Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ

July 29, 2005 - 12:37pm — olnswamy

ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ
ನೆರೆ ಮೂರು ಲೋಕವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ

ಬಹುಶಃ ಮನುಷ್ಯ ಮಾತ್ರವೇ ತಾನು ಏನೋ ಅಗಬೇಕೆಂದು ಬಯಸುತ್ತ, ಆಗಲಿಲ್ಲವೆಂದು ಕೊರಗುತ್ತ ಇರುವ ಪ್ರಾಣಿ. ನನಗೆ ಸಿಕ್ಕ ಕುದುರೆಗಿಂತ ಇನ್ನು ಬೇರೆ ಕುದುರೆ ಸಿಕ್ಕಿದ್ದರೆ ಎಂದು ಬಯಸುತ್ತ, ಅಂಥ ಬಯಕೆಯ ಕುದುರೆ ಸಿಕ್ಕರೆ ಎಂದು ಆಶಿಸಿ ಹಲ್ಲಣವನ್ನು ಬೆನ್ನಮೇಲೆ ಹೊತ್ತು ತಿರುಗುತ್ತ ಇರುತ್ತೇವೆ. ಇದು ವೀರರ ಲಕ್ಷಣವೂ ಅಲ್ಲ, ಧೀರರ ಲಕ್ಷಣವೂ ಅಲ್ಲ.
ತೆಂಗಿನ ಮರ ತಾನು ಹುಣಿಸೆ ಮರವಾಗಬೇಕಿತ್ತು, ಮಲ್ಲಿಗೆ ಗಿಡವಾಗಬೇಕಿತ್ತು ಎಂದು ಬಯಸುತ್ತದೆಯೇ? ನಾವೆಲ್ಲರೂ ಈಗ ಇರುವುದಕ್ಕಿಂತ ಬೇರೆ ಏನೋ ಆಗಬೇಕೆಂದು ಹಂಬಲಿಸುತ್ತ ಅಂಥ ಹಂಬಲದಲ್ಲೇ ಬದುಕನ್ನು ಕಳೆದುಬಿಡುತ್ತೇವಲ್ಲ!
ಇಂಥ ಹಂಬಲವೇ ಎಸ್ಕೇಪಿಸಂ ಅಲ್ಲವೆ? ಇರುವ ಸತ್ಯವನ್ನು ಒಪ್ಪಿಕೊಳ್ಳದೆ ಇಷ್ಟವಾಗುವ ಸತ್ಯವನ್ನು, ಪ್ರಿಯವಾಗುವ ಸತ್ಯವನ್ನು ಬರಿದೇ ಹುಡುಕುತ್ತ ಬಳಲುತ್ತೇವೆ. ಹಾಗೆ ಬಳಲುವುದೇ ನಮ್ಮ ದೊಡ್ಡಸ್ತಿಕೆ ಎಂದು ಭ್ರಮಿಸುತ್ತೇವೆ.
ವೀರರು, ಧೀರರು ಆದವರು ತಮ್ಮ ಸತ್ಯವನ್ನು ಒಪ್ಪಿಕೊಂಡು ತಮ್ಮ ಪಾಲಿಗೆ ಬಂದ ಕುದುರೆಯನ್ನು ಪಳಗಿಸಿಕೊಳ್ಳಬೇಕು ಅಲ್ಲವೆ?

  • ಚಿಂತನೆ
Ornamental seperator
  • Login or register to post comments
  • 850 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 29, 2005 - 2:48pm — muralihr

ಕತ್ತೆ ಮೇಲೆ ಹೋಗಿ ಕುದರೆ ಮೇ

muralihr's picture

ಸಾರ್,
ನಮಸ್ಕಾರ, ಕೆಲವೊಮ್ಮೆ ಕತ್ತೆ ಮೇಲೆ ಹೋಗಿ ಕುದರೆ ಮೇಲೆ ಹೋಗ್ತಾ
ಇದ್ದೇನೆ ಅನ್ನೋವ್ರು ಇದ್ದಾರೆ.

ಆಮೇಲೆ , ಕತ್ತೆ ಮೇಲೆ ಹೊಗುವವರಿಗೆ ಇದು ಅನ್ವಯಿಸೊದಿಲ್ಲಾ.

ಆಲ್ಲಮ್ಮಾ ಪ್ರಭುಗಳು ಕಳ್ಳ ಪ್ರಭುಗಳಿ೦ದ ನಮ್ಮ ನಾಡನ್ನು ಕಾಪಡಲಿ.

- ಮುರಳಿ,

  • Login or register to post comments
  • link
  • Email this ಪ್ರತಿಕ್ರಿಯೆ
July 29, 2005 - 5:48pm — olnswamy

ಕತ್ತೆ ಕುದುರೆ

olnswamy's picture

ಕೂತಿರುವುದು ಕತ್ತೆಯ ಮೇಲೆ ಎಂದು ಗೊತ್ತಿದ್ದರೆ ಬೇಕಾದಷ್ಟಾಯಿತು. ಆ ಅರಿವನ್ನು ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ. ಸಿಕ್ಕಿದ್ದು ಕತ್ತೆಯೇ ಅಗಿದ್ದರೆ ಅದನ್ನೇ ಸವಾರಿ ಮಾಡಬೇಕು, ಇಲ್ಲದ ಕುದುರೆಯನ್ನು ಬಯಸಬಾರದು ಎಂಬ ಭಯಂಕರ ಸತ್ಯವನ್ನು ಅಲ್ಲಮ ಹೇಳುತ್ತಿದ್ದಾನೆ, ಅಲ್ಲವೇ!
ನಾಗಭೂಷಣ

  • Login or register to post comments
  • link
  • Email this ಪ್ರತಿಕ್ರಿಯೆ
July 29, 2005 - 8:32pm — hpn

ಅರಿವು

hpn's picture

"ಆ ಅರಿವನ್ನು ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ"

ಎಂತಹ ಸತ್ಯವಾದ ಮಾತನ್ನು ಹೇಳಿದಿರಿ! ಡಿ ವಿ ಜಿ ಯವರ ಕಗ್ಗದಲ್ಲಿ ಇದೇ ರೀತಿಯ ಸಂದೇಶ ನೀಡುವಂತಹದ್ದೊಂದು ಇಲ್ಲಿದೆ:

ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? ।
ತಿರುಕಹಾರುವನಾಗಿ ಮೀಸೆ ತಿರುಚುವೆಯ? ।।
ಇರುವುದವನವನಿಗವನವನ ತಾಣದ ಧರ್ಮ ।
ಅರಿವೆ ಋತುಗತಿಯಂತೆ -- ಮಂಕುತಿಮ್ಮ ।।

Smiling

  • Login or register to post comments
  • link
  • Email this ಪ್ರತಿಕ್ರಿಯೆ
July 29, 2005 - 6:36pm — tvsrinivas41

ಈ ಅಲ್ಲಮ್ಮಾ

tvsrinivas41's picture

ಈ ಅಲ್ಲಮ್ಮಾ ಪ್ರಭು ಯಾರು ಸಾರ್
ತಾಯಿ ಎಲ್ಲಮ್ಮನ ತಮ್ಮನಾ? (ಸುಮ್ನೆ ತಮಾಷೆಗೆ ಛೇಡಿಸಲು ಹಾಗೆ ಹೇಳಿದೆ)
ಎಲ್ಲರಿಗೂ ಇಂತಹ ತಪ್ಪುಗಳು ಆಗೇ ಆಗುತ್ತದೆ.

ಕನ್ನಡದಲ್ಲಿ ಟೈಪಿಸುವ ಬಗೆಗೆ ಕನ್ನಡ ಕಲಿಕೆ ವಿಭಾಗದಲ್ಲಿ ತಿಳಿಸುವೆ.

ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
  • ಮತ್ತಷ್ಟು ಗಾದೆಗಳು
  • "ಕುವೆಂಪು ಕವಿಯೇ ಅಲ್ಲ"
  • ಝೆನ್ ಕತೆ ೨೫: ಒಳ್ಳೆಯ ಆಶೀರ್ವಾದ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 4 ಅತಿಥಿಗಳು ಆನ್ಲೈನ್ ಇರುವರು.

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator