ನ ಎಂಬುದರಲ್ಲಿ ಎರಡು ಮಾತಿಲ್ಲ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.