ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

September 15, 2007 - 9:23pm — venkatesh

ಶ್ರೀ ಶ್ರೀ ಆದಿಶಂಕರರ ಭಕ್ತರಲ್ಲಿ ಪ್ರಧಾನರಾದವರು, ಕೇವಲ ೪ ಜನ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಮಾನರು. ದೃಢಭಕ್ತಿಯಲ್ಲಿ, ಶ್ರೀ ಪದ್ಮಪಾದಾಚಾರ್ಯರು, ಅನುಪಮಸೇವೆಯಲ್ಲಿ, ಶ್ರೀ ತೋಟಕಾಚಾರ್ಯರು, ಪರಮಾತ್ಮ ಸಾಕ್ಷಾತ್ಕಾರದಲ್ಲಿ ಶ್ರೀ ಹಸ್ತಾಮಲಕಾಚಾರ್ಯರು, ಕೊನೆಯದಾಗಿ ಅದ್ವಿತೀಯ ಪಾಂಡಿತ್ಯದಲ್ಲಿ ಶ್ರೀ ಸುರೇಶ್ವರಾಚಾರ್ಯರು.

ಶಂಕರರ ಪ್ರಥಮ ಶಿಷ್ಯನಾಗಿ ಶ್ರೀ ಪದ್ಮಪಾದಾಚಾರ್ಯರು ಪ್ರಥಮರು. ಇನ್ನೂ ಅನೇಕಸ್ಥಾನದಲ್ಲೂ ಇವರು ಪ್ರಥಮರು. ಶ್ರೀ ತೋಟಕಾಚಾರ್ಯರಿಗೆ, ಪದ್ಮಪಾದ ಸುರೇಶ್ವರಾಚಾರ್ಯರಷ್ಟು ವಿದ್ಯೆಯಾಗಲೀ, ಹಸ್ತಾಮಲಕರಷ್ಟು ಬ್ರಹ್ಮಸಾಕ್ಷಾತ್ಕಾರವಾಗಲೀ ಇರಲಿಲ್ಲ. ನಿಷ್ಟಾವಂತ ಸೇವಕನಂತೆ ಗುರುಗಳನ್ನು ವ್ಯಕ್ತಿಗತ ಶುಶ್ರೂಷೆಯಲ್ಲಿ ಆನಂದವನ್ನು ಕಾಣುತ್ತಿದ್ದರು. ಶ್ರೀ ಹಸ್ತಾಮಲಕಾಚಾರ್ಯರು, ಯಾವುದೊಂದು ಶಾಸ್ತ್ರವನ್ನೂ ಅಧ್ಯಯನ ಮಾಡದಿದ್ದರೂ ಶಂಕರರು ಅವರನ್ನು ಆತ್ಮಸಾಕ್ಷಾತ್ಕಾರ ಪಡೆದವರತರಹ ಉನ್ನತಮಟ್ಟದಲ್ಲಿ ಇರಿಸಿದ್ದರು. ಶ್ರೀ ಸುರೇಶ್ವರಾಚಾರ್ಯರು ದಕ್ಷಿಣ ಭಾರತದ ಶೃಂಗೇರಿ ಪೀಠದ ಅಧಿಪತಿಗಳಾಗಲು ಕಾರಣ ; ಅವರ ಅದ್ವಿತೀಯ ಪ್ರತಿಭಾಶಕ್ತಿ. ಶಿಷ್ಯರಾಗಿದ್ದಾಗ್ಯೂ ಗುರುಶಿಷ್ಯರ ಮಧ್ಯೆ ವಯಸ್ಸಿನ ಅಂತರ ವಿಪರೀತವಾಗಿತ್ತು. ಪೂರ್ವಾಶ್ರಮದಲ್ಲಿ ಮಂಡನಮಿಶ್ರರೆಂದು ಹೆಸರುವಾಸಿಯಾಗಿದ್ದ ಅವರು, ಪ್ರಖರವಾದ ಶಾಸ್ತ್ರಾರ್ಥದಲ್ಲಿ ಪರಾಜಿತರಾದಮೇಲೆ ಶಂಕರಭಗವತ್ಪಾದರ ಪಟ್ಟಶಿಷ್ಯರಾದರು. ಸರಳ, ಮತ್ತು ವಿದ್ವತ್ಪೂರ್ಣ ವ್ಯಕ್ತಿತ್ವವಿದ್ದರೂ ಆವರ ವಿನಯತೆಗೆ ಶಂಕರರು ಮಾರುಹೋಗಿದ್ದರು. ಸುರೇಶ್ವರಾಚಾರ್ಯರ ಉತ್ತರಾಧಿಕಾರಿಗಳಾಗಿ ಬಂದವರು, ನಿತ್ಯಬೋಧಘನರು, ತದನಂತರ, ಜ್ಞಾನಘನರು, ಜ್ಞಾನೋತ್ತಮರು, ಜ್ಞಾನಗಿರಿಗಳು, ಸಿಂಹಗಿರಿಗಳು, ಈಶ್ವರತೀರ್ಥರು, ನರಸಿಂಹತೀರ್ಥರು. ಶ್ರೀ ಸಚ್ಚಿದಾನಂದ ಭಾರತಿಗಳು ೨೭ ನೇ ಆಚಾರ್ಯರು. ಶ್ರೀ ಅಭಿನವ ಸಚ್ಚಿದಾನಂದ ಭಾರತಿಗಳು ೨೮ ನೆಯವರು. ಶ್ರೀ ನೃಸಿಂಹಭಾರತಿಗಳು ೨೯ನೆಯವರು. ೩೦ ನೆಯವರಾಗಿ, ಸಚ್ಚಿದಾನಂದಭಾರತಿಗಳು. ಶ್ರೀ ಅಭಿನವವ ಸಚ್ಚಿದಾನಂದ ಭಾರತೀ ಸ್ವಾಮಿಗಳು ೩೧ ನೆಯವರಾಗಿ ನೇಮಿಸಲ್ಪಟ್ಟರು. ೩೨ ನೆಯಾರಾಗಿ ಶ್ರೀ ನೃಸಿಂಹಭಾರತಿಗಳು ಸುಮಾರು ೧೯ ನೆಯ ಶತಮಾನದ ಬಹುಭಾಗ ಪೀಠಾಧಿಪತಿಗಳಾಗಿದ್ದರು. ಶ್ರೀ ಸಚ್ಚಿದನಂದ ಶಿವಾಭಿನವ ನೃಸಿಂಹಭಾರತಿಗಳು ೩೩ ನೆಯ ಪೀಠಾಧಿಪತಿಗಳಾಗಿ ನೇಮಿಸಲ್ಪಟ್ಟರು.

ಶ್ರೀ ಚಂದ್ರಶೇಖರಭಾರತಿ ಮಹಾಸ್ವಾಮಿಗಳು [೧೯೧೨-೧೯೫೪] ಜೀವನ್ಮುಕ್ತರ ಪರಂಪರೆಗೆ ಸೇರಿದವರು. ಇವರು ೩೪ ನೇ ಜಗದ್ಗುರುಗಳು. ೧೯೩೧ ರಲ್ಲಿ ಮೇ ತಿಂಗಳ ೨೨ ರಂದು ಶ್ರೀ ಅಭಿನವ ವಿದ್ಯಾತೀರ್ಥರಿಗೆ ೩೫ ನೆಯ ಜಗದ್ಗುರುಪದವಿಯನ್ನು ದಯಪಾಲಿಸಿ, ಯೋಗಪಟ್ಟವನ್ನಿತ್ತರು. ೩೬ ನೆಯ ವರೇ, ಈಗಿನ, ಶ್ರೀ ಶ್ರೀ ಭಾರತಿ ತೀರ್ಥರು. ಇವರು ಶ್ರೇಷ್ಟಮಟ್ಟದ ಪರಮಹಂಸಪದವಿಯ ಸಂನ್ಯಾಸಿಗಳು. ವೇದಾಂತ ಮತ್ತು ಇತರ ಶಾಸ್ತ್ರಗಳಲ್ಲಿ ಪ್ರಕಾಂಡ ಪಂಡಿತರು. ಮೇಲಾಗಿ ಅತ್ಯಂತ ಉದಾರಿಗಳು. ಇಂತಹ ಶೃಂಗೇರಿ ತೀರ್ಥಸ್ಥಳವು, ದಕ್ಷಿಣಮ್ನಾಯ ಶ್ರೀ ಶಾರದಾಪೀಠದಂತೆ ಹನ್ನೆರಡು ಶತಮಾನಗಳಷ್ಟು ದೀರ್ಘಾವಧಿಯವರೆಗೆ ಅವಿಚ್ಛಿನ್ನವೂ, ಹಾಗೂ ನಿತ್ಯವರ್ಧಿಷ್ಣುವೂ ಆದ ಹಿರಿಮೆಯ ಭಾವಗಳನ್ನು ಪಡೆದ ಸಂಸ್ಥೆ ಮತ್ತೊಂದಿಲ್ಲ. ಇಲ್ಲಿಯೇ ಆದಿಶಂಕರರು ಶ್ರೀ ಚಕ್ರದಮೇಲೆ ಶ್ರೀ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದರು. ಶಿಷ್ಯರಿಗೆ ಭಾಷ್ಯಪಾಠಗಳನ್ನು ಹೇಳುತ್ತಾ, ತಮ್ಮ ಜೀವಿತದ ಹನ್ನೆರಡು ಅವಿಸ್ಮರಣೀಯ ವರ್ಷಗಳನ್ನು ಕಳೆದರು. ಶ್ರೀ ಸುರೇಶ್ವರಾಚಾರ್ಯರು, ಶ್ರೀ ಆದಿಶಂಕರರ ಉತ್ತರಾಧಿಕಾರಿಗಳಾಗಿ ಅವರ ಕಾರ್ಯವನ್ನು ಮುಂದುವರೆಸಿಕೊಂಡುಹೋಗುವ ಜವಾಬ್ದಾರಿಯನ್ನು ಹೊತ್ತು, ಪೀಠವನ್ನು ಅಲಂಕರಿಸಿದರು. ಉತ್ತರೋತ್ತರ ಉತ್ತರ ಅಧಿಕಾರಿಗಳಾದ, ಶ್ರೀ ವಿದ್ಯಾತೀರ್ಥರು, ಮತ್ತು ಶ್ರೀ ವಿದ್ಯಾರಣ್ಯರೇ ಮೊದಲಾದ ವರ್ಚಸ್ವೀ ಪೀಠಾಧಿಪತಿಗಳು ಸಂಸ್ಥೆಗೆ ಕೀರ್ತಿ ಗೌರವಗಳನ್ನು ತಂದುಕೊಟ್ಟರು.

ಮುಂದಿನ ಜಗದ್ಗುರುಗಳಾದ ಶ್ರೀ ಸಚ್ಚಿದಾನಂದಭಾರತಿ, ಶ್ರೀ ಸಚ್ಚಿದಾನಂದಶಿವಾಭಿನವ ನರಸಿಂಹಭಾರತೀ, ಶ್ರೀ ಚಂದ್ರಶೇಖರಭಾರತೀ, ಮತ್ತು ಶ್ರೀ ಅಭಿನವವಿದ್ಯಾತೀರ್ಥರೇ ಮೊದಲಾದ ಯತಿವರ್ಯರು ತಮ್ಮ ಛಾಪನ್ನು ಮೂಡಿಸಿ ಶ್ರೀಪರಂಪರೆಯನ್ನು ಬೆಳಗಿದರು. ಈ ಅವಿಚ್ಛಿನ್ನ ಪರಂಪರೆಯ ಜಾಡಿನಲ್ಲಿ ೩೬ ನೇ ಪೀಠಾಧಿಪತಿಗಳಾಗಿ ಶ್ರೀ ಶ್ರೀ ಭಾರತೀ ಸ್ವಾಮಿಗಳು ಸಜೀವಪ್ರತೀಕವಾಗಿ ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ಮಾರ್ಗದರ್ಶನಮಾಡುತ್ತಿದ್ದಾರೆ.

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

೧. ಶ್ರೀ ಶಂಕರ ಭಗವತ್ಪಾದರು- ಇಸವಿ ೮೨೦ [ವಿದೇಹ ಮುಕ್ತಿ]

೨. ಶ್ರೀ ಸುರೇಶ್ವರಾಚಾರ್ಯರು- ೮೨೦-೮೩೪

೩. ಶ್ರೀ ನಿತ್ಯಬೋಧಘನರು- ೮೩೪-೮೪೮

೪. ಶ್ರೀ ಜ್ಞಾನಘನರು- ೮೪೮-೯೧೦

೫. ಶ್ರೀ ಜ್ಞಾನೋತ್ತಮರು - ೯೧೦-೯೫೪

೬. ಶ್ರೀ ಜ್ಞಾನಗಿರಿಗಳು - ೯೫೪-೧೦೩೮

೭. ಶ್ರೀ ಸಿಂಹಗಿರಿಗಳು - ೧೦೩೮-೧೦೯೮

೮. ಶ್ರೀ ಈಶ್ವರ ತೀರ್ಥರು - ೧೦೯೮-೧೧೪೬

೯. ಶ್ರೀ ನೃಸಿಂಹತೀರ್ಥರು - ೧೧೪೬-೧೨೨೯

೧೦. ಶ್ರೀ ವಿದ್ಯಾತೀರ್ಥರು - ೧೨೨೯-೧೩೩೩

೧೧. ಶ್ರೀ ಭಾರತಿ ತೀರ್ಥರು- ೧೩೩೩-೧೩೮೦

೧೨. ಶ್ರೀ ವಿದ್ಯಾರಣ್ಯರು - ೧೩೮೦-೧೩೮೬

೧೩. ಶ್ರೀ ಚಂದ್ರಶೇಖರಭಾರತಿಗಳು -೧, ೧೩೮೬-೧೩೮೯

೧೪. ಶ್ರೀ ನೃಸಿಂಹ ಭಾರತಿಗಳು -೧ - ೧೩೮೯-೧೪೦೮

೧೫. ಶ್ರೀ ಪುರುಷೋತ್ತಮಭಾರತಿಗಳು-೧ ೧೪೦೮-೧೪೪೮

೧೬. ಶ್ರೀ ಶಂಕರಭಾರತಿಗಳು ೧೪೪೮-೧೪೫೫

೧೭. ಶ್ರೀ ಚಂದ್ರಶೇಖರ ಭಾರತಿಗಳು-೨ ೧೪೫೫-೧೪೬೪

೧೮. ಶ್ರೀ ನೃಸಿಂಹಭಾರತಿಗಳು-೨ ೧೪೬೪-೧೪೭೯

೧೯. ಶ್ರೀ ಪುರುಶೋತ್ತಮಭಾರತಿಗಳು-೨ ೧೪೭೯-೧೫೧೭

೨೦. ಶ್ರೀ ರಾಮಚಂದ್ರ ಭಾರತಿಗಳು ೧೫೧೭-೧೫೬೦

೨೧. ಶ್ರೀ ನೃಸಿಂಹ ಭಾರತಿಗಳು -೩ ೧೫೬೦-೧೫೭೩

೨೨. ಶ್ರೀ ನೃಸಿಂಹ ಭಾರತಿಗಳು ೪ ೧೫೭೩-೧೫೭೬

೨೩. ಶ್ರೀ ನೃಸಿಂಹ ಭಾರತಿಗಳು -೫ ೧೫೭೬-೧೬೦೦

೨೪. ಶ್ರೀ ಅಭಿನವ ನೃಸಿಂಹ ಭಾರತಿಗಳು ೧೬೦೦-೧೬೨೩

೨೫. ಶ್ರೀ ಸಚ್ಚಿದಾನಂದಭಾರತಿಗಳು ೧ ೧೬೨೩-೧೬೬೩

೨೬. ಶ್ರೀ ನೃಸಿಂಹ ಭಾರತಿಗಳು -೬ ೧೬೬೩-೧೭೦೬

೨೭. ಶ್ರೀ ಸಚ್ಚಿದಾನಂದಭಾರತಿಗಳು -೨ ೧೭೦೬-೧೭೪೧

೨೮. ಶ್ರೀ ಅಭಿನವ ಸಚ್ಚಿದಾನಂದ ಭಾರತಿಗಳು-೧ ೧೭೪೧-೧೭೬೭

೨೯. ಶ್ರೀ ನೃಸಿಂಹ ಭಾರತಿಗಳು-೭ ೧೭೬೭-೧೭೭೦

೩೦. ಶ್ರೀ ಸಚ್ಚಿದಾನಂದಭಾರತಿಗಳು-೩ ೧೭೭೦-೧೮೧೪

೩೧. ಶ್ರೀ ಅಭಿನವಸಚ್ಚಿದನಂದ ಭಾರತಿಗಳು -೨ ೧೮೧೪-೧೮೧೭

೩೨. ಶ್ರೀ ನೃಸಿಂಹಭಾರತಿಗಳು ೮ ೧೮೧೭-೧೮೭೯

೩೩. ಶ್ರೀ ಸಚ್ಚಿದಾನಂದ ಶಿವಾಭಿನವನೃಸಿಂಹಭಾರತಿಗಳು -೧೮೭೯-೧೯೧೨

೩೪. ಶ್ರೀ ಚಂದ್ರಶೇಖರಭಾರತಿಗಳು-೩ ೧೯೧೨-೧೯೫೪

೩೫. ಶ್ರೀ ಅಭಿನವ ವಿದ್ಯಾತೀರ್ಥರು ೧೯೫೪-೧೯೮೯

೩೬. ಶ್ರೀ ಭಾರತಿ ತೀರ್ಥರು - - -೧೯೮೯

~.~
  • Login or register to post comments
  • 376 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 15, 2007 - 9:29pm — venkatesh

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

venkatesh's picture

ಮೇಲಿನ ಕೃತಿಯನ್ನು " ಶೃಂಗೇರಿಯ ಹಿರಿಮೆ "- ಪುಸ್ತಕದಿಂದ ಉದ್ಧರಿಸಲಾಗಿದೆ.

ಕೃತಿಗೌರವ :

" ಶೃಂಗೇರಿಯ ಹಿರಿಮೆ "- ಶೃಂಗೇರಿ ಶ್ರೀ ಹಾರದ ಪೀಠದ ಪ್ರಕಟಣೆ. ಕನ್ನಡ ಅನುವಾದ : ಡಾ. ಬಿ. ಎಸ್. ರಾಮಕೃಷ್ಣರಾವ್, ಸಂಪಾದಕರು, ಶಂಕರಕೃಪಾ. ದಕ್ಷಿನಾಮ್ನಾಯ ಶ್ರೀ ಶಾರದಾಪೀಠದ ಪ್ರಕಾಶನ, ಶೃಂಗೇರಿ, ಕರ್ನಾಟಕ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 15, 2007 - 9:41pm — savithru

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

savithru's picture

> " ಶ್ರೀ ಚಂದ್ರಶೇಖರಭಾರತಿ ಮಹಾಸ್ವಾಮಿಗಳು [೧೯೧೨-೧೯೫೪] ಜೀವನ್ಮುಕ್ತರ ಪರಂಪರೆಗೆ ಸೇರಿದವರು. "

ದಯವಿಟ್ಟು ಇದೇನು ಜೀವನ್ಮುಕ್ತರ ಪರಂಪರ ಅಂದ್ರೆ ಅಂತ ಬಲ್ಲವರಿ ತಿಳಿಸುತ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 15, 2007 - 11:26pm — muralihr

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

muralihr's picture

ತು೦ಬಾ ಒಳ್ಳೆ ಪ್ರಶ್ನೆ !

ಆ ಪ್ರಸ್ನೆಗೆ ಉತ್ತರ ಬೇಕಾದರೆ.. ಮುಕ್ತಿ ಅ೦ದರೆ ಏನು ?ಬ೦ಧನ ಅ೦ದರೇನು ??
ಅ೦ತಾ ತಿಳಿ ಬೇಕು. ಇದನ್ನು ತಿಳಿದು ಜೀವನ್ಮುಕ್ತಿಯ ಚಿ೦ತೆ ಮಾಡುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2007 - 4:34am — venkatesh

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

venkatesh's picture

ಸವಿಥ್ರು, ರವರಿಗೆ,

ನಾನು ವಯಸ್ಸಾದವನು. ಆದರೆ ಪಂಡಿತನಲ್ಲ. ನನಗೆ ಇದುವರೆಗೆ ತಿಳಿದಂತೆ, ಮುಕ್ತಿಯೆಂದರೆ, ಈ ಜಗತ್ತಿನ ಸಾಂಸಾರಿಕ, ಮಾಯೆ, ಅಥವಾ ವಾಸನೆಯಿಂದ ಹೊರಗೆ ಬರುವುದು. ಮತ್ತು ಜೀವಾತ್ಮ, ಪರಮಾತ್ಮಗಳು ವಿಲಿನವಾಗುವುದು ಎಂದರ್ಥ. ನಾವು ಮರಣದನಂತರ ಜೀವಕ್ಕೆ ಮುಕ್ತಿಸಿಗಲಿ ದೇವರೆ, ಎಂದು ಬೇಡುತ್ತೇವೆ. ಅಂದರೆ ಮುಂದೆ ಜನ್ಮಬೇಡ. ಅನ್ನುವ ಅರ್ಥದಲ್ಲಿ. ಶ್ರೀ ಶ್ರೀ ಶಂಕರರ ವಾಕ್ಯಗಳಲ್ಲಿ " ಪುನರಪಿ ಜನನಂ ಪುನರಪಿ ಮರಣಂ ಪುರರಪಿ ಜನನೀ ಜಠರೇ ಶಯನಂ, " ಎಂದು ಸುಂದರವಾಗಿ ವಿವರಣೆ ನೀಡಿದ್ದಾರೆ. ಅಂದರೆ, ನಮ್ಮ ಭಾರತೀಯ ವೇದಾಂತದಲ್ಲಿ ನಾವು ಪುನರ್ಜನ್ಮಕ್ಕೆ ಒತ್ತು ನೀಡುತ್ತಾ ಬಂದಿದ್ದೇವೆ. ಇದೊಂದು ಭಾರತೀಯ ಸಂಸ್ಕ್ರುತಿಯ ವಿಚಾರಧಾರೆ, ಅಷ್ಟೆ. ಹೀಗೆಯೇ ಹಲವು ಮತಗಳಲ್ಲಿ, ಸಂಸ್ಕೃತಿಗಳಲ್ಲಿ, ಇನ್ನೂ ಕೆಲವು ನಂಬಿಕೆಗಳಿವೆ. ಅದು ತಪ್ಪೋ ನಿಜವೋ, ಯಾರಿಗೂ ನೈಜ-ಸತ್ಯದ ಅರಿವಾಗಿಲ್ಲ. ಏಕೆಂದರೆ, ಸತ್ತವರು ಯಾರೂ ಕನಸಿನಲ್ಲಿ ಹೊರತು, ಬಂದು ಸತ್ಯದರ್ಶನ ತಿಳಿಸಿಲ್ಲ ಅಲ್ಲವೇ ?

ಇಲ್ಲಿ, ಹಲವು ಮಹಾಮಹಿಮರಂತೆ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರು, ಮತ್ತು ಮೇಲೆ ತಿಳಿಸಿದ ಸ್ವಲ್ಪ ಜನ ಮಹಾತ್ಮರು, ತಮಗೆ ಇಷ್ಟಬಂದಾಗ ಮರಣವನ್ನು ಆಲಂಗಿಸುವ ವಿಶೇಷ ಶಕ್ತಿಯನ್ನು ಹೊಂದಿದ್ದರು.

ತಮ್ಮ ಜೀವಿತದ ಕಾಲದಲ್ಲಿ ಮರಣವನ್ನು ಆಹ್ವಾನಿಸಿದ್ದರಿಂದ ಅವರನ್ನು ಜೀವನ್ಮುತರೆಂದು ಕರೆದಿದ್ದಾರೆ. ಆ ಯತಿಗಳು ತಮ್ಮ ತಪಸ್ಸಿನಿಂದ ಪ್ರಪಂಚದ ವಿಶಯಾಸಕ್ತಿಯಿಂದ ದೂರ ಉಳಿದಿದ್ದರು. ಮುಕ್ತಿಯಂತೂ ಅವರಿಗೆ ಹೇಳಿಮಾಡಿಸಿಟ್ಟದ್ದು. ಆದರೆ ಇದು ಮರಣಕ್ಕೆ ಪೂರ್ವಭಾಗಿಯಾಗಿ ಬಂದದ್ದರಿಂದ ಜೀವನ್ಮುಕ್ತಿ ಯೆನ್ನುವ ಪದದ ಪ್ರಯೋಗ ! ಇದರ ಬಗ್ಗೆ, ಶ್ರೀ ಪಾವಗಡ ಪ್ರಕಾಶರಾವ್ ಅವರನ್ನು ಕೇಳಿ ವಿಶೇಷ ಮಾಹಿತಿ ಪಡೆಯಬಹುದಲ್ಲೆವೇ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2007 - 5:41pm — savithru

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

savithru's picture

ಮಾಹಿತಿಗೆ ವಂದನೆಗಳು.

>ಇದರ ಬಗ್ಗೆ, ಶ್ರೀ ಪಾವಗಡ ಪ್ರಕಾಶರಾವ್ ಅವರನ್ನು ಕೇಳಿ ವಿಶೇಷ ಮಾಹಿತಿ ಪಡೆಯಬಹುದಲ್ಲೆವೇ !

ನಿಜ.. ಅವರು ತುಂಬಾ ದೊಡ್ಡ ಜ್ಞಾನಿಗಳು. ಕೆಲವೊಮ್ಮೆ ಅವರ "ಸತ್ಯ ದರ್ಶನ" ಕಾರ್ಯ ಕ್ರಮವನ್ನು ಚಂದನದಲ್ಲಿ ನೋಡಿದ್ದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2007 - 7:44pm — muralihr

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

muralihr's picture

ಸವಿತ್ರು ,
ಜ್ಞಾನಿಗಳಲ್ಲಿ ದೊಡ್ಡವರು ಸಣ್ಣವರು ಇರೋದಿಲ್ಲಾ. ಈ ದ್ವ೦ದ್ವ ಎಲ್ಲಾ ಅಜ್ಞಾನದಲ್ಲಿ .ಜ್ಞಾನಿ ಅ೦ದ ಕೂಡಲೇ ಗುಣವನ್ನು ಮೀರಿದವನು, ಜೀವನ್ಮುಕ್ತ ಅ೦ದರೆ ಗುಣಗಳ ಚೇಷ್ಟೆಯಿ೦ದ ಮುಕ್ತನಾದವನು ಅ೦ತಾ ಅರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2007 - 8:06pm — savithru

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

savithru's picture

ನಾನು ಹೇಳಿದ ವಾಕ್ಯದ ಅರ್ಥ ಅವರು ತುಂಬಾ ಓದಿಕೊಂಡಿದ್ದಾರೆ ಎಂದು.

ಅರಿವುಂಟಾದ ( ಜ್ಞಾನೋದಾಯವಾದ ) ಮೇಲಿನ ಸ್ತಿತಿಯನ್ನು ನೀವು ಹೇಳಿದಿರಿ. ಅದು ಸರಿ. ಅಂದ ಹಾಗೆ ನಾನು "ಜ್ಞಾನೋದಯ" ಎಂಬ ಸ್ತಿತಿಯನ್ನೇ ಅನುಮಾನದಿನ್ದ ನೋಡುತ್ತೇನೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2007 - 11:12am — chitra

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

chitra's picture

ಕೆಲವು ಸ್ವಾಮಿಗಳ ಹೆಸರಿನ ಕೊನೆಗೆ ಭಾರತಿ ಎಂದು ಇರುವುದರ ಕಾರಣವೇನು? ಭಾರತಿ ಎಂಬುದು ಹೆಣ್ಣಿನ ಹೆಸರಲ್ಲವೇ? ಮಂಡನಮಿಶ್ರರ ಪತ್ನಿ ಭಾರತಿಯವರಿಗೂ, ಇದಕ್ಕೂ ಏನಾದರೂ ಸಂಬಂಧವಿದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2007 - 6:47pm — savithru

ಉ: ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

savithru's picture

ಈ ಲೇಖನ ದಿಂದ ಏನಾದ್ರೂ ಮಾಹಿತಿ ಸಿಗುತ್ತಾ ಯೋಚಿಸಿ!

http://sampada.net/blog/savithru/16/09/2007/5706

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :
  • ಶೃಂಗೇರಿ ಶ್ರೀ ಶಾರದಮ್ಮನವರ ದೇವಸ್ಥಾನ.
  • ಶ್ರೀ
  • ಶ್ರೀ ರಾಮ ನವಮಿ ದಿನಾಚರಣೆ
  • ಶೃಂಗೇರಿ ಸಂಸ್ಥಾನದ ಅಧಿದೇವತೆ, ಶ್ರೀ. ಶ್ರೀ. ಶಾರದಾಂಬ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 82 ಅತಿಥಿಗಳು ಆನ್ಲೈನ್ ಇರುವರು.


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator