ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಮಾತಾಡೊ ಮಂಗ!

August 5, 2007 - 10:22pm — prasad3003

ಒಂದು ಸಲ ಒಬ್ಬನಿಗೆ ಒಂದು ಮಂಗ ಸಿಕ್ತು. ಅರೇ ಅದರಲ್ಲೇನು ವಿಶೇಷ ಅಂತೀರಾ? ಆ ಮಂಗಕ್ಕೆ ಮಾತಾಡೊಕೆ ಬರ್ತಿತ್ತು! ಕನ್ನಡದಲ್ಲಿ ನಿಛ್ಛಳವಾಗಿ ಮಾತಾಡ್ತಿತ್ತು. ಆತ ಮನಸ್ಸಿನಲ್ಲೆ ಮಂಡಿಗಿ ತಿಂದ! ಇದನ್ನ ಇಟ್ಕೊಂಡು ಎಷ್ಟೊಂದು ದುಡ್ಡು ಮಾಡ್ಬಹುದು ಅಂತ ಲೆಕ್ಕ ಹಾಕಿದ. ಎಷ್ಟಂದ್ರು ಹುಲು ಮಾನವನಲ್ವೆ?! ಆ ಮಂಗಣ್ಣನ್ನ ಮನೆಗೆ ಕರ್ಕೊಂಡು ಬಂದ. ಇಡೀ ರಾತ್ರಿಯೆಲ್ಲ ಅದ್ರ ಜೊತೆ ಮಾತಾಡೊದ್ರಲ್ಲೆ ಕಳೆದ...
ಮರುದಿನ ಆಫೀಸಿಗೆ ಹೋಗಿ, ಸಹೋದ್ಯೊಗಿಗಳಿಗೆ ಮಂಗಣ್ಣನ ಸುದ್ದಿ ಹೇಳಿದ. ಅದರ ಸುದ್ದಿ ಕೇಳಿ, ಗೆಳೆಯರೆಲ್ಲ ಬಿದ್ದು ಬಿದ್ದು ನಕ್ಕರು. ಅವನಿಗೆ ಹುಚ್ಚು ಹಿಡಿದಿರುವುದು ಅವರಿಗೆ ಖಾತ್ರಿಯಾಯ್ತು. ಆದರೆ, ಅವನು ಅಷ್ಟಕ್ಕೆ ಬಿಡಲಿಲ್ಲ. ಬೆಕಾದರೆ ಬೆಟ್ ಕಟ್ಟಿ ಅಂದ. ಆಯ್ತು ಅಂತ ಎಲ್ಲರು ಮಾತಾಡೊ ಮಂಗಣ್ಣನ ಮೇಲೆ ಬೆಟ್ ಕಟ್ಟಿದ್ರು. ಆಫೀಸು ಮಗಿದ ಕೂಡಲೇ ಎಲ್ರು ಅವನ ಮನೆಗೆ ಹೊಗಿ ಮಂಗಣ್ಣನ್ನ ಮಾತಾದ್ಸೊದು, ಒಂದು ವೇಳೆ ಅದು ಮಾತಾಡಿಲ್ಲ ಅಂದ್ರೆ ಅವ್ರು ಕಟ್ಟಿರೊ ದುಡ್ಡು ಅವನು ವಾಪಸ್ಸು ಕೊಡಬೇಕು ಅಂತ ನಿರ್ಧಾರ ಆಯ್ತು. ಅವ್ರಿಗೆಲ್ಲ ಗೆದ್ದೇ ಗೆಲ್ತಿವಿ ಅಂತ ಗೊತ್ತಿತ್ತು. ಅವನಿಗೂ ಅಷ್ಟೆ!
ಎಲ್ರು ಸಂಜೆ ಅವನ ಮನೆಗೆ ಬಂದ್ರು. ಅವನು ಮಂಗಣ್ಣನ ಬಳಿಗೆ ಹೋಗಿ, ಅದಕ್ಕೆ ಎಲ್ಲ ವಿಷಯ ಹೆಳ್ದ. ಮಾತಾಡಿ ನನ್ನ ಮರ್ಯಾದೆ ಉಳಿಸು ಅಂತ ಕೆಳ್ಕೊಂಡ. ಮಂಗಣ್ಣ ಅವನೆಡೆಗೆ ಒಂದು ಸಲ ತುಂಟ ನಗೆಯ ನೋಟ ಬೀರಿತು. ಆದರೆ ಏನೂ ಮಾತಾಡಲೆ ಇಲ್ಲ! ಇವನಿಗೆ ಗಂಟಲು ಆರಿದಂತಾಯಿತು. ನಿನ್ನೆಯೆಲ್ಲಾ ವಟ ವಟನೆ ಮಾತಾಡಿದ ಮಂಗಣ್ಣನಿಗೆ ಈಗೆನಾಯಿತು ಅಂತ ಅವನಿಗಾದರೂ ಹೇಗೆ ಅರ್ಥವಾದೀತು. ಅದರ ಮುಂದೆ ಗೋಗರೆದ, ಕಣ್ಣೀರಿಟ್ಟ. ಊಹುಂ, ಮಂಗಣ್ಣನಿಗೆ ಮಾತ್ರ ಅವನ ಮೇಲೆ ಕರುಣೆ ಬಂದಂತೆ ತೋರಲಿಲ್ಲ. ಒಂದು ಶಬ್ದವನ್ನು ಮಾತಾಡಲಿಲ್ಲ. ಗೆಳೆಯರೆಲ್ಲ ಅವನಿಗೆ ಬುದ್ಧಿ ಹೆಳಿ, ಇನ್ನಾದರು ಇಂಥ ಹುಚ್ಚಾಟ ಮಾಡದಿರುವಂತೆ ಎಚ್ಚರಿಸಿ ಹೊರಟು ಹೊದರು. ತಮ್ಮ ಪಾಲಿನ ಹಣವನ್ನು ಮಾತ್ರ ನೆನಪು ಹಾರದೆ ಇಸಿದುಕೊಂಡು ಹೋದರು.
ಇವನಿಗೆ ಹುಚ್ಚು ಹಿಡಿಯೊದೊಂದೆ ಬಾಕಿ. ಕೈಲಿದ್ದ ಹಣಾನೂ ಹೋಯ್ತು. ತಲೆ ಮೇಲೆ ಕೈ ಹೊತ್ತು ಕುಳಿತಿದ್ದ. ಅಷ್ಟರಲ್ಲೆ, ಮಂಗಣ್ಣ ನಿಧಾನವಾಗಿ ಅವನ ಬಳಿ ಬಂತು; ಅವನ ಹೆಗಲ ಮೇಲೆ ಕೈ ಇಟ್ಟು ಹೀಗೆ ಅರುಹಿತು "ಯಾಕೆ, ಬೇಜರಾಯ್ತಾ?". ಅವನಿಗೆ ಕೆಂಡದಂಥ ಕೋಪ ಬಂತು (ಬರದೇ ಇರುತ್ತದೆಯೆ ಮತ್ತೆ?). ಆತ ಕೋಪದಿಂದ ಕೂಗಿದ "ಆಗ್ಲೇ ಇಷ್ಟು ಮಾತಾಡೋಕೆ ಏನಗಿತ್ತು ನಿಂಗೆ ಧಾಡಿ?!". ಮಂಗಣ್ಣ ಅಷ್ಟೇ ಶಾಂತನಾಗಿ ನುಡಿದ "ಅಯ್ಯೊ ಹುಚ್ಹಪ್ಪಾ, ಆಗ ನಾನು ಮಾತಾಡಿದ್ದಿದ್ರೆ ನಿನಗೆ ಪುಟುಗೋಸಿ ಸಾವಿರಾರು ರುಪಾಯಿ ಗೆಲ್ತಿದ್ದೆ. ನಾಳೆ ಮತ್ತೆ ಅವ್ರ ಜೊತೆನೇ ಬೆಟ್ ಕಟ್ಟು ಈ ಸಲ ಲಕ್ಷಾಂತರ ರುಪಾಯಿ ಕಟ್ತಾರೆ. ಆಮೇಲೆ ನಾನು ಮಾತಾಡ್ತಿನಿ". ಅವನಿಗೆ ಅರ್ಥಾ ಆಯ್ತು! ಮರುದಿನ ಗೆಳೆಯರೆದುರು ಮತ್ತೆ ಚಾಲೆಂಜ್ ಮಾಡ್ದ. ಈ ಸಲ ಮಂಗಣ್ಣ ಮಾತಾಡ್ತು. ಆತ ಒಂದು ದಿನದಲ್ಲೆ ಲಕ್ಷಾಧೀಶನಾದ!

  • ಸಣ್ಣ ಕಥೆ
~.~
  • Login or register to post comments
  • 550 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 7, 2007 - 12:25pm — veena

ಉ: ಮಾತಾಡೊ ಮಂಗ!

veena's picture

veena.

ಕಥಿ ಭಾಳ ಚಲೋ ಐತಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2007 - 1:01pm — ಸಂಗನಗೌಡ

ಉ: ಮಾತಾಡೊ ಮಂಗ!

ಸಂಗನಗೌಡ's picture

ಕತಿ ಬಾಳ ಚಲೋ ಐತೇನ್‍ರೀ, ಇದನೊಂದ್ ಕೇಳ್ರೆಲಾ,

ಒಂದ್ ಸಲ, ತೊಗರಿ ತಿಪ್ಪಾ ಒಂದ್ ಸಲಾ ಹಿಂಗ ಒಂದ್ ಅಂಗಡಿಗೆ ಹೋಗಿದ್ದಾ, ಅಲ್ಲೊಂದು ನಾಯಿ ನಿತ್ತಿತ್ತು. ಅಂಗಡಿ ಮಾಲಕ್ ಅದನ್ನು ಎಸ್ಟ್ ಹೊಡದ್ರೂ ಹೋಗವಲ್ಲದಾಗಿತ್ತು. ಅದು ಬಾಯಾಗ್ ಒಂದು ಬಾಸ್ಕೆಟ್ ಹಿಡಿದಿತ್ತು. ತಿಪ್ಪ ದಿಟ್ಟಿಸಿ ನೋಡಿದ, ಆ ಬಾಸ್ಕೆಟ್ ಒಳಗ, ಒದು ಚೀಟಿ, ನೂರು ರುಪಾಯಿ ನೋಟೂ ಇತ್ತು. ತಿಪ್ಪ ಅಂಗಡಿಯವನ್ನ್ ತಡೆದು, ’ಓ ಸರs ಅದ್ ಏನೋ ಕೊಂಡು ತುಗೊಳಾಕ್ ಬಂದೈತಿ, ಕೊಟ್ಟ ಕಳಸ್ರಿ’ ಅಂದಾ. ತಿಪ್ಪ ಇಂತಾ ಸ್ಯಾಣ್ಯಾ ನಾಯಿನ ಇದ ಮೊದಲ ಸಲ ನೋಡಾಕತ್ತಿದ್ದ.

ಸಾಮಾನು, ಚಿಲ್ಲರೆ ತುಗೊಂಡು, ಹೊಂಟ ನಾಯಿ ಹಿಂಬಾಲ ತಿಪ್ಪ ಹೊಂಟs ಬಿಟ್ಟಾ. ಅದು ಎಲ್ಲಿ ಹೋಗ್ತತಿ ಅಂತಾ ನೋಡೋ ಹಟಕ್ಕೆ ಬಿದ್ದ. ಸರಿ, ನಾಯಿ ಹತ್ತಿರದ ಬಸ್ ಸ್ಟಾಂಡಿಗೆ ಬಂತು. ಅಲ್ಲಿ ಹಚ್ಚಿದ್ದ ಬಸ್ಸ ರೂಟ್‍ಗಳ ಬೋರ್ಡ್ ನೋಡಿತು. ಸರಿಯಾದ ನಂಬರಿನ ಬಸ್ ಬರೋವರೆಗೂ ಕಾಯ್ತು. ಸರಿ, ಬಸ್ ಬಂತು, ನಾಯಿ ಹತ್ಕೊಂತು, ತಿಪ್ಪಾನೂ ಹತ್ತಿದ. ಬಾಸ್ಕೆಟ್ ಕೆಳಗಿಟ್ಟು, ಅದರಿಂದಾ ಹತ್ತು ರುಪಾಯಿ ನೋಟು ತೆಗೆದು ಬಾಲಾ ಅಲ್ಲಾಡಿಸ್ತು ನಾಯಿ. ಕಂಡಕ್ಟರ್ ಎಂಟು ರೂ ಟಿಕೇಟ್ ಕೊಟ್ಟು, ಚೆಲ್ಲರೆ ತಿರುಗಿ ಕೊಟ್ಟಾ. ತಿಪ್ಪನೂ ಅಲ್ಲಿಗೆ ಟಿಕೇಟ್ ತುಗೊಂಡಾ.

ತಾನ್ ಇಳಿಬೇಕಾದ ಜಾಗಕ್ಕೆ ಬಂದಾಗ ನಾಯಿ, ಸಣ್ಣದಾಗಿ ಬೊಗಳಿತು. ಬಸ್ಸಿನಿಂದ ಇಳಿದ ನಾಯಿ, ಮನೆಯೊಂದರ ಕಡೆ ಓಡಿತು, ದೊಡ್ಡ ಗೇಟನ್ನು ತೆರೆದುಕೊಂಡು, ಒಳಗೆ ಓಡಿತು. ತಿಪ್ಪಾನೂ ನುಗ್ಗಿದ. ಬಾಸ್ಕೆಟ್ ಕೆಳಗಿಟ್ಟ ನಾಯಿ, ಕದ ಬಡಿಯಿತು. ತಗಿಲಿಲ್ಲಾ, ಮನೆಯ ಹಿಂದುಗಡೆ ಓಡಿತು, ಅಲ್ಲಿ ಕಿಟಕಿಯಲ್ಲಿ ಇಣುಕಿ, ಸಣ್ಣಗೆ ಬೊಗಳಿತು.

ಮತ್ತೆ ಮುಂಬಾಗಿಲಿಗೆ ಬಂತು. ದಡಿಯನೊಬ್ಬ ಹೊರಬಂದು, ಇದ್ದಕ್ಕಿದ್ದಂಗ ನಾಯಿಯನ್ನು ಬಡಿಗಿಲೇ ಹೊಡೆಯಾಕತ್ತಿದ. ತುಸು ದೂರ್ ನಿಂತಿದ್ದ ತಿಪ್ಪಾ, ಹೋಗಿ ತಡದಾ, ’ಏನ್ ಸರ, ಎಸ್ಟ್ ಸ್ಯಾಣ್ಯಾ ನಾಯಿ ಐತಿ ಇದು, ಇಂತಾ ನಾಯಿ ನಾ ಇಲ್ಲಿವರಿಗೂ ನೋಡಿದ್ದಿಲ್ಲಾ, ಅಂತಾದರಾಗ, ಹಿಂಗ್ಯಾಕ್ ಹೊಡ್ಯಾಕತ್ತೇರಿ’ ಅಂದಾ. ಅದಕ್ಕವನು, ’ಏನ್ ಹಿಂಗ್ ಅಂತೀರಿ, ಇದ್ ಎಸ್ಟನೇ ಸಲಾ ಗೊತ್ತನ್ರಿ, ಈ ಹುಚ್ಚ್ ನಾಯಿ ಕೀಲಿ ಮನ್ಯಾಗ್ ಮರತ್ ಹೋಗಿದ್ದು?’ ಅಂದಾ.

ಈ ಕತಿಯ ನೀತಿ, moral ಏನು ಹೇಳ್ರಿ..... ನೋಡುಣು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2007 - 7:41pm — parimala

ಉ: ಮಾತಾಡೊ ಮಂಗ!

parimala's picture

ಮನೋರಂಜಕವಾಗಿದೆ, ನೀತಿ ಇದೆ. ಮುಂದುವರೆಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೇ ಗೇ ಮಂಗಣ್ಣ !
  • ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು
  • ಕನ್ನಡದ ಕಂದ
  • ಪ್ರೀತಿ ------ ತ್ಯಾಗ????????
  • ರಾಜ ಮುದ್ದು ರಾಜ
Syndicate content

ಲೇಖಕರು

prasad3003's picture

ಪೂರ್ಣ ಹೆಸರು
ಗುರುಪ್ರಸಾದ ಕುರ್ತಕೋಟಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
  • ಕಾರಂತರ ಜೀವಂತ ಪಾತ್ರಗಳು ೧೩ (೨)
  • ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
  • LTTE ಭಯೋತ್ಪಾದಕ ಸಂಘಟನೆಯಲ್ಲವೇ?
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
  • ಗು೦ಡ ಮತ್ತು ಕತ್ತೆ!!!!!
  • ಕಾರಂತರ ಜೀವಂತ ಪಾತ್ರಗಳು ೧೩ (೧)

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 7:48am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:53am
  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:03am
  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 142 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator