ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

"ಸಿ.ಡಿ."ಗೆ ಈಗ ೨೫ ವರುಷ

Compact Disc
ನಿನ್ನೆಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಫಿಲಿಪ್ಸ್ ಕಂಪೆನಿ ಸಿ.ಡಿ. (Compact Disc) ತಂತ್ರಜ್ಞಾನವನ್ನು ಹೊರತಂದದ್ದಂತೆ. ಸಿ.ಡಿ.ಯ ಬರುವಿಕೆಯಿಂದ ಮ್ಯೂಸಿಕ್ ಇಂಡಸ್ಟ್ರಿ ಹೇಗೆ ಬದಲಾಯ್ತು, ಸಿ.ಡಿ.ಗಳು ಸಂಗೀತ ಕೇಳುವವರಿಗೆ ಉತ್ತಮ ಕ್ವಾಲಿಟಿಯ ಸಂಗೀತ ತಲುಪಿಸಿದ್ದೇ ಅಲ್ಲದೆ ಹೆಚ್ಚು ದಿನ ಬಾಳಿಕೆ ಬರುವಂತಹ ಮಾಧ್ಯಮವಾಗಿ ಹೇಗೆ ಡಿಜಿಟಲ್ ಸಂಗೀತ ತಂತ್ರಜ್ಞಾನಕ್ಕೆ ದಾರಿ ಮಾಡಿಕೊಟ್ಟಿತು ಎಂಬುದನ್ನ ನೆನಪಿಸಿಕೊಳ್ಳುತ್ತ ಹಲವು ಟೆಕ್ ಸೈಟುಗಳು ಇವತ್ತು ವರದಿ ಮಾಡಿವೆ.

೧೯೭೯ರಲ್ಲಿಯೇ ಫಿಲಿಪ್ಸ್ ಮತ್ತು ಸೋನಿ ಒಟ್ಟಾಗಿ ಇಂಜಿನೀಯರುಗಳ ಗುಂಪೊಂದನ್ನ ಹೊಸ ಡಿಜಿಟಲ್ ಮ್ಯೂಸಿಕ್ ಡಿಸ್ಕ್ ಒಂದನ್ನ ಡಿಸೈನ್ ಮಾಡೋದಕ್ಕೆಂತು ಇಟ್ಟಿತ್ತಂತೆ. ಮುಂದಿನ ಒಂದು ವರ್ಷದಲ್ಲಿ ಡಿಸ್ಕಿನ ಡಯಾಮೀಟರ್ ಮುಂತಾದುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತಂತೆ, ಮೂಲತಃ ಒಂದು ಘಂಟೆಯಷ್ಟು ಆಡಿಯೋ ಹಿಡಿಸಲೆಂದು ತಯಾರಿಸಿದ ಸಿ.ಡಿ. ೧೧೫ಮಿಮೀ ವ್ಯಾಸದಷ್ಟು ದೊಡ್ಡದಿತ್ತಂತೆ. ನಂತರ ಬಿಥೋವನ್ನನ ಒಂಬತ್ತನೇ ಸಿಂಫೋನಿಯ ಪೂರ್ಣ ಆಡಿಯೋ ಹಿಡಿಸುವಷ್ಟು (೭೪ ನಿಮಿಷ) ಅದರ ಸಾಮರ್ಥ್ಯ ಹೆಚ್ಚಿಸಲಾಯಿತಂತೆ.

ಹೆಚ್ಚಿನ ಮಾಹಿತಿಗೆ ಓದಿ:
* Philips Celebrates 25th Anniversary of the Compact Disc
* Compact Disc - Wikipedia.

ಈ ಪುಟ್ಟ ಬರಹ ಮುಗಿಸುವ ಮುನ್ನ: ಸಿ.ಡಿ. ತಂತ್ರಜ್ಞಾನಕ್ಕೆ ನನಗಿಂತಲೂ ವಯಸ್ಸಾಗಿದೆ ಎಂಬುದು ತಿಳಿದು ಆಶ್ಚರ್ಯವಾದರೂ ನಾವುಗಳು ಸಿ.ಡಿ ಕಂಡಿದ್ದು ಕೇವಲ ಇತ್ತೀಚೆಗೆ (ಕೆಲವು ವರ್ಷಗಳ ಹಿಂದೆ) ಅಲ್ಲವೆ ಎಂಬುದು ನೆನಪಾಗಿ ಗಾಬರಿಯಾಯ್ತು. ನಾನು ಮೊದಲು ಸಿ.ಡಿಗಳನ್ನು ನೋಡಿದ್ದು ೧೯೯೭ರಲ್ಲಾದರೂ ಸ್ವತಃ ಮೊದಲ ಬಾರಿ ಬಳಸಲು ಸಾಧ್ಯವಾಗಿದ್ದು ೨೦೦೦ದಲ್ಲಿ! ತಮಾಷೆಯೆಂದರೆ ಈಗಾಗಲೇ ಸಿ.ಡಿ.ಗಳು ಬಹು ದೂರ ಸರಿದು ಡಿ.ವಿ.ಡಿಗಳ ಪ್ರವೇಶವಾಗಿ ಹೋಗಿದೆ. ಈಗ ಸಿ.ಡಿಗಳನ್ನು ಯಾರಾದರೂ ಹಿಡಿದಿದ್ದರೆ ಹಿಂದೊಮ್ಮೆ ೩ ೧/೪ ಇಂಚುಗಳ ಫ್ಲಾಪಿ ಹಿಡಿದವರನ್ನು ನೋಡಿದ ಹಾಗೆ ಆಗುತ್ತದೆ. ಇನ್ನೂ ಫ್ಲಾಪಿ ಡ್ರೈವುಗಳನ್ನು ಇಟ್ಟುಕೊಂಡವರನ್ನಂತೂ "ಓಬಿರಾಯನ ಕಾಲದವರು" ಎನ್ನುವ ಸಮಯ!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
shrivalli's picture

'ಬರಹ ಮುಗಿಸುವ ಮುನ್ನ' note ಚೆನ್ನಾಗಿದೆ. ನಾವು ಹಿಂದೆ ಉಳಿದಿದ್ದೆವು, ಜಗತ್ತಿನ ಮುಂದುವರಿದ ದೇಶಗಳಲ್ಲಿ ಪ್ರಚಲಿತವಾಗಿದ್ದ ಎಷ್ಟೊಂದು technologies ನಮಗೆ ಗೊತ್ತೇ ಇರಲಿಲ್ಲ ಎನ್ನುವುದು ಕಹಿ ಸತ್ಯವಾದರೂ.. ನನಗೆ ಅನ್ನಿಸುತ್ತೆ, ಇದು ಇವತ್ತಿಗೆ ಒಂಥರ advantageous ಅಂತ, ಇವತ್ತು ನಾವು ಬೆಳೆಯುತ್ತಿರುವ ವೇಗವನ್ನು ಗಮನದಲ್ಲಿ ಇಟ್ಟುಕೊಂಡಾಗ. Latest technologies ಸೀದಾ ಅಳವಡಿಸಿಕೊಳ್ಳಬಹುದು ಅಲ್ವೇ?

mananthprabhu's picture

ಯಾವುದೇ ಒ೦ದು ಹೊಸ technology ಸಾಮಾನ್ಯ ಜನರ ಬಳಕೆಗೆ ಬರಲು ಸಮಯ ಹಿಡಿಯುತ್ತದೆ. ಒ೦ದು technology ಯ ಕ೦ಡು ಹಿಡಿದ ಸಮಯದಲ್ಲಿ ಅದನ್ನು ಬಳಸಿ ವಸ್ತುಗಳನ್ನು ಮಾಡುವ ಕೆಲಸ(manufacturing cost) ತು೦ಬಾ ದುಬಾರಿ. ಅ೦ತಹ ವಸ್ತು ಜನ ಸಾಮಾನ್ಯನ ಕೈಗೆ ಎಟಕದಿರುವಸ್ಟು ದುಬಾರಿಯಾಗಿರುತ್ತದೆ. ಸಿ. ಡಿ ಕೂಡ ಇದೇ ರೀತಿ ಬೆಳೆದಿರಬೇಕು.
ಅನ೦ತ

betala's picture

ಇನ್ನು ಸ್ವಲ್ಪ ವರ್ಷಗಳ ಬಳಿಕ, ಸಿ.ಡಿ ಗಳು ಮಾಯ ಆಗುತ್ತೆ .... ಎಲ್ಲವು ಆನ್ಲೈನ್ ಆಗಿಬಿಟ್ಟರೆ/ಬ್ಯಾಂಡ್-ವಿಡ್ತ್ ಜಾಸ್ತಿಯಾದರೆ ಸಿಡಿ ತಗೆದುಕೊಳ್ಳುವ ಪ್ರಮೇಯವೆ ಇಲ್ಲ !!! . :)

-ನಿಮ್ಮ ಬೆಂಬಿಡದ ಬೇತಾಳ .....

hpn's picture

ಹ್ಮ್... ಈಗಾಗಲೇ ಟಿ ವಿ ಹಾಗೂ ರೇಡಿಯೋಗಳು ಇಂಟರ್ನೆಟ್ಟಿಗೆ ಕಾಲಿಟ್ಟು ಇರುವ ಬ್ಯಾಂಡ್ ವಿಡ್ತ್ ಸಾಕಾಗದಂತಾಗಿದೆಯಂತೆ. ಈಗಾಗಲೇ ಭಾರತಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರುವ ಪಶ್ಚಿಮ ದೇಶಗಳ ಬ್ಯಾಂಡ್ ವಿಡ್ತ್ ಕ್ಷಮತೆ ಅಂತರ್ಜಾಲದ ಬಳಕೆ ಹಾಗೂ ಬೆಳವಣಿಗೆಗೆ ತಕ್ಕಂತೆ ಹೆಚ್ಚಾಗದಿದ್ದಲ್ಲಿ ತೊಂದರೆ ಕಾದಿದೆ ಎಂದು ಅಮೇರಿಕದ ಕಂಪೆನಿಗಳು ಬೊಬ್ಬಿಡುತ್ತಿರುವಂತಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

hpn's picture

'ಬರಹ ಮುಗಿಸುವ ಮುನ್ನ' note ಚೆನ್ನಾಗಿದೆ.

ಧನ್ಯವಾದಗಳು. :)

ನಾವು ಹಿಂದೆ ಉಳಿದಿದ್ದೆವು, ಜಗತ್ತಿನ ಮುಂದುವರಿದ ದೇಶಗಳಲ್ಲಿ ಪ್ರಚಲಿತವಾಗಿದ್ದ ಎಷ್ಟೊಂದು technologies ನಮಗೆ ಗೊತ್ತೇ ಇರಲಿಲ್ಲ ಎನ್ನುವುದು ಕಹಿ ಸತ್ಯವಾದರೂ.. ನನಗೆ ಅನ್ನಿಸುತ್ತೆ, ಇದು ಇವತ್ತಿಗೆ ಒಂಥರ advantageous ಅಂತ, ಇವತ್ತು ನಾವು ಬೆಳೆಯುತ್ತಿರುವ ವೇಗವನ್ನು ಗಮನದಲ್ಲಿ ಇಟ್ಟುಕೊಂಡಾಗ. Latest technologies ಸೀದಾ ಅಳವಡಿಸಿಕೊಳ್ಳಬಹುದು ಅಲ್ವೇ?

ನಾವು ಬೆಳೆಯುತ್ತಿರುವ ವೇಗ ಎನ್ನುವುದು ಬಹುಶಃ ನಮ್ಮದೇ "ಕಲ್ಪಿತ ಬೆಳವಣಿಗೆ"ಯ ಕಲ್ಪಿತ ಪ್ಯಾರಾಮೀಟರ್ (parameter) ಎಂದು ಹೇಳಬಹುದು. ರಾಷ್ಟ್ರಗಳು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಾಗಿಲು ತೆರೆದಾಗ ನಾವು ಸುತ್ತ ಕಾಣುತ್ತಿರುವ "ಬೆಳವಣಿಗೆ" ಅದರ ಜೊತೆಗಾದ ಆಗಲೇಬೇಕಾದ ಬದಲಾವಣೆ ಮಾತ್ರ ಎಂಬುದು ನನ್ನ ಅಭಿಪ್ರಾಯ. ನಿಜವಾದ ಬೆಳವಣಿಗೆ ಇನ್ನೂ ಆಗುವುದಿದೆ. ಬೆಂಗಳೂರಿನಿಂದ ಒಂದಷ್ಟು ಮೈಲಿ ಹೋದರಾಯಿತು, ಬೆಳವಣಿಗೆಯ ಈ ಮುಖದ ಸ್ವರೂಪ ಬದಲಾಗಿದ್ದು ನಿಮಗೆ ಕಂಡುಬರುತ್ತದೆ. ಇತ್ತೀಚೆಗೆ ಬೆಂಗಳೂರಿನ ಒಳಗೇ ಇದರ ಸ್ವರೂಪ ಒಂದೊಂದು ಜಾಗಕ್ಕೆ ಒಂದೊಂದು ರೀತಿಯದ್ದಾಗಿದೆ.

--
ನನ್ನ ಬ್ಲಾಗ್:
ಪರಿವೇಶಣ | PariveshaNa

shrivalli's picture

ನಿಜ. ಬೆಳವಣಿಗೆ- ವೇಗ.. ಇತ್ಯಾದಿ ಪದಗಳು generalised ಶಬ್ದಗಳು. ನಮ್ಮಲ್ಲಿನ infrastructure ಬೆಳವಣಿಗೆಯನ್ನು ಗಮನದಲ್ಲಿಟ್ಟು ಯೋಚಿಸಿದಾಗ, development rate ತೀರ ಕಡಿಮೆ. ಬೆಳೆದಿರುವ metropolitan city ಗಳು ಅಡ್ಡಾದಿಡ್ಡಿಯಾಗಿ ರಿಪೇರಿ ಮಾಡಲಾರದಷ್ಟು ಬೆಳೆದಿದ್ದರೆ, ಹಳ್ಳಿಗಳಲ್ಲಿ infrastructure ಇತ್ಯಾದಿಗಳ ಅವಶ್ಯಕತೆ ಮತ್ತು ಅದರ ಅರಿವು ಜನಕ್ಕಿಲ್ಲ. ನಮ್ಮ government ಗೆ ಯಾವುದರ ಅವಶ್ಯಕತೆಯೂ ಕಾಣಿಸುವುದಿಲ್ಲ ಎನ್ನುವುದು ಪ್ರತ್ಯೇಕ ವಿಷಯ ಬಿಡಿ. ಆದರೆ, ಹರಿಯಾಣದಲ್ಲಿ ಸಬೀರ ಭಾಟಿಯಾ ಮತ್ತು ನ್ಯಾನೋ ಸಿಟಿhttp://ibef.org/artdisplay.aspx?cat_id=60&art_id=13909&in=19 ಯ ಬಗ್ಗೆ ಕೇಳಿದಾಗ ಸಂತೋಷವಾಯಿತು.

' ರಾಷ್ಟ್ರಗಳು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಾಗಿಲು ತೆರೆದಾಗ ನಾವು ಸುತ್ತ ಕಾಣುತ್ತಿರುವ "ಬೆಳವಣಿಗೆ" ಅದರ ಜೊತೆಗಾದ ಆಗಲೇಬೇಕಾದ ಬದಲಾವಣೆ ಮಾತ್ರ ' ಎಂಬ ನಿಮ್ಮ ನಿಲುವು ಒಮ್ಮೆ ನಿಜವೆನ್ನುಸುತ್ತದರೂ, ನಮ್ಮ ಜನರಲ್ಲಿ awareness ಬರದ ಹೊರತು ಯಾವುದೇ ಪ್ರಯೋಜನವಿಲ್ಲ ಎಂದು ನನ್ನ ಅಭಿಮತ. -ಶ್ರೀವಲ್ಲಿ

betala's picture

ನಾವಿರೊದು "ಬೆಳವಣಿಗೆ" ಅನ್ನುವ ಭ್ರಮೆಯಲ್ಲಿ .. :)

೧. ನಾವು ಕೇವಲ "raw materials" ಸಪ್ಪ್ನೈಯರ್ ಆಗಿ ಹೋಗ್ತಾಯಿದ್ದಿವಿ ... ಅದನ್ನು ಒಂದು ಉಪಯುಕ್ತ "product" ಗಳಾಗಿ ಮಾಡಿತ್ತಿಲ್ಲ .
೨. ನಮ್ಮ ಮೊಲ ಭೊತ ಸೌಕರ್ಯಗಳಿಗೆ ಒತ್ತುಕೊಡುತ್ತಿಲ್ಲ. ನೀರು, ವಸತಿ, ಕರೆಂಟು ಇತ್ಯಾದಿ ....
೩.

-ನಿಮ್ಮ ಬೆಂಬಿಡದ ಬೇತಾಳ .....

betala's picture

ಸೂಪರ್ ಆಗಿದೆ :) ಸಿ.ಡಿ ಗಳಿಗೆ ೨೫ ವರ್ಷವಾಗಿದೆ ಅಂದಾಗ ಆಶ್ಚರ್ಯ ಕೂಡ ಆಗ್ತಯಿದೆ !!! :)

-ನಿಮ್ಮ ಬೆಂಬಿಡದ ಬೇತಾಳ .....

ರಘುನಂದನ's picture

ಅಲ್ರೀ ನೀವಿನ್ನೂ ಸಿ.ಡಿ /ಡಿವಿಡಿ ಬಳಸ್ತಾ ಇದೀರಾ????? ಏನ್ರೀ .... ಪೆನ್ ಡ್ರೈವ್ ಇಟ್ಕೊಳ್ಳೋದಲ್ವಾ??? ;)

ನಾನು ಮೊದಲು ಕೆಲಸ ಮಾಡ್ತಾ ಇದ್ದ ಕಂಪ್ಯೂಟರಿನಲ್ಲಿ ನಾಲ್ಕು ಎಂಬಿ ರ್ಯಾಮ್ ಇತ್ತು. ಇವಾಗ ೨ ಜಿಬಿ ಹಾಕ್ಕೊಂಡ್ರೂ ಇವತ್ತು ರ್ಯಾಮ್ ಕಮ್ಮಿ ಇದೆ ಅಂತಪ್ಪ ಯಾಕೋ ಏನೋ? ಆದ್ರೆ ನಂಗೆ ವಿಚಿತ್ರ ಅನ್ನಿಸಿದ್ದೇನೆಂದರೆ ಮಣಿಪಾಲ ಕಂಪ್ಯೂಟರ್ ಎಜ್ಯುಕೇಷನ್ನಿನ ಫ್ರಾಂಚೈಸಿ ಸೆಂಟರೊಂದರಲ್ಲಿ ೨೦ ಎಂ.ಬಿ(ಜಿ.ಬಿ. ಅಲ್ಲ) ಸೀಗೇಟ್ ಹಾರ್ಡ್ ಡಿಸ್ಕ್ ನೋಡಿದ್ದು. (೯ ವರ್ಷಗಳ ಕೆಳಗೆ) ಅದು ಈಗಿನ ಸೈಜಿನದ್ದೇ ಇತ್ತು. ಆವಾಗಲೇ ನಂಗನ್ನಿಸಿತ್ತು ’ಇದ್ರಲ್ಲಿ ಏನು ಹಿಡಿಯುತ್ತೆ ಅಂತ ಇದನ್ನ ಇಟ್ಕೊಂಡಿದ್ದಾನೆ ಈ ಯಜಮಾನ’ ಅಂತ. ಅದೆಲ್ಲ ನಮ್ಮ ಕಾಲದ ವೈಭವ!

ಎನಗಿಂತ ಕಿರಿಯರಿಲ್ಲ

hpn's picture

ಪೆನ್ ಡ್ರೈವ್ ಇಲ್ಲದೇ ಏನು. ಆದರೆ ಪೆನ್ ಡ್ರೈವ್ ಎಲ್ಲ ನಿತ್ಯ ಕಂಪ್ಯೂಟರ್ ಮುಂದೇ ಹೆಚ್ಚು ಸಮಯ ಕಳೆಯುವ ನಮಗೆಲ್ಲ ಸಾಕಗುತ್ತದೆಯೇ?
ಇತ್ತೀಚೆಗೆ ೫೦೦ಜಿಬಿ ಇರುವ ಒಂದು external drive ಕೊಂಡುಕೊಂಡೆ - ಅದೂ ಕೂಡ ಸಾಲುತ್ತಿಲ್ಲ. ಡಿ ವಿ ಡಿ ಯಾವತ್ತಿದ್ದರೂ ನಮಗೆ ನಂಬಿಕೆಯ ಬ್ಯಾಕಪ್ ಮೀಡಿಯ. ಬಹಳ important ಆದ ಫೈಲುಗಳನ್ನ ಒಂದೆರಡು re-writable ಡಿವಿಡಿಗಳಲ್ಲಿ ಆಗ್ಗಿಂದಾಗ್ಯೆ ಬ್ಯಾಕಪ್ ತೆಗೆದಿಡಬೇಕಾಗಿಬರತ್ತೆ. ಉಳಿದದ್ದಕ್ಕೆಲ್ಲ external disk. ಪೆನ್ ಡ್ರೈವ್ ಏನಿದ್ದರೂ ತಕ್ಷಣ ಒಂದಷ್ಟು ತೆಗೆದಿಟ್ಟುಕೊಳ್ಳುವುದಕ್ಕೆ - ಹಲವು ಬಾರಿ ಅದು ಕೈ ಕೊಡತ್ತೆ. ಪೆನ್ ಡ್ರೈವ್ ಹೆಚ್ಚು ನಂಬಿಕೊಳ್ಳೋ ಅಂತ ಬ್ಯಾಕಪ್ ಮೀಡಿಯ ಅಲ್ಲ - ಜೊತೆಗೆ ಗಾತ್ರದ ಮಟ್ಟಿಗೆ ತೆತ್ತ ವೆಚ್ಚ ಬೇರೆ ಸ್ಟೋರೇಜ್ ಮೀಡಿಯಗಳಿಗೆ ಹೋಲಿಸಿದರೆ ಬಹು ಪಾಲು ಹೆಚ್ಚಿರತ್ತೆ.

ಡಿವಿಡಿ ಒಂದು ೨೫ ರೂಪಾಯಿಗಳಿಗೆ ಸಿಕ್ಕಿಹೋಗುತ್ತೆ (ಒಳ್ಳೆಯ ಕ್ವಾಲಿಟಿ ಡಿವಿಡಿ). ಒಟ್ಟಾಗಿ ಕೊಂಡರೆ ಇನ್ನೂ ಕಡಿಮೆ ಬೀಳಬಹುದು. ರಿರೈಟಬಲ್ ಡಿವಿಡಿ (ಒಳ್ಳೆಯವು) ನನಗೆ ಒಂದಕ್ಕೆ ೭೫ ರೂಪಾಯಿಗಳಂತೆ ಸಿಕ್ಕಿತ್ತು (ಈಗಾಗಲೇ ಇದರ ಬೆಲೆ ಕೂಡ ಸಾಕಷ್ಟು ಕಡಿಮೆಯಾಗಿರಬಹುದು). ಒಳ್ಳೆ ಕ್ವಾಲಿಟಿಯ ೧ ಜಿ.ಬಿ. ಪೆನ್ ಡ್ರೈವ್ ಗೆ ಭಾರತದಲ್ಲಿ ಏನಿಲ್ಲ ಅಂದರೂ ೧,೦೦೦ ರೂ ಆಗತ್ತೆ. ಲೆಕ್ಕ ಹಾಕಿಕೊಳ್ಳಿ :)

--
ನನ್ನ ಬ್ಲಾಗ್:
ಪರಿವೇಶಣ | PariveshaNa

hpn's picture

ಬರೆಯುವುದ ಮರೆತೆ - ಒಂದು ಡಿವಿಡಿಯಲ್ಲಿ ನಿಮಗೆ ಗೊತ್ತಿರುವಂತೆ ೪.೬ ಜಿ ಬಿ ಹಿಡಿಸುತ್ತದೆ. ಡಬಲ್ ಲೇಯರ್ ಡಿವಿಡಿಯಲ್ಲಿ ೮ ಚಿಲ್ಲರೆ ಹಿಡಿಸುತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

betala's picture

ಬ್ಲು-ರೇ ಡಿಸ್ಕ್ ಬಳಸಿದರೆ ೨೫ GB ಅಂತೆ :) ... ಅದರೆ ಲಬ್ಯತೆ ಇದೆಯೊ/ಇಲ್ಲವೊ ಗೊತ್ತಿಲ್ಲ :(
ನಾನು ಸದ್ಯಕ್ಕೆ ಸೋನಿ DVD , Transcend ಪೆನ್ ಡ್ರ್‍ಐವ್ ಬಳ್ಸ್ಸುತ್ತಿರುವೆ :)

-ನಿಮ್ಮ ಬೆಂಬಿಡದ ಬೇತಾಳ .....