ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪುತ್ತೂರು ಗೋಪಾಲಕೃಷ್ಣಯ್ಯ[೧೯೦೧-೧೯೭೩]

July 27, 2007 - 4:03pm — ಗಣೇಶ

ಇದೀಗ ಸೀಮೋಲ್ಲಂಘನೆ ಮಾಡಿ ಪ್ರಪಂಚದಲ್ಲೇ ಪ್ರಸಿದ್ಧವಾದ ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆಯು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಸಾಮಾನ್ಯ ಜನರಿಗೆ ಸೀಮಿತವಾಗಿತ್ತು.ಈ ಕಲೆಯ ಪ್ರಗತಿಗಾಗಿ ದುಡಿದ ಪ್ರಮುಖರಲ್ಲಿ ದಿ|ಪುತ್ತೂರು ಗೋಪಾಲಕೃಷ್ಣಯ್ಯನವರು ಗಮನಾರ್ಹರು.ಪುತ್ತೂರು ಗೋಪಣ್ಣನೆಂದೇ ಜನಪ್ರಿಯರಾಗಿದ್ದ ಶ್ರೀಯುತರು ಕಾಸರಗೋಡಿನ ಕೂಡ್ಲು ಎಂಬಲ್ಲಿ ಜನಿಸಿದರು.ಅವರಿಗೆ ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಉಂಟಾಗಲು ಕಾರಣ ಕೂಡ್ಲು ಮೇಳದ ಬಯಲಾಟಗಳು ಮತ್ತು ಚೆಂಡೆಯ ಶಬ್ದ. ಆ ಕಾಲದಲ್ಲಿ ಯಕ್ಷಗಾನದ ವಿಶಿಷ್ಟವಾದ ಚೆಂಡೆಯನ್ನು ಕೇರಳದ ಕಥಕ್ಕಳಿಯಲ್ಲಿದ್ದಂತೆ,ಬಲಗೈಯಲ್ಲಿ ಕೋಲು ಮತ್ತು ಎಡಗೈಯಲ್ಲಿ ಕೋಲು ಇಲ್ಲದೆ ಬಾರಿಸುತ್ತಿದ್ದರಂತೆ.ಎಡಗೈಯಲ್ಲಿ ಸಣ್ಣ ಕೋಲೊಂದನ್ನು ಉಪಯೋಗಿಸಿ ಬಾರಿಸಿದರೆ ಇನ್ನಷ್ಟು ನಾದ ಮಾಧುರ್ಯವಾಗಬಹುದೆಂಬುದನ್ನು ತೋರಿಸಿಕೊಟ್ಟವರು ಶ್ರೀಯುತರ ಗುರುಗಳಾದ ಕೂಡ್ಲು ಶ್ರೀ ಸುಬ್ರಾಯ ಶ್ಯಾನುಭೋಗರಾದರೂ,ಅದನ್ನು ಕಾರ್ಯರೂಪಕ್ಕೆ ತಂದು, ಇತರರೂ ಅನುಕರಿಸುವಂತೆ ಮಾಡಿದವರು ಪುತ್ತೂರು ಗೋಪಣ್ಣನವರು.ಅವರು ಈ ಪದ್ಧತಿಯನ್ನು ಬಳಕೆಗೆ ತಂದು ಚೆಂಡೆವಾದನದಲ್ಲಿ ಒಂದು ಕ್ರಾಂತಿಯನ್ನುಂಟು ಮಾಡಿದರು.
ಶ್ರೀಯುತರ ಮತ್ತೋದು ಸುಧಾರಣೆಯೆಂದರೆ ಚೆಂಡೆಯನ್ನು ಶ್ರುತಿವಾದ್ಯವನ್ನಾಗಿ ಬದಲಾಯಿಸಿದುದು.ಅದುವರೆಗೆ ಚೆಂಡೆಯು ಕರ್ಕಶವಾದ್ಯವೆಂದೇ ಪರಿಗಣಿಸಲ್ಪಟ್ಟಿತ್ತು.ಅದರ ಧ್ವನಿಯನ್ನು ಸಾಧ್ಯವಾದಷ್ಟು ತಾರಕಕ್ಕೇರಿಸಿ, ಬಹಳ ಶಕ್ತಿಯುತವಾಗಿ ಬಾರಿಸುತ್ತಿದ್ದರು.ಚೆಂಡೆಯನ್ನು ಶ್ರುತಿಗೆ ಅಳವಡಿಸಬಹುದೆಂಬ ಶೋಧನೆಯನ್ನು ಮಾಡಿದವರು ಪ್ರಪ್ರಥಮವಾಗಿ ಪುತ್ತೂರು ಗೋಪಣ್ಣನವರು.
ಕವಿಭೂಷಣ ದಿ|ಕೆ.ಪಿ.ವೆಂಕಪ್ಪ ಶೆಟ್ಟರು ಶ್ರುತಿಗೆ ಸೇರಿದ ಚೆಂಡೆಯ ನಾದ ಮಾಧುರ್ಯದಿಂದ ಪುಳಕಿತರಾಗಿ ಪ್ರಸಿದ್ಧ ವಿಧ್ವಾಂಸರು ಸೇರಿದ ಯಕ್ಷಗಾನ ಕೂಟದಲ್ಲಿ,`ಯಕ್ಷಗಾನದಲ್ಲಿ ಚೆಂಡೆಯ ಕಾರ್ಯಭಾರವನ್ನು ಪ್ರಥಮತ: ವೈಭವೀಕರಿಸಿದವರೇ ಪುತ್ತೂರು ಗೋಪಾಲಕೃಷ್ಣಯ್ಯ'ಎಂದು ಹೊಗಳಿ,ಹಾರಾರ್ಪಣೆ ಮಾಡಿ ಗೌರವಿಸಿದ್ದರು.ಆ ಕಾಲದ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣಭಾಗವತರು,ಅಣ್ಣಿ ಭಾಗವತರು,ಜೋಯಿಸರು,ವೆಂಕುಭಾಗವತರು ಇವರೊಂದಿಗೆ ಗೋಪಣ್ಣನವರು ಕಟೀಲು,ಕದ್ರಿ,ಕೂಡ್ಲು,ಕೊರಕೋಡು ಮೇಳಗಳಲ್ಲಿ ಚೆಂಡೆಮದ್ದಳೆ ವಾದನಗಳ ಕಲಾವಿದರಾಗಿ ಹಲವಾರು ವರ್ಷ ತಿರುಗಾಟ ಮಾಡಿದರು.
೧೯೩೯ರಲ್ಲಿ ಶ್ರೀಯುತರು ಕೂಡ್ಲಿನಿಂದ ಪುತ್ತೂರಿಗೆ ಬಂದು ನೆಲಸಿದರು.ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತ,ಬಿಡುವಿನ ಸಮಯ ಚೆಂಡೆ ಮದ್ದಳೆಗಳ ರಚನಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಆ ಕಾಲದ ಪ್ರಸಿದ್ಧ ಕಟೀಲು,ಕದ್ರಿ,ಕೂಡ್ಲು,ಧರ್ಮಸ್ಥಳ ಮೇಳಗಳಿಗೆ ಚೆಂಡೆಮದ್ದಳೆಗಳನ್ನು ತಯಾರಿಸಿಕೊಡುತ್ತಿದ್ದರು.ಗೋಪಣ್ಣನ ಚೆಂಡೆಮದ್ದಳೆಗಳೆಂದರೆ ಸುಪ್ರಸಿದ್ಧ. ಜೋಡಾಟಗಳಲ್ಲಂತೂ ಉಭಯಪಕ್ಷಗಳಿಗೂ ಗೋಪಣ್ಣನ ಚೆಂಡೆಯೇ ಆಗಬೇಕು.ಶ್ರುತಿಗೆ ತಕ್ಕಂತೆ ಚೆಂಡೆಮದ್ದಳೆಗಳ ಉದ್ದಳತೆಗಳು ಶ್ರೀಯುತರಿಗೆ ಕರತಲಾಮಲಕ.ಖ್ಯಾತ ಚೆಂಡೆವಾದಕರಾದ ದಿ|ಕುದುರೆಕೋಡು ರಾಮಭಟ್ಟರು,ನೆಡ್ಲೆ ನರಸಿಂಹಭಟ್ಟರು,ಕಾಸರಗೋಡು ವೆಂಕಟ್ರಮಣ ಇವರೆಲ್ಲರಿಗೂ ಗೋಪಣ್ಣನವರೆಂದರೆ ಆತ್ಮೀಯ ಅಭಿಮಾನ.
ತಮ್ಮ ಈ ಉದ್ಯೋಗವು ಅಳಿದುಹೋಗದಂತೆ,ತಮ್ಮ ದ್ವಿತೀಯ ಪುತ್ರ ದಿ|ವಾಸುದೇವಯ್ಯ(ವಾಸಣ್ಣ)ನವರನ್ನು ತರಬೇತುಗೊಳಿಸಿ,ಈ ಕ್ಷೇತ್ರದಲ್ಲಿ ಮುಂದುವರಿಯುವಂತೆ ಮಾಡಿಸಿದ್ದರು.ಇಂತಹಕುಶಲಕರ್ಮಿ ಪುತ್ತೂರಿನ ಕೀರ್ತಿಯನ್ನು ಹತ್ತೂರು ಪಸರಿಸಿ,೧೯೭೩ರಲ್ಲಿ ಕೀರ್ತಿಶೇಷರಾದರು.
(ಗೋಪಾಲಣ್ಣನವರ ಜ್ಯೇಷ್ಠಪುತ್ರ ಶ್ರೀ.ಟಿ.ಪಿ.ಶ್ರೀಧರ್ ರಾವ್ ಹೇಳಿದ ವಿಷಯಗಳನ್ನು ಇಲ್ಲಿ ಸಂಗ್ರಹಿಸಿ ಬರೆಯಲಾಗಿದೆ)

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 443 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಂಡನ್ ಪರೇಡ್‌ನಲ್ಲಿ ಯಕ್ಷಗಾನ ಪ್ರದರ್ಶನ. ಯಕ್ಷಗಾನದ ಇತಿಹಾಸದಲ್ಲಿ ಅಚ್ಚಳಿಯದ ಒಂದು ಹೊಸ ಪುಟ !
  • ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡದವರಿಗೆ ಮಾತ್ರ ...( ಉ.ಕ.ಕ-ಕೊನೆಯ ಕಂತು)
  • ೮೪ರ ಹರಯದ ಉತ್ಸಾಹಿ ರಂಗ ನಟ - ಚನ್ನಬಸಯ್ಯ ಗುಬ್ಬಿ
  • ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !
  • ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator