ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಬಾಲ್ಯದ ಸೊಗಸು

October 3, 2007 - 3:16am — poornimas

ಬಾಲ್ಯದ ಸೊಗಸು
**********

ಹೋಗದೇಕೆ ನನ್ನ ಬದುಕು
ಮರಳಿ ಮತ್ತೆ ಬಾಲ್ಯಕೆ ?
ಹೊಳೆಯದೇಕೆ ಚುಕ್ಕಿ ಬೆಳಕು
ಮುಗ್ಧ ಮನದ ಲಾಸ್ಯಕೆ?

ಅರಳದೇಕೆ ಮೊಲ್ಲೆ ಮೊಗ್ಗು
ಜಡೆಗೆ ಮಾಲೆಯಾಗಲು?
ನುಡಿಯದೇಕೆ ತಾಯಿ ಕೊರಳು
ಜೋಜೋ ಲಾಲಿ ಹಾಡಲು?

ಉಲಿಯದೇಕೆ ಗೆಜ್ಜೆ ಪಲುಕು
ಊರಿ ನಡೆವ ಹೆಜ್ಜೆಗು?
ಒಲಿಯದೇಕೆ ಮಮತೆ ಮೆಲುಕು
ಹಠವ ಹಿಡಿದ ರಚ್ಚೆಗು?

ರುಚಿಸದೇಕೆ ತಿಂಡಿ ಹಲವು
ತಾಯಿ ಗುಟುಕ ಸೊಗಸಿಗೆ?
ಚಿಗುರದೇಕೆ ಮತ್ತೆ ಚೆಲುವು
ಸುಕ್ಕು ಬಿದ್ದ ಬದುಕಿಗೆ?

-೦-

  • ಕಾವ್ಯ ಮತ್ತು ಕವನ
~.~
  • Login or register to post comments
  • 450 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2007 - 3:22am — ವೈಭವ

ಉ: ಬಾಲ್ಯದ ಸೊಗಸು

ವೈಭವ's picture

ಸಕ್ಕತ್, ಚನ್ನಾಗಿದೆ
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2007 - 9:52am — hpn

ಉ: ಬಾಲ್ಯದ ಸೊಗಸು

hpn's picture

ಬಹಳ ಚೆಂದ ಬರೆದಿದ್ದೀರಿ. ಆದರೂ ನನಗೆ ಈ ಕವನ ಓದಿಕೊಂದು ಹೋಗುವಾಗ ಸ್ವಲ್ಪ ಹೆದರಿಕೆಯಾಯ್ತು. "ಹೋಗದೇಕೆ ನನ್ನ ಬದುಕು
ಮರಳಿ ಮತ್ತೆ ಬಾಲ್ಯಕೆ ?" - ಹಾಗೆ ಬಾಲ್ಯಕ್ಕೆ ಮರಳಿದರೆ ಮತ್ತೆ ಶಾಲೆಗೆ ಮತ್ತೆ ಹೋಗಬೇಕಾಗುತ್ತದಲ್ಲ ಎಂದು. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2007 - 10:41am — kpbolumbu

ಉ: ಬಾಲ್ಯದ ಸೊಗಸು

kpbolumbu's picture

ಇದೇ ಭಾವದಲ್ಲಿ ಹಿ೦ದಿಯಲ್ಲಿ ಸುಭದ್ರಾ ಕುಮಾರಿ ಚೌಹಾನ್ ಬರೆದಿರುವ ಕವಿತೆಯೊ೦ದು ಬಹಳ ಜನಪ್ರಿಯವಾಗಿದೆ. ನೀವು ಅದರಿ೦ದ ಸ್ಫೂರ್ತಿಗೊ೦ಡಿದ್ದೀರಾ? ಮಗುವನ್ನು ನೋಡುವ ತಾಯಿ ತನ್ನ ಬಾಲ್ಯದ ದಿನಗಳ ನೆನಪುಗಳನ್ನು ಮೆಲುಕುಹಾಕುವ೦ತಹುದು.

ಅದೇನೇ ಇದ್ದರೂ ಕನ್ನಡದ ಮೇಲೆ ನಿಮ್ಮ ಹಿಡಿತ ಚೆನ್ನಾಗಿದೆ. ಅರಳದೇಕೆ ಮೊಲ್ಲೆ ಮೊಗ್ಗು ಜಡೆಗೆ ಮಾಲೆಯಾಗಲು....ನನಗೆ ಹಿಡಿಸಿದ ಸಾಲು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2007 - 10:32am — mahesha

ಉ: ಬಾಲ್ಯದ ಸೊಗಸು

mahesha's picture

ಬೊಂಬಾಟ್ರೀ ಪೂರ್ಣಿಮಾರೆ!!

ಚಂದಾಗಯ್ತೆ... ಎಳೆತನದಲ್ಲಿ ಹೀಗೆಲ್ಲ ಇತ್ತಲ್ಲ, ಈಗ ಇಲ್ವಲ್ಲ ಅಂತ ಸಕ್ಕತ್ತಾಗಿ ಹೇಳೀರಿ..

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2007 - 9:06pm — poornimas

ಉ: ಬಾಲ್ಯದ ಸೊಗಸು

poornimas's picture

ಎಲ್ಲರಿಗೂ ಧನ್ಯವಾದಗಳು.

@hpn: ನನಗಂತೂ ಹೆದರಿಕೆಯಿಲ್ಲ. ನಾವು ಓದಿದ ನಮ್ಮೂರಿನ ಸರ್ಕಾರಿ ಶಾಲೆ ಅಷ್ಟು ಚೆನ್ನಾಗಿತ್ತು. ಬೆಲ್ಟ್, ಟೈ ಕಾಟವಿಲ್ಲ. ಬೆನ್ನ ಹಿಂದೆ ’ಮಹಾಭಾರ’ವಿಲ್ಲ. ಹೋಮ್ ವರ್ಕ್ ಹೆಚ್ಚಿಲ್ಲ. ತಂದೆ ತಾಯಿಗಳಿಂದ ಒತ್ತಡವಿಲ್ಲ. ನಾವು ಕೇವಲ ನಮ್ಮ ವಯಸ್ಸಿಗೆ ತಕ್ಕ ಮಕ್ಕಳಾಗಿದ್ದೆವು, ಅಷ್ಟೇ !

@kpbolumbu: ಇಲ್ಲ, ಮೇರಾ ನಯಾ ಬಚ್ ಪನ್ ಪ್ರೇರಣೆಯಲ್ಲ. ಈ ಪದ್ಯ ಶಾಲಾ ಪಥ್ಯದಲ್ಲಿತ್ತು ಅಲ್ಲವೇ? ನಿಮ್ಮ ಲಿಂಕ್ ಸಿಕ್ಕ ಮೇಲೆ ಮತ್ತೆ ಓದತೊಡಗಿದೆ. ಆದರೆ ಹಿಂದಿ ಓದಲು ಎಷ್ಟು ಕಷ್ಟ ಆಗ್ತಿದೆ Sad
ಎರಡು ಕವನಗಳಲ್ಲೂ ಒಂದೇ ಭಾವ. ನೆನಪಿಸಿದ್ದಕ್ಕೆ ಬಹಳ ವಂದನೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಗು - ನಗು
  • ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ
  • ಲಾಲಿ
  • ಒ೦ದು ನೆನಪು
  • ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....
Syndicate content

ಲೇಖಕರು

poornimas's picture

ಪೂರ್ಣ ಹೆಸರು
poornima

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 140 ಅತಿಥಿಗಳು ಆನ್ಲೈನ್ ಇರುವರು.


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator