23
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು

November 1, 2005 - 11:58pm
hpn
To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 

K P Purnachandra Tejasvi

ನಮ್ಮೆಲ್ಲರನ್ನು ಕನ್ನಡ ಪುಸ್ತಕಗಳನ್ನೋದುವಂತೆ ಮಾಡಿದ ತೇಜಸ್ವಿ ಇನ್ನಿಲ್ಲ. ಇವರ ನೆನಪಿನಲ್ಲಿ ಇವರೊಂದಿಗೆ ನಾವು ನಡೆಸಿದ ಸಂದರ್ಶನದ podcast, ಅದರಲ್ಲಿನ ಅವರ ಮಾತುಗಳನ್ನು ಸ್ಮರಣ ಸಂಚಿಕೆಯಾಗಿ ಮತ್ತೆ ಸದಸ್ಯರ ಮುಂದಿಡುತ್ತಿದ್ದೇವೆ. ಈ ಸಂದರ್ಶನ ನಡೆಸಿದ್ದು ೨೦೦೫ರಲ್ಲಿ. ತೇಜಸ್ವಿಯವರೊಂದಿಗಿನ ಸಂದರ್ಶನ ಸಂಪದದ ಮೊದಲ podcast ಕೂಡ ಆಗಿತ್ತು.

ನಮಸ್ಕಾರ. ಸಂಪದದ ಸದಸ್ಯರೆಲ್ಲರಿಗೂ ದೀಪಾವಳಿ ಹಾಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಂಪದದಲ್ಲಿ podcasting ಪ್ರಾರಂಭ ಮಾಡಬೇಕೆಂದು ನಮ್ಮಲ್ಲಿ ಹಲವರು ಬಯಸಿದ್ದೆವು. ಕೊನೆಗೊಮ್ಮೆ ಸಮಯ ಕೂಡಿ ಬಂದಿದೆ. ಈ ಮೊದಲ 'ಕಡಿಮೆ ಆಡಂಬರದ' ಸಂಚಿಕೆಯಲ್ಲಿ ನಮ್ಮೆಲ್ಲರಿಗೂ ಚಿರಪರಿಚಿತರಾದ ಸಾಹಿತಿ ಮತ್ತು ಚಿಂತಕ, ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಸಂದರ್ಶನವನ್ನು ನಿಮ್ಮ ಮುಂದಿಡಲು ಸಾಧ್ಯವಾಗಿರುವುದು ಸಂತಸದ ವಿಷಯ. >ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (14 MB)

ಧ್ವನಿ ಮುದ್ರಣದ ಕೃಪೆ ಪವನಜರವರಿಗೆ ಬಂದ ಎಮ್ ವಿ ಪಿ ಗಿಫ್ಟು - ಕ್ರಿಯೇಟಿವ್ ಮುವೋ ಎಮ್ ಪಿ ಥ್ರಿ ಪ್ರೇಯರಿನದ್ದು. ಮೊದಲನೆಯ ಪ್ರಯೋಗವಾದ್ದರಿಂದ ಧ್ವನಿ ಮುದ್ರಣ ಒಂದಷ್ಟು ಹೆಚ್ಚು ಕಡಿಮೆಯಾಗಿದೆ. ಸ್ವಲ್ಪ ನಾಯ್ಸ್ ಇರುವುದರಿಂದ ಜೋಪಾನವಾಗಿ ಸೌಂಡ್ ಇಟ್ಟುಕೊಂಡು ಕೇಳಿ. ಈ ಪಾಡ್ಕ್ಯಾಸ್ಟಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸಂಪದ ಡಾಟ್ ನೆಟ್ಟಿನಲ್ಲಿ ಇದಕ್ಕಾಗಿ ತೆರೆದಿರುವ ಈ ಥ್ರೆಡ್ ನಲ್ಲಿ ಮರೆಯದೆ ದಾಖಲಿಸಿ. ವಂದನೆಗಳೊಂದಿಗೆ, ಹರಿ ಪ್ರಸಾದ್ ನಾಡಿಗ್. ಪೂರ್ಣಚಂದ್ರ ತೇಜಸ್ವಿಯವರ ಮನೆಗೆ ಭೇಟಿ ನೀಡಿದ ದಿನದಂದು ತೆಗೆದ ಕೆಲವು ಫೋಟೋಗಳು: ಇಸ್ಮಾಯಿಲ್, ಪವನಜ, ತೇಜಸ್ವಿ. ಇಸ್ಮಾಯಿಲ್, ಪವನಜ, ತೇಜಸ್ವಿ. ತೇಜಸ್ವಿಯವರ ಮನೆಯ ಅಂಗಳದ ತಾವರೆ ತೇಜಸ್ವಿಯವರ ಮನೆಯ ಅಂಗಳದ ತಾವರೆ ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ [:mailto:hpnadigATgmail.com|ಇ-ಮೇಯ್ಲ್ ಮೂಲಕ ಕಳುಹಿಸಿ].

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Submitted by tvsrinivas41 on

ಧ್ವನಿಸುರುಳಿ ಚೆನ್ನಾಗಿ ಮೂಡಿ ಬಂದಿದೆ. ಪ್ರಶ್ನೆಗಳನ್ನೆಲ್ಲಾ ಮೊದಲೇ ತಯಾರು ಮಾಡಿಕೊಂಡು ಹೋಗಿದ್ದಿರಾ? ಚಿತ್ರಗಳಂತೂ ತುಂಬಾ ಚೆನ್ನಾಗಿದೆ (ನಾನು ಈ ಮೊದಲೇ ನೋಡಿದ್ದೆ). ಇದನ್ನೆಲ್ಲಾ ಒಟ್ಟು ಮಾಡುವುದು ಬಲು ಕಷ್ಟ. ಬಹಳ ತಾಳ್ಮೆಯಿಂದ ಕೆಲಸ ಮಾಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು.

ಮುಂದಿನ ಸಂದರ್ಶನ ಯಾರದ್ದು?

ವಂದನೆಗಳೊಂದಿಗೆ
---
ತವಿಶ್ರೀನಿವಾಸ

Submitted by hpn on

> ಪ್ರಶ್ನೆಗಳನ್ನೆಲ್ಲಾ ಮೊದಲೇ ತಯಾರು ಮಾಡಿಕೊಂಡು ಹೋಗಿದ್ದಿರಾ?

ಇಲ್ಲ. ಮಾನ್ಯ ಇಸ್ಮಾಯಿಲ್ ಮತ್ತು ಪವನಜರವರನ್ನು ಅಲ್ಲಿಗೆ ಎಳ್ಕೊಂಡ್ ಹೋಗೋದೇ ತಿಂಗಳಾರುಗಟ್ಟಲೆ ನಡೆದ ಪ್ರಾಜೆಕ್ಟು. ಒಬ್ಬರಿಗೆ ಬಿಡುವಿದ್ದರೆ ಇನ್ನೊಬ್ಬರಿಗೆ ಬಿಡುವಿರಲಿಲ್ಲ. ಕೊನೆಗೊಮ್ಮೆ ಎಲ್ಲರೂ‌ ಬಿಡುವು *ಮಾಡಿಕೊಂಡು* ಅಲ್ಲಿಗೆ ಹೋದದ್ದು. ಆದ್ದರಿಂದ ಸಿದ್ಧತೆಯೇನೂ‌ ಮಾಡಿಕೊಂಡು ಹೋಗಿರಲಿಲ್ಲ.

>ಇದನ್ನೆಲ್ಲಾ ಒಟ್ಟು ಮಾಡುವುದು ಬಲು ಕಷ್ಟ. ಬಹಳ ತಾಳ್ಮೆಯಿಂದ ಕೆಲಸ ಮಾಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು.

ಬರಿಯ ಸಂದರ್ಶನಕ್ಕೆಂದು ಹೋಗಿರಲಿಲ್ಲ. ಬೇರೆ ಹಲವು ಉದ್ದೇಶಗಳಿದ್ದವು. ಆದರೆ ಎಲ್ಲವೂ ಕೈಗೂಡಲಿಲ್ಲ, ಅಷ್ಟೆ. :)

> ಮುಂದಿನ ಸಂದರ್ಶನ ಯಾರದ್ದು?

ಗೊತ್ತಿಲ್ಲ. :)

ಬಹುಶಃ ಜಿ ಎಸ್ ಎಸ್ ಅಥವಾ ಅನಂತಮೂರ್ತಿಯವರ ಸಂದರ್ಶನ ಪಡೆಯಲು ಸಾಧ್ಯವಾಗಬಹುದು. ನೋಡೋಣ ;)

--

"ಹೊಸ ಚಿಗುರು, ಹಳೆ ಬೇರು"

Submitted by hpn on

ಪಾಡ್‌ಕ್ಯಾಸ್ಟಿಂಗ್ ನ ಹೊಸ ಸಂಚಿಕೆ ರೆಡಿಯಾಗಿದೆ. ಈ ಬಾರಿ [kn:ಚಂದ್ರಶೇಖರ ಕಂಬಾರರ] ಸಂದರ್ಶನ :)

ಬರುವ ಸೋಮವಾರ 'ಸಂಪದ'ದ ಸದಸ್ಯರಿಗೆ ಮಾತ್ರ exclusive ಆಗಿ ದೊರೆಯಲಿದೆ. ನಿರೀಕ್ಷಿಸಿ ;)

--
[:Check my Blog|http://hpnadig.net/blog]
[:Kannada wikipedia|http://kn.wikipedia.org]

"ಹೊಸ ಚಿಗುರು, ಹಳೆ ಬೇರು"

Submitted by Rohit on

ಈವತ್ತಷ್ಟೇ ಕೇಳ್ದೆ...ತುಂಬ ಚೆನ್ನಾಗಿ ಬಂದಿದೆ, ಮೊದಲನೇ ಸಂದರ್ಶನದಲ್ಲಿ ಕಂಡುಬಂದಿರುವ ಕೆಲವು ತಾಂತ್ರಿಕ ತೊಂದರೆಗಳನ್ನು ಇಲ್ಲಿ ನಿವಾರಿಸಿರುವುದು... ಆಡಿಯೋ ಕ್ವಾಲಿಟಿ ಈಸ್ ಟೂ ಗುಡ್!!!

ಹರಿ ಮತ್ತು ತಂಡಕ್ಕೆ ನನ್ನ ಅಭಿನಂದನೆಗಳು.

Submitted by hpn on

ಹೆಚ್ ಪಿ ಮತ್ತು ಇಸ್ಮಾಯಿಲ್ ಪರವಾಗಿ ನಿಮ್ಮ ಅಭಿನಂದನೆಗೆ ಧನ್ಯವಾದಗಳು. :)

ಸಂದರ್ಶನ ಚೆನ್ನಾಗಿ ಮೂಡಿಬಂದಿದ್ದರ ಹಿಂದೆ ಇಸ್ಮಾಯಿಲ್ ರವರದ್ದು ಬಹಳ ಮಹತ್ವದ ಪಾತ್ರ. ಇವರು ಬಹಳ ಚೆನ್ನಾಗಿ ಸಂದರ್ಶನ ಮಾಡ್ತಾರೆ. ಬಹಳ ಒಳ್ಳೆಯ ಪ್ರಶ್ನೆಗಳನ್ನ ಕೇಳ್ತಾರೆ... ಒಳ್ಳೆಯ ಧ್ವನಿವುಳ್ಳವರು, ಕೂಡ. ನಾನು ಬರೆ ಲ್ಯಾಪ್ ಟಾಪ್ ಹಿಡಿದು ಹೋದದ್ದು, ವಾಪಸ್ ಬಂದ ಮೇಲೆ ಧ್ವನಿ ಮುದ್ರಣದ ಎಡಿಟಿಂಗ್ ಮಾಡಿದ್ದು ;)

ಇಸ್ಮಾಯಿಲ್ ರವರಿಗೆ ಅನಂತಮೂರ್ತಿಯವರ ಹೊಗಳಿಕೆಯೂ ದೊರೆಯಿತು, ಗೊತ್ತೆ? ಮೊನ್ನೆ ಅನಂತಮೂರ್ತಿಯವರ ಮನೆಗೆ ಹೋದಾಗ "ಇದುವರೆಗೂ ಇಸ್ಮಾಯಿಲ್ ನಷ್ಟು ಚೆನ್ನಾಗಿ ನನ್ನನ್ನು ಸಂದರ್ಶನ ಮಾಡಿದವರು ಯಾರೂ ಇಲ್ಲ ನೋಡಿ" ಎಂದು ನಮ್ಮತ್ತ ತಿರುಗಿ ಹೇಳಿದರು. :)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

Submitted by msanjay75 on

ಇವತ್ತು ಕೇಳಿದೆ...

ಅವರ ಮಾತುಗಳು ಕೇಳಲು ತುಂಬಾ ಚೆನ್ನಾಗಿತ್ತು... ಧನ್ಯವಾದಗಳು...

+ ಅವರ ಮಾತುಗಳು ಮನಮುಟ್ಟಿದವು... ಎಷ್ಟು sincereಆಗಿದ್ದಾರೆ... political beaurocracy ಎಷ್ಟು hypocriticಆಗಿದೆ ಅಂತ ನನಗೆ ಅನ್ನಸ್ತು :-(

photoಗಳು ಚೆನ್ನಾಗಿದ್ದಾವೆ... ತೋಟದಲ್ಲಿ ತಾವರೆ ಹೂವಿನ ಗಿಡ ಇದೆ ಮೊಡಲನೆಯ ಸಲ ನೋದಿದ್ದೇನೆ... idea ಮತ್ತು ಗಿಡ - ಎರಡು ಸುಂದರವಾಗಿದ್ದಾವೆ!
---------------------------
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---------------------------
typing/spelling ತಪ್ಪಿದ್ದರೆ ದಯವಿಟ್ಟು ತಿದ್ದಿ...
...ಇಲ್ಲದಿದ್ದರೆ ನಾನು ಕಲಿಯುವುದು ಹೇಗೆ!
---------------------------

Submitted by ritershivaram on

ಒಂದು ಅಪರೂಪದ ಸಂದರ್ಶನ. ಫೋಟೋ ಚೆನ್ನಾಗಿ ಬಂದಿವೆ;

ಆಡಿಯೋ ಕೂಡ.

ತೇಜಸ್ವಿಯವರ ಅಗಲಿಕೆ ಕನ್ನಡಿಗರಿಗೆಲ್ಲ ಆಘಾತವೆ; ಉಳಿವುದು ಸ್ಮರಣೆಯೊಂದೇ...

-ರೈಟರ್ ಶಿವರಾಂ

Submitted by manojbagalwad on
ತೇಜಸ್ವಿ ನನ್ನ ನೆಚ್ಚಿನ ಲೇಖಕರು, ನಿಮ್ಮ ಬರಹ ಓದಿ ಖುಷಿಯಾಯಿತು.. ನಾನು ಅವರ ಬಹುತೇಕ ಎಲ್ಲ ಪುಸ್ತಕಗಳನ್ನು ಓದಿದ್ದೇನೆ. ಒಮ್ಮೆ ನಾನು ಬರೆದ ಪತ್ರಕ್ಕೆ ಅವರು ಉತ್ತರಿಸಿ ನನ್ನನ್ನು ಮೂಡಿಗೆರೆಗೆ ಬರಲು ಹೇಳಿದ್ದರು, ಆದರೆ ನನಗದು ಸಾಧ್ಯವಾಗಲೇ ಇಲ್ಲ.. ನಮಸ್ಕಾರಗಳು, ಮನೋಜ್ ಬಾಗಲವಾಡ..

Submitted by ganesh_nempe on
ತುಂಬಾ ಅಪರೂಪದ್ದು.. ತೇಜಸ್ವಿಯವರ ಕುರಿತು ಇನ್ನೂ ಯಾವುದಾದರೂ video ಸಂದರ್ಶನ ಇದ್ದರೆ ದಯವಿಟ್ಟು ಪೋಸ್ಟ್ ಮಾಡಿ. ಅವರ ಅಭಿಮಾನಿಗಳಾದ ನಮಗೆಲ್ಲ ತುಂಬಾ ಖುಷಿ ಆಗತ್ತೆ.. thanks a lot. ಅಂದಹಾಗೆ ಈ ಆಡಿಯೋವನ್ನು facebook ಅಲ್ಲಿ upload ಮಾಡಬಹುದ?. ಅವರ ಅನೇಕ ಅಭಿಮಾನಿಗಳು ಕೇಳಬಹುದು. ಹಾಗೆ ಸಂಪದದಂತಹ ಅತ್ಯುತ್ತಮ website ಕುರಿತು ಅನೇಕರಿಗೆ ತಿಳಿಯತ್ತೆ.

Submitted by uniquesupri on
ಅಂದಹಾಗೆ ಈ ಆಡಿಯೋವನ್ನು facebook ಅಲ್ಲಿ upload ಮಾಡಬಹುದ?
ಈ ಸಂದರ್ಶನವಲ್ಲದೆ ಸಂಪದದಲ್ಲಿರುವ ಎಲ್ಲಾ ಸಂದರ್ಶನಗಳ ಧ್ವನಿ ಮುದ್ರಣ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸಿನಡಿಯಲ್ಲಿ ಲಭ್ಯವಿವೆ. ಇವನ್ನು ನೀವು ಸಂಪದಕ್ಕೆ ಕ್ರೆಡಿಟ್ಸ್ ನೀಡುವ ಮೂಲಕ ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದು.

Submitted by MANJUSHREEMAHADEV on
ತೇಜಸ್ವಿಯವರು ನನ್ನ ಮೆಚ್ಚಿನ ಲೇಖಕ... ಅವರ ಬರೆವನಿಗೆ ನನಗೆ ಬಹಲ ಅಚ್ಛುಮೆಚ್ಛು.. ನಮಗೆ ಅನ್ತಹ ಅದ್ಬುತ ಪುಸ್ತಕಗಲನ್ನು ಕೊತ್ತ ತೇಜಸ್ವಿಯವರಿಗ ನನ್ನ ನಮನಗಲು.

ಟ್ವಿಟ್ಟರಿನಲ್ಲಿ ಸಂಪದ