ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
ಕನ್ನಡಿಗರ ಹಚ್ಚ-ಹೊಸ ಕನ್ನಡ ಚಾನಲ್ ಪಾದಾರ್ಪಣೆ ಮಾಡಲಿದೆ.
ಇದರ ರುವಾರಿ ಯಾರು ಗೊತ್ತೆ ? ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಹಾಗೂ ಹಾಲಿ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪತ್ನಿಯಾದ ಅನಿತಾ ಕುಮಾರಸ್ವಾಮಿಯವರು. 24x7 ಕನ್ನಡ ಮನರಂಜನಾ ವಾಹಿನಿಯನ್ನು ನಾಳೆಯೇ ನಮ್ಮಜನರೆಗೆ ಅರ್ಪಿಸುವ ಆಶೆಯಿಟ್ಟುಕೊಂಡಿದ್ದಾರೆ.
ಒಡೆತನದ ಚಂದನ, ಸರಕಾರದ ಕೈಯಲ್ಲಿದೆ. ಉದಯ, ಈ ಟೀವಿ ನೆಟ್‌ವರ್ಕ್‌ಗಳು ಖಾಸಗಿಯವರದು. ಬರಲಿರುವ 'ಕನ್ನಡ ಕಸ್ತೂರಿ' ವಾಹಿನಿ, ಇವೆರಡರ ಜೊತೆಗೆ ಸ್ಪರ್ಧೆಯನ್ನು ಎದುರಿಸಬೇಕಾಗಿರುತ್ತೆ. ಕನ್ನಡ ಕಸ್ತೂರಿ ಮೊತ್ತ ಮೊದಲ ಕನ್ನಡಿಗರ ವಾಹಿನಿ ಕೂಡ ಆಗಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಲಿದೆ.
ಶ್ರೀಮತಿ. ಅನಿತಾ ಕುಮಾರ ಸ್ವಾಮಿಯವರು ಕಸ್ತೂರಿ ಮೀಡಿಯ ಪ್ರೈ ಲಿ.ನ ಮುಖ್ಯಸ್ಥರಾಗಿರುತ್ತಾರೆ.
-ಯಾಹೂ ಅವರ್ ಸಿಟಿ ಬೆಂಗಳುರಿನ ಸುದ್ದಿಯ ಪ್ರಕಾರ.

- Login or register to post comments
- 821 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
ಇಲ್ಲಿ ನೋಡಿರಿ..
http://kasturitv.com/
ನೀವು ಕನ್ನಡದಲ್ಲಿ ಬರೆದ ಸುದ್ದಿ ಅಲ್ಲಿ ಬಂದಿದೆ...
ಉ: ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
ನನಗೆ ಗೊತ್ತಿರುವಂತೆ ಇದು ಹತ್ತನೆಯ ಕನ್ನಡ ಚಾನಲ್!! ಸ್ಟಾರ್ ಟಿವಿ ಕೂಡ ಕನ್ನಡಕ್ಕೆ ಬರಬಹುದು ಎಂದು ಓದಿದ ನೆನಪು
ಬೆರಳೆಣಿಕೆಯಷ್ಟು ಕಾರ್ಯಕ್ರಮಗಳನ್ನ ಬಿಟ್ಟರೆ ಈ ಚಾನಲ್ ಗಳ quantity ಹೆಚ್ಚು quality ತೀರಾ ಕಡಿಮೆ.
ಉ: ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
Welcome ಪ್ರೇಕ್ಷಕರಿಗೆ..now we are going to see one nice song from our ಗೊಲ್ದನ್ ಸ್ಟಾರ್ ಅವರ ಒನ್ದು song... styloo styloo ಚಕ ಮಕ styloo..ಅನ್ನೊ ಕನ್ನಡ ಚಾನಲ್ಗಳಿಗಿಂತ ನಮ್ಮ ಸಾಹಿತ್ಯ ನಮ್ಮ ಸಂಸ್ಕ್ರತಿ ಪಸರಿಸುವ ಚಾನೆಲ್ ಆಗಿದ್ರೆ ಚೆನ್ನಾಗಿತ್ತು.
ಉ: ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
ಈ ಎಲ್ಲ ಚಾನೆಲ್ ಗಳವರು "ಪ್ರಿಯ ವೀಕ್ಶಕರೆ" "ಆತ್ಮೀಯ ವೀಕ್ಶಕರೆ" ಅಂತಾರೆ. ಅದರ ಬದ್ಲು "ನಲ್ಮೆಯ ನೋಡುಗರೆ", "ಒಲುಮೆಯ ನೋಡುಗರೆ" ಅನ್ನಬಹುದಲ್ಲವೆ?
ಉ: ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
ಅಯ್ಯೋ ನಮ್ ನಿಮ್ಮಂತವರು ಎಸ್ಟು ಒದರಿದರೂ ಆ ಚಾಳೆ ಹೋಗಲ್ಲಾ...
ಉ: ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
ಚಾಳಿ...........
ಉ: ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !
ಒಂದ್ ದಪ ಒಂದು ಅಡು-ಪ್ರೋಗ್ರಾಮ್ ನೋಡಿರಿ!!
one ground nut oilಅನ್ನ tawaಕ್ಕೆ ಹಾಕಿ low flameಅಲ್ಲಿ heat ಮಾಡಿ.
ನಾನು ನೋಡಿದ ಒಂದು ಇಂತ ಪ್ರೊಗ್ರಾಮ್ ಅನ್ನು ಆ 'ಮೂಡಲ ಮನೆ'ಯ ಒಬ್ಳು ನಟಿ ಹೀಗೆ ೯೦% ಇಂಗಲೀಸಲ್ಲಿ ನಡೆಸ್ತಿದ್ಳು!!