ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಹೈದರ ಅಲ್ಲಿಯೂ ಟೀಪು ಸುಲ್ತಾನನೂ

October 5, 2007 - 12:04pm — Sunil Jayaprakash

ಡಿ.ಎಲ್.ಐನಲ್ಲಿ ಒಂದು ಸಣ್ಣ ಪುಸ್ತಕ ಸಿಕ್ತು. ಇದು ಪ್ರಕಟವಾಗಿರುವುದು ೧೮೯೮ರಲ್ಲಿ. ಅನೇಕ ಸಣ್ಣ-ಪುಟ್ಟ ವಿಷಯಗಳಿವೆ. ಅದರ ಸಣ್ಣ ಸಣ್ಣ ಸ್ಯಾಂಪಲ್ ನೀಡುತ್ತಿದ್ದೇನೆ. ಕರ್ನಾಟಕ(ವಿಶೇಷವಾಗಿ ಮೈಸೂರಿನ) ಸುತ್ತಮುತ್ತ ಹೈದರಾಲಿ-ಟೀಪು ಕಾಲದಲ್ಲಿ ಏನೇನಾಯಿತು ಎಂಬ ವಿವರಗಳಿವೆ.

೧. ಹೈದರಲಿ ಮದ್ರಾಸ ಸರ್ಕಾರವನ್ನೂ ತುಂಬಾ ಭಯದಲ್ಲಿಟ್ಟಿದ್ದನಂತೆ.
೨. ಹೈದರಲಿ-ಟೀಪುಗೂ ಮೈಸೂರು ರಾಜರಿಗೂ ಏನು ನಂಟು ಎಂಬುದು ಇದರಲ್ಲಿ ಸಿಗುತ್ತದೆ.
೩. ಹೈದರಲಿ ಮತ್ತು ಮದಕೇರಿನಾಯಕನಿಗೆ ಏಕೆ ಜಗಳವಾಯಿತು ಎಂಬುದರ ವಿವರಣೆಯಿದೆ.
೪. ಹೈದರಲಿಗೂ ಇಂಗ್ಲೀಷರಿಗೂ ಅಂಥ ಹಗೆತನವಿರಲಿಲ್ಲವಂತೆ. "ನೀನು ಇಂಗ್ಲೀಷರೊಡನೆ ಯಾವಾಗಲೂ ಸ್ನೇಹವನ್ನು ಬೆಳಿಸು, ಅವರ ಗೆಳೆತನದಿಂದ ನಿನಗೆ ಆಗುವಷ್ಟು ಲಾಭಗಳು ಅವರ ಹಗೆತನದಿಂದ ನಿನಗೆಂದೂ ಆಗಲಾರವು" ಅಂತ ಟೀಪುಗೆ ಹೇಳ್ತಾ ಇದ್ನಂತೆ.
೫. ಹೈದರಾಲಿ ಅರಸುಹುಣ್ಣಾಗಿ (ರಾಜಯಕ್ಷ್ಮರೋಗ ಅಂತಾರೆ ಇದಕ್ಕೆ) ಸಾಯುವಾಗ ಟೀಪುಗೆ ೨೯ವರ್ಷ. ಅವನು ಸಾಯುವಾಗ ಅವನೊಡನೆ ೮೮, ೦೦೦ ಜನರಿದ್ದರು.
೬. ೧. ಶಿವಾಜಿಯಂತೆ ಹೈದರನಿಗೆ ಓದುಬರಹ ಬರುತ್ತಿದ್ದಿಲ್ಲ, ೨. ಕನ್ನಡ-ತೆಲುಗು-ತಮಿಳು ನುಡಿಗಳನ್ನು ಚೆನ್ನಾಗಿ ಮಾತಾಡುತ್ತಿದ್ದನು, ೩. ಹೈದರನಲ್ಲಿದ್ದ ೩ನೆಯ ದೊಡ್ಡ ಗುಣವು "ಧರ್ಮದುರಭಿಮಾನದ ಅಭಾವವು" (ಸರಳವಾಗಿ ಹೇಳಬೇಕೆಂದರೆ ಸೆಕ್ಯುಲರ್ Smiling ), ೪. ಆಸಕ್ತಿ, ೫. ಶೌರ್ಯ. ದುರ್ಗುಣಗಳು ೧. ಇಂದ್ರಿಯ ನಿಗ್ರಹ - ಅವನು ಸಾಯುವಾಗ ೭೦೦ ಜನ ಹೆಂಗಸರು ಅವನ ಅರಮನೆಯಲ್ಲಿದ್ದರು, ಸತ್ತ ಸುದ್ಧಿ ಬಂದಾಗ ಅವರೆಲ್ಲ, ಬಳೆ ಒಡೆದುಕೊಂಡರಂತೆ. ೨. ದ್ರವ್ಯಲೋಭ - ಅವನು ಸತ್ತಾಗಲೂ ಕೂಡ ಅವನ ಬಳಿ ೩ ಕೋಟಿ ನಗದಿತ್ತಂತೆ.
೭. ಟೀಪು ಹುಟ್ಟಿದ್ದು ದೇವನಹಳ್ಳಿಯಲ್ಲಿ.
೮. ಮಂಗಳೂರು, ಮಲಾಬಾರ್ ಪ್ರಾಂತ್ಯವನ್ನು ಇಂಗ್ಲೀಷರಿಂದ ಗೆದ್ದು ಹಿಂದಿರುಗುವಾಗ, ಟೀಪು ಸಮುದ್ರ ಗುಂಟ ಇದ್ದ ಸುಮಾರು ೭೦, ೦೦೦ ಕ್ರೈಸ್ತರನ್ನು ಒತ್ತಾಯದಿಂದ ಮುಸಲ್ಮಾರನ್ನಾಗಿ ಮಾಡಿ, ಅವರಿಗೆ ಅಹಮ್ಮದೀಯರು ಎಂಬ ಹೆಸರುಕೊಟ್ಟನು.
೯. ಟೀಪು ನಿಜಾಮರು, ಇಂಗ್ಲೀಷರ ಮತ್ತು ಪೇಶ್ವೆಯರ ಹಗೆತನ ತಂದುಕೊಳ್ಳುತ್ತಾನೆ. ಮೈಸೂರು ಪಟ್ಟಣವನ್ನು ಹಾಳುಗೆಡವಬೇಕೆಂದು ಅಪ್ಪಣೆಯನ್ನಿತ್ತು, ೨೦೦೦ ಮಲಬಾರ್ ನಾಯರುಗಳನ್ನು ಮುಸಲ್ಮಾನರನ್ನಾಗಿ ಮಾಡಿ, ಇಂಗ್ಲೀಷರನ್ನು ಬಗ್ಗುಬಡಿವುದಕ್ಕೆ, ತುರ್ಕಸ್ಥಾನಕ್ಕೆ ಕಳುಹಿದ್ದನಂತೆ. ಪಾರಿಸ್ಸಿಗೂ ಕಳುಹಿದ್ದನಂತೆ.
೧೦. ಮೈಸೂರು ಯುದ್ಧ ನಡೆದ ಕಾಲದಲ್ಲಿ, ಒಂದು ಸೇರು ಅಕ್ಕಿಗೆ ೮ ರೂಪಾಯಿಯಾಗುವಷ್ಟು ತುಟ್ಟಿಯಾಗಿತ್ತಂತೆ, ೧ ಸೇರು ರಾಗಿಹಿಟ್ಟಿಗೆ ೪ರೂ.
೧೧. ಮಾರ್ಚ ೧೭೯೨, ೩ ಕೋಟಿ, ೩೦ ಲಕ್ಷ ರೂಪಾಯಿಗಳನ್ನು ಇಂಗ್ಲೀಷರಿಗೆ ಕೊಡಬೇಕಾಯಿತಂತೆ. ಅಲ್ಲಿಯ ತನಕ, ಮೊಯಿಜುದ್ದೀನ, ಅಬ್ದುಲ್‌ಖಾಲಿಕ್ ಎಂಬ ಮಕ್ಕಳನ್ನು ಇಂಗ್ಲೀಷರ ವಶದಲ್ಲಿಡಬೇಕಾಯಿತಂತೆ. "......ಅವನು ತನ್ನ ಎಲ್ಲ ಪ್ರಜೆಗಳಿಂದ ಹಣವನ್ನೆತ್ತಿ, ಇಂಗ್ಲಿಷರಿಗೆ ಕೊಡತಕ್ಕ ದುಡ್ಡನ್ನೂ ರಾಜ್ಯವನ್ನೂ ಕೊಟ್ಟು ತನ್ನ ಮಕ್ಕಳನ್ನು ತಿರುಗಿ ಕರಿಸಿಕೊಂಡನು. ಹೈದರಲ್ಲಿಯು ಸುವಿಚಾರಯಾದ ಕಾರಣ ತಾನು ಅರಸನ ಆಳೆಂದು ಹೇಳಿ, ರಾಜ್ಯಭಾರವನ್ನು ಮಾಡುತ್ತ ಪ್ರಜೆಗಳ ಮನಸ್ಸನ್ನು ಹೆಚ್ಚು ನೋಯಿಸಲಿಲ್ಲ. ಆದರೆ ಮದಾಂಧನಾದ ಟೀಪುವು ತನ್ನ ತಂದೆಯ ಜಾಣ್ಮೆಯನ್ನನುಸರಿಸದೆ, ಚಾಮರಾಜೇಂದ್ರನು ಸತ್ತಕೂಡಲೆ ಅವನ ಮಗನನ್ನು ಹೆಸರಿಗೆ ಮಾತ್ರವಾದರೂ ಅರಸನನ್ನು ಮಾಡದೆ, ಅವನನ್ನು ಸೆರೆಯಾಳಿನಂತೆ ನಡಿಸಿಕೊಳ್ಳಲಾರಂಭಿಸಿದನು. ಇದರಿಂದ ಮುಸಲ್ಮಾನರಲ್ಲದ ಮೈಸೂರ ಪ್ರಜೆಗಳು ಅಸಂತುಷ್ಟರಾಗಿ ಈ ಚಂಡಾಳನು ಬೇಗನೆ ಹಾಳಾಗಿ ಹೋಗಲೆಂದು ಶಪಿಸತೊಡಗಿದರು......"
೧೨. "ಟೀಪುಗೆ, ಯುರೋಪಖಂಡದ ಇತಿಹಾಸಭೂಗೋಲಗಳ ತಿಳವಳಿಕೆಯು ಅಷ್ಟು ಇದ್ದಿಲ್ಲ" ಎಂಬುದಾಗಿ ಇದೆ. ಅವನಿಗೆ ಇಂಗ್ಲಿಷರ ಕಸುವು ತಿಳಿದಿರಲಿಲ್ಲ. ಐರ್ಲೆಂಡ್, ಗೆರ್ನಸಿ, ಜೆರ್ಸಿ ಈ ಮೂರು ನಡುಗಡ್ಡೆಗಳು ಮಾತ್ರ ಇಂಗ್ಲಿಷರ ವಶದಲ್ಲಿದೆ ಎಂದು ತಿಳಿದಿದ್ದನಂತೆ.
೧೩. ಟೀಪು ವಿರುದ್ಧ ಹೋರಾಡಿದವರು ಕೇವಲ ಇಂಗ್ಲಿಷರಲ್ಲ, ನಿಜಾಮ, ಒಂದು ಫ್ರೆಂಚ ಪಟಾಲಂ.
೧೪. ಕೊನೆಯ ಯುದ್ಧದಲ್ಲಿ, ಊಟ ಮಾಡುತ್ತಿದ್ದಾಗ, ಜನರಲ್ ಬೆಯರ್ಡನೆಂಬ (ಪೆರಂಬಾಕಮದ ಕಾಳಗದಲ್ಲಿ ಸೆರೆಸಿಕ್ಕು, ಟೀಪುವಿನ ಸೆರೆಮನೆಯಲ್ಲಿ ಮೂರು ವರ್ಷ ಕೊಳೆತಿದ್ದನಂತೆ) ಇಂಗ್ಲಿಷ ಸಿಪಾಯಿಯು ಅವನ ರತ್ನಖಚಿತ ಕತ್ತಿಯನ್ನು ಕಸಿಯಲು ಯತ್ನಿಸಿದಾಗ, ಟೀಪು ಅವನ ಕಾಲನ್ನು ಕಡಿದನಂತೆ. ಆಗ ಅವನು ಸಿಟ್ಟಿನಿಂದ ತನ್ನ ತುಬಾಕಿಯಿಂದ ಟೀಪುವಿನ ತಲೆಗೆ ಗುರಿಯಿಟ್ಟು ಹೊಡೆದಾಗ ಕೂಡಲೇ ಸತ್ತನಂತೆ. ಟೀಪು ಸತ್ತಾಗ ಅವನನ್ನು ಮಣ್ಣುಮಾಡಿ ಭಿಕ್ಷುಕರಿಗೆ ೧೨೦೦೦ ರೂಪಾಯಿಗಳನ್ನು ಹಂಚಿದರು.
೧೫. "...ಹಿಂದು ದೇವಸ್ಥಾನಗಳ ಇನಾಮುಗಳನ್ನು ಸರಕಾರಕ್ಕೆ ಸೇರಿಸಿಕೊಂಡಿದ್ದನು...."
೧೬. ಇಷ್ಟಲ್ಲದೆ ಒಂದು ಸ್ವಾರಸ್ಯಕರ ವಿಷಯವೂ ಇದೆ. ಒಮ್ಮೆ ಅವನಿಗೆ, ಅರಮನೆಯ ಹೆಂಗಸರ ಮಯ್ದೊಗಲ(ಚರ್ಮದ) ನುಣುಪು ಮೆಣಸಿನಕಾಯಿ-ತಿಂದುದರಿಂದ ಹೋಯಿತೆಂದು ಅನ್ನಸಿ, ತನ್ನ ರಾಜ್ಯದಲ್ಲೆಲ್ಲ ಮೆಣಸಿನ ಕಾಯಿಬೆಳೆಯಕೂಡದೆಂದು ನಿರ್ಬಂಧಮಾಡಿದನು. ಮುಂದೆ ೬ ತಿಂಗಳ ಬಳಿಕ ಈ ಹುಕುಮನ್ನು ತಾನೇ ರದ್ದುಮಾಡಿದನು.
೧೭. ಒಂದು ಊರವರು ಬೇರೂರಿಗೆ ಹೊಗಲಿಕ್ಕೆ ಬರಲಿಕ್ಕೆ ಅಧಿಕಾರಸ್ಥರ ಅಪ್ಪಣೆಚೀಟಿಯನ್ನು ಪಡೆಯಬೇಕೆಂದು ಕಟ್ಟುಮಾಡಿದನು(ಒಂಥರಾ ಈಗಿನ ವೀಸಾ).
೧೮. ಮೈಸೂರಿನ ಪ್ರಜೆಗಳನ್ನು ಸೆರೆಯಾಳುಗಳಿಗೆ ಹೋಲಿಸಬೇಕು ಹೊರತು ಬೇರೆ ರಾಜ್ಯಗಳ ಪ್ರಜೆಗಳಿಗೆ ಹೋಲಿಸುವುದು ಸರಿಯಾಗಲಾರದು ಎನ್ನುತ್ತಿದ್ದನಂತೆ.

ಇನ್ನೂ ಏನೇನೋ ವಿಚಾರಗಳಿವೆ. ಒಂದು ದಿನದೊಳಗೆ ಓದಿ ಮುಗಿಸಬಹುದು, ೮೦-೯೦ ಪುಟಗಳಿವೆ. ಬಿಡುವಿದ್ದಾಗ ಓದಿಕೊಳ್ಳಿ.

ಹೈದರ ಅಲ್ಲಿಯೂ ಟೀಪು ಸುಲ್ತಾನನೂ

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 539 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 5, 2007 - 8:46pm — mahesha

ಉ: ಹೈದರ ಅಲ್ಲಿಯೂ ಟೀಪು ಸುಲ್ತಾನನೂ

mahesha's picture

ಲೋ ಜಾಣ....

ಹೈದರ್‍ ಆಲಿ.. ಹೈದರ ಅಲ್ಲಿ ಅಲ್ಲವೋ!!

ನಾನು ಯಾವ ಹೈದರ ’ಅಲ್ಲಿ’ ಅಂತ ಅವಕ್ಕಾದೆ. Smiling

"ಧರ್ಮದುರಭಿಮಾನದ ಅಭಾವವು" ಮಂಚಿ ಚಾಲಾ ತೆಲುಗುಲೋ ರಾಸ್ಯಾವು ಬಾಬು Smiling, ಕನ್ನಡಲೊ ರಾಯಿ ಕದಾ!! Smiling ( ಒಳ್ಳೇ ತುಂಬಾ ತೆಲುಗಲ್ಲಿ ಬರೆದೀಯ್, ಕನ್ನಡದಲ್ಲಿ ಬರೆ ಅಲ್ಲಾ! ( ಬಳ್ಳಾರಿ ಸ್ಟಯ್ಲು ) Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 5, 2007 - 10:53pm — kpbolumbu

ಉ: ಹೈದರ ಅಲ್ಲಿಯೂ ಟೀಪು ಸುಲ್ತಾನನೂ

kpbolumbu's picture

"ಧರ್ಮದುರಭಿಮಾನದ ಅಭಾವವು" ಎ೦ಬುದನ್ನು quote ಮಾಡಿದ೦ತಿದೆ. ' ಹೈದರ ಅಲ್ಲಿಯೂ ಟೀಪು ಸುಲ್ತಾನನೂ' ಇದೂ quote ಮಾಡಿದ೦ತಿದೆ.

ಇಂದ್ರಿಯ ನಿಗ್ರಹವೆ೦ದರೆ ಹತೋಟಿಯಲ್ಲಿರುವುದು, ೭೦೦ ಜನ ಹೆಂಗಸರು ಅವನ ಅರಮನೆಯಲ್ಲಿದ್ದರು ಎನ್ನುವುದು ಇಂದ್ರಿಯ ನಿಗ್ರಹದ ಬದಲಾಗಿ ಅದರ ವಿರುದ್ಧಪದಕ್ಕೆ ಉದಾಹರಣೆಯಾಗಿದೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 1:00pm — Sunil Jayaprakash

ಉ: ಹೈದರ ಅಲ್ಲಿಯೂ ಟೀಪು ಸುಲ್ತಾನನೂ

Sunil Jayaprakash's picture

ಮಹೇಶ,
ಕೃಷ್ಣಪ್ರಕಾಶಬೊಳಂಬು ಹೇಳಿದ ಹಾಗೆ, "ಹೈದರ ಅಲ್ಲಿ" ಮತ್ತು "ಧರ್ಮದುರಭಿಮಾನದ ಅಭಾವವು" ಎಂಬ ಬಳಕೆಗಳನ್ನು ನಾನು ಬರೀ ಪುಸ್ತಕದಿಂದ ಉಲ್ಲೇಖಿಸಿದ್ದೇನೆ (quote ಮಾಡಿದ್ದೇನೆ = ಕೋಟಿದ್ದೇನೆ ( Eye-wink ), ಎತ್ಕೊಟ್ಟಿದ್ದೇನೆ).

ಕೆ.ಪಿ.ಬೊಳಂಬು,
"ಇಂದ್ರಿಯ ನಿಗ್ರಹವೆಂಬುದು ಹೈದರಲ್ಲಿಗೆ ಸಾಧ್ಯವಾಗದಿದ್ದುದು, ಅವನ ದುರ್ಗುಣಗಳಲ್ಲಿ ಒಂದು" ಎಂಬುದಾಗಿ ಬರಹಗಾರರು ಹೇಳಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2007 - 12:18am — ಕೇವೆಂ

ಉ: ಹೈದರ ಅಲ್ಲಿಯೂ ಟೀಪು ಸುಲ್ತಾನನೂ

ಕೇವೆಂ's picture

ಈ ಹೊತ್ತಗೆ ಅಚ್ಚಾದ ಕಾಲದಲ್ಲಿ(೧೮೯೮) ಈಗಿನ ತರಹ "politically correct" ಆಗಿ ಬರೆಯುವ, ಚರಿತ್ರೆಯನ್ನು ತಿದ್ದುವ ಕಟ್ಟುಪಾದು ಇರಲಿಲ್ಲ. ಟೀಪು ಸತ್ತು ನೂರು ವರ್ಷ ಮಾತ್ರ ಆಗಿತ್ತು . ಆದ್ದರಿಂದ ಸಮಕಾಲೀನರ ನೆನಪುಗಳನ್ನು ಇನ್ನು ಅಳಸಿ ಹೋಗದ ಕಾಲ. ಟೀಪುವಿನ ಮತಾಂಧತೆ ಬಗ್ಗೆ ಎಗ್ಗಿಲ್ಲದೆ ಬರೆದಿದ್ದಾರೆ. ಮರಾಟರ ಪುಂಡು ಹಾವಳಿಯನ್ನು ಕೂದ ಅಷ್ಟೇ ನಿಷ್ಠುರವಾಗಿ ನೋಡಿದ್ದಾರೆ.
ಡಿ.ಎಲ್.ಐ ನಿಜವಾಗಿ ಅಪರೂಪ ಹೊತ್ತಗೆಗಳನ್ನ ನೀಡುತ್ತೆ. ನನ್ನ ಹಾಗೆ ನೀವು ಇದನ್ನ ಓದಿರೋದು ನೋದಿ ಸಂತಸವಾಯ್ತು.
ಅಂದ ಹಾಗೆ "politically correct" ಗೆ ಅಚ್ಚ ಕನ್ನಡದಲ್ಲಿ ಏನು ಹೇಳ್ತೀರಿ? ಸಂಸ್ಕೃತ ಬಳಸದೆ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2007 - 2:24pm — hpn

ಉ: ಹೈದರ ಅಲ್ಲಿಯೂ ಟೀಪು ಸುಲ್ತಾನನೂ

hpn's picture

ನೀವು ಬರೆದಿರೋದರಲ್ಲಿ 'ಡ' ಎಲ್ಲ 'ದ' ಗಳಾಗಿವೆ. ನೀವು ಬರಹ ಬಳಸುತ್ತಿದ್ದಲ್ಲಿ, d ಬದಲು D (Cap D) ಒತ್ತಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಿಎಲ್ಐ ಐಸಿರಿ - ಮೈಸೂರು ವೀಣಾ ಪರಂಪರೆ
  • ಸುಭಾಷಿತ ಮಂಜರಿ
  • ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು
  • ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)
  • ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 57 ಅತಿಥಿಗಳು ಆನ್ಲೈನ್ ಇರುವರು.


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator