Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ರಾಜ್ಯೋತ್ಸವ ರಸಪ್ರಶ್ನೆ -೨೦೦೫

October 31, 2005 - 5:25pm — pavanaja

(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ)
೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?
(ಕ) ತಮಿಳು
(ಚ) ಇಂಗ್ಲಿಷ್
(ಟ) ಕಂಗ್ಲಿಷ್
(ತ) ಕನ್ನಡ
(ಪ) ಎಲ್ಲವೂ

೨. ಕರ್ನಾಟಕವನ್ನು ಆಳುತ್ತಿರುವವರು ಯಾರು?
(ಕ) ದೇವೇಗೌಡ
(ಚ) ಮುಖ್ಯಮಂತ್ರಿ ಧರಮ್ ಸಿಂಗ್
(ಟ) ಐ.ಟಿ. ಲಾಬಿ
(ತ) ಎಲ್ಲರೂ
(ಪ) ಯಾರೂ ಅಲ್ಲ

೩. ಬೆಂಗಳೂರನ್ನು ಈಗ ಆಳುತ್ತಿರುವವರು ಯಾರು?
(ಕ) ರಿಕ್ಷಾ ಚಾಲಕರು
(ಚ) ತಮಿಳರು
(ಟ) ಐ.ಟಿ. ದೊರೆಗಳು
(ತ) ಎಲ್ಲರೂ
(ಪ) ಯಾರೂ ಅಲ್ಲ

೪. ಕನ್ನಡ ಚಲನಚಿತ್ರ ನಿರ್ದೇಶಕನಾಗಲು ಮುಖ್ಯ ಅರ್ಹತೆ ಏನು?
(ಕ) ಗಡ್ಡ ಬಿಟ್ಟಿರಬೇಕು
(ಚ) ತಮಿಳು, ತೆಲುಗು, ಹಿಂದಿ ಭಾಷೆ ಗೊತ್ತಿದ್ದು ಆ ಭಾಷೆಯ ಸಿನಿಮಾಗಳನ್ನು ದಿನಾ ನೋಡುತ್ತಿರಬೇಕು
(ಟ) ತಮಿಳು, ತೆಲುಗು, ಮಲಯಾಳಂ ಸಿನಿಮಾ ನಟಿಗಳ ಪರಿಚಯವಿರಬೇಕು
(ತ) ಎಲ್ಲವೂ
(ಪ) ಯಾವುದೂ ಅಲ್ಲ

೫. ಕರ್ನಾಟಕ ರಾಜ್ಯೋತ್ಸವ ಆಚರಿಸಲು ಮುಖ್ಯ ಕಾರಣ
(ಕ) ಸಾರ್ವಜನಿಕ ಗಣೇಶ ಚೌತಿಗೆ ಸಂಗ್ರಹಿಸಿ ಉಳಿದ ಹಣ ಮುಗಿಸಲು
(ಚ) ರಾಜ್ಯೋತ್ಸವ ಆಚರಣೆಯ ನೆವದಲ್ಲಿ ಮತ್ತಷ್ಟು ಹಣ ಸಂಗ್ರಹಿಸಲು
(ಟ) ಉಟ್ಟು ಓರಾಟಗಾರರಿಗೆ ಭಾಷಣ ಬಿಗಿಯಲು ವೇದಿಕೆ ಒದಗಿಸಲು
(ತ) ಎಲ್ಲವೂ
(ಪ) ಯಾವುದೂ ಅಲ್ಲ

೬. ಬೆಂಗಳೂರು ಕನ್ನಡಿಗರ ಮುಖ್ಯ ಲಕ್ಷಣ ಏನು?
(ಕ) ಮಾತು ಮಾತಿಗೆ ``ಅಯ್ಯೋ ಅದೆಲ್ಲಾ ಆಗೋಲ್ಲಾರಿ" ಎನ್ನುತ್ತಿರುತ್ತಾರೆ
(ಚ) ಕನ್ನಡ ಶಬ್ದಗಳ ಜೊತೆ ಇಂಗ್ಲಿಷ್ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ
(ಟ) ಇಂಗ್ಲಿಷ್ ಶಬ್ದಗಳ ಜೊತೆ ಕನ್ನಡ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ
(ತ) ಎಲ್ಲವೂ
(ಪ) ಯಾವುದೂ ಅಲ್ಲ

೭. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕರ್ತವ್ಯಗಳು ಯಾವುವು?
(ಕ) ಕನ್ನಡ ಪರ ಸುತ್ತೋಲೆಗಳನ್ನು ಹೊರಡಿಸುವುದು
(ಚ) ಬೆಂಗಳೂರಿನಲ್ಲಿರುವ ಅಂಗಡಿಗಳ ಇಂಗ್ಲಿಷ್ ಫಲಕಗಳಿಗೆ ಟಾರು, ಸೆಗಣಿ ಬಳಿಯುವುದು
(ಟ) ಕಂಪೆನಿಗಳು ಉಪಯೋಗಿಸುತ್ತಿರುವ, ಇಂಗ್ಲಿಷ್ ಭಾಷೆಯಲ್ಲಿರುವ, ರಬ್ಬರ್ ಸ್ಟಾಂಪ್, ಲೆಟರ್ ಹೆಡ್‌ಗಳನ್ನು ಸಂಗ್ರಹಿಸುವುದು
(ತ) ಎಲ್ಲವೂ
(ಪ) ಯಾವುದೂ ಅಲ್ಲ

೮. ಕನ್ನಡದ ಖಾಸಗಿ ಟಿವಿ ಚ್ಯಾನಲುಗಳಲ್ಲಿ ಸುದ್ದಿ ಓದಲು, ಕಾರ್ಯಕ್ರಮ ನಡೆಸಿ ಕೊಡಲು, ಸಂದರ್ಶನ ಮಾಡಿಕೊಡಲು, ಇತ್ಯಾದಿಗಳಿಗೆ ಇರಬೇಕಾದ ಅರ್ಹತೆಗಳೇನು?
(ಕ) ಚ್ಯಾನೆಲ್‌ಗಳ ಒಡೆಯರಾದ ತಮಿಳರು, ಮಲೆಯಾಳಿಗರು, ತೆಲುಗರು ಇತ್ಯಾದಿ ಕನ್ನಡೇತರರ ಪರಿಚಯ ಇರತಕ್ಕದ್ದು
(ಚ) ``ಆಸನ"ಕ್ಕೆ ``ಹಾಸನ", ``ಆದರ"ಕ್ಕೆ ``ಹಾದರ", ``ಹೋಗು"ಗೆ ``ಓಗು" ಇತ್ಯಾದಿಯಾಗಿ ಖನ್ನಡ ಮಾತನಾಡಲು ಕಲಿತಿರಬೇಕು
(ಟ) ಕನ್ನಡ ಸಿನಿಮಾ ರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು -ಇವರ ಪರಿಚಯ ಇರಬೇಕು
(ತ) ಎಲ್ಲವೂ
(ಪ) ಯಾವುದೂ ಅಲ್ಲ

೯. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕರ್ತವ್ಯಗಳೇನು?
(ಕ) ಮಂತ್ರಿಗಳ, ಅಧಿಕಾರಿಗಳ ಮಕ್ಕಳು, ಸಂಬಂಧಿಕರನ್ನು ಕಲಾವಿದರೆಂದು ವಿದೇಶಕ್ಕೆ ಕಳುಹಿಸಿಕೊಡುವುದು
(ಚ) ವಿಧಾನ ಸೌಧದಲ್ಲಿ ಡೊಳ್ಳು ಕುಣಿತ ಏರ್ಪಡಿಸುವುದು
(ಟ) ಲೆಟರ್‌ಹೆಡ್ ಸಂಘ ಸಂಸ್ಥೆಗಳಿಗೆ ಸರಕಾರದಿಂದ ಅನುದಾನ ನೀಡುವುದು
(ತ) ಮಂತ್ರಿವರೇಣ್ಯರ ಪ್ರಭಾವದಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಹಂಚುವುದು
(ಪ) ಎಲ್ಲವೂ

೧೦. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳೇನು?
(ಕ) ವರ್ಷಕ್ಕೊಮ್ಮೆ ಸಾಹಿತ್ಯ some ಮೇಳ ನಡೆಸುವುದು
(ಚ) ಸಮ್ಮೇಳನದ ಅಧ್ಯಕ್ಷರನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದು
(ಟ) ಸಾಹಿತಿಗಳಲ್ಲದವರನ್ನು ಪರಿಷತ್ತಿನ ಸದಸ್ಯರನ್ನಾಗಿ ನೋಂದಾಯಿಸುವುದು
(ತ) ಎಲ್ಲವೂ
(ಪ) ಯಾವುದೂ ಅಲ್ಲ

-ಪವನಜ

  • ಲಲಿತ ಪ್ರಬಂಧ, ಹಾಸ್ಯ
Ornamental seperator
  • Login or register to post comments
  • 1249 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 1, 2005 - 11:33am — bharath

ಸತ್ಯ

bharath's picture

ಈ ರಸಪ್ರಶ್ನೆಯನ್ನು ಓದಿದರೆ ನಗುವಿಗಿಂತ ಅಳು ಬರುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
November 22, 2005 - 9:53pm — Jagadish

ನಗು, ಅಳು ಎಲ್ಲ ಬಿಟ್ಟು....

Jagadish's picture

ಮುಂದೆ ಏನ್ ಮಾಡಬೇಕು ಅಂತ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣ ಅಗ್ಬಿಟ್ಟಿದೆ....

ಆದಷ್ಟು ಎಲ್ಲ ಕಡೆ ಕನ್ನಡ ಉಪಯೋಗಿಸಿದ್ರೆ, ಕನ್ನಡಿಗರನ್ನ ಬಡಿದೆಬ್ಬಿಸಿದ್ರೆ ಏನಾದ್ರು ಮಾಡ್ಬಹುದು..

  • Login or register to post comments
  • link
  • Email this ಪ್ರತಿಕ್ರಿಯೆ
November 2, 2005 - 12:19am — hpn

ಟ್ರೇಡ್ ಮಾರ್ಕ್ ಪವನಜರವರ ಹಾಸ್ಯ ;)

hpn's picture

ಟ್ರೇಡ್ ಮಾರ್ಕ್ ಪವನಜರವರ ಹಾಸ್ಯ Eye-wink

ಬಹಳ ಚೆನ್ನಾಗಿದೆ. ಮುಂಚೆಯೇ ಬರೆದದ್ದೋ ಅಥವಾ ಇತ್ತೀಚೆಗೆ ಬರೆದದ್ದೊ? Smiling

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
November 2, 2005 - 10:44am — pavanaja

ಯಾವುದು ಟ್ರೇಡ್‌ಮಾರ್ಕ್?

pavanaja's picture

> ಟ್ರೇಡ್‌ಮಾರ್ಕ್ ಪವನಜವರ ಹಾಸ್ಯ Eye-wink

ಯಾವುದು ಟ್ರೇಡ್‌ಮಾರ್ಕ್‌? ಪವನಜನೋ? ಹಾಸ್ಯವೋ?

> ಮುಂಚೆ ಬರೆದದ್ದೋ ಅಥವಾ ಇತ್ತೀಚೆಗೆ ಬರೆದದ್ದೋ?

ಖಂಡಿತವಾಗಿಯೂ ಮುಂಚೆಯೇ ಬರೆದದ್ದು. ಇತ್ತೀಚೆಗೆ ಯಾಕೋ ಬರೆಯಲು (ಅಲ್ಲ, ಕುಟ್ಟಲು) ಮೂಡ್ ಬರುತ್ತಲೇ ಇಲ್ಲ. ವಿಶ್ವಕನ್ನಡದಲ್ಲಿ ಈ ಹಿಂದೆಯೇ ಬಂದ ಲೇಖನ ಇದು. ಅಂತಹ ಅದ್ಭುತ ಲೇಖನವೇನೂ ಅಲ್ಲ. ಸ್ವಲ್ಪ ಬದಲಾವಣೆ ಮಾಡಿದ್ದೇನೆ. ರಾಜ್ಯೋತ್ಸವ ನೆನಪಲ್ಲಿ ಸ್ವಲ್ಪ ಚುರುಕು ಮುಟ್ಟಿಸೋಣ ಎಂದುಕೊಂಡೆ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
November 2, 2005 - 12:39pm — hpn

Re: ಯಾವುದು ಟ್ರೇಡ್‌ಮಾರ್ಕ್‌?

hpn's picture

> ಯಾವುದು ಟ್ರೇಡ್‌ಮಾರ್ಕ್‌? ಪವನಜನೋ? ಹಾಸ್ಯವೋ?

ಹಾಸ್ಯ Eye-wink

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
November 2, 2005 - 1:57pm — tvsrinivas41

ಟ್ರೇಡ್‍ಮಾರ್ಕ್

tvsrinivas41's picture

ಪವನಜರ ಹಾಸ್ಯವೇ ಒಂದು ಟ್ರೇಡ್‍ಮಾರ್ಕ್. ಇದರ ಬಗ್ಗೆ ಈಗಲೇ ಕಾಪಿರೈಟ್ ತೆಗೆದುಕೊಳ್ಳಿ. ನಿಮ್ಮ ಹಾಸ್ಯದಲ್ಲೂ ಮುಟ್ಟಿನೋಡಿಕೊಳ್ಳುವ ಚುರುಕ್‍ತನ ಇದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
November 3, 2005 - 11:47am — beluru

ಹೊಳ್ಳೇ ಕ್ವಿಜ್ ಮಾರಾಯ್ರೆ....

beluru's picture

ನಿನ್ನೆ ನನ್ನ ಗೆಳೆಯ, ನ್ಯಾಯವಾದಿ ಶ್ರೀ ಚಂದ್ರಶೇಖರ ಜೋಶಿಯವರ ಸಂದರ್ಶನವು ಚಂದನದಲ್ಲಿ ಪ್ರಸಾರವಾಯ್ತು. ಸಂದರ್ಶಕರು ತಾವು ತಿಳಿಸಿದ ಅರ್ಹತೆಗಳನ್ನು ಹೊಂದಿದ್ದರು. ಹುದಾಅರಣೆಗೆ: ಭ್ರೂಣಹತ್ಯೆಯನ್ನು ಪರೀಕ್ಷೆ ಮಾಡೋದು ಹ್ಯಾಗೆ?, ಹಾತ್ಮಅತ್ಯೆ ಪ್ರಕರಣ, ಹತ್ಯಾಚಾರ, ಹಿತ್ಯಾದಿ...

  • Login or register to post comments
  • link
  • Email this ಪ್ರತಿಕ್ರಿಯೆ
November 3, 2005 - 4:59pm — hpn

;)

hpn's picture

ಹೆ ಹೆ Eye-wink

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
  • ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ
  • ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ
  • ಕನ್ನಡಿಗನಾಗಿ ಹೆಮ್ಮೆ...
  • ಭಾಷೆ "Idea" ವ್ಯಕ್ತ ಪಡಿಸುವ ಸಾಧನ ಮಾತ್ರವೆ ?
Syndicate content

ಲೇಖಕರು

pavanaja's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ
  • ಅಮ್ಮಜಿಖಷೆಸ್ಸ ಖನಮ ಒಜಿ

ಇತ್ತೀಚಿನ ಪ್ರತಿಕ್ರಿಯೆಗಳು

  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 6:58pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 3 ಅತಿಥಿಗಳು ಆನ್ಲೈನ್ ಇರುವರು.

ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator