ಸ೦ಧಿ ವಿ೦ಗಡಿಸುವ ಚಿಹ್ನೆ
ಸ೦ಧಿ ವಿ೦ಗಡಿಸುವ ಚಿಹ್ನೆಗೆ ನೀವು ಏನ೦ತೀರಿ?
ನ೦ಗನ್ಸುತ್ತೆ 'ಕೂಡೆ' ಅನ್ಬಹುದು.ಮೈಸುರಿನ ಹತ್ತಿರ ಆಡುಮಾತಿನಲ್ಲೂ 'ಜೊತೆಗೆ' ಅನ್ನೋದಕ್ಕೆ 'ಕೂಡೆ' ಅನ್ನೋರಿದ್ದಾರೆ(ಎಲ್ರೂ ಹೇಳಲ್ಲ).
ಕೂಡೆ=ಕೂಡಲು, ಸೇರಲು (ಕೂಡಿದಾಗ, ಸೇರಿದಾಗ)
ವೀರಕನ್ನಡಿಗನೆ೦ಬ೦ತೆ: ಮನೆ+ಅಲ್ಲಿ=ಮನೆ ಪ್ಲಸ್ ಅಲ್ಲಿ ಅ೦ದರೆ ಮನೆಯಲ್ಲಿ, ಇದು ಯಕಾರಾಗಮ ಸ೦ಧಿ.
ಕಾಸರಗೋಡಿನ ಕನ್ನಡ ಬಲ್ಲ ನಿರಭಿಮಾನಿ: ಮನೆ+ಅಲ್ಲಿ=ಮನೆ ಕೂಡೆ ಅಲ್ಲಿ ಅ೦ದರೆ ಮನೆಯಲ್ಲಿ, ಇದು ಯಕಾರಾಗಮ ಸ೦ಧಿ.

- Login or register to post comments
- 687 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಮನೆಯ + ಅಲ್ಲಿ = ಮನೆಯಲ್ಲಿ ಯಾಕೆ ಆಗಲ್ಲ?
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಮನೆಯ + ಅಲ್ಲಿ = ಮನೆಯಲ್ಲಿ
ಮನೆಯು + ಅಲ್ಲಿ = ಮನೆಯಲ್ಲಿ
ಇವೆರಡು ಸರಿ ಅಲ್ಲವಾ?
ಹೀಗಿರುವಾಗ ಮನೆ + ಅಲ್ಲಿ ಎಂದೇ ಏಕೆ ಬಿಡಿಸಬೇಕು?
ಮನೆಯಲ್ಲಿ = ಮನೆಯ + ಅಲ್ಲಿ... ಹೇಗೆ ತಪ್ಪು?
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ವಿಭಕ್ತಿ ಪ್ರತ್ಯಯಗಳು ಮೂಲ ಪದಗಳಿಗೆ ಹತ್ತುತ್ತವೆ.. ಇಲ್ಲ ಸಮಾಸಪದಗಳಿಗೆ, ಕೃದಂತ, ತದಂತಗಳಿಗೆ ಹತ್ತುತ್ತವೆ.. ಹೀಗೆ ಇನ್ನು ಕೆಲವು ಇವೆ..
ಅಂದರೆ ವಿಭಕ್ತಿ ಪ್ರತ್ಯಯಗಳು ಸ್ವತಂತರವಾದವುಗಳು, ಅದಕ್ಕಾಗಿ ಒಂದು ಬಾರಿ ವಿಭಕ್ತಿ ಬಂದರೆ ಅಲ್ಲಿ ಮತ್ತೊಂದು ಬರದು..
ಮನೆ + ಅಲ್ಲಿ = ಮನೆಯಲ್ಲಿ ಸರಿ.. ಇಲ್ಲಿ ಯಕಾರಾಗಮವಾಗಿದೆ..
ಆದರೆ
ಮನೆ + ಅ + ಅಲ್ಲಿ = ಮನೆಯ + ಅಲ್ಲಿ ಇದು ತಪ್ಪು , ಹೀಗಾಗೋದಿಲ್ಲ. ಆದರೆ ಹಗುರವಾಗಿ ಹೋಡಿದರೆ ಇದು ಸರಿಯೇನೋ ಅನ್ನಿಸುವುದು..
ಮೂಲ ಪ್ರಕೃತಿ + ಷಷ್ಠಿ + ಸಪ್ತಮಿ ಹೀಗೆ ಸೇರೋಲ್ಲ
ಇದರಂತೆಯೆ
ಮೂಲ ಪ್ರಕೃತಿ + ಪ್ರಥಮಾ + ಸಪ್ತಮಿ ಹೀಗಾಗೋದಿಲ್ಲ
ಮನೆ + ಉ + ಅಲ್ಲಿ = ಮನೆಯು + ಅಲ್ಲಿ ಇದು ತಪ್ಪು
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ವಿನಾಯಕ
ಕೂಡೆ ಬಳ್ಕೇ ಬಗ್ಗೆ comments ಬೇಕು.ಅದೇ ಮೈನ್ ಪಾರ್ಟು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಕೊಳಂಬೆಯವರೆ,
ಕೂಡಿಸಿ, ಕೂಡಲು ಹೀಗಾಗುವುದು ಅನ್ನೋಬಳಕೆ ನಮ್ಮ ಕಡೆಗೂ ಇದೆ.
ಆದರೆ ನಾವೆಲ್ಲ ರಾಸಾಯನಿಕ ಸೂತ್ರಗಳನ್ನು ಹೇಳುವಾಗ ಹೇಗೆ ಪ್ಲಸ್ ಅನ್ನುತ್ತೇವೆಯೋ ಹಾಗೆ ಸಂಧಿಯನ್ನು ಕೂಡ ಸೂತ್ರದ ಹಾಗೆ ಹೇಳುವಾಗ ಪ್ಲಸ್ ಅನ್ನೋದನ್ನು ಬಳಸುತ್ತಿದ್ದೆವು..
ಆದರೆ ತಿಳಿಸಿ/ಬಿಡಿಸಿ ಹೇಳುವಾಗ "ಮನೆ ಜೊತೆ ಅಲ್ಲಿ ಕೂಡಿಸಿದರ ಮನೆಯಲ್ಲಿ ಆಗುತ್ತದೆ" ಅಂತನೆ ನಾವುಗಳು ಹೇಳುವುದು.. ನೀವು ಅದನ್ನ ಕೂಡೆ ಅಂತ ಚುಟುಕಾಗಿ ಹೇಳ್ತಿದಿರಿ ಅಷ್ಟೆ ಅಲ್ಲವೆ.
ಹೊರಗಿನವರಿಗೆ ಒಳಗಿನವರು ಹೇಳಿದ್ದು ತಿಳಿಯಿತು ಅಂತ ಅನಕೊಂಡಿದ್ದೀನಿ..
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಕವಿ...
"ಮೂಲ ಪ್ರಕೃತಿ + ಪ್ರಥಮಾ + ಸಪ್ತಮಿ ಹೀಗಾಗೋದಿಲ್ಲ"
ನಿಮ್ಮ ಹೇಳೋದು ಸಕ್ಕದದ ಗ್ರಾಮರ್ರಂತೇ ಸರಿ ಇರಬೋದು ರೀ...
ಆದ್ರೆ ಒಮ್ಮೆ ಶಂಕರಭಟ್ಟರ ಹೊತ್ತಗೆ ಓದಿ, ಆಗ.. ಅದು ಅನಿತ್ತು ಸರಿಯಾಗಿಲ್ಲ ಅನ್ನಿಸ್ತದೆ..
ಇಲ್ಲಿ ನೋಡಿ..
ಈಗಿಂದ/ಆಗಿಂದ/ಎಂದಿಂದ ಇದು ತೃತೀಯ ವಿಬಕ್ತಿ ಅಲ್ವಾ? ಆದ್ರೆ 'ಈಗ' ಇದು ನಾಮಪದವಲ್ಲ, ಆದ್ರೂ ಇದು ಬಳಕೆಯಾಗುಂಟು.
ಹಾಗೇ
'ಮನೆಗಳಲ್ಲಿ' ಅನ್ನೊದು ಹೇಗೆ ಬಿಡಿಸೋದು?
ಇಲ್ಲಿ ಪ್ರಕೃತಿ + ಪ್ರಥಮಾವಿಭಕ್ತಿ ಪ್ರತ್ಯಯ(ಗಳು) + ಸಪ್ತಮಿ ಅಲ್ವಾ?
ಆದ್ರೆ ಇದು ಸಕ್ಕದಾಗೆ ಹಿಂಗಾಗಲ್ಲ... ಗೃಹೇ, ಗೃಹೇಷು.. ಇಲ್ಲಿ ಗೃಹ ಪ್ರಕೃತಿಗೆ ಈ ಮತ್ತು ಇಷು ಪ್ರತ್ಯಯ ಹತ್ತಿವೆ ಅನ್ನೊಬೋದು..
ಒಮ್ಮೆ ಇವನ್ನು ಇಂಗ್ಲೀಸ ಮಾದರಿ ನೋಡ್ರಿ, ಆಗ ನಾನು ಹೇಳಿದ್ದು ಸರಿ ಅನ್ನಿಸ್ಬೋದು..
ಮನೆಯ + ಅಲ್ಲಿ = inside of house
ಮನೆಗಳ + ಅಲ್ಲಿ = inside of houses
ಗೊಂದಲ?
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಶಂಕರಭಟ್ಟರ ಹೊತ್ತಿಗೆ ಈಗ ನನ್ನ ಬಳಿ ಇಲ್ಲವಾದ್ದರಿಂದ ಬೆಂಗಳೂರಿಗೆ ಬಂದಮೇಲೆ ಓದುವೆ..
ಆದರೆ ಶಬ್ದಮಣಿದರ್ಪಣದಲಿ ತುಸು ಸಂಗತಿಗಳು ನನಗೆ ಗೊತ್ತಾದವು..
ದರ್ಪಣಕಾರನು ವಿಭಕ್ತಿಪ್ರತ್ಯಯಗಳು ಹೇಗೆ ಹಚ್ಚಲ್ಪಡುವವು ಎನ್ನುವದನ್ನು ಬಲು ವಿವರವಾಗಿ ಹೇಳಿದ್ದಾನೆ.
ಅವನ ಪ್ರಕಾರ ಕೇವಲ ನಾಮಲಿಂಗಳು (ನಾಮಪದಗಳು) ಮಾತ್ರವಲ್ಲ ಬೇರೆ ಬೇರೆಯಾದ ಏಳು ತರಹದ ಲಿಂಗ ಭೇದಗಳು ಇವನ್ನು ಪಡೆಯುತ್ತವೆ.
ಇಲ್ಲಿ ಲಿಂಗವೆಂದರೆ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಲಿಂಗಳಲ್ಲ... ಯಾವದನ್ನು ನಾವು ಅರಿಮೆಕೆಡದಂತೆ ಅತಿ ಚಿಕ್ಕ ದಾಗಿ ಒಡೆಯ ಬಹುದೋ ಅದು.
ಯ,ವ, ಮ, ಲ , ನ, ದ ಇವುಗಳು ವಿಭಕ್ತಿ ಪ್ರತ್ಯಯಗಳನ್ನು ಹಚ್ಚುವಾಗ ಬರುವವು. ಇವುಗಳ ಸೂತ್ರಗಳನ್ನು ಹೇಳಿದ್ದಾನೆ.
ಆದ್ದರಿಂದ ರಾಮ + ಅ = ರಾಮನ
ಮಗ + ನ = ಮಗನ
ಮರ + ಅ = ಮರದ
ಮರ + ಉ = ಮರವು ಹೀಗೆ
ಈಗಾಗಲೆ ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ ಇದರಬಗ್ಗೆ ಹೇಳಿದ್ದೆನಿ.. ಅದರಂತೆಯೇ ಈಗ, ಆಗ ಅನ್ನುವುಗಳೂ ಕೂಡ.
ಮನೆಗಳಲ್ಲಿ ಇದು ಹೇಗೆ ಅಂದರೆ .. ಮನೆ ಅನ್ನುವ ನಾಮಲಿಂಗವನ್ನು ಬಹುವಚನ ರೂಪವಾಗಿ ಮಾರ್ಪಡಿಸಲು ಮನೆಗಳ್ ಎನ್ನುವ ರೂಪ ಬರುವುದು.
ಆಗ ಮನೆಗಳ್ + ಉ = ಮನೆಗಳು
ಮನೆಗಳ್ + ಅನ್ನು = ಮನೆಗಳನ್ನು
ಮನೆಗಳ್ + ಅಲ್ಲಿ = ಮನೆಗಳಲ್ಲಿ ಹೀಗೆ..
ಆದ್ದರಿಂದ ಮನೆಗಳ್ + ಉ + ಅಲ್ಲಿ = ಮನೆಗಳು + ಅಲ್ಲಿ ಇದು ತಪ್ಪು
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಮನ್ನಿಸಿ..
ಮಗ + ನ = ಮಗನ ಹೀಗಲ್ಲ
ಮಗ + ಅ = ಮಗನ ಇದು ಸರಿ
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಆಗಮ ವ್ಯಂಜನಗಳು ಯ/ವ ಎರಡೇ....!!
ನ, ಳ, ರ ಇವು ಆಗಮ ವ್ಯಂಜನಗಳಲ್ಲ..
ರಾಮನ್ ಇದು ಸಂದಿಯಲ್ಲ.. ಆದ್ರೆ ನ್, ರಾಮ ಅನ್ನೋ ಪ್ರಕೃತಿಗೆ ಸೇರಿ ರಾಮನ್ ಎಂಬುದು ಮಾನಿಸ-ಗಂಡು ಲಿಂಗ, ಏಕವಚನ ಎಂದು ತಿಳಿಸುವುದು.
ರಾಮನ್ + ಅಲ್ಲಿ = ರಾಮನಲ್ಲಿ
ಮಗನ = ಮಗನ್ + ಅ ಹೊರತು != ಮಗ + ಅ ಅಲ್ಲ... ಮಗ +ಅ = ಮಗದ ಯಾಕೆ ಆಗಲ್ಲ ಎಂಬ ಪ್ರಶ್ನೇ ಎತ್ತಬಹುದು..!!
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ದರ್ಪಣಕಾರನು ಕನ್ನಡ ಹಾಗೂ ಸಕ್ಕದ ಇವುಗಳಿಗೆ ಬೇರೆ ಬೇರೆಯಾಗಿ ಹೇಗೆ ವಿಭಕ್ತಿ ಪ್ರತ್ಯಯ ಹಚ್ಚಬೇಕು ಎಂದು ಹೇಳಿ ಮಾದರಿಗಳನ್ನೂ ಕೊಟ್ಟಿರುವನ್ನು.
ಅದನ್ನು ಓದಿರಿ ಅಲ್ಲಿ ಹೆಚ್ಚು ಮಾಹಿತಿ ದೊರಕುವುದು...
ಇಂಗ್ಲೀಷಿನ ಜಾಯಮಾನ ಕನ್ನಡಕ್ಕೆ ಒಗ್ಗುವುದಿಲ್ಲ... ಅಲ್ಲವೆ.
ಅದರಲ್ಲೂ Inside the house(s), In the house(s) ಇವುಗಳು ನನಗೆ ಗೊತ್ತು ಆದರೆ inside of house(s) ಇದು ಸರಿಯೇ ....
ಇಲ್ಲಿಯೂ ಹೀಗೆಯೇ.. ಆಗುವುದು..
ರಾಮನಲ್ಲಿ = ರಾಮನ್ + ಅಲ್ಲಿ = ರಾಮ+ ನ್ + ಅಲ್ಲಿ
ಸೀತಾಳಲ್ಲಿ = ಸೀತಾ + ಅಲ್ಲಿ = ಸೀತಾ + ಳ್ + ಅಲ್ಲಿ
ಕಲ್ಲುಗಳಿಂದ = ಕಲ್ಲು + ಬಹುವನ ರೂಪಕ್ಕಾಗಿ ಗಳ್ + ಇಂದ
ಅವರಲ್ಲಿ = ಅವರ್ + ಅಲ್ಲಿ
ಅವಳಲ್ಲಿ = ಅವಳ್ + ಅಲ್ಲಿ
ಜನರಲ್ಲಿ = ಜನರ್ + ಅಲ್ಲಿ
ಕಮಲ(ಳ?) ಳಲ್ಲಿ = ಕಮಲ್ + ಅಲ್ಲಿ = ಕಮಲ+ ಳ್ + ಅಲ್ಲಿ ಇದು ಹೆಣ್ಣನ್ನು ಸೂಚಿಸಲು,
ಕಮಲದಲ್ಲಿ = ಕಮಲ್ + ಅಲ್ಲಿ = ಕಮಲ್ + ದ್ + ಅಲ್ಲಿ ಇದು ಹೂವನ್ನು ಸೂಚಿಸಲು
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಕವಿ...
ದರ್ಪಣಕಾರನು ಹಲವು ತಪ್ಪುಗಳನ್ನು ಮಾಡಿದ್ದಾರೆ.. ಅವುಗಳಲ್ಲಿ ಇದೂ ಒಂದು..
ಜನರ್ + ಅಲ್ಲಿ ಇಲ್ಲವೇ ಜನರು + ಅಲ್ಲಿ ಎರಡು ಒಂದೇ ( ಕನ್ನಡದಲ್ಲಿ ಎರಡ ಕೂಡಿಕೆಯೋ ಜನರಲ್ಲಿ ಎಂದೇ ಕೊನೆಯಾಗುವುದು )
ಇಲ್ಲಿ
ಜನ = ಪ್ರಕೃತಿ
ರ್/ರು = ಇದು ವಚನ-ಲಿಂಗ ಸೂಚಕ
ಅಲ್ಲಿ = ವಿಭಕ್ತಿ
ಈ ನೋಡಿ..
ನಾಮಪದಗಳ ಸಂಧಿಗಳ ನೇಮ.
ಪ್ರಕೃತಿ + ವಚನ-ಲಿಂಗ ಸೂಚಕ + ವಿಭಕ್ತಿ.. ಈ ನಿಯಮೇ ಹೆಚ್ಚು ಸರಿ.. ಮತ್ತು ಎಲ್ಲ ವಿಭಕ್ತಿ ಸಂಧಿಗಳನ್ನು ಹೀಗೇ ಬಿಡಿಸಬೊದು..
( ಗಮನಿಸಿರಿ, ಸಕ್ಕದಲ್ಲಿ ವಿಭಕ್ತಿ ಸಂದಿಯಿಂದ ಆಗಲ್ಲ )
ಮಾದರಿ : ಪ್ರಕೃತಿ = ಜನ
ಜನ + ರು/ರ್ ( ಲಿಂಗ-ವಚನ = ಮನುಷ್ಯಲಿಂಗ, ಬಹುವಚನ ) + ಇಂದ = ಜನರಿಂದ
ಕಮಲ + ಳ್/ಳು + ಅಲ್ಲಿ = ಕಮಲಳಲ್ಲಿ
ಕಮಲ + ರ್/ರು + ಅಲ್ಲಿ = ಕಮಲರಲ್ಲಿ
ಕಮಲ + ನ್/ನು + ಅಲ್ಲಿ = ಕಮಲನಲ್ಲಿ ( ಇಲ್ಲಿ ಕಮಲ ಅಂತ ಒಬ್ಬ ಗಂಡಸಿನ ಹೆಸರಿರಬೋದಲ್ಲ )
ಕಮಲ + ದ್/ದ + ಅಲ್ಲಿ = ಕಮಲದಲ್ಲಿ ( ಇಲ್ಲಿ ಎಡವಟ್ಟು ) ( ಇದು ಎಡವಟ್ಟು )
ಕಮಲ + ಗಳ್/ಗಳು + ಅಲ್ಲಿ = ಕಮಲಗಳಲ್ಲಿ...
ಆದ್ರೇ
ಕಮಲಳ + ಅಲ್ಲಿ = ಕಮಲಳಲ್ಲಿ
ಕಮಲರ + ಅಲ್ಲಿ = ಕಮಲರಲ್ಲಿ
ಕಮಲನ + ಅಲ್ಲಿ = ಕಮಲನಲ್ಲಿ
ಕಮಲದ + ಅಲ್ಲಿ = ಕಮಲದಲ್ಲಿ
ಕಮಲಗಳ + ಅಲ್ಲಿ = ಕಮಲಗಳಲ್ಲಿ
ನೋಡಿ ಇದು ಇದು ಸರಿಯಾಗಿ ಬರುವುದು...
ಕನ್ನಡದಲ್ಲಿ ಇರುವ ನಾಲ್ಕು ಲಿಂಗಗಳು( + ೧ ) ಸರಿ ಹೊಂದುವುದು...
ದರ್ಪಣಕಾರರನು ಸಕ್ಕದದ ವ್ಯಾಕರಣಕ್ಕೆ ಕನ್ನಡವನ್ನು ಹೊಂದಿಸಲು ಹೋಗಿ ಒಂದು ಗೊಂದಲವಾಗಿದೆ... ಎಂದೇ ಹೇಳಬೇಕು..
ಏಕೆಂದ್ರೆ ಅವರ ನಿಯಮಗಳು ಹಲವು ಸರತಿ ಸರಿಬರುವುದಿಲ್ಲ.
...
ಅಂದ ಹಾಗೆ ನೀವು ಬಿಡಿಸಿದ ಕಮಲ್ + ಅಲ್ಲಿ ತಪ್ಪು...
ಏಕೆಂದ್ರೆ ಪ್ರಕೃತಿ ಕಮಲ, ಕಮಲ್ ಅಲ್ಲ.. ಜೊತೆಗೆ ನ, ಳ, ರ, ಇವು ಆಗಮವಾಗುವುದಿಲ್ಲ.. ಆಗಮದಲ್ಲಿ ಬರುವ ವ್ಯಂಜನ ವ/ಯ ಎರಡೇ!
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ತಪ್ಪೂ೦ತ ಹೇಳುದ್ನಾ...ನನಗ್ ಗೊತ್ತಿದ್ದ೦ಗೆ ಬಿಡುಸ್ದೆ.ನನಗ್ ಗೊತ್ತಿದ್ದ೦ಗೆ...ಕ್ಷಮೆಯಿರ್ಲಿ...ಆನು ದೇವಾ ಹೊರಗಣವನು.....
ಕೂಡೆ ಬಳಕೆಯ ಬಗ್ಗೆ ನ೦ಗೆ comments ಕೊಡಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ವಿನಾಯಕ
ಅ೦ತೂ ಕೊಳಂಬೇ೦ತ ದೊಡ್ಡ ಬಿರುದನ್ನೇ ಕೊಟ್ರಿ!)
ಸಾಮಾನ್ಯವಾಗಿ 'ಮನೆ ಕೂಡಿಸು ಅಲ್ಲಿ' ಅ೦ತ ಹೇಳ್ತೀವಿ...
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಬಿರುದು ಕೊಟ್ಟಿದ್ದಕ್ಕೆ ದಯವಿಟ್ಟು ಮನ್ನಿಸಿ ದೊರೆಗಳೆ.
ಬರೆದು ಮುಗಿಸಬೆಕು ಅನ್ನೋ ಗದ್ದಲದಲ್ಲಿ ಹೀಗಾಯಿತು...
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ಕೆಪಿಬೊಳಂಬು, ನೀವು ಎತ್ತಿರೋದು ಒಂದು ಆಳವಾದ, ಚೂಪಾದಿ ಮಾತು. ನಿಮ್ಮ ಚುಟುಕನ್ನು ಓದಿದ ತಕ್ಷಣ ನನಗೆ ನೆನಪಾದದ್ದು,
"ಕಣ್ಣಾ ಮುಚ್ಚೆ ಕಾಡೆಗೂಡೆ, ಉದ್ದಿನಮೂಟೆ ಉರುಳೇಹೋಯ್ತು.." ಯಾಕೆ ಅಂತ ಗೊತ್ತಿಲ್ಲ.
ನಾನಂತೂ ಇಲ್ಲಿಯವರೆಗೂ + ಅನ್ನು ಪ್ಲಸ್ ಎಂತಲೇ ಹೇಳಿಕೊಂಡು ಬೆಳೆದಿದ್ದೆ. ನೀವು ಮೊದಲುಮಾಡಿದ ಚುಟುಕದ ಮೂಲಕ ಆ ದಿಸೆಯಲ್ಲಿ ಯೋಚಿಸುವಂತಾಯಿತು. ನನಗೇನೋ, "ಪ್ಲಸ್" ಹೊರಳಿಸಿ "ಕೂಡೆ(ಡಿ)" ಎಂದು ಹೇಳುವ ಶೈಲಿ ಇಷ್ಟವಾಯಿತು. ಏಕೆಂದರೆ ಆಡುಮಾತು ಮತ್ತು ಬರವಣಿಗೆಯ ಮಾತು ಒಂದಾಗುತ್ತೆ ನೋಡಿ. ಡೈಗ್ಲಾಸಿಯಾ ಕಡಿಮೆ ಆಗತ್ತೆ.
ಆದರರೆ ನನಗೆ ಒಂದು ಮಾತು ಹೇಳಬೇಕೆನಿಸಿತು. ಈ ಕೆಳಗಿನ ಬಳಕೆಗಳನ್ನು ನೋಡಿ.
ಮನೆ + ಅಲ್ಲಿ = ಮನೆಯಲ್ಲಿ
೧. ಮನೆ ಮತ್ತು ಅಲ್ಲಿ = ಮನೆಯಲ್ಲಿ
೨. ಮನೆ, ಅಲ್ಲಿ ಕೂಡಿ = ಮನೆಯಲ್ಲಿ (ಅಂದರೆ ಒಂಥರಾ ಮನೆ, ಅಲ್ಲಿ + = ಮನೆಯಲ್ಲಿ ತರಹ)
೪. ಮನೆ ಕೂಡೆ ಅಲ್ಲಿ = ಮನೆಯಲ್ಲಿ
("ಅವನ್ ಕೂಡೆ ಇವನ್ನೂ ಕಳ್ಸು" ಎಂಬ ಮಾದರಿಯಲ್ಲಿ. ಆದರೆ ಕೆಲವೆಡೆ ಇದಕ್ಕೆ, "ಅವನ್ ಕುಟೆ(ಕೂಟೆ, ಕುಟ) ಇವನ್ನೂ ಕಳ್ಸು" ಎಂಬ ಬಳಕೆಯಿದೆ). ಹಾಗಾಗಿ
೫. ಮನೆ ಕುಟ ಅಲ್ಲಿ = ಮನೆಯಲ್ಲಿ ಎಂಬುದೂ ಸರಿಹೋಗುತ್ತದೆ
ಪ್ಲಸ್, ಮತ್ತು, ಕುಟ, ಕೂಟ, ಕೂಟೆ, ಕೂಡೆ, ಕೂಡಿ, ಇವೆಲ್ಲವುಗಳ ನಡುವೆ ನಿಮಗೆ ಯಾವುದು ಸರಳವೋ ಅದನ್ನು ಬಳಸೋಣವಂತೆ. ನಿಮ್ಮೂರಿನ ಪಳ್ಳಿಗಳಲ್ಲಿ ಇದನ್ನು ಬಳಸುತ್ತೀರಾ ? ಅಂದಹಾಗೆ, ನಿಮ್ಮೂರಲ್ಲಿ ಗುಣಾಕಾರ ಮತ್ತು ಭಾಗಾಕಾರಗಳಿಗೆ ಏನನ್ನುತ್ತಾರೆ ?
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ನಾವೂ ಅವನ್ ಕೂಟೇ/ಕೂಡೇ ಹೋಗು ಎಂದೇ ಬಳಸೋದು...
ಅದನ್ನು ಬಿಟ್ಟು ಸಂದಿ ಸಂಗತಿ ನೋಡು....
ರಾಮನಲ್ಲಿ ಇದನ್ನು ರಾಮ + ಅಲ್ಲಿ ಅಂತ ಬಿಡಿಸಿ ನಕಾರಾಗಮ ಅನ್ನಕ್ಕೆ ಆಯ್ತದಾ?
ಇದನ್ನು ರಾಮನು + ಅಲ್ಲಿ ಎಂದೇ ಅಲ್ವ ಬಿಡಿಸಬೇಕು?
ಇನ್ನೊ ಹಲವವೆ..
ಸೀತಾಳಲ್ಲಿ ?
ಕಲ್ಲುಗಳಿಂದ?
ಅವರಲ್ಲಿ?
ಅವಳಲ್ಲಿ?
ಜನರಲ್ಲಿ?
ಕಮಳಳಲ್ಲಿ?
ಉ: ಸ೦ಧಿ ವಿ೦ಗಡಿಸುವ ಚಿಹ್ನೆ
ತುೞಿಲು/ನನ್ನಿ ಸುನಿಲ್ .
ಆಡುಮಾತು ಮತ್ತು ಬರವಣಿಗೆಯ ಮಾತು ಒ೦ದಾದರೆ ಚ೦ದ, ಹಾಗ೦ತ informal ಮತ್ತು formal ವ್ಯತ್ಯಾಸಾನ ಉಳುಸ್ಕ೦ಬಾರ್‍ದು ಅನ್ನೋದು ಸರಿಯಲ್ಲಾ೦ತೀನಿ.
ನಮ್ಮ ಊರತ್ಲಾಗೆ 'ಕೂಡೆ' ಅನ್ನೋದನ್ನ 'ಒಟ್ಗೆ' ಅ೦ತೀವಿ.ನನ್‍ಗ೦ತೂ ಕೂಡೆನೇ ಹಿಡ್ಸಿರೋದು. ಗುಣಾಕಾರಕ್ಕೆ 'ಗುಣಿಸು' ಮತ್ತು ಭಾಗಾಕಾರಕ್ಕೆ 'ಭಾಗಿಸು' ಅ೦ತ ಬಳಸ್ತೀವಿ.
ನಾವು ಅನುವಾದಕ್ಕೆ ಹೆಚ್ಚು ಒಗ್ಕೊ೦ಬಿಟ್ಟಿದ್ದೀವಿ. so, 'ಮನೆ ಕೂಡೆ ಅಲ್ಲಿ' ಅ೦ದಾಗ 'ಮನೆ ಪ್ಲಸ್ ಅಲ್ಲಿ' ಅ೦ದ೦ಗಾಗತ್ತೆ ಅನ್ಕ೦ತೀನಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು