ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

July 31, 2007 - 12:53am — hamsanandi

ಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ  ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ ಹೊರತು, ಅವರ ಹಿನ್ನಲೆ ಏನು ಎನ್ನುವ ಕಾರಣಕ್ಕೆ ಅಲ್ಲ. ಇದನ್ನು ನಾವು ಮರೆಯದಿದ್ದರೆ, ಎಷ್ಟೋ ಗೊಂದಲಗಳಿಂದ, ಗದ್ದಲಗಳಿಂದ ದೂರಾಗಬಹುದು. ಇದು ಬಸವಣ್ಣ ಒಬ್ಬರೇ ಅಲ್ಲ, ಇನ್ನ್ಯಾವ ಮಹಾಪುರುಷರಿಗೂ, ಕವಿ-ಕಲಾವಿದರಿಗೂ ಹೊಂದುವ ಮಾತೇ.

ನೆನ್ನೆ ಸುಮಾರು ಎರಡು ವರ್ಷಗಳ ಹಿಂದೆ ಇಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋ ನೋಡುತ್ತಿದ್ದೆ. ಅದರಲ್ಲಿ, ಮೈಸೂರಿನ ಹೆಸರಾಂತ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಅವರು ಬಸವಣ್ಣನವರ ವಚನವೊಂದಕ್ಕೆ ಮಾಡಿದ ನೃತ್ಯವನ್ನು ನಿಮ್ಮೊಂದಿಗೆ  ಹಂಚಿಕೊಳ್ಳಬೇಕೆನ್ನಿಸಿತು. ತಮಿಳುನಾಡಿನ ತಂಜಾವೂರಿನ ಬಳಿಯ ಪಂದನಲ್ಲೂರು ಶೈಲಿಯ ಭರತನಾಟ್ಯ ಕಲಾವಿದೆ, ಮೈಸೂರಿನಲ್ಲಿರುವ ಡಾ. ವಸುಂಧರಾ ಅವರು, ಕರ್ನಾಟಕದ ಉತ್ತರ ತುದಿಯ ಕಲ್ಯಾಣದ ಕ್ರಾಂತಿಯ ಕಾರಣಕರ್ತ ಬಸವಣ್ಣನವರ ವಚನಕ್ಕೆ ನೃತ್ಯ ಮಾಡಿದ್ದು ದೂರದ ಕ್ಯಾಲಿಫೋರ್ನಿಯಾದಲ್ಲಿ. ವಸುಧೈವ ಕುಟುಂಬಕಂ ಎನ್ನುವುದೀಗ ಸರಿಯಾದ ಮಾತು Smiling

ನೀವೂ ನೋಡಿ, ಕೇಳಿ ಆನಂದಿಸಿ

http://www.youtube.com/watch?v=KUlw3vXaK1s

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

ಅಂಬುಜಕೆ ಭಾನುವಿನ ಉದಯದ ಚಿಂತೆ

ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ

ಎನಗೆ ಎನ್ನ ಕೂಡಲಸಂಗಮದೇವನ ನೆನೆವುದೆ ಚಿಂತೆ!

ಸಾಮಾನ್ಯರ ಭಾಷೆಯಲ್ಲೇ ತಮ್ಮ ವಚನಗಳನ್ನೊರೆದು ಎಲ್ಲರಿಗೂ ಹತ್ತಿರವಾದ ಭಕ್ತಿಭಾಂಡಾರಿ ಬಸವಣ್ಣನವರು, ಸಾವಿರವರ್ಷಗಳ ಹಿಂದೆ ಈ ವಚನವನ್ನು ಹೇಳುವಾಗ ಚಕೋರ, ಭ್ರಮರ, ಅಂಬುಜ ಪರಿಮಳ, ಭಾನು,ಉದಯ ಇಂತಹ ಪದಗಳೆಲ್ಲ ಪರಭಾಷೆಯ ಪದಗಳೆಂದು ಚಿಂತಿಸಿದರೆ? ಸಾವಿರಾರು ವರ್ಷಗಳಿಂದ ನಮ್ಮವಾಗಿಸಿರುವ ಈ ಮಾತುಗಳನ್ನುಇ ಇಂದು ದ್ರಾವಿಡ ಮೂಲವಲ್ಲ ಎಂಬ ಕಾರಣಕ್ಕೆ ಹೊರಗೆಸೆಯಬೇಕೇ?  ಹಾಗೆ ಮಾಡಿದರೆ, ಈ ವಚನಗಳು ನಮ್ಮವಾಗದ ಚಿಂತೆ ನಮ್ಮದಾಗದೇ?!

http://www.youtube.com/watch?v=KUlw3vXaK1s

ಈ ವಚನವನ್ನು ಹಾಡಿರುವವರಾರೋ ನನಗೆ ತಿಳಿಯದು. ಆದರೆ ಅವರು ಉಪಯೋಗಿಸಿರುವ ರಾಗ -ಚಕ್ರವಾಕ (ಅಥವ ಅಹಿರ್ ಭೈರವ್ - ಉತ್ತರಾದಿ ಪದ್ಧತಿಯಲ್ಲಿ) ಈ ವಚನದ ಒಳಗಿನ ಧ್ವನಿಗೆ ಬಹಳ ಒಪ್ಪುತ್ತದೆ ಎಂದು ಮಾತ್ರ ಹೇಳಬಲ್ಲೆ. ಚಕೋರನಂತಹ ಒಂದು ಕಾಲ್ಪನಿಕ ಪಕ್ಷಿಯ ಬಗ್ಗೆಯ ವಚನಕ್ಕೆ ಇನ್ನೊಂದು ಕಾಲ್ಪನಿಕ(?) ಹಕ್ಕಿಯಾದ ಚಕ್ರವಾಕದ ಹೆಸರಿರುವ ರಾಗ ಉಪಯೋಗಿಸಿರುವುದು ಮಾತ್ರ ಕಾಕತಾಳೀಯ ! (ಇಲ್ಲಿ ಇನ್ನೊಂದು ಹಕ್ಕಿಯನ್ನು ನೀವು ಕಂಡಿರಬೇಕಲ್ಲ Eye-wink ?)

-ಹಂಸಾನಂದಿ

 

 

  • ಕಾವ್ಯ ಮತ್ತು ಕವನ
~.~
  • Login or register to post comments
  • 698 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 31, 2007 - 1:53am — hamsanandi

ಉ: ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

hamsanandi's picture


-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 31, 2007 - 12:53pm — mahesha

ಉ: ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

mahesha's picture

ನಿಮ್ಮೀ ಬರಹ ಚನ್ನಾಗಿದೆ.

ಆದರೆ ಈ ಬರಹದಲ್ಲಿ

ಚಕೋರ, ಭ್ರಮರ, ಅಂಬುಜ ಪರಿಮಳ, ಭಾನು,ಉದಯ ಇಂತಹ ಪದಗಳೆಲ್ಲ ಪರಭಾಷೆಯ ಪದಗಳೆಂದು ಚಿಂತಿಸಿದರೆ? ಸಾವಿರಾರು ವರ್ಷಗಳಿಂದ ನಮ್ಮವಾಗಿಸಿರುವ ಈ ಮಾತುಗಳನ್ನುಇ ಇಂದು ದ್ರಾವಿಡ ಮೂಲವಲ್ಲ ಎಂಬ ಕಾರಣಕ್ಕೆ ಹೊರಗೆಸೆಯಬೇಕೇ? ಹಾಗೆ ಮಾಡಿದರೆ, ಈ ವಚನಗಳು ನಮ್ಮವಾಗದ ಚಿಂತೆ ನಮ್ಮದಾಗದೇ?

ಇದು ಬೇಕಿರಲಿಲ್ಲ.

ಬಸವಣ್ಣನವರ ಕಾಲದಲ್ಲೇ ಸಂಸ್ಕ್ರುತ ಬೇಡ, ವೇದ ಬೇಡ, ಅನ್ನೋ ಕೂಗು ಜೋರಾಗಿದ್ದು ಅಲ್ವಾ? ವಚನಗಳ ಗುಣಗಳನ್ನು ಹೇಳುತ್ತಾ ಆಡುನುಡಿಗೆ ಹತ್ತಿರವಾದ, ಕ್ಲಿಷ್ಟ ಸಂಸ್ಕೃತದ ಹೊರೆಯಿಲ್ಲದ, ಸಲೀಸಾಗರಿಯಬಹುದಾದ, ಹೀಗೆಲ್ಲ ಬಣ್ಣನೆಯುಂಟಲ್ಲ.

ಸಾವಿರಾರು ವರ್ಷಗಳಿಂದ ನಮ್ಮವಾಗಿಸಿರುವ ಈ ಮಾತುಗಳನ್ನುಇ ಇಂದು ದ್ರಾವಿಡ ಮೂಲವಲ್ಲ ಎಂಬ ಕಾರಣಕ್ಕೆ ಹೊರಗೆಸೆಯಬೇಕೇ? ಹಾಗೆ ಮಾಡಿದರೆ, ಈ ವಚನಗಳು ನಮ್ಮವಾಗದ ಚಿಂತೆ ನಮ್ಮದಾಗದೇ?

ಈ ಸಾಲನ್ನೇ ಹೀಗೆ ಬರೆದರೆ.

ಸಾವಿರಾರು ಏಡುಗಳಿಂದ ನಮ್ಮ ಕನ್ನಡವು ಸಕ್ಕದದಿಂದ ಹುಟ್ಟಿದೆಯಂಬ ತಪ್ಪುತಿಳಿವಳಿಕೆ ಮುರಿದು ಬಿದ್ದಿದೆ, ಇನ್ನೂ ಕೆಲವರಿಗೆ ಈ ಸರಿ ತಿಳಿವಳಿಗೆ ಬರಬೇಕು. ಕನ್ನಡಕ್ಕೆ ತನ್ನದೇ ಆದ ಸೊಗಡು, ಒರೆಸಿರಿ, ಬೇಗರಣಗಳಿವೆ, ಇದು ಸಕ್ಕದದಿಂದ ಬೇರೆಯಾಗಿದೆ. ಹೀಗಿರುವಾಗ, ಕನ್ನಡದ ದಿಟಮೂಲವನ್ನು, ಭಾಷಾವಿಜ್ಞಾನಿಗಳಿಂದ ಪುರಾವೆಗಳ ಮೇಲೆ ಪುರಾವೆಯಿತ್ತು ತೋರಿದ ದಿಟವನ್ನು ಅರಿತು, ನಮ್ಮ ಮೂಲವನ್ನು ಅರಿಯುವುದರಲ್ಲಿ ಏನು ತಪ್ಪು? ಇದು ಅವರವರ ಒಳಹುರುಪಿನ( ಸ್ವಾಸಕ್ತಿ ) ಸಂಗತಿ ಅಲ್ವಾ? ಬೇಡವಾದವರಿಗೆ ಬೇಡವು. ಬೇಕಾದವರಿಗೆ ಬೇಕು.

ಉವರಿಗೂ(ಯಾರೊಬ್ಬರಿಗೂ) ಎಲ್ಲರಿಗೂ ಇದು ಬೇಕೇ ಬೇಕು, ಎಲ್ಲರಿಗೂ ಇದು ಬೇಡವೇ ಬೇಡ ಎನ್ನುವ ಹಕ್ಕಿಲ್ಲವೇ ಇಲ್ಲ. ಇದು ಅವರವರ ಒಳವು!!

ಮತ್ತೆ ಇಲ್ಲೊಂದು ಮರುಳಿಂದ(ಭ್ರಾಂತಿಯಿಂದ)-ಅಂಜಿಕೆ ಇದೆ. ಕೆಲವರು ಹಳೆಯ ಕಬ್ಬಗಳನ್ನೂ 'ತಿದ್ದಿ' ಅನ್ನಬಹುದೆಂದು. Smiling ಆದರೆ ಇಲ್ಲಿ ಯಾರೂ ಹಾಗೆ ಹಳೆಯ ಕಬ್ಬಗಳಲ್ಲಿರುವ ಹೊರನುಡಿ ಒರೆಗಳನ್ನು ಕಿತ್ತಾಕಿ, ಹೊರಗೆಸೆಯಿರಿ ಎಂದು ಒಮ್ಮೆಯೂ ಅಂದಿಲ್ಲ. ಹಳೆಯದು ಹೇಗಿದೆಯೋ ಹಾಗೇ ಇರಲಿ ಎಂದೇ ಎಲ್ಲರ ಹಂಬಲ.

ಹಂಸಾನಂದಿಯವರಿಗೆ ತಮಗಿರುವ ಕೊಂಚ ತಮಿಳು ಹಿನ್ನಲೆಯಿಂದ, ನಾವೆಲ್ಲ ತಮಿಳರಂತೆ "ಇನ್ನೊಂದು ಪೆರಿಯಾರ್‍ ಚಳುವಳಿ" ನಡೆಸಿ, "ಕವಿರಾಜಮಾರ್ಗ" ಅನ್ನೋದನ್ನು "ಕಬ್ಬಿಗರಸದಾರಿ" Smiling ಅಂತ ಮಾಡಿ ಬಿಟ್ಟೇವು ಎಂಬ ಹೆದರಿಕೆ ಇರಬಹುದು. ಸ್ವಾಮಿ ಅಂತಹ ಐಲಾಟ ನಮ್ಮ ಕನ್ನಡಿಗರಿಗೆ ಒಗ್ಗಲ್ಲ, ಅದಕ್ಕೆ ನನ್ನ/ನಮ್ಮ ಬೆಂಬಲ ಯಾವತ್ತೂ ಇರಲ್ಲ.

ಆದರೆ ಈಗೀಗ ಬರಹಗಳು "ಸಜೀವ ಪ್ರಕ್ಷೇಪಣೆ" ಆಗುತ್ತಿರುವುದನ್ನು ನಾವೆಲ್ಲ ಗಮನಿಸಿಯೇ ಇದ್ದೀವಿ!!( ಇದನ್ನು ನೀವು ಒಪ್ಪಿ ಹಿಂದೆ ಹೇಳಿದ್ದುಂಟು )

ಇದೊಂದನ್ನು ಬಿಟ್ಟರೆ, ನಿಮ್ಮ ಬರಹದಲ್ಲಿ ಎಲ್ಲವು ಸಬದ್ಧ!!

ಎಲ್ಲಡೆ ಆರ್ಯ/ದ್ರಾವಿಡ ಅಂತ ನೀವು ಯೋಚಿಸುವಂತೆ ಕಾಣುವುದು!!( ನಿಮ್ಮ ಚಿಕ್ಕಗೆಳೆಯನ ಸಲಿಗೆಯ ಮಾತು Smiling )
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.
  • ಬಸವಣ್ಣನವರ ವಚನ: ಚಕೋರಂಗೆ...
  • ಬಸವಣ್ಣನವರ ವಚನ: ಚಕೋರಂಗೆ
  • ನಿಮಗ್ಯಾವ ಚಿಂತೆ
  • 22.3.2007 ವಿಶ್ವ ಜಲ ದಿನಾಚರಣೆ: ಕೆಲವು ವ್ಯಂಗ್ಯಚಿತ್ರಗಳು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator