ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಚಂದಿರಗೊಂದು ಕಾಗದ

October 22, 2007 - 10:31pm — poornimas

ಚಂದಿರಗೊಂದು ಕಾಗದ
************

ಅಮ್ಮಾ,
ಚಂದಿರಗೊಂದು ಕಾಗದ
ಬರೆಯುವೆ ಹಗಲೂ ಬಾರೆಂದು.
ನಿನ್ನನು ನೋಡಿ ಮಮ್ಮು
ತಿನ್ನುವೆ ಮೊಗವನು ತೋರೆಂದು.

ಉರಿವ ಸೂರ್ಯನ ಹೇಗೆ
ನೋಡಲೇ ನೀನು ಉಣಿಸುವಾಗ ?
ತಾರೆಯ ಜೊತೆಯಲಿ ಚಂದಿರ
ನಿಂತಿರೆ ಊಟಕೆ ರುಚಿ ಆಗ.

ನನ್ನಯ ಕಾಗದ ಓದಲು
ಅವನಿಗೆ ಬರುವುದೇ ಕನ್ನಡ ?
ಬಾರದೆ ಇದ್ದರೆ ನೀನೇ
ಕಲಿಸೇ ನನ್ನಯ ಸಂಗಡ.

ಹುಣ್ಣಿಮೆ ಬಂದರೆ ಬಾನಿನ
ಬಣ್ಣವು ಬಿಳುಪಾಯಿತು ಹೇಗೇ !?
ಚಂದ್ರನೂ ನನ್ನಂತೆ ಬಟ್ಟಲ
ಹಾಲನು ಚೆಲ್ಲಿಕೊಂಡನೇನೇ
ಅಮ್ಮಾ , ಚೆಲ್ಲಿಕೊಂಡನೇನೇ !?

- ೦ -

  • ಶಿಶು ಸಾಹಿತ್ಯ
~.~
  • Login or register to post comments
  • 492 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 23, 2007 - 2:57am — keshav

ಉ: ಚಂದಿರಗೊಂದು ಕಾಗದ

keshav's picture

ಸೂಪರ್! ತುಂಬ ಇಷ್ಟವಾಯಿತು
Visit my blog:
http://kannada-nudi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 23, 2007 - 3:25am — hamsanandi

ಉ: ಚಂದಿರಗೊಂದು ಕಾಗದ

hamsanandi's picture

ಬಹಳ ಚೆನ್ನಾಗಿ ಬಂದಿದೇ ರೀ, ಒಳ್ಳೇ ಮಟ್ಟು ಹಾಕಿ ಹಾಡಬಹುದು!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 23, 2007 - 3:35am — poornimas

ಉ: ಚಂದಿರಗೊಂದು ಕಾಗದ

poornimas's picture

ಕೇಶವ್ ಮತ್ತು ಹಂಸಾನಂದಿ ಅವರಿಗೆ ಧನ್ಯವಾದಗಳು. ಇದು ನನ್ನ ಪುಟ್ಟ-ಪುಟ್ಟಿಗೆ ಬಹಳ ಇಷ್ಟದ ಹಾಡು. ಈ ಹಾಡನ್ನು ತುಂಬಾ ಸಡಗರದಿಂದ, ಮುದ್ದಾಗಿ ಹಾಡ್ತಾರೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 23, 2007 - 11:46am — Sunil Jayaprakash

ಉ: ಚಂದಿರಗೊಂದು ಕಾಗದ

Sunil Jayaprakash's picture

ಹಾಡಿ ನಮ್ಮಯ ಮನ ತಣಿಸ್ರಲಾ ಮತ್ತೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 23, 2007 - 12:13pm — mahesha

ಉ: ಚಂದಿರಗೊಂದು ಕಾಗದ

mahesha's picture

ಹೌದ್ರೀ ...

ಹಂಸಾನಂದಿಗಳ ಹಂಸಗಾನಕೆ ಹಾತೊರೆಯುತ್ತಿರುವ ಕಿವಿಮನಗಳೆಮ್ಮದು.

ಹಂಸಾನಂದಿಗಳೇ ನಿಮ್ಮ ಹೆಮ್ಮೇಳಕ್ಕೆ ನಮ್ಮ 'ಪಿಟೀಲು' ಚನ್ನೀಲ ಇದ್ದಾನೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 23, 2007 - 10:52am — mahesha

ಉ: ಚಂದಿರಗೊಂದು ಕಾಗದ

mahesha's picture

"ನನ್ನಯ ಕಾಗದ ಓದಲು
ಅವನಿಗೆ ಬರುವುದೇ ಕನ್ನಡ ?
ಬಾರದೆ ಇದ್ದರೆ ನೀನೇ
ಕಲಿಸೇ ನನ್ನಯ ಸಂಗಡ."

ಯಪ್ಪ ಬೊಂಬಾಟ್..... ನಿಮ್ಮಂತಹ ತಾಯಂದಿರ ಕಯ್ಯಲ್ಲಿ ತುತ್ತು ತಿಂದ್ರೆ, ಯಾವ ಯುನಿವರಿಸಿಟಿಗೆ ಹೋಗದೆ ಮಕ್ಕಳು ಕನ್ನಡದ ಪಂಟರು, ಕಲಿಗಳಾಗ್ತಾರೆ.

ನಿಮ್ಮ ಕಲ್ಪನೆ ಸಕ್ಕತ್ ಚಂದ.. "ತಿಂಗಳನಿಗೆ ಕನ್ನಡ ಬಾರದೇ ಇದ್ರೆ, ನನ್ನ ಜೊತೆ ಕಲಿಸೇ" ಎಂದು ಕೂಸು ಹೇಳುವುದು ಸಕ್ಕತ್ರಿ...!!

ಹಿಂಗೆ ಬರೀರಿ.. ಬರೀತಾ ಇರಿ..

ಇಂತಹ "ಮಂಮ್" ಹಾಡುಗಳಂನು ನಿಮ್ಮಂತ ಕಬ್ಬಿಗಿತ್ತಿಯರೇ ನೆಗಳ್ಚಲು/ರಚಿಸಲು ಆರುವುದು/ಸಾಧ್ಯ. ನಮ್ಮಂತ ಗಂಡು ತಲೆಗಳಿಗೆ ಇವೆಲ್ಲ ಹೊಳೆಯೋದು ನಿಬ್ಬರ/ಅತಿಶಯವೇ ಸರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 23, 2007 - 1:39pm — sindhu

ಉ: ಚಂದಿರಗೊಂದು ಕಾಗದ

sindhu's picture

ಪೂರ್ಣಿಮಾ,

ತುಂಬ ಚೆನ್ನಾಗಿದೆ.

'ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮಾ ಚಂದಿರ ನನ್ನವನು, ನಿನ್ನವ ನಾನಾಗಿರುವುದರಿಂದ ಅಮ್ಮಾ ಚಂದಿರ ನಿನ್ನವನು' ಅಂತ ಕುವೆಂಪು ಅವರ ಕವಿತೆ.
ಅದರ ಇಂಪು, ಸೊಂಪು ನೆನಪಾಯಿತು ಇದನ್ನು ಓದಿದಾಗ. ತುಂಬ ಇಷ್ಟವಾಯಿತು. ಅನುಕೂಲವಿದ್ದರೆ ನಿಮ್ಮ ಪುಟಾಣಿ ಕಿನ್ನರರು ಹಾಡಿದ್ದನ್ನ ರೆಕಾರ್ಡ್ ಮಾಡಿ ಕೇಳಿಸಿ.

ಪ್ರೀತಿಯಿಂದ
ಸಿಂಧು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 29, 2007 - 8:29pm — poornimas

ಉ: ಚಂದಿರಗೊಂದು ಕಾಗದ

poornimas's picture

ಖಂಡಿತ ಸಿಂಧು, ಪ್ರಯತ್ನ ಪಡ್ತೀನಿ. ನಿಮಗೆ ಮೆಚ್ಚುಗೆ ಆಗಿದ್ದು ನನಗೆ ತುಂಬಾ ಖುಷಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 29, 2007 - 8:24pm — poornimas

ಉ: ಚಂದಿರಗೊಂದು ಕಾಗದ

poornimas's picture

ಮಹೇಶರೇ, ಬಹಳ ದೊಡ್ಡ ಮಾತು ಹೇಳಿದ್ರಿ. ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಾಪು ಮತ್ತು ಚಂದಮಾಮ
  • ಬೆಳ್ಳಿಯ ಬಟ್ಟಲು
  • ಸಹನಶೀಲತೆ(ಪ್ರೇರಕ ಪ್ರಸಂಗಗಳು)
  • ಚುಕ್ಕಿ ಚಂದ್ರಮರ ಜೂಟಾಟ
  • " ಶ್ರೀಕೃಷ್ಣ ಬಟಾಟಾವಡ ಅಂಗಡಿ ", ಮುಂಬೈ, ದಾದರ್ ಪಶ್ಚಿಮ !
Syndicate content

ಲೇಖಕರು

poornimas's picture

ಪೂರ್ಣ ಹೆಸರು
poornima

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator