Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ನಾವು ಶಾಲೆಗೆ ಹೋಗುವ

October 9, 2007 - 9:11pm — jp.nevara

ಬಾರೊ, ತಮ್ಮ
ನಾನು-ನೀನು ಶಾಲೆಗೋಗುವಾ
ಅಆಇಈ ಕಲಿತು
ನಾವು ಜಾಣರಾಗುವಾ

ನಾನು ನೀನು
ಎಲ್ಲರು ಸೇರಿ ಆಟವಾಡುವಾ
ಆಟದಲ್ಲೇ ಪಾಠವನ್ನು
ನಾವು ಕಲಿಯುವಾ

ಶಾಲೆಯಿಂದ ಬಂದು
ನಾವು ಹೊಲಕೆ ಹೋಗುವಾ
ಅಪ್ಪ-ಅವ್ವರ ಕೆಲಸದಲ್ಲಿ
ನಾವು ನೆರವು ಆಗುವಾ

ಹೊಲದ ದಾರಿಯಲ್ಲಿ
ಇಹವು ಕವಳಿಗಿಡಗಳು
ಗಿಡವ ಕೊಡವಿ
ಹಣ್ಣುಗಳನ್ನು ಆಯ್ದು ತಿನ್ನುವಾ

ಕಾರೆ ಹಣ್ಣು, ಬಾರೆ ಹಣ್ಣು
ತಿಂದು ಬಿಕ್ಕುವಾ
ನೀರಲಣ್ಣು ತಿಂದು ನಾವು
ನೀರು ಕುಡಿಯುವಾ

ಕಕ್ಕಿ ಹಣ್ಣು ಸಿಕ್ಕರೆ
ಗುಳುಮ್ಮನೆ ನುಂಗುವಾ
ಬುಕ್ಕಿ ಹಣ್ಣು ಸಿಕ್ಕಿದರೆ
ಗಬ-ಗಬ ತಿನ್ನುವಾ

ಹೊತ್ತು ಮುಳುಗೊ ಹೊತ್ತಿಗೇ
ಮನೆಗೆ ಹೋಗುವಾ
ದೀಪ ಮುಡಿಸಿ, ದೇವಿಗೆ ನಮಿಸಿ
ಪಾಠ ಓದುವಾ

ಕಲಿಯ ಬೇಕು ಕಲಿಸಬೇಕು
ನಾವು ವಿದ್ಯೆಯ
ವಿದ್ಯೆ-ಬುದ್ಧಿ ಪಡೆದು
ವಿನಯವಂತರಾಗುವಾ

ಬಾರೊ, ತಮ್ಮ
ನಾನು-ನೀನು ಶಾಲೆಗೋಗುವಾ
ಅಆಇಈ ಕಲಿತು
ನಾವು ಜಾಣರಾಗುವಾ

ಜಯಪ್ರಕಾಶ ನೇ ಶಿವಕವಿ.

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 234 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 10, 2007 - 9:47am — Sunil Jayaprakash

ಉ: ನಾವು ಶಾಲೆಗೆ ಹೋಗುವ

Sunil Jayaprakash's picture

ಆಯ್ತು ಆಯ್ತು, ಒಪ್ಪೋಣ, ಜಯಪ್ರಕಾಶನೇ ಶಿವಕವಿ ಅಂತ Eye-wink
ತುಂಬಾ ಸರಳ ಸುಂದರವಾಗಿತ್ತು ನಿಮ್ಮ ಬರಹ. ಸರಿ ಎಂದಿನಿಂದ ಹೋಗೋಣವಾಗಲಿ, ನಾನು ಬರುವೆ ಶಾಲೆಗೆ ನಿನ್ನೊಡನೆ ಅಣ್ಣಾ!!!! Smiling

ಅದು ಸರಿ ಅಣ್ಣಾ, ಆದರೆ

ಕಾರೆ ಹಣ್ಣು, ಬಾರೆ ಹಣ್ಣು, ತಿಂದು ಬಿಕ್ಕುವಾ

ಹಣ್ಣು ತಿಂದು ಬಿಕ್ಕೋದು ಏಕೆ ?

ದೀಪ ಮುಡಿಸಿ, ದೇವಿಗೆ ನಮಿಸಿ ಪಾಠ ಓದುವಾ

"ದೀಪ ಮುಡಿಸುವುದು" ಎಂಬುದು ಅರ್ಥವಾಗಲಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
October 10, 2007 - 10:28am — jp.nevara

ಉ: ನಾವು ಶಾಲೆಗೆ ಹೋಗುವ

jp.nevara's picture

ಜಯಪ್ರಕಾಶ ನೇ.ಶಿ.

ಕಾರೆ ಹಣ್ಣು (ಕೆಂಗಾಗಿದ್ದಾಗ) ಇನ್ನೂ ಪೂರ್ತಿ ಮಾಗದೆ ಇದ್ದಾಗ ತಿಂದರೆ ಗಂಟಲು ಹಿಡಿದುಕೊಂಡ ಹಾಗೆ ಹಾಗುತ್ತೆ, ಮತ್ತು ಅವುಗಳನ್ನು ಹೆಚ್ಚು ದರೆ ಬಿಕ್ಕಿನ ಅನುಭವ ಉಂಟಾಗುತ್ತೆ.

ದೀಪ ಮುಡಿಸೋದು ಅಂದ್ರೆ, ದೇವರ ಮುಂದೆ ದೀಪ ಹಚ್ಚೋದು ಅಂತ ಅರ್ಥ. (ಸಂಜೆ ಮುಂದೆ ನಮ್ಮಕಡೆ ಕೈಕಾಲು ಮುಖ ತೊಳೆದುಕೊಂಡು, ದೇವರಿಗೆ ನಮಿಸಿ, ಸಂಜೆಯ ತಮ್ಮ ಕೆಲಸ ಕಾರ್ಯಗಳಲ್ಲಿ ಜನ ನಿರತರಾಗುತ್ತಾರೆ).

ಧನ್ಯವಾದಗಳು,
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೊಡ್ಡ ಜನ ನಾವು
  • ಮರೆತ ಹಣ್ಣುಗಳು
  • ಮಲೆನಾಡಿನ ಬ್ಯಾಸಿಗಿ ದಿನಚರಿ......!
  • ಕನ್ನಡದ ಉಳಿವು ಯಾರಿಂದ
  • "ನಾನು-ನೀನು
Syndicate content

ಲೇಖಕರು

jp.nevara's picture

ಪೂರ್ಣ ಹೆಸರು
ಜಯಪ್ರಕಾಶ ನೇವಾರ ಶಿವಕವಿ

ಪರಿಚಯ

ನನ್ನ ಹೆಸರು ಜಯಪ್ರಕಾಶ ನೇವಾರ ಶಿವಕವಿ, ಊರು ಬಳ್ಳಾರಿ ಜಿಲ್ಲೆಯಲ್ಲಿರುವ ಉಜ್ಜೈನಿ ಗ್ರಾಮ, ವಾಸ ಬೆಂಗಳೂರೆಂಬ ಬೆಂದಕಾಳೂರು, ಝೈಲೋಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಅನ್ನೊ ಸಂಸ್ಥೆಯಲ್ಲಿ ತಂತ್ರಾಂಷ ತಂತ್ರಜ್ಞನಾಗಿ ಕೆಲಸ, ಕವನ ಬರೆಯುವ ಮತ್ತು ಅನುವಾದಮಾಡುವುದು ನನ್ನ ಹವ್ಯಾಸ, ನನ್ನ ಜಿಮೈಲ್ ವಿಳಾಸ. jp.nevara@gmail.com
ಇದಿಷ್ಟು ನನ್ನ ಸ್ವ ಪುರಾಣ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator