ಪಾಪು ಮತ್ತು ಚಂದಮಾಮ
ಪಾಪು ಮತ್ತು ಚಂದಮಾಮ
**************
ಅಮ್ಮಾ ನಂಗೆ ತಿನ್ನಿಸ್ತೀಯಾ ನೀನು ಮಮ್ಮೂನಾ?
ತೋರಿಸ್ತೀಯಾ ಮೇಲೆ ನಗುವ ಚಂದಮಾಮನ್ನಾ?
ಚಂದಮಾಮ ಮಮ್ಮು ತಿನ್ನಲು ಹಠ ಮಾಡ್ತಾನಾ?
ಆಗ ಅವನಿಗೆ ತೋರಿಸುವುದು ಯಾವ ಮಾಮನ್ನಾ?
ಕಾಣಿಸಲ್ಲ ಯಾಕೆ ಅವನ ಕಣ್ಣು ಕಿವಿ ಕೈ ಕಾಲು?
ತುಳಿವನೇ ಅವನು ನನ್ನ ಹಾಗೆ ಪುಟ್ಟ ಸೈಕಲ್ಲು?
ಆಡಲಿಕ್ಕೆ ಬರುವನೇ ಅವನು ನನ್ನ ಸಂಗಡ?
ಬರೆಯಲೆ ಈಗಲೆ ಅವನಿಗೆ ಒಂದು ಪುಟ್ಟ ಕಾಗದ !
-೦-
(ಇದು ನನ್ನ ಮಕ್ಕಳ ಇಷ್ಟದ ಪದ್ಯ. ಸ್ವಲ್ಪ "ಬ್ರಹ್ಮ ನಿಂಗೆ ಜೋಡಿಸ್ತೀನಿ" ಧಾಟಿಯಲ್ಲಿ ಹಾಡ್ತಾರೆ
)

- Login or register to post comments
- 494 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಪಾಪು ಮತ್ತು ಚಂದಮಾಮ
ಯಪ್ಪಾ ಯಪ್ಪಾ ಯಪ್ಪಾ, ಏನ್ರೀ ಇದು. ಸೂಪರ್ರೋ ಸೂಪರ್. ಕೊನೆಯ ಸಾಲಿನ "ಬ್ರಹ್ಮ ನಿಂಗೆ ಜೋಡಿಸ್ತೀನಿ" ಧಾಟಿಯಲ್ಲಿ ನಿಮ್ಮ ಕವನ ಓದಿಕ್ಹೋಗಿ ನನಗೆ ಸಿಕ್-ಸಿಕ್ಕಾಪಟ್ಟೆ ನಗು ಬಂತು. ನಿಮ್ಮಿಂದ ಇನ್ನಷ್ಟು ಮಕ್ಕಳ ಹಾಡುಗಳು ನಮಗೋಸ್ಕರ (
) ಬರಲಿ, ಬರಲಿ, ಬರಲಿ. ಆ ದೇವರು ನಿಮಗೆ ಕಂಪ್ಯೂಟರ್, ಕರೆಂಟ್, ಇಂಟರ್ನೆಟ್ ಎಲ್ಲಾ ಸದಾಕಾಲ ಕರುಣಿಸುತ್ತಿರಲಿ.
ಉ: ಪಾಪು ಮತ್ತು ಚಂದಮಾಮ
ನಿಮಗೆ ಮೆಚ್ಚುಗೆ ಆಗಿದ್ದು ಸಂತೋಷ. ತುಂಬಾ ಧನ್ಯವಾದಗಳು ಸುನಿಲ್. ಖಂಡಿತ ಮತ್ತಷ್ಟು ಕವನಗಳನ್ನು ಸಂಪದದಲ್ಲಿ ಬರೆಯುತ್ತೇನೆ.