ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕನ್ನಡ ಎಲ್ಲಿದೆ... ?

August 5, 2007 - 7:23pm — prasad3003

"ಸೀ ಯಾ, ನೋ ಡಾ... ಕಮಿಂಗ್ ಡಾ.... " ಇದೇ ನಾವಾಡುವ ನುಡಿ! ಇದೇ ಸ್ವಾಮಿ ನಮ್ಮ ಗಂಧದ ಗುಡಿಯ ಪಾಡು! ಇಂಗ್ಲೀಷು ನಮ್ಮನ್ನ ಯಾವ ಪರಿ ಆಳ್ತಾ ಇದೆಯೋ ನೋಡಿ. ನಮ್ಮ ಪಕ್ಕದಲ್ಲೇ ಜನರನ್ನು ನೋಡ್ತಾ ಇರ್ತೀವಿ, ತಮ್ಮ ಮಕ್ಕಳ ಜೊತೆ, ಇಂಗ್ಲಿಷಲ್ಲೇ ಅವರ ಸಂಭಾಷಣೆ. ಮೊನ್ನೆ ಒಬ್ಬ ತಾಯಿ ಮಗನಿಗೆ ಕರೀತಾ ಇದ್ದ್ಲು "ಕಮ್ ಫಾಸ್ಟ್". ಎಂಥ ವಿಪರ್ಯಾಸ ನೋಡಿ. ಮಾತೃ ಭಾಷೆ ಅನ್ನೋದಕ್ಕೆ ಅರ್ಥವೇ ಇಲ್ಲದಂತಾಗಿದೆ! ಕನ್ನಡದಲ್ಲಿ "ಬೇಗ ಬಾ ಮಗು" ಅಂತ ಕರದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವೆ? ನಾನು ಇಂಗ್ಲಿಷ್ ಭಾಷೆಯನ್ನು ವಿರೋಧಿಸ್ತಾ ಇಲ್ಲ; ಇಂಗ್ಲಿಷ್ ಮಾತಾಡೋರನ್ನೂ ಅಲ್ಲ. ನಾನು ಹೇಳ್ತಾ ಇರೋದು ಇಂಗ್ಲಿಷ್ ಮಾತಾಡೊ ಸಂದರ್ಭದ ಬಗ್ಗೆ. ನನ್ನ ಒಬ್ನು ಗೆಳೆಯ ಇದ್ದಾನೆ. ಅವ್ನು ಮತ್ತು ಅವನ ಹೆಂಡತಿ ಇಬ್ಬರ ಸಂಭಾಷಣೆ ಯಾವಾಗ್ಲೂ ಇಂಗ್ಲಿಷಲ್ಲೇ! ಮಜಾ ಅಂದ್ರೆ ಅವರಿಬ್ಬರ ಮಾತೃ ಬಾಷೆನೂ ಕನ್ನಡವೇ! ಇಂಥ ಎಷ್ಟೋ ಜನ ಇದ್ದಾರೆ. ಹಾಗೆ ಮಾತಾಡೊದ್ರಲ್ಲಿ ಅವರಿಗೇನೊ ಒಂಥರ ಖುಷಿ. ತಾವು ಶ್ರೇಷ್ಠರು (!) ಅನ್ನುವ ಸಮಾಧಾನ.
ಇಂಗ್ಲಿಷ್ ಬಗೆಗಿನ ಈ ವ್ಯಾಮೋಹ ಇವತ್ತಿನದಲ್ಲ. ಇದು ಬ್ರಿಟಿಷರು ಇಲ್ಲಿ ಬಂದು ತಳ ಊರಿದಾಗಿನಿಂದ ಇದೆ. ಅವರು ಹೋದರು, ಆದರೆ ಇಂಗ್ಲಿಷು ಮಾತ್ರ ಇಲ್ಲಿ ಬೇರು ಬಿಟ್ಟಿತು. ಅದನ್ನು ಮಾತಾಡೊದು ಖಂಡಿತವಾಗಿಯು ತಪ್ಪಲ್ಲ. ಅದು ಅಂತರ್ ರಾಷ್ಟ್ರೀಯ ಭಾಷೆ. ಆದರೆ ಹೆಂಡತಿ, ಮಕ್ಕಳ ಜೊತೆನೂ ಇಂಗ್ಲಿಷೇ ಆಗಬೇಕೆ? ಚೊಕ್ಕವಾಗಿ ಕನ್ನಡದಲ್ಲೇ ಮಾತಾಡಬಾರದೆ? ನಾ ಯಾಕೆ "ಕನ್ನಡಿಗರನ್ನ" ಇಲ್ಲಿ ಎತ್ತಿ ತೋರಸ್ತಾ ಇದಿನಿ ಅಂದ್ರೆ; ಕನ್ನಡಿಗರಲ್ಲೆ ಅಭಿಮಾನ ಶೂನ್ಯತೆ ಜಾಸ್ತಿ ಅನ್ನೊದು ನನ್ನ ಅಭಿಪ್ರಾಯ (ಈ ಅಭಿಪ್ರಾಯ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ!) ನಮ್ಮ ಕನ್ನಡ ಇಷ್ಟು ಕುಲೂಷಿತವಾಗಿದೆ ಅಂದ್ರೆ. ಅದಕ್ಕೊಂದು ಉದಾಹರಣೆಯಾಗಿ ಒಂದು ಘಟಣೆ ನಡೆಯಿತು. ನಮ್ಮ ಕಛೇರಿಗೆ ಸ್ಪೇನದಿಂದ ಒಬ್ಬ ಸಹೋದ್ಯೋಗಿ ಬಂದಿದ್ದ. ಅವನನ್ನು ಒಂದು ಕಡೆ ಊಟಕ್ಕೆ ಕರೆದೊಯ್ಯುತ್ತಿದ್ದೆವು. ಎಫ್ ಎಮ್ ರೇಡಿಯೋದಲ್ಲಿ ಒಬ್ಬಳು ತನ್ನ ಸುಮಧುರವಾದ ಕಂಠದಲ್ಲಿ ಅದು ಕನ್ನಡದಲ್ಲಿ (?!) ಎನೋ ಕಥೆ ಶುರು ಮಾಡಿದ್ಲು. ನಿಮಗೆ ಗೊತ್ತಲ್ಲ ಎಫ್ ಎಮ್ ನ ಕನ್ನಡದಲ್ಲಿ ಇಂಗ್ಲಿಷ್ ಶಬ್ಧಗಳೇ ಜಾಸ್ತಿ. ನಮ್ಮ ಸ್ಪೇನ್ ಗೆಳೆಯ ಹೇಳಿದ "ನಿಮ್ಮ ಭಾಷೆ ಹೆಚ್ಚು ಕಡಿಮೆ ಇಂಗ್ಲಿಷ್ ಇದ್ದ ಹಾಗೆ ಇದೆಯಲ್ಲ!" ನಮ್ಮೆಲ್ಲರ ಮುಖ ಇಂಗು ತಿಂದ ಮಂಗನಂತಾಗಿತ್ತು. ಬೇರೆ ದೇಶದವರನ್ನು ಬಿಡಿ, ನಮ್ಮ ಸಹೋದ್ಯೋಗಿಗಳಲ್ಲೇ ಕೆಲವು ಜನ ತಮಿಳರು, ಕೆರಳದವರು ಇದ್ದಾರೆ. ಅವರಿಗೆಲ್ಲ ಕನ್ನಡ ಕಲಿಸುವ ವ್ಯರ್ಥ ಸಾಹಸ ನಾನು ಆಗಾಗ ಮಾಡ್ತಾ ಇರ್ತೀನಿ (ಅವರಾಗೆ ಕನ್ನಡ ಕಲಿಯುವ ಗೋಜಿಗೆ ಅವರೆಂದೂ ಹೋಗೊದಿಲ್ಲ ಬಿಡಿ. ನಾವೇ ಅವರ ಭಾಷೆಯಲ್ಲಿ ನಿಚ್ಛಳವಾಗಿ ಮಾತಾಡಸ್ತಿವಲ್ಲ!) ಅದರಲ್ಲಿ ಒಬ್ಬ "ಕನ್ನಡ ತುಂಬಾ ಸುಲಭ, ನನಗೆ ಕೆಲವು ಶಬ್ಧಗಳು ಗೊತ್ತು ಅಂದ! ನನಗೋ ಖುಷಿ. ಹೇಳಪ್ಪ ಏನೇನು ಗೊತ್ತು ಅಂದೆ. ಆತ ಹೇಳಿದ "ಎಂಜಾಯ್ ಮಾಡಿ!..... ಲಂಚ್ ಆಯ್ತಾ... " ಇಂಥವೆ ಕೆಲವು ಅಣಿ ಮುತ್ತುಗಳು. ಅಲ್ವೆ ಮತ್ತೆ? ಕನ್ನಡದಷ್ಟು ಸುಲಭದ ಭಾಷೆ ಬೇರೆಲ್ಲಾದರೂ ಉಂಟೆ?! ಹೀಗೆ ಮುಂದುವರಿದರೆ ಇನ್ನು ಕೆಲವು ವರ್ಷಗಳಲ್ಲಿ ಕನ್ನಡದ ಅಸ್ತಿತ್ವವೆ ಇಲ್ಲವಾಗುತ್ತೇನೋ ಅನ್ನೋ ಭಯ ಶುರುವಾಗಿದೆ. ಬನ್ನಿ ನಮ್ಮ ಭಾಷೆಯನ್ನ ಉಳಿಸಿಕೊಳ್ಳೋಣ.

  • ಭಾಷೆ-ಕನ್ನಡ
~.~
  • Login or register to post comments
  • 788 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 5, 2007 - 9:24pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ನನ್ನ ಅನುಭವ ತುಂಬಾ ಕಡಿಮೆಯಿರಬಹುದು ಆದರೆ ನನ್ನ ಸೀಮಿತ ಗಮನಿಸುವಿಕೆಯಲ್ಲಿ ಕಂಡದ್ದು, ಈ ಪ್ರವೃತ್ತಿ ತೆಲುಗರಲ್ಲಿ ಇನ್ನೂ ಹೆಚ್ಚು. ಗಂಡ-ಹೆಂಡತಿ ಬಿಡಿ ಪೂರ್ತಿ ಇಂಗ್ಲೀಷೇ. ಆದರೆ, ಒಂದು-ಒಂದೂವರೆ ವರ್ಷದ ಮಗುವನ್ನೂ ಇಂಗ್ಲೀಷಲ್ಲೇ ಮಾತಾಡಿಸಿದಾಗ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಮಗು ಇಂಗ್ಲೀಷಿನಲ್ಲಿಯೇ ಹೊಟ್ಟೆನೋವು, ಕೆಮ್ಮು ಅಂತ ಹೇಳಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 10:15pm — ಶ್ರೀನಿಧಿ

ಉ: ಕನ್ನಡ ಎಲ್ಲಿದೆ... ?

ಶ್ರೀನಿಧಿ's picture

ಮಕ್ಕಳು ಇರ್ಲಿ, ಪಾಪ ನಾಯಿನ ಕೂಡ ಇಂಗ್ಲೀಷಲ್ಲೇ ಮಾತಾಡಿಸಬೇಕು. ಮೊನ್ನೆ ಒಬ್ಬರು ಚೆನ್ನಾಗಿ ಕನ್ನಡ ಬರೋ ಹೆಂಗಸರು ಯಾರ್ನೋ dogsದು hospital ಎಲ್ಲಿದೆ? ಅಂತ ಕೇಳ್ತಿದ್ರು. ಅವರ ನಾಯಿನ ಇಂಗ್ಲೀಶ್ನಲ್ಲೇ ಮಾತಾಡ್ಸೋದಂತೆ. ತುಂಬಾ ಜಂಭದಿಂದ ಹೇಳ್ಕೋತಿದ್ರು.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 3:51pm — gc

ಉ: ಕನ್ನಡ ಎಲ್ಲಿದೆ... ?

gc's picture

ಕನ್ನಡದಲ್ಲಿ ತಮ್ಮ ನಾಯಿ ಜೊತೆ ಮಾತಾಡುವ ಒಬ್ಬರ ಪರಿಚಯ ನನಗಿದೆ (ಅದೂ ಬೆಂಗಳೂರಿನಲ್ಲಿ!!).

ನಮ್ಮ ನುಡಿಯ ಮೇಲೆ ನಮಗಿರುವ ಹೆಮ್ಮೆ ಕಡಿಮೆಯೆಂದು ನಮಗೆಲ್ಲಾ ಗೊತ್ತು. ಕನ್ನಡಿಗರು ಪ್ರಮಾಣ ಬೆಂಗಳೂರಿನಲ್ಲಿ ಕಡಿಮೆಯಿರುವುದರಿಂದ ಅಲ್ಲಿನ ಕನ್ನಡಾಭಿಮಾನಿಗಳಿಗೆ ಹೆಚ್ಚಿನ ಭಯವಿರುವುದು ಸಹಜ . ಈ ಸಮಸ್ಯೆ ನಮಗಷ್ಟೆ ಸೀಮಿತವಲ್ಲ. ನಮ್ಮ ದೇಶದ ಬಹುತೇಕ ನುಡಿಗಳಿಗೆ ಇದೇ ಸಮಸ್ಯೆ. ತಮಿಳುನಾಡು, ಮಹಾರಾಷ್ಟ್ರ, ಕೇರಳ, ಪಂಜಾಬ್, ಇತ್ಯಾದಿಗಳಲ್ಲೂ ಆಂಗ್ಲಪ್ರೀತಿ ಹೆಚ್ಚಾಗಿದೆ. ನಮ್ಮಂತೆ ಇತರರಿರೂ ತಮ್ಮ ನುಡಿಯ ಉಳಿವಿನ ಬಗ್ಗೆ ಆತಂಕವಿದೆ. ಕೆಲ ತಿಂಗಳುಗಳ ಹಿಂದೆ ಮಹಾರಾಷ್ಟ್ರದಲ್ಲಿ ICSE/CBSE ಶಾಲೆಗಳಲ್ಲೂ ಮರಾಠಿಯನ್ನು ಒಂದು ನುಡಿಯಾಗಿ ಕಲಿಸಬೇಕು ಎಂದು ಅಲ್ಲಿನ ಸರ್ಕಾರ ಆದೇಶ ಹೊರಡಿಸಿದ್ದು ಇದೇ ಕಾರಣಕ್ಕಾಗಿ. ತಮಿಳುನಾಡಿನ ಆಡಳಿತದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಂಗ್ಲ ಬಳಕೆಯಿದೆ ಎಂದು ಯಾರೋ ಸಾಹಿತಿಗಳು ಹೇಳಿದ ನೆನಪು. ಉನ್ನತ ನ್ಯಾಯಾಲಯದಲ್ಲಿ ತಮಿಳು ಬಳಸಿ ಎಂದು ಕರುಣಾನಿಧಿ ಒತ್ತಾಯಿಸಲಿಲ್ಲವೆ? ಕೆಲ ತೆಲುಗು ಶಾಲೆಗಳನ್ನು ಅಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸುವುದನ್ನು ತೆಲುಗು ಅಭಿಮಾನಿಗಳು ವಿರೋಧಿಸಿದರು. ಇದನ್ನೆಲ್ಲಾ ನೋಡಿ ನಾವು ಸುಮ್ಮನಿರಬೇಕು ಅಂತ ಖಂಡಿತಾ ಹೇಳ್ತಾ ಇಲ್ಲ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:20pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಸಿರಿನಿದಿ

ನಾಯಿ ನರೀನ ಇಂಗಲೀಸಲ್ಲಿ ಮಾತಾಡಿಸೋರ ನೋಡಿದ್ದೀವಿ. ಆದರೆ ಯಾರಾರ ನಂಮ ದನಗಳಂನ ಇಂಗಲೀಸಲ್ಲಿ ಮಾತಾಡಿಸ್ತಾರ?

ಅವಂನು ಯಾವಾಗಲು ಕಂನಡದಲ್ಲೇ ಮಾತಾಡಿಸಬೇಕು. ಅಂಬಾ ಬಾ!! ಉಪ್ಪ, ಉಪ್ಪ!! Smiling

ನಾವು ನಂಮೂರಲ್ಲಿ ಬೀದಿ ನಾಯಿಗಳಂನು ಕಂನಡದಲ್ಲೇ ಕರೆಯೋದು "ಕುರ ಕುರ ಕುರಾ" Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 12:58pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಬಾಬೋಯ್,

ಚಾಲಾ ಆಯಿಂದಿ, ನೀದಿ, ಚಂಪೇಸ್ತಾಂ! Smiling "ದೇಸ ಬಾಸಲೊ ತೆಲುಗು ಲೆಸ್ಸಾ?"

ಅಂಣ, ತೆಲುಗರು ನೆಟ್ಟಗೆ ತೆಲುಗೇ ಮಾತಾಡೋದು. ಬಾ ನಂಮ ಕಂಪೆನಿಯಲ್ಲಿ ತೋರಿಸ್ತೀನಿ. ತೆಲುಗು ತಮಿಳರು ಎಲ್ಲಡೆ ಅವರ ಅವರ ನುಡಿ ನೆಟ್ಟಗೆ ಮಾತಾಡಿಕೊಂಡು ಇರ್ತಾರೆ.

ಬೆಂಗಳೂರಲ್ಲಿ ಎಲ್ಲೆಲ್ಲೂ ತೆಲುಗೇ, ನನಗೆ ಇಸ್ಟೊಂದು ತೆಲುಗರಿದ್ದಾರ ಅಂತ ಸೋಜಿಗ ಆಗಿತ್ತು ಮೊದಮೊದಲು.

ಕಂನಡದೋರಿಗೆ ತೆಲುಗರಿಗೆ ಆಡುನುಡಿಯ ಹೆಮ್ಮೆಯ ಅಲ್ಲಿ ಬಲು ಅಂತರ. ತೆಲುಗರು ತಂಮ ನುಡಿಯನ್ನು ಎಂದು ಬಿಟ್ಟುಕೊಟ್ಟಿಲ್ಲ. ಮೊದಲು ನುಡಿಯ ಮೇಲೆ ಆದ ರಾಜ್ಯ ಆಂಧ್ರವೇ, ಕರ್ನಾಟಕವಲ್ಲ, ಅದಕ್ಕೊಬ್ಬ ಉಪಾಸ ಮಾಡಿ ಸತ್ತ.

ಇನ್ನು NTR ಸಿನಿಮಾದಲ್ಲಿ ಈ ಹಾಡು ಇದೆ "ತೆಲುಗು ಜಾತಿ ಮನದಿ"( ನಂಮದು ತೆಲುಗು ಜಾತಿ ). ಹೀಗೆ ಯಾವ ಕಂನಡ ಕವಿ, ಸಿನಿಮಗಾರ ಹೇಳಿದ್ದಾನೆ, ನಾವೆಲ್ಲ ಒಂದು "ಕಂನಡ ಜನಾಂಗ" ಅಂತ?

ಬೆಂಗಳೂರಿನ ತೆಲುಗರು ಒಂದು ವೇಳೆ ಇಂಗಲೀಸಾಡಿದರು ಅದಕ್ಕೊಂದು ಅರ್ತವಿದೆ. ಬೆಂಗಳೂರು ಆಂದ್ರದಲ್ಲಿಲ್ಲವಲ್ಲ. ಅವರು ಹೊರನಾಡಲ್ಲಿ ಇದ್ದಾರೆ. ನಾವು ತಮಿಳುನಾಡು, ಆಂದ್ರಕ್ಕೆ ಹೋದ್ರೆ, ತೆಲುಗು-ತಮಿಳು ಬರದಿದ್ರೆ, ಇಂಗಲೀಸೇ ಆಡೋದು.

ನೀನೊಬ್ಬ, ನಂಮ ಮನೆ ಕಾವಲಿ ತೂತ ನೋಡೋದ್ ಬುಟ್ಟು, ಪಕ್ಕದ ಮನೆ ದೋಸೆ ತೂತ ನೋಡ್ತೀಯ? ================================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 1:12pm — shreekant.mishrikoti

ಉ: ಕನ್ನಡ ಎಲ್ಲಿದೆ... ?

shreekant.mishrikoti's picture

ಸ್ವಾಮೀ ,

ಯಾವ ಕಂನಡ ಕವಿ, ಸಿನಿಮಗಾರ ಹೇಳಿದ್ದಾನೆ, ನಾವೆಲ್ಲ ಒಂದು "ಕಂನಡ ಜನಾಂಗ" ಅಂತ? ಅಂತ ಕೇಳಿದ್ದೀರಿ.

ಬೇಂದ್ರೆಯವರು ಹೇಳಿದ್ದಾರೆ ,
ಒಂದೇ , ಒಂದೇ,
ಕನ್ನಡ ನಾಡೊಂದೇ ,
ಕನ್ನಡ ಕುಲವೊಂದೇ ,
....
ಮುಂದುವರಿದು
ಹೀಗನ್ನದವರು ಇದ್ದರೂ ಒಂದೇ , ಇಲ್ಲದಿದ್ದರೂ ಒಂದೇ !
ಎಂದೂ ಹೇಳಿದ್ದಾರೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 3:20pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಬೇಂದ್ರೆ ಕವನಕ್ಕೆ ನಂನಿ ಸಾರ್‍...

ಆದರೆ ಕಂನಡ ಕುಲವೊಂದೇ ಅಂನೋದಕ್ಕಿಂತ, ಕಂನಡ ಜಾತಿಯೊಂದೇ, ಕಂನಡ ಅಂನೋದು ಒಂದು ಜನಾಂಗ ಅಂತ ಅಂದರೆ ತಕ್ಕುಮೆಯಾಗಿರುತ್ತದೆ.

"ಕಂನಡ ರಾಷ್ಟ್ರೀಯತೆ" ಇದು ನೋಡಿ ದಿಟ್ಟನುಡಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 3:48pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ಅಣ್ಣಾ, ನಾನು ಬೆಂಗಳೂರಿನ ತೆಲುಗರು ಅಂತಲೋ ಅಥವಾ ಆಂಧ್ರದ ತೆಲುಗರೋ ಅಂತ ವಿಂಗಡನೆ ಮಾಡಿ ಹೇಳಿಲ್ಲ. ಮೊದಲೇ ಹೇಳಿಲ್ಲವೇ ನನ್ನ ಸೀಮಿತ ಗಮನಿಸುವಿಕೆಯಲ್ಲಿ ಕಂಡದ್ದು ಅಂತ. ಇದಕ್ಕೆ ಕಾರಣಗಳಿಲ್ಲದಿಲ್ಲ. ತೆಲುಗರು ಅವರ ಗೆಳೆಯರೊಡನೆ (ಇದನ್ನು ಸಮವಯಸ್ಕರೊಡನೆ ಅಂದಕೊಳ್ಳಬಹುದು) ವಿಶೇಷವಾಗಿ ಸಿನಿಮಾದ ಬಗ್ಗೆ ಮಾತನಾಡುವಾಗ ತೆಲುಗು ಬಳಸುತ್ತಾರೆ, ನಿಜ. ಇದನ್ನು ಇಲ್ಲ ಅಂತ ನಾನು ಅನ್ನುವುದಿಲ್ಲ. ಆದರೆ ನಾನು ಕೆಲಸ ಮಾಡಿದ ಬೇರೆ ಬೇರೆ ಎರಡು ಕಂಪೆನಿಯಲ್ಲಿ ಕಂಡಿದ್ದು ತೆಲುಗರು ಅವರ (ಗಮನಿಸು, ತೆಲುಗರು ಅವರ ಇತರ ತೆಲುಗು ಗೆಳೆಯರೊಡನೆ) ಹತ್ತಿರದವರೊಡನೆ, ವಿಶೇಷವಾಗಿ ಅವರ ಮನೆಯವರೊಡನೆ(ಹೆಂಡತಿ/ಗಂಡ), ಹಾಗು "ಮತ್ತೂ ವಿಶೇಷವಾಗಿ" ಅವರ ಮಕ್ಕಳೊಡನೆ ಇಂಗ್ಲೀಷಲ್ಲೇ ಮತ್ತು ಕಡ್ಡಾಯವಾಗಿ ಇಂಗ್ಲೀಷಲ್ಲೇ ಮಾತಾಡುವುದನ್ನು ನೋಡಿದ್ದೇನೆ. ಅದರಲ್ಲೂ ತೆಲುಗರೊಬ್ಬರು ಅಮೇರಿಕಾಗೊ, ಆಸ್ಟ್ರೇಲಿಯಾಗೋ, ನ್ಯೂಜಿಲೆಂಡಿಗೋ ಹೋಗಿ ಬಂದರು ಅನ್ನು. ಅವರು ಭಾರತಕ್ಕೆ ಬಂದ ಮೇಲೆ ತಮ್ಮ ಮಕ್ಕಳೊಡನೆ ಹೇಗೆ ಮಾತಾಡುತ್ತಾರೆ ಎಂಬುದನ್ನು ಗಮನಿಸು.

ನಾವು ತಮಿಳುನಾಡು, ಆಂದ್ರಕ್ಕೆ ಹೋದ್ರೆ, ತೆಲುಗು-ತಮಿಳು ಬರದಿದ್ರೆ, ಇಂಗಲೀಸೇ ಆಡೋದು.

ಅಣ್ಣಾ, ಇದು ಪ್ರಶ್ನೆಯೇ ಆಗಬೇಕಿಲ್ಲ. ಇಲ್ಲಿ ಚರ್ಚೆ ಆಗ್ತಾ ಇರೋದು, ಆಯಾ ಭಾಷಿಕರು ತಮ್ಮದೇ ಭಾಷಿಕರೊಡನೆ ಹೇಗೆ ಮಾತಾಡ್ತಾರೆ ಅಂತ. ಮೇಲಿನ ಕಾಮೆಂಟಲ್ಲಿ ನಾನು ಹಾಕಿರುವುದರ ಹಿಂದಿನ ಭಾವ ನಾನು ಕಂಡ ತೆಲುಗರು ಮುಖ್ಯವಾಗಿ ಮದುವೆಯಾದ ತೆಲುಗರು ಬೇರೆ ತೆಲುಗರ ಜೊತೆ ಬೆಂಗಳೂರಿನಲ್ಲಿ ಹೇಗೆ ಮಾತಾಡ್ತಾರೆ ಅಂತ. ಅದೂ ನಾನು ನನ್ನ ಸೀಮಿತ ಅನುಭವದಲ್ಲಿ ಕಂಡದ್ದು ಅಂತ ಎಚ್ಚರಿಕೆಯನ್ನು ಒಪ್ಪಿಕೊಂಡೇ ಹೇಳಿರುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:16pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಇದರಿಂದ ಒಂದು ತಿಳಿಯುವುದು
೧) ನೀನು ಹೆಚ್ಚು ತೆಲುಗರನ್ನು ಕಂಡಿಲ್ಲ.
೨) ಸೀಮಿತ ಅರಿವಿನಲ್ಲೇ ನೀನು ತೀರ್ಪಿಗೆ ಬಂದು ಅದಂನು ಹೇಳುತ್ತೀಯ
೩) ನಿಂನ ಸೀಮಿತ ಅರಿವಿನಿಂದ ಹೇಳಿಸಿಕೊಂಡಿದ್ದು ಸರಿಯಿಲ್ಲ ಅಂದರೆ ನೀನು "ನಂನ ಸೀಮಿತ ಜ್ಞಾನ" ಎಂನುವೆ.

ಒಟ್ಟಿನಲ್ಲಿ ಇಲ್ಲಿ ಪಜೀತಿ, ನಿಂನ ಸೀಮಿತ ಗಮನಿಸುವಿಕೆಯಿಂದ ಅಂನೋದಂತೂ ನಿಕ್ಕವ ದಿಟ!

ನಂನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:18pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ನಮಸ್ಕಾರ ಗುರೂಊಊಊಊಊಊಊಊ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:21pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಊಊಊಊಊ ಅಂದ್ರೆ ಅದೆಸ್ಟೋ ಅಂತವಾ?

ಊ random!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:28pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ನಾನು ಎಚ್ಚರಿಕೆಯ ತಿಳಿವಳಿಕೆಯಿಂದಲೇ ಬರೆದರೂ....ಓಕೆ...ಇರಲಿ ಬಿಡು......ಊಊಊಊ= random (to the power of infinite randomness) ನಮಸ್ಕಾರಗಳು ನಿನಗೆ.

ಅಂದ ಹಾಗೆ ಜಿ.ಸಿ ಬರೆದ ಕಾಮೆಂಟ್ ನೋಡಿದ್ಯಾ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:34pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಹೌದಪ್ಪ ನೋಡಿದೆ. ಅದಾಗದೇ ಕಾಣಿಸಲ್ಲವಲ್ಲ!! Smiling

ಊಊಊಊಊಊಊಊಊಊಊಊಊ ನಂನಿ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:43pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ಕಾಣಿಸಿದರೂ ಕೂಡ, ಬೇರೆಯವರು ಬರೆಯುವುದನ್ನು ಅರ್ಥಮಾಡಿಕೊಳ್ಳಬೇಕಲ್ಲ. ಅರ್ಧಂಬರ್ಧ ಓದಿ, ಏನೇನೋ ಕಾಮೆಂಟ್ ಬರೆದು ಕೊನೆಗೆ ಇವನು ಹೀಗೇನೇ ಅಂತ ಜಡ್ಜ್ ಮೆಂಟ್ ಕೊಡಬೇಕಲ್ಲ... Laughing out loudSticking out tongue Smiling Eye-wink
ಸಖತ್ ಟ್ಯಾಲೆಂಟಿದ್ದೀಯಪ್ಪಾ ಹ್ಯಾಟ್ಸಾಫ್. ನಿನಗೂ ಊಊಊಊಊಊಊಊಊಊಊಊಊಊಊಊಊ ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:55pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಕಾಣಿಸಿದರೂ ಕೂಡ, ಬೇರೆಯವರು ಬರೆಯುವುದನ್ನು ಅರ್ಥಮಾಡಿಕೊಳ್ಳಬೇಕಲ್ಲ. ಅರ್ಧಂಬರ್ಧ ಓದಿ, ಏನೇನೋ ಕಾಮೆಂಟ್ ಬರೆದು ಕೊನೆಗೆ ಇವನು ಹೀಗೇನೇ ಅಂತ ಜಡ್ಜ್ ಮೆಂಟ್ ಕೊಡಬೇಕಲ್ಲ... Laughing out loudSticking out tongue Smiling Eye-wink
ಸಖತ್ ಟ್ಯಾಲೆಂಟಿದ್ದೀಯಪ್ಪಾ ಹ್ಯಾಟ್ಸಾಫ್. ನಿನಗೂ ಊಊಊಊಊಊಊಊಊಊಊಊಊಊಊಊಊ ನನ್ನಿ.

ಈ ಸಾರ್ಥಕವಾಯ್ತು ಈ ಎಳೆ.

ಸುನಿಲ ಇದನ್ನೇ ನಂಮ ಬರಹದ ನೆಗಳ್ಗಾರ ಬರೆದುದು. ನಾವು ಭಾವ ಹೆಚ್ಚಾದರೆ ಇಂಗಲೀಸೇ ಬರುವುದು ನಮ್ಮ ಬಾಯಲ್ಲಿ.

ಕಮೆಂಟು ಈ ಒರೆ ಓಕೆ ಇರಲಿ,

ಜಡ್ಜಮೆಂಟು = ತೀರ್ಪು
"ಸಖತ್ ಟ್ಯಾಲೆಂಟಿದ್ದೀಯಪ್ಪಾ ಹ್ಯಾಟ್ಸಾಫ್." ಇದಂನು ಕಂನಡದಲ್ಲಿ ಹೇಳಕ್ಕೆ ಆಗಲ್ವಾ?

ಅಲ್ಲ ನಿಂನಂತ conceptualizationಗಾರನೇ ಹಿಂಗಾದರೆ, ಪಾಪ ಬೆಂಗಳೂರಿಗೆ ಕೆಲಸಕ್ಕೆ ಬಂದ ಬಡಪಾಯಿ ತೆಲುಗರು, ಕಂನಡದ ಕಬ್ಬಗಳನ್ನೋದದ ಮಂದಿ ಕತೆ ಏನು?

ಕಂನಡ ಅಂನೋದು ಮುನಿಸಿನಲ್ಲೂ, ಜಗಳದಲ್ಲೂ, ಸೊಗಸಿನಲ್ಲೂ, ಒಲುಮೆಯಲ್ಲೂ, ಬೈಗಳದಲ್ಲೂ, ಹೊಗಳಿಕೆಯಲ್ಲೂ, ಹಿಂಗೆ ಮಾತಿನ ಎಲ್ಲಬಗೆಗಳಲ್ಲೂ ಇರಬೇಕು, ತರಬೇಕು!!

ಬರಿ ಊ ಅಂತ ಎಲ್ಲೋ ಇದ್ದರೆ ಸಾಲದು ಎಲ್ಲಡೆ ಇರಬೇಕು!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 5:00pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಇಲ್ಲಿಗೆ ಯಾಕೆ ಮಂದಿ ಇಂಗ್ಲೀಸ ಆಡ್ತಾರೆ ಅಂನೋದಕ್ಕೆ ಒಂದು ಮಾದರಿ/ಉದಾಹರಣೆ ಇಲ್ಲೇ ಸಿಕ್ತು.

ನಾವು ಹಲವರು ತಲೆಯಲ್ಲಿ ಇಂಗಲೀಸಲ್ಲೇ ಉಂಕಿಸಲು/ಯೋಚಿಸಲು ತೊಡಗಿದ್ದೇವೆ.
ನಮಗೆ ಬಾಯಿ ತೆಗೆದರೆ ಮೊದಲ ಒರೆ/ಪದ ಬರುವುದೇ ಇಂಗಲೀಸಿನದು!!
ಇದು ದಿಟವಾದ ನಂಮ ಪಾಡು/ಪರಿಸ್ಥಿತಿ!!

ನಂನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 5:11pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ಇದಪ್ಪಾ ವರಸೆ, ಜಗಳವನ್ನೂ ಕನ್ನಡದಲ್ಲಿಯೇ ಆಡಬೇಕು. ಆದರೆ ಏನು ಮಾಡುವುದು. ಬೇರೆಯವರು ಬರೆಯುವ "ಕನ್ನಡದ ಟಿಪ್ಪಣಿಗಳನ್ನು" ಸರಿಯಾಗಿ ಓದಿ ಕನ್ನಡದಲ್ಲಿ ಅರ್ಥಮಾಡಿಕೊಳ್ಳಲಾಗದೆ, ಅವರು ಹೀಗೇನೇ ಅಂತ ತೀರ್ಪನ್ನೀಯುವವರಿಗೆ, ಇಂಗ್ಲೀಷಿನಿಂದಲಾದರೂ ಉತ್ತರಕೊಡುವ ಕಲೆ ರೂಢಿಸಿಕೊಂಡಿರಲೇಬೇಕಲ್ಲವೇ. ಹಾಗೆಯೇ, ಇನ್ನೂ ಕೆಲವು ಜನರಿರುತ್ತಾರೆ, ಅವರಂತೂ ಸಖತ್ತು. ಅವರಿಗೆ ಕನ್ನಡದಲ್ಲಿ ಜಗಳ ವಾದ ಮಾಡ್ರಪ್ಪಾ ಅಂದರೆ, ಅವರಿಗೆ ಬರೀ --ಮುಚ್ಚು, ತೆಗಿ, ---ಮಗ ಅಂತಾನೇ ಬರ್ತಾ ಇರತ್ತೆ Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 5:26pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ನೋಡಪ್ಪ ಇದು ಕನ್ನಡ ಅಂದರೆ..

ನೀನು ಬೇಕಾದರೆ, "ಮುಚ್ಚು ತೆಗೆ, ಬಿಚ್ಚು" ಎನ್ ಬೇಕಾರ ಅಂನು, ಆದ್ರೆ ಕಂನಡದಲ್ಲನ್ನು!! ಆಟೇ.

ನಂಗೆ "shut, bast*rd, loafer, sucker, a*s hole" ಹಿಂಗೆಲ್ಲ ಇಂಗಲೀಸಲ್ಲಿ ಬೈಯೋದಕ್ಕಿಂತ ಅಚ್ಚಕಟ್ಟಾಗಿ,
ಕನ್ನಡದಲ್ಲಿ "ಮುಚ್ಚೋ, ಸೂ* ಮಗನೇ, ತಿರುಕ, ನೆಕ್ಕೋಗು, *ಕ" ಅನ್ನೋದೇ ಮೇಲು!! ಇದನ್ನ ನಾವು ಅಂದು ಅಂತೀವಿ.!!

ಬೈದ್ರೂ ಕನ್ನಡದಲ್ಲಿ ಬೈಯಬೇಕು!

ಇನ್ನೊದಪ್ಪ!
ಈ ರೂಡಿಸಿಕೊಳ್ಳೋದಕ್ಕೆ ಬರೆದುದು, ಸುಮ್ಸುಮ್ಕೆ ಇಂಗಲೀಸ್ ಆಡೋದು ರೂಡಿ ಮಾಡಿಕೊಂಡ್ರೆ, ಹಿಂಗೇ ಆಗೋದು.
"ಬಾ ಮಗ ಉಣ್ಣು ಬಾ", ಹೋಗಿ "come son, eat come" ಆಗೋಗಿದೆ.

ಆಹಾ!! ಕನ್ನಡದಲ್ಲಿ ಬರೆದುದಕ್ಕೆ ನಂನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 6:59pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ಮಹೇಶ wrote:
ನಂಗೆ "shut, bast*rd, loafer, sucker, a*s hole" ಹಿಂಗೆಲ್ಲ ಇಂಗಲೀಸಲ್ಲಿ ಬೈಯೋದಕ್ಕಿಂತ ಅಚ್ಚಕಟ್ಟಾಗಿ, ಕನ್ನಡದಲ್ಲಿ "ಮುಚ್ಚೋ, ಸೂ* ಮಗನೇ, ತಿರುಕ, ನೆಕ್ಕೋಗು, *ಕ" ಅನ್ನೋದೇ ಮೇಲು!! ಇದನ್ನ ನಾವು ಅಂದು ಅಂತೀವಿ.!!

ಬಹಳ ಒಳ್ಳೆಯದು, ಇನ್ನೂ ಯಾವುದಾದರೂ ಮಿಕ್ಕಿದ್ದರೆ ಅದನ್ನೂ ಹೇಳಿಬಿಡು. ನಮ್ಮ ಕಡೆ ಇಷ್ಟೊಂದೆಲ್ಲ ಇಂಗ್ಲೀಷು, ಕನ್ನಡ ಇಲ್ಲದಿದ್ದರೂ "ಅಚ್ಚಕನ್ನಡದಲ್ಲಿ" ಪೆದ್ದ, ಕೋತಿ, ಕೋಣ, ಎಮ್ಮೆ, ಮಳ್ಳ, ಮಂಕ, ಮುಟ್ಟಾಳ ಅಂತ ಪ್ರೀತಿಯಿಂದಲೇ ಬೈದು ತೃಪ್ತಿಪಟ್ಟುಕೋತೀವಿ.

ಒಟ್ಟಿನಲ್ಲಿ, "ನಾನು ಕಂಡ ತೆಲುಗರಲ್ಲಿ ಕನ್ನಡದವರಿಗಿಂತ ಇಂಗ್ಲೀಷ್ ವ್ಯಾಮೋಹ ಇದೆ" ಅಂತ ಹೇಳಿದ್ದೇ ದೊಡ್ಡ ರಂಪಾಟ ಆಯ್ತು. ಇರಲಿ ಬಿಡು, ನಿನ್ನ ಸಹಾನುಭೂತಿ "ಹೆಂಡತಿ ಗಂಡ ಮಕ್ಕಳೊಡನೆ ಇಂಗ್ಲೀಷ್ ಮಾತನಾಡುವ ತೆಲುಗರಿಗೆ" ಮಾತ್ರವೇ ಇರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 7:12pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಮುಟ್ಟಾಳ ಅಂತ ಬೈತೀಯ ಅದರ ಅರ್ಥ ಗೊತ್ತಾ?

Smiling ( ಮುರುಳಿ ದ್ವಾವರು ಇವನ ಸೀಮಿನ ಗಮನಿಸಿಕೆಗೆ ತುಸು ನೆರವಾಗಿ )

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 7:06pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ನಂಗೆ "shut, bast*rd, loafer, sucker, a*s hole" ಹಿಂಗೆಲ್ಲ ಇಂಗಲೀಸಲ್ಲಿ ಬೈಯೋದಕ್ಕಿಂತ ಅಚ್ಚಕಟ್ಟಾಗಿ, ಕನ್ನಡದಲ್ಲಿ "ಮುಚ್ಚೋ, ಸೂ* ಮಗನೇ, ತಿರುಕ, ನೆಕ್ಕೋಗು, *ಕ" ಅನ್ನೋದೇ ಮೇಲು!! ಇದನ್ನ ನಾವು ಅಂದು ಅಂತೀವಿ.!!.

ಇವೆರಡೂ ಅಲ್ಲದ ಅಚ್ಚ-ಕನ್ನಡದ ನಲ್ಮೆಯ ಬಯ್ಗುಳಗಳೂ ಇದೆ ಅಲ್ಲವೇ. ಅದನ್ನು ಏಕೆ ಬಳಸಲ್ಲ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 7:13pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಏಕೆ ಬಳಸಲ್ಲ, ಅಂದ್ರೆ.. ಬೈಗುಳ ಬಳಸದೇ ಇರೋದಕ್ಕೂ ಓಸುಗರಬೇಕಾ?

ರಾಮ ರಾಮ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 7:57pm — prasad3003

ಉ: ಕನ್ನಡ ಎಲ್ಲಿದೆ... ?

prasad3003's picture

ಮಿತ್ರರೆ,
ದಯವಿಟ್ಟು ಕ್ಷಮೆ ಇರಲಿ. ನನ್ನ ಲೇಖನದ ಉದ್ದೇಶವೇ ಬೇರೆಯಾಗಿತ್ತು! ನಾನು ಇಂಗ್ಲಿಷ್ ಮಾತನಾಡುವ ಸಂದರ್ಭದ ಬಗ್ಗೆ ಬರೆದೆನೆ ಹೊರತು, ಕನ್ನಡ ಅಥವಾ ಬೇರಾವುದೆ ಭಾಷೆಗಳ ತುಲನೆ ಮಾಡುವುದಕ್ಕಲ್ಲಾ. ಯಾವುದೆ ಭಾಷೆ ಇದ್ದರೂ ನಾವು ಮೊದಲು ಭಾರತೀಯರು ಅನ್ನೊದನ್ನ ನಾವು ಮರಿಬಾರ್ದು. ಹೀಗೆ ನಮ್ಮ ನಮ್ಮಲೆ ಕಿತ್ತಾಡಿದ್ರಿಂದ್ಲೇ ಅಲ್ವೇ ಬ್ರಿಟೀಷರು ನಮ್ಮನ್ನ ಆಳಿದ್ದು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 8:08pm — mananthprabhu

ಉ: ಕನ್ನಡ ಎಲ್ಲಿದೆ... ?

mananthprabhu's picture

ಅಯ್ಯಾ ಪ್ರಸಾದ
ಅವರಿಬ್ರನ್ನೂ ಹ೦ಗೆ ಬಿಡಯ್ಯ. ಈ ಸುನೀಲ ಆ ಮಹೇಶ ಹ೦ಗೇ ಕಚ್ಚಾಡ್ಕೊ೦ಡಿದ್ರೆ "ಸ೦ಪದಕ್ಕೆ" ಒ೦ದು ಕಳೆ ಇರುತ್ತೆ ಗುರು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 8:39pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

mananthprabhu

Smiling ಸಕ್ಕತ್ರಿ ನೀವು! ಬಲು ದಿನಗಳಿಂದ ಸಂಪದ ಓದ್ತಿರಬೇಕು!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 8:42pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಪ್ರಸಾದರೆ!!

ನಂನಂನು ಮಂನಿಸಿರಿ.

ನಾವು ಕಿತ್ತಾಡ್ತಿಲ್ಲ. ಸುನಿಲ ನಂಗೆ ಚಂನಾಗಿ ಗೊತ್ತು. ಅವನಿಗೂ ನಾನು ಗೊತ್ತು.
ಆದರೆ ನಾನು ಸುನಿಲ ಮಾತಾಡಿದ್ದು ನಿಂಮ ಬರಹದ ತಿರುಳ ಬಗ್ಗೇ.

ಇರಲಿ.. ನಿಂಮ ಬರಹದ ಗುರಿಗೆ ನಂಮ ಬೆನ್ನಿಲುವಿದೆ.

ನಂನಿ

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 9:03pm — prasad3003

ಉ: ಕನ್ನಡ ಎಲ್ಲಿದೆ... ?

prasad3003's picture

ಓಹೋ! ಹಾಗೋ ಸಮಾಚಾರಾ, ನಾನು "ಸಂಪದ"ಕ್ಕೆ ಹೊಸಬ .. ಅದಕ್ಕೇ ಆ ಪರಿ ಗಾಬರಿಯಾಗಿದ್ದು. ಸರಿ ಬಿಡಿ ಮುಂದುವರಿಸಿ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 3:54pm — Sunil Jayaprakash

ಉ: ಕನ್ನಡ ಎಲ್ಲಿದೆ... ?

Sunil Jayaprakash's picture

ಆಡು ನುಡಿಗೂ, ntrಗೂ, ಒಬ್ಬರು ಸತ್ತದ್ದಕ್ಕೂ ಈ ಬರಹಕ್ಕೂ ಎಲ್ಲಿಯ ನಂಟಯ್ಯಾ. ಸರಿ ಬಿಡು. ನಮ್ಮನೆ ಕಾವಲಿ ತೂತು ಅಂತ ನೆನಪಿಸಿದೆ, ಹೊಸ ಕಾವಲಿ ತರ್ತೀನಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 4:12pm — mahesha

ಉ: ಕನ್ನಡ ಎಲ್ಲಿದೆ... ?

mahesha's picture

ಹೊಸ ಕಾವಲಿ ತರೋನೇ ನೀನು!! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 11:57am — ಮಂಜುಬೊಮ್ನಳ್ಳಿ

ಉ: ಕನ್ನಡ ಎಲ್ಲಿದೆ... ?

ಮಂಜುಬೊಮ್ನಳ್ಳಿ's picture

ನಿಜ, ಒಂದಿಷ್ಟು ‘ಜಾತಿ ನಾಯಿ’ಗಳಿಗೆ (ನಾಯಿ ಜಾತಿ ಅಲ್ಲ) ಇಂಗ್ಲೀಷಿನಲ್ಲೆ ತರಬೇತು ಮಾಡಿರ್ತಾರೆ. ಆವಕ್ಕೆ ಬೇರೆ ಭಾಷೆ ಅರ್ಥ ಅಗೋದಿಲ್ಲ.
ನಾಯಿಪಾಡು ಬಿಡಿ, ಕನ್ನಡವೇ ಮನೆ ಮಾತಾಗಿರೋ ಕೆಲವರು ‘ಐ ಹೇಟ್ ಕನಡ’ ಅಂತ ನುಲಿತಾರೆ. ‘ಸುಕ್ಕೇನ್ಲೆ ಮೈಯಾಗ’ ಅಂತ ತಿರುಗಿ ಬಿದ್ದರಷ್ಟೆ ಅವರು ನೆಟ್ಟಗಾಗೋದು (ನಮ್ಮೊಂದಿಗೆ ಮಾತ್ರ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶುದ್ಧ ಕನ್ನಡ?
  • ಅಮ್ಮಜಿಖಷೆಸ್ಸ ಖನಮ ಒಜಿ
  • ಒಂದನೇ ತರಗತಿಯಿಂದ "ಇಂಗ್ಲಿಷ್" ಕಲಿಕೆ - ಒಂದು ಚಿಂತನೆ
  • ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?
  • ಆಡಳಿತ ಭಾಷೆ vs ರಾಷ್ಟ್ರಭಾಷೆ
Syndicate content

ಲೇಖಕರು

prasad3003's picture

ಪೂರ್ಣ ಹೆಸರು
ಗುರುಪ್ರಸಾದ ಕುರ್ತಕೋಟಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator