Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು

July 28, 2005 - 7:39pm — olnswamy

ವಚನಗಳು ಕೇವಲ ಧರ್ಮದ ಕಂತೆಗಳಲ್ಲ. ಚೆಲುವಾದ ಕವಿತೆಗಳೂ ಅಲ್ಲ. ನಮ್ಮ ಡೈಲಿ ಲೈಫಿಗೆ ಅಗತ್ಯವಾದ ಚಿಂತನೆಯ ಆಹಾರಗಳು. ವಚನಗಳನ್ನು ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ನಿಮ್ಮೊಡನೆ ದಿನವೂ ಒಂದಿಷ್ಟು ಹಂಚಿಕೊಳ್ಳುವುದು ಈ ಮಾಲೆಯ ಉದ್ದೇಶ.
ಇಂದು ಅಲ್ಲಮನ ವಚನ ಕುರಿತು ಬರೆದಿದ್ದೇನೆ. ಅಲ್ಲಮ ಹನ್ನೆರಡನೆಯ ಶತಮಾನದಲ್ಲಿ ಬದುಕಿದ್ದ ಅನುಭಾವಿ, ಚಿಂತಕ.

ತನು ಒಂದು ದ್ವೀಪ
ಮನ ಒಂದು ದ್ವೀಪ
ಆಪ್ಯಾಯನ ಒಂದು ದ್ವೀಪ
ವಚನ ಒಂದು ದ್ವೀಪ
ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ
ಗುಹೇಶ್ವರ ನಿಮ್ಮ ಸ್ಥಾನಂಗಳುದು

ನಮ್ಮ ದೇಹ, ಮನಸ್ಸು, ರುಚಿ-ತೃಪ್ತಿ, ನಾವು ಬಳಸುವ ಮಾತು ಇವೆಲ್ಲವೂ ಪರಸ್ಪರ ಸಂಬಂಧ ಕಡಿದುಕೊಂಡ ದ್ವೀಪಗಳಾಗಿವೆ. ಆದುದರಿಂದಲೇ ತಳಮಳ. ಅಖಂಡವಾಗಿ, ಒಂದೇ ಆಗಿರಬೇಕಾದ ಇವೆಲ್ಲ ತಾಳ ತಪ್ಪಿರುವುದರಿಂದಲೇ ನಮ್ಮ ಬದುಕು ಮೇಳವಾಗದೆ ನಿರ್ಥಕ ಸದ್ದುಗದ್ದಲಗಳ ಸಂತೆ.
ಈ ನಾಲ್ಕೂ ದ್ವೀಪಗಳು ದ್ವೀಪಗಳಾಗಿರುವುದೇ ಅವನ್ನೆಲ್ಲ ಸಂಪರ್ಕಿಸುವ ನದಿಯ ಕಾರಣದಿಂದ ಎಂಬುದು ವಿಪರ್ಯಾಸ.
ನಮ್ಮೊಳಗಿನ ಗುಹೇಶ್ವರ, ನಮ್ಮ ಅಖಂಡತೆ ನಾಲ್ಕು ದ್ವೀಪಗಳಲ್ಲಿ ಛಿದ್ರವಾಗಿದ್ದಾನೆ. ದೇಹ, ಮನಸ್ಸು, ಅಭಿರುಚಿ, ಮತ್ತು ಮಾತು ಒಂದಾಗಿ ಬೆಸುಗೆಯಾದಾಗ ಈಗ ನಾವು ಕಳೆದುಕೊಂಡಿರುವ ಐಕ್ಯತೆ, ಅಖಂಡತೆಗಳು ಮತ್ತೆ ದೊರೆಯುತ್ತವೆ.
ಹೀಗೆ ಛಿದ್ರವಾಗಿರುವ ನಾಲ್ಕೂ ಅಂಶಗಳೂ ಮೂಲತಃ ಅಖಂಡ ದೈವತ್ವವೇ ಎಂಬುದನ್ನು ಅನುಭವಕ್ಕೆ, ಅರಿವಿಗೆ ತಂದುಕೊಳ್ಳುವುದು ಮುಖ್ಯ.

  • ಚಿಂತನೆ
Ornamental seperator
  • Login or register to post comments
  • 902 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 28, 2005 - 11:11pm — tvsrinivas41

ಮತ್ತೆ

tvsrinivas41's picture

ಮತ್ತೆ ಮತ್ತೆ ಓದಿದಾಗಲೂ ಹೊಸ ಹೊಸ ಚಿಂತನೆಗಳಿಗೆ ಅವಕಾಶವೀಯುವ ಉತ್ತಮೆ ಲೇಖನ. ಚಿಕ್ಕದಾದರೂ ಇಡೀ ಅಧ್ಯಾತ್ಮ ಚಿಂತನೆಯನ್ನೇ ಒಳಗೊಂಡ ಒಂದು ವನೋಜ್ಞ ಚಿಂತನೆ. ಇಂತಹ ಇನ್ನೂ ಹತ್ತು ಹಲವಾರುಗಳನ್ನು ನಮಗೆ ಕರುಣಿಸಿ, ಸಾರ್.
ನಿಜಕ್ಕೂ ನಮ್ಮ ಹಿರಿಯರು ಎಂತಹ ಉತ್ತಮ ಚಿಂತಕರು. ಅವರನ್ನು ನಾವು ಅರಿಯದೇ ಇನ್ಯಾವುದೋ ಆಲದ ಮರಕ್ಕೆ ಜೋತುಬೀಳುತ್ತಿದ್ದೇವೆ.

ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂಗಾರುಮಳೆ ಮತ್ತು ದ್ವೀಪ
  • "ಮುಂಗಾರು ಮಳೆ" ಮತ್ತು "ದ್ವೀಪ"
  • ನಯಾಗರದ ಕೆನಡಿಯನ್ ಫಾಲ್ಸ್ - ಮೇಲಿನಿಂದ ಕಾಣುವ ನೋಟ
  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
  • ವಚನ ಚಿಂತನ: ೮: ಆಸೆ-ರೋಷ, ಮಗು-ತಾಯಿ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 4 ಅತಿಥಿಗಳು ಆನ್ಲೈನ್ ಇರುವರು.

ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator