ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಲಾಲಿ

October 4, 2007 - 11:48am — srinivasps

ಲಾಲಿ

ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ?
ಬೇಡವೆ ಆಟಕೆ ಪುರುಸೊತ್ತು?
ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ?
ನಿದ್ದೆ ಮಾಡುವ ಹೊತ್ತು ಈಗಾಯ್ತು...||

ಬೆಳಗಿಂದ ನೀನು ಎಷ್ಟೊಂದು ಆಡಿದೆ,
ದಣಿವಿಲ್ಲವೇನೋ ನನ್ನ ರಾಜ
ದಣಿದಿಲ್ಲವೇನೋ ನನ್ನ ಮುದ್ದು ರಾಜಣ್ಣ
ನಿದ್ದೆ ಮಾಡುವ ಹೊತ್ತು ಈಗಾಯ್ತು...||

ನಾಳೆ ಆಡುವೆಯಂತೆ, ತೀಟೆ ಮಾಡುವೆಯಂತೆ,
ನಿದ್ದೆಯ ಮಾಡೋ ಬಂಗಾರ
ನಿದ್ದೆಯ ಮಾಡೋ ಬಂಗಾರ - ದಮ್ಮಯ್ಯ
ಮಲಗುವ ಹೊತ್ತು ಈಗಾಯ್ತು...||

ಹಾಲು ಕೆನ್ನೆಯ ರಾಜ, ಕಪ್ಪು ಕಂಗಳ ತೇಜ
ತೂಗುವೆ ಬಾರೋ ನನ್ನ ಪುಟ್ಟ
ತೂಗುವೆ ಬಾರೋ ನನ್ನ ಮುದ್ದು ಪುಟ್ಟಣ್ಣ
ಮಲಗುವ ಹೊತ್ತು ಈಗಾಯ್ತು...||

ಜೋಗುಳವಾ ಹಾಡುವೆನೋ, ನಿನ್ನ ಮುದ್ದಾಡುವೆನೋ
ಬಿಗಿದಪ್ಪಿ ಹಾಡುವೆನೋ, ನಿನ್ನ ಮುದ್ದಾಡುವೆನೋ
ಮಡಿಲಿಗೆ ಬಾರೋ ತುಂಟಣ್ಣ
ಮಡಿಲಿಗೆ ಬಾರೋ ತುಂಟಣ್ಣ - ನನ್ನೊಡೆಯ
ಮಲಗುವ ಹೊತ್ತು ಈಗಾಯ್ತು...
ನಿದ್ದೆ ಮಾಡುವ ಹೊತ್ತು ಈಗಾಯ್ತು...
ಮಲಗಲು ಬಾರೋ ತುಸು ಹೊತ್ತು...
ಮಲಗುವ ಹೊತ್ತು ಈಗಾಯ್ತು...||

=================================================
ಪ್ರತಿ ದಿನ, ನನ್ನಕ್ಕನ ಮಗ ಪ್ರದ್ಯುಮ್ನ, ಅಕ್ಕನನ್ನು ಗೋಳು ಹೊಯ್ದುಕೊಳ್ಳುವುದೇ ಈ ಲಾಲಿಗೆ ಸ್ಫೂರ್ತಿ!
ಮಧ್ಯಮಾವತಿ ರಾಗವನ್ನು ಬಳಸಿದ್ದೇನೆ...
=================================================

  • ಕಾವ್ಯ ಮತ್ತು ಕವನ
~.~
  • Login or register to post comments
  • 509 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 4, 2007 - 11:59am — Sunil Jayaprakash

ಉ: ಲಾಲಿ

Sunil Jayaprakash's picture

ವಾವ್, ಲಾಲಿ ಹಾಡನ್ನೂ ಶಾಸ್ತ್ರೀಯ ರಾಗದ ಚೌಕಟ್ಟಿನಲ್ಲಿ ಸೇರಿಸುವ ಪರಿಪಾಠವಿದೆ ಅಂತ ಇವತ್ತೇ ನನಗೆ ತಿಳಿದದ್ದು. ಸೂಪರ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 4, 2007 - 12:26pm — srinivasps

ಉ: ಲಾಲಿ

srinivasps's picture

ಧನ್ಯವಾದಗಳು.
ಲಾಲಿ ಹಾಡನ್ನು ಶಾಸ್ತ್ರೀಯ ರಾಗದ ಚೌಕಟ್ಟಿನಲ್ಲಿ ಬಳಸಿರುವ ಬಹಳಷ್ಟು ಉದಾಹರಣೆಗಳಿವೆ.
ಈಗ ನನಗೆ ಥಟ್ಟನೆ ನೆನಪಿಗೆ ಬಂದದ್ದು ಪುರಂದರ ದಾಸರ - 'ಲಾಲಿ ಗೊವಿಂದ'.
ಯಾವುದೇ ಹಾಡು ಯಾವುದಾದರೂ ರಾಗದಲ್ಲಿ ಅಥವಾ ರಾಗಮಾಲಿಕೆಯಲ್ಲಿ ಇರುವುದಲ್ಲವೆ? Smiling
ರಾಗದ ಹೆಸರು ತಿಳಿಯದಿರಬಹುದು ಅಥವಾ ಆ ದಿಕ್ಕಿನಲ್ಲಿ ನಾವು ಯೋಚಿಸದಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 4, 2007 - 5:10pm — veena

ಉ: ಲಾಲಿ

veena's picture

veena.

ಶ್ರೀನಿವಾಸ್ ಅವರೆ,

ಲಾಲಿ ಹಾಡು ಬಹಳ ಚೆನ್ನಾಗಿದೆ. ಮಕ್ಕಳನ್ನು ಮಲಗಿಸಲು ಸಿನಿಮಾ ಹಾಡುಗಳನ್ನು ಹೇಳುವ ಇಂದಿನ ಪೀಳಿಗೆಗೆ ಇಂತಹ ಲಾಲಿ ಹಾಡುಗಳ ಅಗತ್ಯ ತುಂಬಾ ಇದೆ. ಇದೇ ರೀತಿ ನಮ್ಮ ಅಮ್ಮ, ಅಜ್ಜಿಯಂದಿರ ಕಾಲದ ಲಾಲಿ ಹಾಡುಗಳು ಯಾರಿಗಾದರೂ ಬರುತ್ತಿದ್ದಲ್ಲಿ ದಯವಿಟ್ಟು ಬ್ಲಾಗಿಸಿ, ನಮ್ಮಂತಹ ಎಳೆಯ ಮಕ್ಕಳ ತಾಯಂದಿರಿಗೆ ಅನುಕೂಲವಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 5, 2007 - 6:38pm — mahesha

ಉ: ಲಾಲಿ

mahesha's picture

Smiling

ಲೋ ಶಾಸ್ರೀಯವಾಗಿ ನಿದ್ದೇ ಮಾಡೋ ಮಕ್ಕಳಿಗೆ ಹೀಗೆ ಶಾಸ್ತ್ತೀಯವಾದ ಲಾಲಿ!! Smiling

ಸುಮ್ನೆ.. ತರಲೆ..

ಲಾಲಿ ಹಾಡು ಮಲಗಿಸಿದ್ರೆ ಸಾಕು, ಶಾಸ್ತ್ರೀಯವೋ, ಶಾಸ್ತ್ತೀಯವಲ್ಲವೋ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 5, 2007 - 8:40pm — srinivasps

ಉ: ಲಾಲಿ

srinivasps's picture

ಈ ಹಾಡು ನನ್ನ ಅಕ್ಕನ ಮಗನನ್ನು ಮಲಗಿಸಲು ಸಹಾಯ ಮಾಡಿದ್ದಂತೂ ನಿಜ...
ಬರೆದ ಹಾಡು ಸಾರ್ಥಕವಾಯಿತು ಅಂತಲೇ ಅನ್ನಬಹುದು Smiling

-ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 4, 2007 - 8:28pm — poornimas

ಉ: ಲಾಲಿ

poornimas's picture

ತುಂಬಾ ಚೆನ್ನಾಗಿದೆ, ಒಳ್ಳೆ ಜೋಗುಳ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 4, 2007 - 8:52pm — srinivasps

ಉ: ಲಾಲಿ

srinivasps's picture

ವೀಣಾ ಅವರೇ ಮತ್ತು ಪೂರ್ಣಿಮಾ ಅವರೇ,

ಧನ್ಯವಾದಗಳು. ನಿಮ್ಮಗಳ ಪ್ರೋತ್ಸಾಹ ಹೀಗೆ ಮುಂದುವರೆಯಲಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಊಟಕೆ ಬಾರೋ ತುಂಟಣ್ಣ...
  • ಕಲ್ಲರಳಿ ಹೂವಾಗಿ - ಬಾರಪ್ಪಾ ಓ ಬೆಳ್ಳಿ ದೀಪ
  • ಮು೦ಗಾರು ಮಳೆ -- ಕುಣಿದು ಕುಣಿದು ಬಾರೆ...
  • ಬದಲಾದ ಘಳಿಗೆಗಳು?
  • ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ
Syndicate content

ಲೇಖಕರು

srinivasps's picture

ಪೂರ್ಣ ಹೆಸರು
ಶ್ರೀನಿವಾಸ್ .ಪ. ಶೇ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator