ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಸಂಪದದ ಒಳಹೊರಗೆ ಕನ್ನಡದ ಬಗ್ಗೆ ಕಾಳಜಿ ಇರುವ ( ಅರಿವಿನ ಜೊತೆಗೆ
) ಜನರಲ್ಲಿ ಉಂಟಾಗುವ ವಾದವಿವಾದಗಳು ನನಗೆ ಒಮ್ಮೊಮ್ಮೆ ಅಚ್ಚರಿಯನ್ನು ಕೆಲವೊಮ್ಮೆ ಬೇಜಾರನ್ನು ಉಂಟು ಮಾಡುತ್ತವೆ.ಈ ಗಲಾಟೆ ಲಟಾಪಟಿಗಳು ವ್ಯಕ್ತಿ, ಜಾತಿಗಳನ್ನು ತೆಗೆಳುವದರಲ್ಲೋ ಅಥವಾ ಒಣ ಪಾಂಡಿತ್ಯ ತೋರುವುದರಲ್ಲೋ ಮುಗಿಯುತ್ತದೆ. ಇವುಗಳಲ್ಲಿ ನಾನು ಕಂಡ ಸಾಮಾನ್ಯ ಸಂಗತಿಗಳು ಇಂತಿವೆ.
ಅಚ್ಚ ಕನ್ನಡ ಕುವರರ ಕೂಗು
- ಸಂಸ್ಕೃತದಿಂದಲೇ ಕನ್ನಡಕ್ಕೆ ಕುತ್ತು.
- ಮಹಾಪ್ರಾಣಗಳ ಪ್ರಾಣ ತೆಗೀಬೇಕು.ಕನ್ನಡದಲ್ಲಿ ರುವ ಸಂಸ್ಕೃತ ಒರೆಗಳನ್ನು ಓಡಿಸಬೇಕು.
- ಕನ್ನಡ ದ್ರಾವಿಡ ನುಡಿ.ಆದ್ದರಿಂದ ಕನ್ನಡಿಗರು ದ್ರಾವಿಡ ತಳಿ. ಸಂಸ್ಕೃತ ನಮ್ಮದಲ್ಲದ (ಆರ್ಯ) ಬೇರೆ ತಳಿಯ ನುಡಿ.
- ಸಂಸ್ಕೃತ ಹಾರುವರ ಹೇರಿಕೆ.ಅದರಲ್ಲಿರುವ ಅರಿಮೆ ಒಂದು ಧರ್ಮಕ್ಕೆ ಮಾತ್ರ ಸೇರಿದ್ದು.
- ಸಂಸ್ಕೃತದಿಂದ ನಾವು ಕಲಿಯುವಂತದ್ದು ಏನೂ ಇಲ್ಲ. ಹೊಟ್ಟೆ ಹೊರೆಯೋಕೆ ಏನೂ ಗಿಟ್ಟುವುದಿಲ್ಲ.
- ಸಂಸ್ಕೃತವನ್ನು ಹೊಗಳುವುದು ಅಂದರೆ ಕನ್ನಡಕ್ಕೆ ಎರೆಡು ಬಗೆಯುವುದು.
ಸಂಸ್ಕೃತ ಸಮರ್ಥಕರ ವಾದಸರಣಿ
- ಸಂಸ್ಕೃತ ಕನ್ನಡದ ಜನನಿ (ದೇವಕಿಯಲ್ಲದಿದ್ದರೂ ಕನಿಷ್ಟ ಯಶೋದೆ).
- ಸಂಸ್ಕೃತವಿಲ್ಲದ ಕನ್ನಡ ಸತ್ವಹೀನ. ಬಹಳಷ್ಟು ಕನ್ನಡ ಪದಗಳು ಸಂಸ್ಕೃತದ ಭಿಕ್ಷೆ.ಪಾರಿಭಾಷಿಕ ಪದಗಳಿಗೆ ಸಂಸ್ಕೃತವೇ ಶ್ರೇಷ್ಟ.
- ಸಂಸ್ಕೃತದ ವಿರುದ್ಧ ಮಾತಾಡುವವರೆಲ್ಲಾ ಜಾತಿ ರಾಜಕೀಯದ ಉದ್ದೇಶದಿಂದ ಮಾಡುತ್ತಾರೆ.
- ನಮ್ಮ ಧರ್ಮ ಮತ್ತು ಸಂಸ್ಕೃತಿಯ ಸಾರವಿರುವುದೇ ಸಂಸ್ಕೃತದಲ್ಲಿ.
- ಸಂಸ್ಕೃತ ಸಕಲ ಜ್ಞಾನಗಳ ಭಂಢಾರ.ಮೇಲಾಗಿ ದೇವ ಭಾಷೆ
- ಸಂಸ್ಕೃತ ಗಣಕಕ್ಕೆ ಹೇಳಿ ಮಾಡಿಸಿದ ಭಾಷೆ.ಪಾಣಿನಿಯ ಅಷ್ಟಾಧ್ಯಾಯೀ ಕನ್ನಡಕ್ಕೂ ಚಾಚೂ ತಪ್ಪದೆ ಅನ್ವಯಿಸುತ್ತದೆ.
ತಮಾಷೆಯೇನೆಂದರೆ ಹೊರಗಿನವರಿಗೆ ಇವನ್ನೆಲ್ಲಾ ನೋಡಿದ ಮೇಲೆ ಕರ್ನಾಟಕದಲ್ಲಿ ಎಲ್ಲಾ ಕಡೆ ಬೀದಿ ಕಾಳಗ ನಡಿಯುತ್ತಾ ಇದೆ ಅಂತ ಅನ್ನಿಸಬಹುದು . ಆದರೆ ಆ ರೀತಿಯ ಪರಿಸ್ಥಿತಿ ಎಲ್ಲೂ ಇಲ್ಲ. ನಮ್ಮ ಈ ಕನ್ನಡ ಕಲಿಗಳು ಕೂಡ ಸಂಸ್ಕೃತವನ್ನು ದ್ವೇಷಿಸುವುದಿಲ್ಲ. ಸಂಸ್ಕೃತ ವೀರರ ನಿಜವಾದ ಒಲವಿನ ಭಾಷೆ ಕನ್ನಡವೇ. ಇನ್ನೂ ಹೇಳಬೇಕೆಂದರೆ ಅಂತರಜಾಲದಲ್ಲಿ ಸುಳಿದಾಡುವ ಎಷ್ಟೋ "ಕನ್ನಡ ಕಲಿ"ಗಳು "ಸಂಸ್ಕೃತ ವೀರ"ರಿಗಿಂತ ಹೆಚ್ಚು ಸಂಸ್ಕೃತ ಕಲಿತಿರುತ್ತಾರೆ."ಸಂಸ್ಕೃತ ವೀರ"ರು ಕೂಡ ಕಾಳಿದಾಸನಿಗಿಂತ ಕುಮಾರವ್ಯಾಸನನ್ನು ಓದಿರುವ ಸಾಧ್ಯತೆಯೇ ಹೆಚ್ಚು. ಇದನ್ನು ನೋಡಿದಾಗ ನನಗೆ ಈ ಮೇಲ್ಕಾಣಿಸಿದ ನಿಲುವುಗಳೆಲ್ಲಾ ಸುಮ್ಮನೆ ಅತಿಯಾಟ ("extreme posturing") ಅಂತ ಅನ್ನಿಸುತ್ತೆ.ನಾನು ಇವನ್ನು ಅಣಕವಾಡುವ ರೀತಿಯಲ್ಲಿ ಪ್ರಸ್ತಾಪಿಸಿರುವುದನ್ನು ಗಮನಿಸಿ. ಇದು ಖಂಡಿತವಾಗಿ ಉದ್ದೇಶಿತವೆ. ಇವುಗಳ ಬಗ್ಗೆ ಇನ್ನೊಮ್ಮೆ ಬರಿಯುತ್ತೇನೆ. ನನ್ನ ಈ ಬರಹದ ವಸ್ತು ಬೇರೆ.
ನಾನು ಬಲವಾಗಿ ನಂಬಿರುವ ಕೆಲವು ಸಂಗತಿಗಳನ್ನು ಇಲ್ಲಿ ಹೇಳಿ ಬಿಡ್ತೀನಿ. ಕನ್ನಡದ ನೆಲ /ಜಲ ಎರಡೂ ಇಂತ ಜಗಳಕ್ಕೆ ಹೇಳಿ ಮಾಡಿಸಿದ್ದಲ್ಲ .ಆ ರೀತಿ ಬಡಿದಾಟಕ್ಕೆ ಸರಿಯಾದ ಜಾಗ ನಮ್ಮ ದೇಶದಲ್ಲಿ ಬೇರೆ ಕಡೆ ಇವೆ ( ನಾನು ಯಾವ ಹೆಸರು ಹೇಳೋದಿಲ್ಲ
). ಎರಡನೆಯದಾಗಿ ನಮ್ಮ ನಾಡು ಇರೋ ಆಯಕಟ್ಟಿನ ಜಾಗ ಮತ್ತು ನಮ್ಮ ಜನರ ಚರಿತ್ರೆ ಎರಡೂ ನಮ್ಮ ದೇಶದಲ್ಲಿ ಬೇರೆ ಎಲ್ಲೂ ಇರದಂತ ಸಾಮಾಜಿಕ ಶಾಂತಿ ಕೊಟ್ಟಿವೆ. ಹೀಗಿರಬೇಕಾದರೆ ಇಂತ ವಿಷಯ ನಮಗೆ ಯಾಕೆ ಇಷ್ಟು ತಲೆನೋವು ತರಬೇಕು?
ನನ್ನ ಅನಿಸಿಕೆ ಇಷ್ಟು.
೧) ಕನ್ನಡದ ಜನರನ್ನು ಈಗ ವಿಪರೀತ ಕೀಳರಿಮೆ ಕಾಡುತ್ತಾ ಇದೆ. ಇದನ್ನು ತಪ್ಪು ಅಂತ ಯೋಚನೆ ಮಾಡಬೇಕಿಲ್ಲ.ಈ ತುಡಿತ / ಕುದಿತ ಇದ್ದರೇನೆ ಜನ ಮುಂದುವರಿಯುವುದಕ್ಕೆ ಯತ್ನ ಮಾಡುತ್ತಾರೆ. ಈ ಕೀಳರಿಮೆಯ ಮೂಲ ಭಯ.
- ನೆರೆ ರಾಜ್ಯಗಳಿಗಿಂತ ನಾವು ಬಡವರಾದರೆ?
- ಹೆಚ್ಚು ಅವಿದ್ಯಾವಂತರಾದರೆ?
- ನಮ್ಮ ನೆಲನೀರುಗಳ ಒಡೆತನ ಕಳೆದು ಕೊಂಡರೆ?
- ನಮ್ಮ ಸಿನಿಮಾಗಳು ಕಳಪೆಯಾದರೆ? ನಮ್ಮನ್ನು ದಿಲ್ಲಿಯಲ್ಲಿ ಕಡೆಗಣಿಸಿದರೆ?
- ನಮ್ಮತನವೇ ಕಳೆದುಕೊಂಡು ಮೂಲೆಗುಂಪಾದರೆ?"
ಈ ಎಲ್ಲಾ ಪ್ರಶ್ನೆಗಳು ನಾಡಿನಲ್ಲಿರುವ ಕನ್ನಡಿಗರನ್ನು ಕಾಡಿದರೆ ಕೊನೆಯ ಪ್ರಶ್ನೆ ಹೊರನಾಡಿನಲ್ಲಿರುವ ಕನ್ನಡಿಗರಿಗೆ ಹೆಚ್ಚು ದಣಿಸುತ್ತದೆ.
೨) ನನಗೆ ಬರಗೂರು ರಾಮಚಂದ್ರಪ್ಪ ಒಂದು ಸಂದರ್ಶನದಲ್ಲಿ ಹೇಳಿದ ಮಾತು ನೆನಪಿಗೆ ಬರುತ್ತದೆ.
"ಕನ್ನಡ ಬೆಳೆಯಬೇಕಾದರೆ ಕನ್ನಡಿಗ ಬೆಳೆಯಬೇಕು. ಕನ್ನಡ ಉಳಿಯಬೇಕಾದರೆ ಕನ್ನಡಿಗನ ಬಾಳು ಹಸನಾಗಬೇಕು."
ಇದು ನಿಜವಾಗಿ ಎಲ್ಲರೂ ಒಪ್ಪುವಂತ ಸಂಗತಿ. ಈ ಅಡಿಪಾಯದ ಮೇಲೆ ನಾವು ೨೦೦೦+ ಇಸವಿಯ ಕನ್ನಡದ ಕಟ್ಟಡ ಕಟ್ಟಬೇಕು. ಸರಳವಾಗಿ ಹೇಳಬೇಕೆಂದರೆ,ಈ ಕೆಳಗಿರುವ "ಬೇಕು"ಗಳ ಪಟ್ಟಿ
- ಕನ್ನಡಿಗರಲ್ಲಿ ಬಡತನ ಕಡಿಮೆಯಾಗಬೇಕು.ನಮ್ಮ ನಾಡಿನಲ್ಲಿ ಕೆಲಸ ಸಿಗಬೇಕು.
- ಕನ್ನಡಿಗರೆಲ್ಲಾ ಅಕ್ಷರ ಕಲಿತು ಪತ್ರಿಕೆ (ಕೊಂಡು )ಓದಬೇಕು. ತಂತ್ರಜ್ಞಾನ ಕಲಿಕೆಯಲ್ಲಿ ಕೂಡ ನಾವು ಮುಂದಿರಬೇಕು.
- ನಮ್ಮ ನೆಲನೀರುಗಳು ನಮ್ಮ ಕೈಯಲ್ಲೇ ಇರಬೇಕು. ಅಥವಾ ನಾವು ಎಲ್ಲರ ತರಹ ನೆರೆರಾಜ್ಯಗಳಲ್ಲಿ ನಮ್ಮ ಹಣಕಾಸಿನ ಬಲದ ಅಚ್ಚೊತ್ತಬೇಕು.
- ನಮ್ಮ ಸಾಹಿತ್ಯ ,ಕಲೆ, ಸಿನಿಮಾಗಳು ಬೇರೆ ಜನ ಕೂಡ ಮೆಚ್ಚು ವಂತಿರಬೇಕು. ನಮ್ಮ ದನಿ ದಿಲ್ಲಿಯಲ್ಲಿ (ಆದರೆ ನ್ಯೂಯಾರ್ಕಿನಲ್ಲಿ) ಗಟ್ಟಿಯಾಗಿ ಕೇಳೆಬೇಕು.
- ಎಲ್ಲಾ ಕನ್ನಡಿಗರಲ್ಲಿ ಎಲ್ಲೇ ಇದ್ದರೂ ಕನ್ಡಡದ ಬಗ್ಗೆ ಹೆಮ್ಮೆ , ಒಲುಮೆ ಇರಬೇಕು.
ಈ ರೀತಿ ನೋಡಿದಾಗ ಸಂಸ್ಕೃತ -ಕನ್ನಡ ವಿಷಯಕ್ಕೆ ಒಂದು ಸರಿಯಾದ ನೆಲೆಗಟ್ಟು ಸಿಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಕೇವಲ ಕಿಟ್ಟೆಲ್, ಕಾಲ್ಡವೆಲ್ಲ್ ಮತ್ತು ಪಾಣಿನಿಯರನ್ನು ಬಿಟ್ಟು ನಮ್ಮ ಶಾಲೆಗಳಲ್ಲಿ ಓದುವ ವೆಂಕ ,ನಾಣಿ, ಸೀನರ ಬಗ್ಗೆ ಮಾತಾಡಬೇಕು. ಕನ್ಣಡವನ್ನು ಪ್ರೈಮರಿ ಮತ್ತು ಹೈಸ್ಕೂಲುಗಳಲ್ಲಿ ನಮ್ಮ ಹುಡುಗರಿಗೆ ಹೇಗೆ ಕಲಿಸಬೇಕು ಅನ್ನುವುದೇ ನಮ್ಮ ಮುಂದಿರುವ ಸಮಸ್ಯೆ.ಅಷ್ಟೇ ಅಲ್ಲ, ಕನ್ನಡದ ಮೂಲಕ ನಮ್ಮ ಜನರನ್ನು ಬೇರೆ ವಿದ್ಯೆ ಕಲಿಸುವ ರೀತಿ ಕೂಡ ಮುಖ್ಯ . ಇವೆರಡು ಆದರೆ ಉಳಿದವೆಲ್ಲಾ ತನ್ನಂತಾನೆ ಸರಿ ಹೋಗುತ್ತವೆ. ಇದನ್ನು ಕೇವಲ ಭಾಷಾ ಶಾಸ್ತ್ರ ಅಥವಾ ವ್ಯಾಕರಣದ ಮಟ್ಟಿಗೆ ನಿಲ್ಲಿಸಬಾರದು. ಈ ನಿಟ್ಟಿನಲ್ಲಿ ನನಗೆ ಹೊಳೆದ ಸಂಗತಿಗಳು.
೧) ಕನ್ನಡದಲ್ಲಿ ಎಷ್ಟು ಸಂಸ್ಕೃತ ಬಳಸಬೇಕು ? ಇದನ್ನ ಅವರವರಿಗೆ ಬಿಡಿ. ಆಡು ನುಡಿಗೆ ದೂರಾದ "ಸಂಸ್ಕೃತಭೂಯಿಷ್ಟ"ವಾದ ಬರಹ ಸಹಜ ಸಾವನ್ನು ಅಪ್ಪುತ್ತದೆ. ನಾವು ನಮ್ಮ ಕೈಯಲ್ಲಿ ನೆತ್ತರು ಹರಿಸುವುದು ಬೇಡ.ನಾವು ತಿಳಿಗನ್ನಡದಲ್ಲಿ ಬರೆದು ಮೇಲ್ಪಂಕ್ತಿ ಹಾಕಿದರಾಯಿತು
೨) ವರ್ಣಮಾಲೆಯ/ವ್ಯಾಕರಣ ಸರಳೀಕರಣ - ಇದು ಒಪ್ಪತಕ್ಕ ಸಂಗತಿ. ಪುಟಾಣಿ ಮಕ್ಕಳಿಗೆ ಮತ್ತು ಕನ್ನಡೇತರರಿಗೆ ಸರಳ ವರ್ಣಮಾಲೆ ಕಲಿಸೋಣ. ನಿತ್ಯ ಬಳಕೆಯಲ್ಲಿರುವ ಎಲ್ಲ ಪದಗಳಿಗೂ ಸರಳ ವರ್ಣಮಾಲೆಯಲ್ಲೇ ಬರೆಯುವಂತ ಉಚ್ಚಾರಣೆ("alternate spelling") ಉಪಯೋಗಿಸೋಣ. ಇದನ್ನು ಒಪ್ಪದವರಿಗೆ ಆಯ್ಕೆ ಇದ್ದೇ ಇದೆ. ಆದರೆ ಚಿಕ್ಕ ಮಕ್ಕಳ ಹೊತ್ತಗೆಗಳಲ್ಲಿ ಸರಳ ಕನ್ನಡವೇ ಬಳಕೆಯಾಗಲಿ. ೫ನೇ ತರಗತಿಯಿಂದ ಪೂರ್ತಿ ವರ್ಣಮಾಲೆಯ ಪಾಠವಾಗಲಿ. ಇದು ೬/೭ ಆದರೂ ಚಿಂತೆಯಿಲ್ಲ.
೩) ಪಾರಿಭಾಷಿಕ (technical) ಪದಗಳು- ಆದಷ್ಟು ತಿಳಿಗನ್ನಡ ಇಲ್ಲವೆ ಈಗಾಗಲೆ ಬಳಕೆಯಲ್ಲಿರುವ ಸರಳ ಸಂಸ್ಕೃತ ಪದಗಳನ್ನು ಉಪಯೋಗವಾಗಲಿ.ಅರ್ಥವಾಗದ ಮೂಲ ದ್ರಾವಿಡ (ಇಲ್ಲವೇ ತಮಿಳು) ಒರೆಗಳು ಸಂಸ್ಕೃತದಷ್ಟೇ ದೊರ ಇಡೋಣ.ಬೇಕಿದ್ದರೆ ಇಂಗ್ಲೀಶು ಪದವನ್ನೇ ಕನ್ನಡ ನಾಲಿಗೆಗೆ ಹೊಂದುವಂತೆ ಮಾರ್ಪಡಿಸೋಣ.ಇವುಗಳಲ್ಲಿ ನಮ್ಮ ದೇಶದ ಎಲ್ಲ ನುಡಿಗಳು ಒಂದೇ ನೀತಿ ಅನುಸರಿಸಿದರೆ ಒಳಿತು.
೪) ಹಳ್ಳಿ ಇಲ್ಲವೆ ಕನ್ನಡ ಶಾಲೆಗಳಿಂದ ಬಂದ ಹುಡುಗರು ಕಾಲೇಜಿಗೆ ಬಂದಾಗ ಕೀಳರಿಮೆಯಾಗುವುದು ಅವರ ಕನ್ನಡದಲ್ಲಿರುವ ಸಂಸ್ಕೃತ ಕೊರತೆಯಿಂದಲ್ಲ . ಅವರ ಇಂಗ್ಲೀಶಿನಿಂದ. ನನ್ನ ಜೊತೆಯಲ್ಲಿ ಓದುತಿದ್ದ ಅನೇಕ ಮಂದಿಗೆ ಈ ರೀತಿ ಆದದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸುಮಾರು ಜನ ಓದಿಗೆ ಶರಣು ಹೊಡೆದರು. ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯಲು ಅರೆಕನ್ನಡ -ಅರೆಇಂಗ್ಲೀಶು ಬಳಸಲು ಅನುವು ಮಾಡಿಕೊಟ್ಟರೆ ಇವರೆಲ್ಲ ಮುನ್ನೆಡೆಯುತ್ತಾರೆ. ಕ್ರಮೇಣ ಕೆಲಸಕ್ಕೆ ಬೇಕಾದಷ್ಟು ಇಂಗ್ಲೀಶು ಕಲಿಯುತ್ತಾರೆ.
ಇನ್ನು ಕನ್ನಡಿಗರೇ ಆದ ಸಂಸ್ಕೃತ ಪ್ರೇಮಿಗಳು ಯಾಕೆ ಸುಮ್ಮನೆ ಸಿಟ್ಟಾಗುತ್ತಾರೆ? ಇಲ್ಲಿ ಬಿಡಿಸಿ ಹೇಳದ ಒಳಮನಸ್ಸಿನ ಗುಟ್ಟುಗಳಿವೆ. ಕನ್ನಡಿಗರು ನಮ್ಮ ದೇಶದಲ್ಲಿ ಇರುವ ಬಹಳ "ದೇಶಭಕ್ತ"( nationalist) ಜನ. ಕನ್ನಡಿಗರ ಜಾಯಮಾನಕ್ಕೆ ಪ್ರಾದೇಶಿಕತೆ ಒಗ್ಗಲ್ಲ. ಅಷ್ಟೇ ಅಲ್ಲ,ನಮ್ಮ ಇಡೀ ಧಾರ್ಮಿಕ(ಹಿಂದು) ಪರಂಪರೆಯನ್ನು ತುಂಬಾ ಗೌರವಿಸುತ್ತಾರೆ. ಇಲ್ಲಿ ಯಾವತ್ತೂ ಜಾತಿ/ ನುಡಿ ಅಡ್ಡ ಬಂದಿಲ್ಲ. ಉದಾಹರೆಣೆಗೆ ಶ್ರೀವೈಷ್ಣವ ಗುಡಿಗಳಲ್ಲಿ ತಿರುಪ್ಪಾವೆ ಹಾಡಿದರೆ ಯಾರು ತಲೆ ಬಿಸಿ ಮಾಡಿಕೊಳ್ಳುವುದಿಲ್ಲ. ಲಿಂಗಾಯತ / ಒಕ್ಕಲಿಗ ಮಠಗಳೂ ಕೊಡ ವೇದಾಧ್ಯಯನವನ್ನು ಪೋಷಿಸುತ್ತವೆ.ಇಲ್ಲಿ ಜಾತಿಗಳಲ್ಲಿ ಸ್ಫರ್ಧೆ ಇದ್ದರೂ ಕೊಚ್ಚಿಹಾಕುವಂತ ಆಕ್ರೋಶ ಇಲ್ಲ. ನಮ್ಮ ನೆರೆ ರಾಜ್ಯದಲ್ಲಿ ಇರುವಂತ ರಾಜಕೀಯ "ದ್ರಾವಿಡ ಪ್ರಜ್ಞೆ " ನಮಗೆ ಇಲ್ಲ. ನಾವೇನೆ ಹೇಳಿದರೂ ಸಂಸ್ಕೃತ ತನ್ನದೇ ರೀತಿಯಲ್ಲಿ ಪ್ರಾದೇಶಿಕ ಮಿತಿಗಳನ್ನು ಮೀರಿ ನಿಂತಿದೆ. ಸಂಸ್ಕೃತ ಸಾಹಿತ್ಯಕ್ಕೆ ಮತ್ತು ಧಾರ್ಮಿಕ(ಹಿಂದು) ಪರಂಪರೆಗೆ ಉತ್ತರದವರಷ್ಟೆ ನಮ್ಮ ಕೊಡುಗೆ ಇದೆ. ಶಂಕರ, ಮಧ್ವ ಮತ್ತು ರಾಮಾನುಜ ಮೂವರು ಕೆಲಸ ಮಾಡಿದ ಜಾಗ ನಮ್ಮ ನಾಡು.ಆದ್ದರಿಂದ ಸಂಸ್ಕೃತವು ನಮ್ಮದೇ ಎನ್ನುವ ಅನಿಸಿಕೆ ಇದೆ.
"ಸಂಸ್ಕೃತ ಬೇಡ"ಎಂದ ಒಡನೆ ಹಲವರಿಗೆ ಕೇಳುವುದು ಜಾತಿ/ಧರ್ಮ/ ಪ್ರಾದೇಶಿಕ ರಾಜಕೀಯದ ಕೂಗು. ಇದು ಪೂರ್ತಿ ಕಾರಣವಿಲ್ಲದೆಯೂ ಇಲ್ಲ. ಭಾಷೆ-ರಾಷ್ಟ್ರಪ್ರಜ್ಞೆ-ಧರ್ಮ ಎಲ್ಲವೂ ಕೆಲವು ಸಲ ಬಿಡಿಸಲಾಗದ ರೀತಿಯಲ್ಲಿ ತಳಕು ಹಾಕಿಕೊಂಡಿರುತ್ತವೆ. ಅದಕ್ಕೆ ಪರಿಹಾರ ಇದ್ದೇ ಇದೆ. "ಕನ್ನಡ ಬೇಕು" ಅನ್ನಿ. ನಿಮ್ಮನ್ನು ಯಾರು ತಡೆಯುವುದಿಲ್ಲ. ವಚನಕಾರರು ಯಾವ ಋಷಿ ಗಳಿಗೂ ಕಮ್ಮಿ ಇಲ್ಲ ಅನ್ನಿ. ಯಾರೂ ಇಲ್ಲ ಎನ್ನುವುದಿಲ್ಲ. ಕನ್ನಡ ಮುಂದೆ ಹೋಗಬೇಕಾದ ವೇಳೆಯಲ್ಲಿ ಈ ಚರ್ಚೆ ಒಳ್ಳೆಯದೆ. ತಪ್ಪು ದಾರಿಯಲ್ಲಿ ಹೋಗಬಾರದು . ಏನಂತೀರಿ?

- Login or register to post comments
- 830 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಪ್ರತಿಕ್ರಿಯೆಗಳು
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಕೇವೆಂ....
ನಿಮಗೆ, ದಯವಿಟ್ಟು ನಾನು ನಿಮ್ಮ ಸಾಲುಗಳನ್ನೇ ( ಅಣಕದ ) ತುಸು ನೀಟಾಗಿಸಿ ಗೊಂದಲ ಕಡಮೆ ಮಾಡಲೆಳಸಿದ್ದೀನಿ.
ಇವೆಲ್ಲ ದಿಟಗಳು
* ಅತಿ, ಹದಮೀರಿದ ಸಂಸ್ಕೃತದಿಂದಲೇ ಕನ್ನಡಕ್ಕೆ ಕುತ್ತು.( ಕಕ್ಕುಟೋದ್ಯಮ, ಕೋಳಿ ಸಾಕಣೆ )
* ಮಹಾಪ್ರಾಣಗಳ ಪ್ರಾಣ ತೆಗೀಬೇಕು.ಕನ್ನಡಕ್ಕೆ ಒಗ್ಗದ ಸಂಸ್ಕೃತ ಒರೆಗಳನ್ನು ಓಡಿಸಲೇಬೇಕು. ( ಬೃಹತ್, ಬಾಹ್ಯಾಕಾಶ, ಕೃತಕ ಗರ್ಭಧಾರಣೆ)
* ಕನ್ನಡ ದ್ರಾವಿಡ ನುಡಿ.ಆದ್ದರಿಂದ ಕನ್ನಡಿಗರು ದ್ರಾವಡ ನುಡಿ ಗುಂಪಿನವು. ಸಂಸ್ಕೃತ ನಮ್ಮದಲ್ಲದ,ಬೇರೆ ನುಡಿ-ಕುಟುಂಬದ ನುಡಿ, ಕನ್ನಡಕ್ಕೂ - ಸಂಸ್ಕೃತಕ್ಕೂ ಬಾಶಾ ವಿಜ್ನಾನದಂತೆ ಯಾವ ನಂಟೂ ಇಲ್ಲ. ಸಕ್ಕದ-ಕನ್ನಡಗಳ ನಂಟು ಬರೀ ದಾರ್ಮಿಕ, ಜಾತಿ. ( ತುಳು ಬ್ರಾಹ್ಮಣರು ಅಶನಾನ, ಇಲ್ಲಿ ಅಶನ ಸಕ್ಕದ, ಅದೇ ಬಂಟ ತುಳು ಒಣಸು ಆಂಡ, ಇಲ್ಲಿ ಒಣಸು ದ್ರಾವಿಡ )
* ಸಂಸ್ಕೃತ ಹಾರುವರು ಬಳಕೆ ಹೆಚ್ಚು.ಅದರಲ್ಲಿರುವ ಅರಿಮೆ ಒಂದು ಧರ್ಮಕ್ಕೆ ಮಾತ್ರ ಸೇರಿದ್ದು ಹೆಚ್ಚು, ವಿಜ್ನಾನ ಮುಂತಾದವು ಇದೆ. ಆದರೆ ಇಂದು ಅವನ್ನು ಪಡೆಯಲೂ ನಮಗೆ ಇಂಗ್ಲೀಶ್ ಸುಲಬ ದಾರಿ.
* ಸಂಸ್ಕೃತದಿಂದ ನಾವು ಕಲಿಯುವಂತದ್ದು ಏನೂ ಇಲ್ಲ. ಹೊಟ್ಟೆ ಹೊರೆಯೋಕೆ ಏನೂ ಗಿಟ್ಟುವುದಿಲ್ಲ. ( ೯೯% ಮಂದಿಗೆ ಈ ಮಾತು ದಿಟ)
* ಸಂಸ್ಕೃತವನ್ನು ಹೊಗಳುವುದಕ್ಕಾಗಿ, ಕನ್ನಡವನ್ನು ಕೀಳೆನ್ನುವು, ತಾಯಿನೆಲಕ್ಕೆ ಎರೆಡು ಬಗೆಯುವುದು.( ಸಂಸ್ಕೃತವಿಲ್ಲದ ಕನ್ನಡ ಜಾಳು. ಒಮ್ಮ ಸಕ್ಕದ ಪ್ರಚಾರಕ ಹೇಳಿದ್ದು )
ಇವೆಲ್ಲ ಸುಳ್ಳುಗಳು
)
# ಸಂಸ್ಕೃತ ಕನ್ನಡದ ಜನನಿ (ದೇವಕಿಯಲ್ಲದಿದ್ದರೂ ಕನಿಷ್ಟ ಯಶೋದೆ).
# ಸಂಸ್ಕೃತವಿಲ್ಲದ ಕನ್ನಡ ಸತ್ವಹೀನ. ಬಹಳಷ್ಟು ಕನ್ನಡ ಪದಗಳು ಸಂಸ್ಕೃತದ ಭಿಕ್ಷೆ.ಪಾರಿಭಾಷಿಕ ಪದಗಳಿಗೆ ಸಂಸ್ಕೃತವೇ ಶ್ರೇಷ್ಟ.
# ಸಂಸ್ಕೃತದ ವಿರುದ್ಧ ಮಾತಾಡುವವರೆಲ್ಲಾ ಜಾತಿ ರಾಜಕೀಯದ ಉದ್ದೇಶದಿಂದ ಮಾಡುತ್ತಾರೆ.
# ನಮ್ಮ ಧರ್ಮ ಮತ್ತು ಸಂಸ್ಕೃತಿಯ ಸಾರವಿರುವುದೇ ಸಂಸ್ಕೃತದಲ್ಲಿ.
# ಸಂಸ್ಕೃತ ಸಕಲ ಜ್ಞಾನಗಳ ಭಂಢಾರ.ಮೇಲಾಗಿ ದೇವ ಭಾಷೆ ( ಕಂಪ್ಯೂಟರ್ ಬಗ್ಗೆ ಎಲ್ಲಿದೆ? _
# ಸಂಸ್ಕೃತ ಗಣಕಕ್ಕೆ ಹೇಳಿ ಮಾಡಿಸಿದ ಭಾಷೆ.ಪಾಣಿನಿಯ ಅಷ್ಟಾಧ್ಯಾಯೀ ಕನ್ನಡಕ್ಕೂ ಚಾಚೂ ತಪ್ಪದೆ ಅನ್ವಯಿಸುತ್ತದೆ. (
ಇಲ್ಲಿ ಸಂಗತಿ ಇಸ್ಟೇ, ತಮ್ಮ ಪೊಳ್ಳುಹಿರಿಮೆಯನ್ನು ಮೆರೆಸಲು ಸಕ್ಕದ fascistಗಳು ಇಂತ ಕಂತ್ರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲೆಡೆ ಇವರ lobby ಇದೆ. ಇಲ್ಲದೇ ಹೋಗಿದ್ರೆ ಕೇಂದ್ರೆ ಸರಕಾರ ಯಾಕೆ ೬೦೦ ಕೋಟಿ ರೂ ವರ್ಶ ವರ್ಶ ಸಕ್ಕದದ ಮೇಲೇ ಚಲ್ಲೀತು.
ಇಲ್ಲಿ ಸಕ್ಕದವನ್ನು ಇದಿರುಸುತ್ತಿಲ್ಲ, ಸಕ್ಕದದ ಹೆಸರಲ್ಲಿ ರೊಕ್ಕ ಮಾಡಲು, ಅದಕ್ಕೆ ಇಲ್ಲದೆ ರೆಕ್ಕೆಪುಕ್ಕ ಕಟ್ಟುವವರ ಬಗ್ಗೆ ಅಸ್ಟೇ ಎದುರು.
ನೀವು ಶಂಕರ ಬಟ್ರ ಹೊತ್ತಗೆಗಳನ್ನು ಓದದಿದ್ರೆ, ದಯವಿಟ್ಟು ಓದಿ..
============================================================
೧) ಕನ್ನಡದಲ್ಲಿ ಎಷ್ಟು ಸಂಸ್ಕೃತ ಬಳಸಬೇಕು ? ಇದನ್ನ ಅವರವರಿಗೆ ಬಿಡಿ. ಆಡು ನುಡಿಗೆ ದೂರಾದ "ಸಂಸ್ಕೃತಭೂಯಿಷ್ಟ"ವಾದ ಬರಹ ಸಹಜ ಸಾವನ್ನು ಅಪ್ಪುತ್ತದೆ. ನಾವು ನಮ್ಮ ಕೈಯಲ್ಲಿ ನೆತ್ತರು ಹರಿಸುವುದು ಬೇಡ.ನಾವು ತಿಳಿಗನ್ನಡದಲ್ಲಿ ಬರೆದು ಮೇಲ್ಪಂಕ್ತಿ ಹಾಕಿದರಾಯಿತು
( ನೀವು ಎಸ್ಟು ಹಿರಿಯರೋ, ಕಿರಿಯರೂ ನಾನರಿಯೇ, ಆದ್ರೆ, ಇದಿರು ದನಿ ಎತ್ತಬೇಡಿ, ಪ್ರತಿಬಟನೆ ಬೇಡ ಅನ್ನೋದು ಸರಿಯಿಲ್ಲ, ಇದು personal attack ಅಲ್ಲ )
ಮಂದಿ ದನಿ ಎತ್ತದೇನೇ ಇಂದು ಕನ್ನಡದಲ್ಲಿ ಸಿಕ್ಕಾಪಟ್ಟೆ ಸಕ್ಕದ ತುಂಬಿರೋದು.. ಸರಕಾರಿ ಬಸ್ ನಿಲ್ದಾಣದಲ್ಲಿ "ಪುರುಷರ ಶೌಚಾಲಯ, ಮಹಿಳಾ ಶೌಚಾಲಯ" ಇರೋದು.. ( ಇದೇ ಸಕ್ಕದದವರ ಸರಕಾರ lobby ).. ಅದು ಎಂದು "ಗಂಡಸರ ಬಚ್ಚಲು, ಹೆಂಗಸರ ಬಚ್ಚಲು" ಆಗೋದು? ನೀವು ಏನು ಮಾಡಕ್ಕೆ ಆಗದಿದ್ರೆ, ಮಾಡಬೇಡಿ. ( ನಿಮಗೆ ಬೇಕಾಗಿಲ್ಲ ಅಲ್ವ.. ಯಾಕೆ ಅಂದ್ರೆ ನಿಮಗೆ ಪುರುಷ, ಮಹಿಳೆ, ಇವೆಲ್ಲ ಸಲೀಸಾಗಿ ಬರೋರು, personal attack ಅಲ್ಲ )
ಆದ್ರೆ ಇದರ ಇದಿರು, ದನಿ ಎತ್ತಿದವರಿಗೆ "ನಾವು ನಮ್ಮ ಕೈಯಲ್ಲಿ ನೆತ್ತರು ಹರಿಸುವುದು ಬೇಡ" ಅನ್ನೋದೇ ಸರಿಯಲ್ಲ.. ಈಗ ನೆತ್ತರು ಹರಿಸೇ ಬದಲಾವಣೆ ತರ್ತೀವಿ ಅನ್ನೋ ಮಂದಿಯ ಗುರಿಯಲ್ಲಿ ಯಾವ ತಪ್ಪೂ ಇಲ್ಲ.( ಅವರವರ ಇಸ್ಟಕ್ಕಾಗೇ ಎಲ್ಲರೂ ಬದುಕುವುದು. ನಿಮ್ಮ ಇಷ್ಟ ನೆತ್ತರು ಹರಿಸದಿರುವುದು. ಅವರದು ಬದಲಾವಣೆಗಾಗಿ ಹರಿಸುವುದು)
"ಬೃಹತ್ ಬೆಂಗಳೂರು ಯಾಕೆ? ದೊಡ್ಡ ಬೆಂಗಳೂರು ಯಾಕೆ ಬೇಡ?" ( ಇದರ ಎದಿರು ಮಾತಾಡೋದು, ನೆತ್ತರು ಹರಿಸುವುದು ಎಂದು ಉತ್ಪ್ರೇಕ್ಷ ಯಾಕೆ? )
ಜಗದಲ್ಲಿ ಎಲ್ಲ ಅನ್ಯಾಯ, ಹೇರಿಕೆಗಳು ನಾವು ದಂಗೆ ಎದ್ದು ಕೂಗಿದಾಗಲೇ ಸರಿದು ಹೋಗಿರೋದು( ಕಡೆ ಪಕ್ಷ atleast ಅದಕ್ಕೆ ವಿರೋದ ಇದೆ ಅಂತಾನಾದ್ರು ಗೊತ್ತಾಗ ಬೇಕಲ್ಲ). ನಿಮಗೆ ಬದಲಾವಣೆ ಬೇಡ, ಇಲ್ವೇ ಅದಕ್ಕೆ ನಿಮ್ಮ ಒತ್ತು ಕಡಮೆ.
...೨) ವರ್ಣಮಾಲೆಯ/ವ್ಯಾಕರಣ ಸರಳೀಕರಣ - ಇದು ಒಪ್ಪತಕ್ಕ ಸಂಗತಿ. ಪುಟಾಣಿ ಮಕ್ಕಳಿಗೆ ಮತ್ತು ಕನ್ನಡೇತರರಿಗೆ ಸರಳ ವರ್ಣಮಾಲೆ ಕಲಿಸೋಣ. ನಿತ್ಯ ಬಳಕೆಯಲ್ಲಿರುವ ಎಲ್ಲ ಪದಗಳಿಗೂ ಸರಳ ವರ್ಣಮಾಲೆಯಲ್ಲೇ ಬರೆಯುವಂತ ಉಚ್ಚಾರಣೆ("alternate spelling") ಉಪಯೋಗಿಸೋಣ. ಇದನ್ನು ಒಪ್ಪದವರಿಗೆ ಆಯ್ಕೆ ಇದ್ದೇ ಇದೆ. ಆದರೆ ಚಿಕ್ಕ ಮಕ್ಕಳ ಹೊತ್ತಗೆಗಳಲ್ಲಿ ಸರಳ ಕನ್ನಡವೇ ಬಳಕೆಯಾಗಲಿ. ೫ನೇ ತರಗತಿಯಿಂದ ಪೂರ್ತಿ ವರ್ಣಮಾಲೆಯ ಪಾಠವಾಗಲಿ. ಇದು ೬/೭ ಆದರೂ ಚಿಂತೆಯಿಲ್ಲ.
(ಶಂಕರ ಬಟ್ರ.. ಹೊತ್ತಗೆ ಇದಕ್ಕೆ ಹೇಳಿರೋದು.. )
೩) ಪಾರಿಭಾಷಿಕ (technical) ಪದಗಳು- ಆದಷ್ಟು ತಿಳಿಗನ್ನಡ ಇಲ್ಲವೆ ಈಗಾಗಲೆ ಬಳಕೆಯಲ್ಲಿರುವ ಸರಳ ಸಂಸ್ಕೃತ ಪದಗಳನ್ನು ಉಪಯೋಗವಾಗಲಿ.ಅರ್ಥವಾಗದ ಮೂಲ ದ್ರಾವಿಡ (ಇಲ್ಲವೇ ತಮಿಳು) ಒರೆಗಳು ಸಂಸ್ಕೃತದಷ್ಟೇ ದೊರ ಇಡೋಣ.ಬೇಕಿದ್ದರೆ ಇಂಗ್ಲೀಶು ಪದವನ್ನೇ ಕನ್ನಡ ನಾಲಿಗೆಗೆ ಹೊಂದುವಂತೆ ಮಾರ್ಪಡಿಸೋಣ.ಇವುಗಳಲ್ಲಿ ನಮ್ಮ ದೇಶದ ಎಲ್ಲ ನುಡಿಗಳು ಒಂದೇ ನೀತಿ ಅನುಸರಿಸಿದರೆ ಒಳಿತು.
(ಶಂಕರ ಬಟ್ರ.. ಹೊತ್ತಗೆ ಇದಕ್ಕೆ ಹೇಳಿರೋದು.. )
೪) ಹಳ್ಳಿ ಇಲ್ಲವೆ ಕನ್ನಡ ಶಾಲೆಗಳಿಂದ ಬಂದ ಹುಡುಗರು ಕಾಲೇಜಿಗೆ ಬಂದಾಗ ಕೀಳರಿಮೆಯಾಗುವುದು ಅವರ ಕನ್ನಡದಲ್ಲಿರುವ ಸಂಸ್ಕೃತ ಕೊರತೆಯಿಂದಲ್ಲ . ಅವರ ಇಂಗ್ಲೀಶಿನಿಂದ. ನನ್ನ ಜೊತೆಯಲ್ಲಿ ಓದುತಿದ್ದ ಅನೇಕ ಮಂದಿಗೆ ಈ ರೀತಿ ಆದದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸುಮಾರು ಜನ ಓದಿಗೆ ಶರಣು ಹೊಡೆದರು. ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯಲು ಅರೆಕನ್ನಡ -ಅರೆಇಂಗ್ಲೀಶು ಬಳಸಲು ಅನುವು ಮಾಡಿಕೊಟ್ಟರೆ ಇವರೆಲ್ಲ ಮುನ್ನೆಡೆಯುತ್ತಾರೆ. ಕ್ರಮೇಣ ಕೆಲಸಕ್ಕೆ ಬೇಕಾದಷ್ಟು ಇಂಗ್ಲೀಶು ಕಲಿಯುತ್ತಾರೆ.
ಇಲ್ಲೂ ಕೆಲವು ನಿಮ್ಮದೇ ತೀರ್ಪಿತ್ತಿದ್ದೀರಿ.
ಹಳ್ಳಿಗಳಲ್ಲಿ ಕಲಿಯುವ ಮಕ್ಕಳು ಹೆಚ್ಚು so called ಕನ್ನಡ ಮಾಧ್ಯಮದಲ್ಲಿ ಓದಿರುತ್ತಾರೆ. ಅದರಲ್ಲಿ "ಪತ್ರಹರಿತ್ತು, ಉಚ್ಛಾವಸ, ..." ಇಂತಹ ಅವರಿಗೆ ತಿಳಿಯದ ದೊಡ್ಡ ದೊಡ್ಡ ಸಂಸ್ಕೃತ ಪದ ತುಂಬಿದ ಕಲಿಕೆ.. ಅವರಿಗೆ ದಿಟವಾಗಲೂ ಅವು ತಿಳಿದಿರಲ್ಲ. ಅವರೀ ಮಾತೃಭಾಷಾ ಶಿಕ್ಷಣ ಎಂದು ಸಂಸ್ಕೃತದಲ್ಲಿ, ಸಂಸ್ಕೃತ ಪದಗಳಿಂದ ಕಲಿಸೋದೇ ದೊಡ್ಡ ಮೋಸ.. ( ಇದು common sense ಇಂದ ನೋಡಿದ್ರೂ, ಮನೆಯಲ್ಲಿ ಸಂಸ್ಕೃತ ವಾತಾವರಣ ಇರೋರಿಗೇನೇ ಲಾಭ ಇರೋದು )
ಇಂಗ್ಲೀಶ ಬಗ್ಗೆ ನಿಮ್ಮ ಸೊಂತ ವಿಚಾರ ಎಲ್ಲರಿಗೂ ಹಿಡಿಸಲ್ಲ.
"ಇನ್ನು ಕನ್ನಡಿಗರೇ ಆದ ಸಂಸ್ಕೃತ ಪ್ರೇಮಿಗಳು ಯಾಕೆ ಸುಮ್ಮನೆ ಸಿಟ್ಟಾಗುತ್ತಾರೆ? ಇಲ್ಲಿ ಬಿಡಿಸಿ ಹೇಳದ ಒಳಮನಸ್ಸಿನ ಗುಟ್ಟುಗಳಿವೆ. ಕನ್ನಡಿಗರು ನಮ್ಮ ದೇಶದಲ್ಲಿ ಇರುವ ಬಹಳ "ದೇಶಭಕ್ತ"( nationalist) ಜನ. ಕನ್ನಡಿಗರ ಜಾಯಮಾನಕ್ಕೆ ಪ್ರಾದೇಶಿಕತೆ ಒಗ್ಗಲ್ಲ. ಅಷ್ಟೇ ಅಲ್ಲ,ನಮ್ಮ ಇಡೀ ಧಾರ್ಮಿಕ(ಹಿಂದು) ಪರಂಪರೆಯನ್ನು ತುಂಬಾ ಗೌರವಿಸುತ್ತಾರೆ. ಇಲ್ಲಿ ಯಾವತ್ತೂ ಜಾತಿ/ ನುಡಿ ಅಡ್ಡ ಬಂದಿಲ್ಲ. ಉದಾಹರೆಣೆಗೆ ಶ್ರೀವೈಷ್ಣವ ಗುಡಿಗಳಲ್ಲಿ ತಿರುಪ್ಪಾವೆ ಹಾಡಿದರೆ ಯಾರು ತಲೆ ಬಿಸಿ ಮಾಡಿಕೊಳ್ಳುವುದಿಲ್ಲ. ಲಿಂಗಾಯತ / ಒಕ್ಕಲಿಗ ಮಠಗಳೂ ಕೊಡ ವೇದಾಧ್ಯಯನವನ್ನು ಪೋಷಿಸುತ್ತವೆ.ಇಲ್ಲಿ ಜಾತಿಗಳಲ್ಲಿ ಸ್ಫರ್ಧೆ ಇದ್ದರೂ ಕೊಚ್ಚಿಹಾಕುವಂತ ಆಕ್ರೋಶ ಇಲ್ಲ. ನಮ್ಮ ನೆರೆ ರಾಜ್ಯದಲ್ಲಿ ಇರುವಂತ ರಾಜಕೀಯ "ದ್ರಾವಿಡ ಪ್ರಜ್ಞೆ " ನಮಗೆ ಇಲ್ಲ. ನಾವೇನೆ ಹೇಳಿದರೂ ಸಂಸ್ಕೃತ ತನ್ನದೇ ರೀತಿಯಲ್ಲಿ ಪ್ರಾದೇಶಿಕ ಮಿತಿಗಳನ್ನು ಮೀರಿ ನಿಂತಿದೆ. ಸಂಸ್ಕೃತ ಸಾಹಿತ್ಯಕ್ಕೆ ಮತ್ತು ಧಾರ್ಮಿಕ(ಹಿಂದು) ಪರಂಪರೆಗೆ ಉತ್ತರದವರಷ್ಟೆ ನಮ್ಮ ಕೊಡುಗೆ ಇದೆ. ಶಂಕರ, ಮಧ್ವ ಮತ್ತು ರಾಮಾನುಜ ಮೂವರು ಕೆಲಸ ಮಾಡಿದ ಜಾಗ ನಮ್ಮ ನಾಡು.ಆದ್ದರಿಂದ ಸಂಸ್ಕೃತವು ನಮ್ಮದೇ ಎನ್ನುವ ಅನಿಸಿಕೆ ಇದೆ."
ಇಲ್ಲಿ ನಿಮ್ಮದೇ ಆದ "ದೇಶಬಕ್ತಿ". ದೇಶಬಕ್ತಿ ಅಂದ್ರೆ ಹೇರಿದನ್ನೆಲ್ಲ ಮುಚ್ಕೊಂಡ್ ಹೇರಿಸಿಕೊಳ್ಳೋದಲ್ಲ. ನಮ್ಮ ಕನ್ನಡದಲ್ಲಿ ಪಕ್ಕ ತಮಿಳು ನಾಡಿನಂತೆ ಹೋರಾಟದ ಮಂದಿಯಿಲ್ಲ, ಎಲ್ಲ ಸಪ್ಪೆ, ತಪ್ಪೆಗೆ ಇದ್ದು ,ಹೇರಿಕೆಯನ್ನು ದಬ್ಬಾಳಿಕೆಯನ್ನು ತಾಳುವವರೇ ಹೆಚ್ಚು ಎಂದು ನಿಮ್ಮ ಮಾತನ್ನು ಅರಿತಮಾಡಿಸಬೋದು.. ತಪ್ಪೆಗಿರೋದನ್ನು 'ದೇಸಬಕ್ತಿ' ಅನ್ನೋದಲ್ಲ.
"ಕನ್ನಡಿಗರ ಜಾಯಮಾನಕ್ಕೆ ಪ್ರಾದೇಶಿಕತೆ ಒಗ್ಗಲ್ಲ." ಮತ್ತೊಂದು ತೀರ್ಪು.. ಕರ್ನಾಟಕ ಏಕೀಕರಣ ಯಾಕೆ ಆಯ್ತು.. ಪ್ರಾದೇಶಿಕತೆಯ ಮನಸ್ಸುಗಳಿಂದಲೇ ಅಲ್ವಾ!! ಯಾಕೆ ನಿಮ್ಮ ತೀರ್ಪುಗಳನ್ನು ಹೇರುತ್ತೀರಿ? ನಾವೊಂದು ಪ್ರದೇಶ ಆದ ಮೇಲೇ, ಪ್ರಾದೇಶಿಕತೆ ಇರಲೇ ಬೇಕಲ್ಲ. ಹಾಗಾದ್ರೆ ನಮಗೆ ನಮ್ಮ ಪ್ರದೇಶದ ಗುರುತೇ ಇಲ್ವಾ?
---"ಅಷ್ಟೇ ಅಲ್ಲ,ನಮ್ಮ ಇಡೀ ಧಾರ್ಮಿಕ(ಹಿಂದು) ಪರಂಪರೆಯನ್ನು ತುಂಬಾ ಗೌರವಿಸುತ್ತಾರೆ. " ಮತ್ತೊಂದು ಮಹಾತ್ಮರ ತೀರ್ಪು...
ಮೊನ್ನೆ "ಲಿಂಗಾಯತರು ಹಿಂದುಗಳಲ್ಲ" ಅಂತ ಹೊತ್ತಗೆ ಹೊರಬಂದಿದೆ ನೋಡಿ..( ಅವರನ್ನೂ ನಾಲ್ಕೈದು ತಲೆಕೆಟ್ಟ ಮಂದಿ ಎಂದು ನಮ್ಮ ಮನೆಯಲ್ಲಿ ನಾನೇ ಸರಿ ಅಂತ ಇರುವ ಎಲ್ಲ ಅನುವುಗಳಿವೆ, personal attack ಅಲ್ಲ. ಹೀಗೆಯೇ ಹಲಮಂದಿ... ಹಲವು ಸರತಿ ನಾನೂ, ನೀವೂ ಕೂಡ ).
----"ನಮ್ಮ ನೆರೆ ರಾಜ್ಯದಲ್ಲಿ ಇರುವಂತ ರಾಜಕೀಯ "ದ್ರಾವಿಡ ಪ್ರಜ್ಞೆ " ನಮಗೆ ಇಲ್ಲ. ನಾವೇನೆ ಹೇಳಿದರೂ ಸಂಸ್ಕೃತ ತನ್ನದೇ ರೀತಿಯಲ್ಲಿ ಪ್ರಾದೇಶಿಕ ಮಿತಿಗಳನ್ನು ಮೀರಿ ನಿಂತಿದೆ. ಸಂಸ್ಕೃತ ಸಾಹಿತ್ಯಕ್ಕೆ ಮತ್ತು ಧಾರ್ಮಿಕ(ಹಿಂದು) ಪರಂಪರೆಗೆ ಉತ್ತರದವರಷ್ಟೆ ನಮ್ಮ ಕೊಡುಗೆ ಇದೆ. ಶಂಕರ, ಮಧ್ವ ಮತ್ತು ರಾಮಾನುಜ ಮೂವರು ಕೆಲಸ ಮಾಡಿದ ಜಾಗ ನಮ್ಮ ನಾಡು.ಆದ್ದರಿಂದ ಸಂಸ್ಕೃತವು ನಮ್ಮದೇ ಎನ್ನುವ ಅನಿಸಿಕೆ ಇದೆ."
ಹೌದು ನಮಗ ಯಾಕೆ "ದ್ರಾವಿಡ ಪ್ರಜ್ನೆ" ಬೇಕು? ನಾವು ದ್ರಾವಿಡರಲ್ಲವಲ್ಲ.. ನಮಗೆ ಕನ್ನಡ ಪ್ರಜ್ನೆ ಬೇಕು...
ಇನ್ನು ಶಂಕರ, ಮದ್ವ, ರಾಮಾನುಜರು ಬ್ರಾಹ್ಮಣಗುರುಗಳು( ನೀವು ಬ್ರಾಹ್ಮಣರೇ ಅನ್ನೋ ೧೦೦%, ನನ್ನ ಊಹೆ ?
, ಹಾಗೆ ನಿಮ್ಮ ಜಾತಿಯ ಗುರುಗಳೇ ಎಲ್ಲಿರಿಗೂ ದೊಡ್ಡವರು ಎಂಬ ತೀರ್ಪಿಲ್ಲಿ. ಜಗದ್ಗುರುಗಳು
).. ( ಅಣಕದ ಬರಹ ನಿಮಗೆ ಇಸ್ಟ ಅಲ್ವ! )
ಹೌದು ಸಂಸ್ಕೃತವು ಶಂಕರ, ಮದ್ವ, ರಾಮಾನುಜರ ಹಿಂಬಾಲಕರದು ದಿಟ.. ಆದ್ರೆ ಕನ್ನಡ ಮಂದಿಯಲ್ಲಿ ಆ ಹಿಂಬಾಲಕರು ಇರೋದು ಬರೀ ೩-೪%.
ಲಿಂಗಾಯರಿಗೆ, ವಕ್ಕಲಿಗರಿಗೆ, ಕುರುಬರಿಗೆ....... ಈ ಮೂವರು ಯಾವ ಲೆಕ್ಕಕ್ಕೆ? ( ಅವರು ನಾವು ಈ ಮಹಾಶಯರ ಹಿಂಬಾಲಕರು ಎಂದು ಹೇಳಿಕೊಳ್ಳಲ್ಲ ಅಲ್ವ )
ಅದರಲ್ಲೂ ಲಿಂಗಾಯರು "ಶಂಕರರನ್ನು, ವೈಷ್ಣವರನ್ನು" ಹಳಿದುದು ಇದೇ..
ಇಲ್ಲೊಂದು ಸಂಗತಿ... ನೀವು ಮುನ್ನ ಜಾತಿಯ ಜಗಳ ಬೇಡ ಅಂದು, ಈಗ ಒಂದು ಜಾತಿಯ ಗುರುಗಳನ್ನು ಮರೆಸುತ್ತಿರುವುದು ತರವೇ? ಕನ್ನಡದಲ್ಲಿ ವಿಷಯ ಬರೆದ ಲಿಂಗಾಯತರು, ಶಂಕರ, ಮದ್ವ, ರಾಮಾನುಜ ಮುಂದೇ ಕೀಳೇ?( ಇಲ್ಲಿ.. ಹಿಂದು ದರ್ಮ, ಅಂತ ತಕ್ಷಣ, ಈ ಶಂಕರ-ರಾಮಾನುಜ-ಮದ್ವರ ಹೆಸರು ಹೇಳೋದು, ಯಾಕೆ? ನಮ್ಮ ದೇಸದಲ್ಲಿ ಇವರ ಹಿಂಬಾಲಕ ಬಲು ಕಡಮೆ ಅವ್ರಲ್ಲ? )
------""ಸಂಸ್ಕೃತ ಬೇಡ"ಎಂದ ಒಡನೆ ಹಲವರಿಗೆ ಕೇಳುವುದು ಜಾತಿ/ಧರ್ಮ/ ಪ್ರಾದೇಶಿಕ ರಾಜಕೀಯದ ಕೂಗು. ಇದು ಪೂರ್ತಿ ಕಾರಣವಿಲ್ಲದೆಯೂ ಇಲ್ಲ. ಭಾಷೆ-ರಾಷ್ಟ್ರಪ್ರಜ್ಞೆ-ಧರ್ಮ ಎಲ್ಲವೂ ಕೆಲವು ಸಲ ಬಿಡಿಸಲಾಗದ ರೀತಿಯಲ್ಲಿ ತಳಕು ಹಾಕಿಕೊಂಡಿರುತ್ತವೆ. ಅದಕ್ಕೆ ಪರಿಹಾರ ಇದ್ದೇ ಇದೆ. "ಕನ್ನಡ ಬೇಕು" ಅನ್ನಿ. ನಿಮ್ಮನ್ನು ಯಾರು ತಡೆಯುವುದಿಲ್ಲ. ವಚನಕಾರರು ಯಾವ ಋಷಿ ಗಳಿಗೂ ಕಮ್ಮಿ ಇಲ್ಲ ಅನ್ನಿ. ಯಾರೂ ಇಲ್ಲ ಎನ್ನುವುದಿಲ್ಲ. ಕನ್ನಡ ಮುಂದೆ ಹೋಗಬೇಕಾದ ವೇಳೆಯಲ್ಲಿ ಈ ಚರ್ಚೆ ಒಳ್ಳೆಯದೆ. ತಪ್ಪು ದಾರಿಯಲ್ಲಿ ಹೋಗಬಾರದು . ಏನಂತೀರಿ?"
ಈ ಕೊನೆ ಪ್ರಾರಾದ ದೊಡ್ಡ ಮಾತನ್ನು ಹಿಂದೆ, ನೀಡಿದ ಶಂಕರ-ರಾಮಾನುಜ-ಮದ್ವರ ಮಾದರಿ/ನಿದರ್ಶನ, ಚಿಕ್ಕದಾಗಿಸಿತು.....
ಕೊನೆಯಲ್ಲಿ ವಚನಕಾರರಿಗೂ ಕಮ್ಮಿ ಇಲ್ಲ ಅಂದುದು.. ಶಾಸ್ತ್ರಕ್ಕೆ ಬಂದಾಯ್ತು(ನನ್ನದು ಕೆಡುಗಣ್ಣು, ನೀಚಬುದ್ದಿ, ಅಲ್ವ ಇಲ್ಲಿ?).. ಯಾಕೆ ಅಂದ್ರೆ.. ಹಿಂದೆ ಹಿಂದುದರ್ಮ ಅಂದ್ರೆ, ಶಂಕರ-ರಾಮಾನುಜ-ಮದ್ವರು ಎಂದು.. ಅವರು ಹಿಂಬಾಲಕರು ೩-೪% ಇರೋದ್ರಿಂದ ಸಂಸ್ಕೃತ ನಮ್ಮದೇನೇನೇಯ.. ಅದನ್ನು ನಾವೂ ತಲೆಮೇಲೆ ಹೊತ್‌ಕೋಬೇಕು ಅಂದುಬಿಟ್ಟು.. ಕೊನೆ... ವಚನಕಾರರೂ ಋಷಿಗಳು ಅನ್ನೋದು ಋಜುತ್ವವಲ್ಲ( ನಿನ್ನ ಕಾಮಾಲೆಗಣ್ಣ ಹಾಳಾಗ,, ಅಂದುಕೊಳ್ಳಿ ಮಹಾತ್ಮರೇ, ಆದ್ರೆ,, ನಿಮ್ಮ ವಚನದಲ್ಲಿ ನನಗೆ ನೇರ ಮಾತು ಕಂಡಿಲ್ಲ. )
...
ಮನವಿ:
೧) ಈ ಮಹಾತ್ಮರು, ಮಹಾನೀಯರು, ಎಷ್ಟು ದೊಡ್ಡವರೋ, ಎಸ್ಟು ಬಲ್ಲವರೋ, ನನಗೆ ದಿಟವಾಗಲೂ ಗೊತ್ತಿಲ್ಲ.
೨) ನನಗೆ ಅವರ ಮೇಲೆ person attack ಮಾಡುವ ಯಾವ ಗುರಿಯಿಲ್ಲ.
೩) ನಮ್ಮ ಮೇಲೆ ವಿಚಾರ ಹೇರಿಕೆ( ನಾನು ಒಂದು 'ಲಾನಗ 'ಬುಡಕಟ್ಟು ಮಂದಿ ಅಂತ ಇಟ್ಟುಕೊಳ್ಳಿ, ನಾನು ಹಿಂದು ಎಂದು ಒಪ್ಪದಿದ್ರೂ, ನೀವು ಹಿಂದೂನೇ ತಿ* ಮುಚ್ಚಕೊಂಡು ಒಪ್ಕೋ ) ಅನ್ನೋದರ ಎದಿರು ಹೇಳಬೇಕಾದುದು ನಮಗಿರುವ ಹಕ್ಕು.
ಇದನ್ನು ಅಹಂಕಾರ, ತಲೆಪ್ರತಿಷ್ಟೇ, ಬಡಿದಾಟ, ಪ್ರಾದೇಶಿಕತೆ, fundamentalist, ಅಸಭ್ಯ, ಮುಂತಾದ ನಾಮಾವಳಿಗಳಿಂದ ಕರೆಯೋದು, ಬರೀ ತಮ್ಮ lobby ಗೆಲ್ಲಲಿ, ತಮ್ಮದೇ ನಡೆಯಲಿ ಎಂದು ನಮ್ಮ ದೇಶದಲ್ಲಿ ಬಲು ವಿಖ್ಯಾತ lobbyಗಾರರ ತಂತ್ರ ಎನ್ನಬೋದು..
...
ಇಲ್ಲ ನಾವೇ ತಪ್ಪು ಇರಲೂ ಬೋದು
೪) ಬಾಶೆ ಮೇಲಿನ ಚರ್ಚೆಯನ್ನು ಜಾತಿ-ಧರ್ಮ-ರಾಜಕೀಯದಿಂದ ದೂರವಿಟ್ಟು "ನೆತ್ತರು ಹರಿಸದೇ" ಇರಬಯಸುವರು, ದಯವಿಟ್ಟು ಬಾಶೆ ಮೇಲಣ ಬರಹದಲ್ಲಿ ಅವನ್ನು ತರದಿರುವುದು ಒಳಿತು.. ಯಾಕೆ ಅಂದ್ರೆ, ಒಬ್ಬೊಬ್ಬರಿಗೆ ಒಂದೊಂದೊ ಒತ್ತು.. ಹಾಗೆ ಹಲವರಿಗೆ ಜಾತಿಯ ಮೇಲೂ ಬಲು ಒತ್ತಿದೆ.
ಇನ್ನು ಜಾತಿಯೇ ನಮ್ಮಮ್ಮ individual ಸಂಸ್ಕೃತಿಗಳಿಗೆ ಆಧಾರ.. ಬ್ರಾಹ್ಮಣ ಮದುವೆಗೂ, ಒಕ್ಕಲಿಗರ ಬಳಗ ಧಾರೆಗೂ ( ಎರಡು ಸಂಸ್ಕೃತಿಗಳು ) ಇರುವ ವ್ಯತ್ಯಾಸ ಹೇಳೋದು ಜಾತಿಯೇ.. ಜಾತಿಯನ್ನು ಬಿಡಿ ಬಿಡಿ ಅನ್ನೋರೇ ಜಾತಿ ಬಿಡಲ್ಲ.( ಬದಲು ತಮ್ಮ ಜಾತಿಯ ಗುರುಗಳೇ ಎಲ್ಲಾ ಜಾತಿಯವರಿಗೂ ಮಾದರಿ ಎಂದು ದೊಡ್ಡ ಮನಸ್ಸು ಮಾಡಿದಂತೆ ಆಡುವವರು )
..
..
...
..
೫) ಕೇವೆಂ.. ನಿಮ್ಮ ಬರಹಗಳು ನನಗೆ ಹಿಡಿಸಿವೆ..( ಇದೂ ಸೇರಿಸಿ ). ಆದ್ರೆ ಅದರಲ್ಲಿ ನನಗೆ ಒಪ್ಪುಗೆಯಾದವನ್ನು ನೇರವಾಗಿ ಮುಂದಿಟ್ಟಿದ್ದೀನಿ. ಇದರಲ್ಲಿ ವಿಷಯ-ವಿರೋಧ ಮಾತ್ರ ಇದೆ, ಹೊರತು ವ್ಯಕ್ತಿ-ವಿರೋಧವಿಲ್ಲ.
ನಿಮನ್ನು ಕಂಡ್ರೆ ನನಗೆ ದ್ವೇಷವಿಲ್ಲ. ನಿಮ್ಮ ಮೇಲಣ ಒಲವು ಇದ್ದೇ ಇದೆ. ವಿಚಾರಗಳನ್ನು ಮಂಡಿಸಿ, ಹಾಗೇ ಅದಕ್ಕೆ ಬರುವ ಅನಿಸಿಕೆಯನ್ನು, ವಿಚಾರಕ್ಕೆ ಬಂದ ಅನಿಸಿಕೆ, ಹೊರತು ವ್ಯಕ್ತಿಯ ಮೇಲೆ ಬಂದುದು ಎಂದುಕೊಳ್ಳಬೇಡಿ..
"ನಾನು ೧೦೦% perfect ಎಂದು ಅಂದುಕೊಂಡಿದ್ರೆ, ಅದು ನನ್ನ ಕೊರತೆಯೇ!"
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ನಿಮ್ಮ ಉದ್ದ ಬರಹಕ್ಕೆ ನನ್ನ ಮರುಲಿಗಳು
೧) "ಕನ್ನಡವನ್ನು ಕನ್ನಡವು ಕನ್ನಡಿಸುತ್ತಿರಬೇಕು" - ದ.ರಾ.ಬೇಂದ್ರೆ ( ಅಂದ್ರೆ ಕನ್ನಡದಿಂದಲೇ ಕನ್ನಡದಲ್ಲಿ ಹೊಸ ವಿಚಾರಗಳು ಬರುತ್ತಿರಬೇಕು. ಒಂದು ಹೊಸ ಪದ ಹುಟ್ಟಿಸುವಾಗ ಸಕ್ಕದದ ಅತವ ಬೇರೆ ನುಡಿಯ ಮೊರೆ ಹೋಗಬಾರದು. ಹೋದರೂ ಅದನ್ನು ಕನ್ನಡದ ನಾಲಿಗೆಗೆ ಹೊಂದಿಕೊಳ್ಳುವಂತೆ ಮಾಡಿಕೊಳ್ಳಬೇಕು)
೨) "ಅಸಮಸಕ್ಕದಅಚ್ಚಗನ್ನಡ " - ಆಂಡಯ್ಯ ( ಯಾವುದು ಸಕ್ಕದಕ್ಕೆ ಸಮನಲ್ಲ ಅದೇ ಕನ್ನಡ. ಅಂದರ ಸಕ್ಕದ ಒರೆಗಳಲ್ಲಿರುವ ಎಡರುಗಳನ್ನು ತೆಗೆದು ಬಳಸಿದರೆ ಅದು ಕನ್ನಡವಾಗುತ್ತದೆ)
೩) ಕನ್ನಡಕ್ಕೆ ತನ್ನದೇ ಆದ ವ್ಯಾಕರಣ, ತನ್ನದೇ ಒರೆಸಿರಿ/ಪದಸಂಪತ್ತು ಇದೆ. ಅದನ್ನು ನಾವು ಗುರುತಿಸಿಕೊಳ್ಳಬೇಕು. ಹಿಂದಿನ ವ್ಯಾಕರಣಿಗಳು ಕನ್ನಡದ ವ್ಯಾಕರಣ ಸಕ್ಕದದಂತಿರಬೇಕು ಎಂಬ ತಪ್ಪು ತಿಳುವಳಿಕೆಯಲ್ಲಿದ್ದರು. ಆದ್ದರಿಂದ ಸಕ್ಕದದ ವ್ಯಾಕರಣವನ್ನು ಕನ್ನಡ ಮೇಲೆ ಹೇರಿದರು.ಇದು ತಪ್ಪು - ಡಿ.ಎನ್.ಶಂಕರಬಟ್ರು
೪) ಪರಪಂಚ ಹೆಚ್ಚು ಹೆಚ್ಚು ಬರಹದ ಮೇಲೆ ನಿಲ್ಲಲು ಸುರುವಾಗಿದೆ. ಬರಹ ಕಲಿಯದವನಿಗೆ ಬದುಕಲು ಎಡರಾಗುವ ದಿನಗಳು ಬರುತ್ತಿವೆ. ಇದರಿಂದ ಬರಹವನ್ನು ನಾವು ಸುಲಬ ಮಾಡುವ ಹೊತ್ತು ಹತ್ತಿರವಾಗುತ್ತಿದೆ - ಡಿ.ಎನ್.ಶಂಕರಬಟ್ರು
೫) "ಕನ್ನಡಿಗರಿಗೆ ಕನ್ನಡವೇ ಗತಿ" - ಬಿ.ಎಂ.ಶ್ರೀ
೬) "ಕ್ರಿ.ಶ. ೪ ನೇ ನೂರೇಡು/ಶತಮಾನ ನಿಂದ ೯ ನೇ ನೂರೇಡಿನವರೆವಿಗೂ ಕನ್ನಡದಲ್ಲಿ ಬರೆಯಿಸಿರುವ ಶಾಸನಗಳ ಅಂಕಿ ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೂ ಮುಂಚೆ ಅಂದರೆ ೪ನೇ ನೂರೇಡಿಗೂ ಮುಂಚೆ ಕನ್ನಡದಲ್ಲಿ ಅತ್ವ ಸಕ್ಕದದಲ್ಲಿ ಶಾಸನಗಳಿರಲಿಲ್ಲ" - ಬಿ.ವಿ.ಕಾರಂತ ( ಕನ್ನಡಕ್ಕೆ ತನ್ನದೇ ಆದ 'ಜನಪದ' ಇದೆ ಮತ್ತು ತನ್ನದೇ ಆದ ಸೊಗಡು ಇದೆ ಅದಕ್ಕಾಗಿಯೇ ಕನ್ನಡದ ಶಾಸನಗಳ ಅಂಕಿ ಹೆಚ್ಚಾಗಿದೆಯೆಂದು, ಇದರ ಮೂಲಕ ಕನ್ನಡವೆಂಬ 'ಎಚ್ಚರ' ಆಗಿನ ಹೊತ್ತಿನ ಅರಸರಿಗೆ ಗೊತ್ತಿತ್ತು ಎಂದು ತಿಳಿದುಕೊಳ್ಳಲಾಗುವುದು. ಹೀಗೆ ಮಾಡುವುದರಿಂದ ಅವರು ಕನ್ನಡ ಮಂದಿಗೆ ಹತ್ತಿರವಾಗುತ್ತೇವೆ ಎಂದು ಅವರು ತಿಳಿದಿದ್ದರು ಎಂಬುದನ್ನು ಊಹಿಸಿಬಹುದು. ಅಮೋಗವರ್ಶನ ಹೊತ್ತಿನಲ್ಲೇ 'ಕನ್ನಡ'ವೆಂಬ ನಾಡು/ದೇಶ, ನಡಾವಳಿ ಮೇಲ್ಮಟ್ಟಕ್ಕೆ ತಲುಪಿತ್ತು ಎಂಬುದನ್ನು ನಾವು ಹೊತ್ತಿಗೆಗಳನ್ನು ಓದಿ ತಿಳಿದುಕೊಳ್ಳಬಹುದು).
ನಾವು ಕನ್ನಡದಲ್ಲಿ ಹೊಸ ವಿಚಾರಗಳಿಗೆ ಬಾಗಿಲನು ತೆರೆದು, ದಿಟವಾದ ಕನ್ನಡ ಹೇಗಿರಬೇಕೆಂಬುದರ ಬಗ್ಗೆ ಸರಿಯಾಗಿ ಅರಿಯಬೇಕು. ಮತ್ತು ಕನ್ನಡವನ್ನು ಹೇಗೆ ಸುಲಬ ಮಾಡಬಹುದು ಎಂಬುದರ ಬಗ್ಗೆ ಉಂಕಿಸಬೇಕು. ಇದಕ್ಕೆ ಶಂಕರಬಟ್ರ ಹೊತ್ತಿಗೆಗಳು ಬಹಳ ನೆರವಾಗುವುದು.
ಕನ್ನಡಕ್ಕೆ ನುಸುಳಿರುವ ಸಕ್ಕದ/ಇಂಗಲೀಸನ ಒರೆ/ಪದಗಳು ಅಲ್ಲಿ ಹೇಗಿವಿಯೋ ಹಾಗೆ ಕನ್ನಡದಲ್ಲಿ ಬರೆಯಬೇಕು/ ಉಲಿಯಬೇಕು ಎಂಬ ಕಟ್ಟುಪಾಡು ಮೊದಲು ತೊಲಗಬೇಕು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಇಂಗ್ಲಿಶ್ ಯಾಕೆ ಇಷ್ಟು ವ್ಯಾಪಕವಾಗಿದೆ ? ಅದು ಚೆನ್ನಾಗಿ ತಿಂದುಂಡು ಬೆಳೆದಿದೆ
ವೀರಕನ್ನಡಿಗರಿಗೆ ಯಾಕೆ ಸಂಸ್ಕೃತ ದ್ವೇಷ ? ಒಂದು ಇವರು ಇಂಗ್ಲಿಷ್ ವಿರುದ್ಢ ಹೋರಾಡಿ ಗೆಲ್ಲುವ ಶಕ್ತಿ ಇಲ್ಲದವರು, ಎರಡು ಮನೆಯ ಹಿರಿಯ ವೃದ್ಧತಾಯಿಯ ಎದುರು ಇವರದು ಉತ್ತರನ ಪೌರುಷ, ಮೂರು ಜಾತಿ ರಾಜಕೀಯ, ನಾಲ್ಕು ಈ ಉಟ್ಟು ಓರಾಟಗಾರರಿಗೆ ಕನ್ನಡವೂ ಗೊತ್ತಿಲ್ಲಾ ಸಂಸ್ಕೃತವೂ ಗೊತ್ತಿಲ್ಲ. ಭಾರತ ಜನನಿಯ ತನು ಜಾತೆಯನ್ನು ಹೇಗಾದರೂ ಮಾಡಿ ಬೇರ್ಪಡಿಸುವ ಮನೆ ಮುರುಕತನ. ಸಂಕರ ಬಟ್ಟರ ಬಂಟರಿಗೆ ಇರಲಾರದೆ ಇರುವೆ ಬಿಟ್ಟುಕೊಳ್ಳುವ ಚಪಲ.
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ನನ್ನ ಮರುತ್ತರ(ವೈಭವ) ಎರಡು ಭಾಗದಲ್ಲಿದೆ.
ಸಕ್ಕದ ಪದಗಳನ್ನ synonyms ತರ ಇಟ್ಕೊಳ್ಳ್ ಬಹುದಲ್ಲ ? ಯಾವ ಸಂಧರ್ಭದಲ್ಲಿ ಯಾವುದು ಲೇಸು ಅಂತ ಯಾರಿಗೆ ಅನ್ಸುತ್ತೊ ಅದನ್ನ ಅವರು ಉಪ್ಯೊಗುಸ್ಲಿ. ಸಂಪದದಲ್ಲಿ ಯಾರೋ ಅನಿಸುತಿದೆ ಹಾಡನ್ನ ಸಕ್ಕದದಲ್ಲಿ ಬರೆದರೆ ಹೆಂಗಿರುತ್ತೆ ಅಂತ ವಿವರಿಸಿದ್ರು. ನ್ಯಾಯವಾಗಿ ಹೇಳಬೇಕು ಆಂದ್ರೆ ಮೊದಲು ಅವರ ಇತರ ಕವಿತೆಗಳ ಸಂಗ್ರಹದ ಪರಿಚಯ ಇಲ್ಲದೆ ಅವರ ಈ ವಾದದ ಆಳ ತಿಳಿಯೊಕ್ಕೆ ಬರಲ್ಲ. ಆದರೂ ಅವರ ಮೂಲ ಅಂಶ ಒಪ್ಪಿ ಮುಂದೆನಡೆದರೆ, ಇನ್ನೊಂದು ಪ್ರಶ್ನೆ ಇದೆ. ಸಕ್ಕದ ಪದಗಳಿರೊ ಎಲ್ಲ ಕನ್ನಡ ಕವಿತೆಗಳ್ಳನ್ನ ಕನ್ನಡೀಕರಿಸಿದರೆ ಅವು ಹಾಗೆ ಉಳಿಯುತ್ತ?
ಇಂಗಲಿಶಲ್ಲಿ ಎಷ್ಟೊಂದು ಗ್ರೀಕ್, ಲ್ಯಾಟಿನ್ ಹಾಗು ಇತರ ಭಾಶೆ ಪದ ಇಲ್ವ? isoceles, scalene, repertoire ಹೀಗೆ ಇನ್ನಿತರ. ಒಮ್ಮೆ ಪರೀಕ್ಷೆಗೆ ಅಭ್ಯಾಸ ಮಾಡುತಿರಬೇಕಾದ್ರೆ, "ಎರಡು ಸಮ ಕೊಣಗಳಿರೊ ತ್ರಿಕೊಣಕ್ಕೆ ಇಂಗಲಿಷಲ್ಲಿ ಎನಂತಾರೆ" ಅಂತ ನನ್ನ ಗ್ರೀಕ್ ಗೆಳೆಯ ಕೇಳಿದ. ಎದ್ದು ಬಿದ್ದು ನಕ್ಕೆ. (ಎಬಿನ)
ಇದರಿಂದಾಗಿ ಇಂಗಲಿಶನೊರಿಗೆ ಲೆಕ್ಕ ಬರೊಲ್ಲ, ಸಯೆನ್ಸ್ ತಿಳಿದಿಲ್ಲ, ಅದರಲ್ಲಿ ಕ್ರಿಯಾತ್ಮಕ ಶಕ್ತಿ ಇಲ್ಲ ಅಂತ ಆಗೀದಿಯ? ಅಥವ ಗ್ರೀಕರಿಗೆ, ಲ್ಯಾಟಿನ್ ತಳಿದವರಿಗೆ ಇದರಲೆಲ್ಲ ಉಳಿದವಿರಿಗಿಂತ ಹೆಚ್ಚು ದರುಶನ ಇದೆ ಅಂತಾನ? ಅತ್ವ, ಇಂಗಲಿಶ ಅವರಿಗೆ ತಮ್ಮ ಭಾಶೆ ಮೇಲಿನ ಹೆಮ್ಮೆ ಕಮ್ಮಿ ಅಂತಾನ? (ಹಲ್ಲಕಟ್ಟ ಸ್ವಾಳಿಮಕ್ಕಳು ಎನ್ನ್ ಝಂಭ ಅಂತೀರಿ.)
ಶಿಕ್ಷಣಕ್ಕೆ ಸಂಬಂಧ ಪಟ್ಟ ಹಲವಾರು ಪ್ರಾಬ್ಲಂಗಳು ವಿಶಯಕಿಂತ ಹೆಚ್ಚು pedagogy ಹಾಗು ವಿಶಯಗಳನ್ನ ವಿವರಿಸೊದ್ರಲ್ಲಿ ಅವರ ಉತ್ಸಾಹ, ಕ್ರಿಯಾಶೀಲತೆ, ಸಾಮರ್ಥ್ಯದ ಮೇಲೂ ಇದೆ. ಸಕ್ಕದ ಪದಗಳನ್ನು ಕಿತ್ತೊಗೆದು ಕನ್ನಡ ಪದಗಗಳ ಉಪಯೊಗದಿಂದ ವಿಶಯ ತಂತಾನಾಗೆ ಅರಿವಿಗೆ ಬರುತ್ತೆ, ಎಟಕುತ್ತೆ ಅನ್ನೊದು ಅಪ್ರಮೇಯ. ಇದಕ್ಕೆ ಯಾವ ಆಧಾರಗಳು ಇಲ್ಲ.
ಇದೆ ಕಾರಣಕ್ಕಾಗಿ, ನಮ್ಮಲ್ಲಿ ಕಥಾವಸ್ತು ಕನ್ನಡ, ಸಂಸ್ಕ್ರುತ ದಲ್ಲಿದರು ಪ್ರವಚನ, ಹರಿಕಥೆ ಸಂಪ್ರದಾಯ ಇರೊದು. ಮೂಲ ಯಾವ ಭಾಶೆಯಲ್ಲಿದರು, ಪ್ರವಚನಕಾರರು, ಹರಿಕಥೆ ಹೇಳುವವರು ಪೇಮಸ್ಸ್ ಆಗೊದು ಅವರ ವಿವರ ಹೇಳೊ ಸಾಮರ್ಥ್ಯದಿಂದಾಗಿ. ಇಲ್ಲ ಅಂದಿದ್ರ ಕೊಗಿಲೆ ಕಂಠ ಎಸ್ಸ್.ಪೀ.ಬಿ, ಇಲ್ಲ ನಾಲಿಗೆ ಹೊರಳಿಸೊದ್ರಲ್ಲಿ ನಿಸ್ಸಿಮರಾದ ಸಂಸ್ಕ್ರುತ ಪಾಠಶಾಲೆಯ ಹೆಡ್ಡ ಮಾಸ್ತರ, ಕನ್ನಡ ಪಂಡಿತ ಇವರೆಲ್ಲ ಒಂದೊಂದು ಪ್ರವಚನ, ಹರಿಕಥೆ ಕಸೆಟ್ಟ್ ರಿಲೀಸ್ ಮಾಡ್ತಿದ್ರು. ಇದೆಲ್ಲ ಯಾಕೆ ಕ್ರಿಶ್ಣೆ ಗೌಡರ ಈ ಕಾರ್ಯಕ್ರಮ ನೊಡಿ, ಇದರಲ್ಲಿ ವಿಶಯವಸ್ತು ಬಿಟ್ತರೆ, ಇನ್ನು ಎರಡು ಅಂಶ ಇದೆ. ಒಂದು, ಆ ಅದ್ಭುತ ವಿಶಯವಶ್ತುವಿನ ಲೀಲಾಜಾಲ ಉಪಯೊಗ ಮತ್ತು ಅದರ ರಸಭರಿತ ವಿವರಣೇ.
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ತರಲೆ ಸುಬ್ಬಣ್ನ
"ಶಿಕ್ಷಣಕ್ಕೆ ಸಂಬಂಧ ಪಟ್ಟ ಹಲವಾರು ಪ್ರಾಬ್ಲಂಗಳು ವಿಶಯಕಿಂತ ಹೆಚ್ಚು pedagogy ಹಾಗು ವಿಶಯಗಳನ್ನ ವಿವರಿಸೊದ್ರಲ್ಲಿ ಅವರ ಉತ್ಸಾಹ, ಕ್ರಿಯಾಶೀಲತೆ, ಸಾಮರ್ಥ್ಯದ ಮೇಲೂ ಇದೆ. ಸಕ್ಕದ ಪದಗಳನ್ನು ಕಿತ್ತೊಗೆದು ಕನ್ನಡ ಪದಗಗಳ ಉಪಯೊಗದಿಂದ ವಿಶಯ ತಂತಾನಾಗೆ ಅರಿವಿಗೆ ಬರುತ್ತೆ, ಎಟಕುತ್ತೆ ಅನ್ನೊದು ಅಪ್ರಮೇಯ. ಇದಕ್ಕೆ ಯಾವ ಆಧಾರಗಳು ಇಲ್ಲ."
ಹಿಂಗೆ ಒಂದೊಂದೇ ಒಂದೊಂದೇ ಹೆಕ್ಕಿ ಹೇಳಬ್ಯಾಡ್ರಿ...
ನೀಡು ಇಡೀ ಕನ್ನಡವನ್ನು ಒಂದಾಗಿ ನೋಡು... ಆಗ... ಗೊತ್ತಾಗ್ತದೆ...
ಸಕ್ಕದ ಬಳಸಲೇ ಬ್ಯಾಡಿ ಅಂತ ಅಂತಿಲ್ಲ.. ಆದ್ರೆ ನಮ್ ತಾವ ಕನ್ನಡದ ಒರೆಗಳಿರುವಾಗ ಯಾಕ ಅಂತ!!
ಇದಕ್ಕೆ ಮಾದ್ರಿಯಾಗಿ ನೂರಾರು ಈಗಾಗಲೇ ಹೇಳಾಯ್ತು..
ಪುರುಷರ ಶೌಚಾಲಯ, ಮಹಿಳೆಯರ ಆಸನ ಇವೆಲ್ಲ ಯಾಕೆ? ಗಂಡಸರ ಬಚ್ಚಲು, ಹೆಂಗಸರು ಕುರ್ಚಿ/ಸೀಟು ಅಂದ್ರೆ ನಮ್ ಮಂದಿಗೆ ಸುಲಬ ಅಲ್ವ!
ವಿಸಯ ಏನು ಅಂದ್ರೆ, ತಾಯ್ನುಡಿಯಲ್ಲಿ ಕಲಿಕೆ ಅಂತ, ಇಂಗ್ಲೀಸ್ ಒರೆಗಳನ್ನ ಮೊದಲ ಸಕ್ಕದಕ್ಕೆ ತಂದು, ಆಮ್ಯಾಕೆ ಕನ್ನಡದಾಗೆ ಬಳಸೋದು ಯಾಕೆ? ಇಂಗ್ಲೀಸಿಂದ ನೇರ ಕನ್ನಡಕ್ಕೆ ಹೊಂದಿಕೆ ಮಾಡಿದ್ರೆ ಆಯ್ತಲ್ಲ. ಎಲ್ಲ ಪೈಸಲ್ ಆಯ್ತು..
ಇನ್ನು ಆರ್ಯುವೇದ, ಜೋತಿಸ್ಯ ಇಂತವಕ್ಕೆ ಸಕ್ಕದದ ಒರೆಗಳನ್ನೇ ಬಳಸ್ಲಿ.. ಆದ್ರೆ...
artificial insemination = ಕೃತಕ ಗರ್ಭಧಾರಣೆ
( ಇದು ಸರಿಯಾ? )
ವಿಸಯ ನೀವು ಹೇಳೋ ಹಂಗಲ್ಲ...
ಸಕ್ಕದದಿಂದ ಅರಿವು ಬಂದ್ರೆ ಸಕ್ಕದವೇ ಒರೆಗಳು ಬಳಸೋಣ.. ಆದ್ರೆ ಅದು ಇಂಗ್ಲೀಸಿಂದ, ಪಾರಿಸಿಯಿಂದ, ಲ್ಯಾಟಿನಿಂದ ಬಂದ್ರೆ, ಅದನ್ನ ಮೊದಲು ಸಕ್ಕದಕ್ಕೆ ತಂದು ಆಮ್ಯಾಕೆ ಕನ್ನಡದಲ್ಲಿ ಬಳಸೋದು ಯಾಕ?
( ಉಪನದಿ, ಉಪ ಅಧೀಕ್ಷಕ ನಿರೀಕ್ಷಕರು ಇವೆಲ್ಲ ಸಕ್ಕದಾಗೆ ದಿಟವಾಗ್ಲೂ ಅಯ್ತಾ? )
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಸಾರ್...
ನಾನು ಹೇಳಿದ್ದೆ ಮೇನ್ ಪಾಯಿಂಟ್ ಅಂತ ನಾನು ಹೇಳ್ತಿಲ್ಲ. ಇದೂ ಒಂದು ಅಂಶ ಅಂತ. ಇಲ್ಲಿ ಯಾರು ಅದರಬಗ್ಗೆ ಹೇಳಿದ ಹಾಗೆ ಕಂಡುಬರಲ್ಲಿಲ್ಲ. ಮುಖ್ಯಾಂಶ ಅನಸ್ತು ಅದಿಕ್ಕೆ ಬರ್ದೆ.
ಉತ್ತರ ಕರ್ನಾಟಕದ ಎಸ್ಟೊಂದ್ ಕಡೆ ಕಕ್ಕಸ, ಇಂಜೀನಿಯರ, ಕಾಲೇಜ ಅಂತ ಪೆಂಟ್ ಮಾಡಿರ್ತಾರೆ. ಅವರಿಗೆ ಸಂಕೊಚ ಇಲ್ಲ. ಮೈಸೂರಲ್ಲೆ ನಾನು ಅಭಯಂ... ಅಂತ ಮೊದಲು ಒದಿದ್ದು. ಅಲ್ಲಿ ಬಚ್ಚಲು ಅಂದರೆ ಜಳಕ ಮಾಡೊ ಕೊಣೆ.
ಪದಗಳು ಸೂಚಿಸುವ ವಸ್ತುವಿನ ಕಲ್ಪನೆ ಇಲ್ಲ ಅಂದ್ರೆ ಲಾಭ ಇಲ್ಲ. ಬರಿ ಪದ ಒದಿ ಅರ್ಥಗ್ರಹಿಸೊಕ್ಕೆ ಅಗೊಲ್ಲ. ಅಂತದ್ದೇನಾದ್ರು -ಬರಿ ಶಬ್ದ ಒದಿ ಅರ್ಥ ತಿಳಿಯೊಕೆ ಆಗುವಂತದು-ನೀವು ಶ್ರುಶ್ಟಿ ಮಾಡಿದ್ರೆ ನೀವು ಜಗತ್ತೆ ಆಳಬಹುದು ನೊಡಿ.
ಒಮ್ಮೆ ಕಕ್ಕಸ, ಬಚ್ಚಲಿ, ಶೌಚಾಲಯ ಈ ಪದಗಳ ಕಲ್ಪನೆ ನಮಗೆ ಬಂದರೆ, ನಂತರ ಯಾವಾಗ ಯಾವುದರ ಉಪಯೊಗ ಮಾಡುತಿವಿ ಅನ್ನೊದು, ನಮ್ಮ recallability, comfort, context and politics ಮೇಲೆ ಬಿಟ್ಟಿದ್ದು. ಯಾಹೂ ಬೆಂಗಳೂರಲ್ಲಿ ಗೊ-ಪೀ, ಗೊ-ಪೀ-ಕ ಅಂತ ಇದೆ. ಹಂಗಂತ ಜನ ಅಲ್ಲಿಗೆ ಹಣ್ಣು ಕಾಯಿ ತಗೊಂಡು ಹೊಗೋಲ್ಲ. ಕೆಲವರಿಗೆ bastard ಸರಳ, ಕೆಲವರಿಗೆ ಸೂಳೆಮಗ ಸರಳ. ವೆಶ್ಯಾಪುತ್ರ ಸರಳವಾಗಿ ನುಡಿಯೋರು ಇದಾರೆನೊ ಯಾರ್ಗೊತ್ತು?
dyslexia, hyperthermia,catharsis ನಿಜ ಹೆಳ್ಬೇಕು ಅಂದ್ರೆ ಇದು average-joe ಗೆ ಅರ್ಥ ಆಗಲ್ಲ, ಅದಿಕ್ಕೆ ಡಾಕ್ಟ್ರು, ವಿವರಿಸಿ ಹೇಳೊದು you have lost a lot of body temperature. ಪ್ರತಿ ಓಂದು ಮೆಡಿಕಲ್, ಸಯೆಂಟಿಫಿಕ್, ಗೊವೆರ್ನಮೆಂಟ್,ಲೀಗಲ್ಲ್ ಪದಾನೂ ಹೀಗೆ. Glyptothorax Kudremukensis, ಇದು ಇಂಗಲೀಶ? engraved upperbody fish found in kudremukha ಅಲ್ಲ freshwater catfish. ಕುದುರೆಮುಖದವರು ಕೆಂಮೀನು ಅಂತಾರೆನೊ ಯಾರ್ಗೊತ್ತು?
ಕ್ರುತಕ ಗರ್ಭಧಾರಣೆ ನಮಲ್ಲಿರೊ ಆಯುರುವೇದದ ಪದಸಂಪತ್ತನ್ನ ಬೆಳಸಿ ಕೊಂಡು ಹೊಗೊ ಪ್ರಯತ್ನ ಅಂತ ಯಾಕೆ ತಿಳಿಬಾರ್ದು? in good faith.
ನಿಮ್ಮ ಕದನ ಸಾಮಾಜಿಕ ವಾದದ್ದು. ಅದಕೆ ವಯ್ಯಾಕರಣದ ಉಡುಪು ಬೇಡ. ಹಕಾರ, ಅಕಾರ ಸಂಕೇತ ಆಗಿರೊ ಯುದ್ಧದಲ್ಲಿ ತಪ್ಪು ಭಾಶೆದಲ್ಲ. ಜನರ ವಿವೇಕ್ಕದ್ದು. ಆ ಯುದ್ಧ ಬೇರೆ. ಅಕಾರ ಟೀಕಿಸೋರ್ನ ಒಬ್ಬೋಬ್ಬ್ರನ್ನೆ ಹೇರಿ ಹೇರಿ ತಿದ್ದ ಬೇಕು. ಅಕಾರ ತಪ್ಪಲ್ಲ, ದೂಶಿತವಾದದ್ದು ಅಲ್ಲ. it is not a handicap, diability or in any way inferior. ಹಕಾರ ತಪ್ಪು, ಅಕಾರ ನೆ ಸರಿ ಅಂತಲು ಅಲ್ಲ.
೨೦೦೦ ವರುಶ evolve ಆಗಿರೊ ಕನ್ನಡ ಕನ್ನಡ ಅಲ್ಲ ಅಂತ ಹೆಂಗೆ ಹೇಳೋದು? ಆ evolution ನಾ ಯಾಕೆ purge ಮಾಡ್ಬೆಕು? (especially the problem is not in the language but social.) ಬಿಟ್ಟು ಹೋಗಿರೊದು, ಹೊಸಾದು ಸೆರಿಸೊದು ಬೇರೆ. ಅಥವ ಕನ್ನಡ ಅಂದರೆ ಎನು ಅನ್ನೊದನ್ನ ಕಲ್ಲು ಒದಿ ತಿಳಿಬೇಕು ಅನ್ನೋದು ಹೇಗೆ? ಮುಪ್ಪಲ್ಲಿ ಬಾಲ್ಯ ಹುಡುಕೋ ಪ್ರಯತ್ನ, ಅತಿರೇಕವಾದಲ್ಲಿ ಅದು ಒಂತರ ತಾಲಿಬಾನ ವಾದ.
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಸುಬ್ಬಣ್ಣ.. ಸರಿ!!
ನಿಮ್ಮ ಮಾತು ಹಿಡಿಸಿತು..
ಆದ್ರೆ
"ಕ್ರುತಕ ಗರ್ಭಧಾರಣೆ ನಮಲ್ಲಿರೊ ಆಯುರುವೇದದ ಪದಸಂಪತ್ತನ್ನ ಬೆಳಸಿ ಕೊಂಡು ಹೊಗೊ ಪ್ರಯತ್ನ ಅಂತ ಯಾಕೆ ತಿಳಿಬಾರ್ದು? in good faith."
ಇದು ಆರ್ಯುವೇದದ್ದಲ್ಲ.. D.
"ನಿಮ್ಮ ಕದನ ಸಾಮಾಜಿಕ ವಾದದ್ದು. ಅದಕೆ ವಯ್ಯಾಕರಣದ ಉಡುಪು ಬೇಡ. ಹಕಾರ, ಅಕಾರ ಸಂಕೇತ ಆಗಿರೊ ಯುದ್ಧದಲ್ಲಿ ತಪ್ಪು ಭಾಶೆದಲ್ಲ. ಜನರ ವಿವೇಕ್ಕದ್ದು. ಆ ಯುದ್ಧ ಬೇರೆ. ಅಕಾರ ಟೀಕಿಸೋರ್ನ ಒಬ್ಬೋಬ್ಬ್ರನ್ನೆ ಹೇರಿ ಹೇರಿ ತಿದ್ದ ಬೇಕು. ಅಕಾರ ತಪ್ಪಲ್ಲ, ದೂಶಿತವಾದದ್ದು ಅಲ್ಲ. it is not a handicap, diability or in any way inferior. ಹಕಾರ ತಪ್ಪು, ಅಕಾರ ನೆ ಸರಿ ಅಂತಲು ಅಲ್ಲ."
ವ್ಯಾಕರಣ ಇರೋದು ನುಡಿಗೆ, ನುಡಿಯ ಮೂಲ ಸಮಾಜ, ಬುಡಕಟ್ಟು, ಜಾತಿ, ಜನಾಂಗ ಇವು.. ಕನ್ನಡ ಜನಾಂಗದಿಂದ ಕನ್ನಡ ಇರಾದು... ಕನ್ನಡ ಜನಾಂಗಕ್ಕೆ ಬಾಯಿ, ಮನಸ್ಸು ಎರಡೂ ಕನ್ನಡವೇ... ಏಕೆ ಅಂದ್ರೆ ಅವರಿಗೆ ಅರಿಮೆಯ-ಕೊಟ್ಟು-ತೊಗೆ ಮಾಡಿಕೊಳ್ಳಲು, ಅರಿಮೆಯನ್ನು ಅರಿತ ಮಾಡಿಕೊಳ್ಳಲು ಕನ್ನಡವೇ ದಾರಿ...
ಆದುದರಿಂದ ವ್ಯಾಕರಣ ಬೇರೆ ಅಲ್ಲ, ಸಮಾಜ ಬೇರೆ ಅಲ್ಲ..
ಆದ್ರೆ.. ಎಲ್ಲಾ ದೇಸಗಳಲ್ಲು, ನಮ್ಮ ದೇಸದಲ್ಲೂ ಹಿಂದಿನಿಂದ ನಡೆದಂತೆ, ಒಂದು ಗುಂಪು( ಇದು ಯಾವಾಗಲೂ ಹಿಂಗೆ ಕಂತ್ರಿ) ಹೋಗಿ ಲಾಬಿ ಮಾಡಿ, ಇರೋ ಮುಕ್ಕಾಲು ಮಂದಿಗೆ ಮೋಸ ಮಾಡಿದೆ, ಮಾಡ್ತಿದೆ, ಮಾಡ್ತಾ ಇರ್ತದೆ. ಅವರ ಮೋಸ ಒಂದು ಕೈದು/ಆಯುದ ಈ ಸಕ್ಕದ, ಸಕ್ಕದದ ಹೇರಿಕೆ.
ಅವರಿಗೆ ಚನ್ನಾಗೇ ಗೊತ್ತು ತಿಳಿಗನ್ನಡದಲ್ಲಿ ವಿಸಯಗಳನ್ನು, ಇಲ್ಲ ಮಂದಿಗೆ ಹತ್ರವಾದ ನುಡಿಯಲ್ಲಿ ನಾವು ಪಾಟ ಕಲಿಸಿಬಿಟ್ರೆ, ಇವೊತ್ತು ತಮಗಿರೋ 'ಬುದ್ದಿವಂತರ' ಪಟ್ಟ ಬಿದ್‌ವಾಯ್ತದೆ ಅಂತ...
...
ಇರಲಿ.. ನೀವು ಒಳ್ಳೇಯೋರು.. ನಿಮಗೆ ಜಾಸ್ತಿ ಹೇಳಬೇಕಾಗಿಲ್ಲ.. ನಿಮಗೆ ಅರಿತ ಆಯ್ತದೆ.
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ತರ್ಲೆ ಸುಬ್ಬಣ್ಣ,
"...ಇಂಗಲಿಶಲ್ಲಿ ಎಷ್ಟೊಂದು ಗ್ರೀಕ್, ಲ್ಯಾಟಿನ್ ಹಾಗು ಇತರ ಭಾಶೆ ಪದ ಇಲ್ವ? isoceles, scalene, repertoire ಹೀಗೆ ಇನ್ನಿತರ.."
ನಾವು ಮಾತಡ್ತ ಇರೋದು ದಿನಬಳಕೆಯ ಕನ್ನಡದ ಬಗ್ಗೆ ಮತ್ತು ಸುದ್ದಿಯೋಲೆಯ ಕನ್ನಡದ ಬಗ್ಗೆ.
ನೀವು ಮೇಲೆ ಹೇಳಿರೊ ಇಂಗಲೀಸಿನ ಪದಗಳನ್ನು ಕರ್ನಾಟಕ್ದಲ್ಲಿ ಯಾಕೆ ಅಮೆರಿಕದ ಬೀದಿಯಲ್ಲಿ ಹೇಳಿದರೆ ಯಾರಿಗೂ ಅರ್ತವಾಗಲ್ಲ.
ಅಲ್ಲಿ work ( office ಅಲ್ಲ), to go ( parcel ಅಲ್ಲ), rest room ( toilet ಅಲ್ಲ) ಇವೆ ಅವರಿಗೆ ಅರಿತ ಆಗುವುದು.
ನೀವು toilet ಅಂತ ಅಮೆರಿಕದಲ್ಲಿ ಹೇಳಿ ನೋಡಿ. ಮುಕ ಮುಕ ನೋಡ್ತಾರೆ.
ಇದನ್ನ ನಾವು ಕನ್ನಡದಲ್ಲಿ ಮನೆಸಾಲ( ಗೃಹಸಾಲ ಅಲ್ಲ), ಬಚ್ಚಲುಮನೆ( ಶೌಚಾಲಯ ಅಲ್ಲ) ಮತ್ತು ಹೊಗೆ ಸೇದಬಾರದು( ಧೂಮಪಾನ ನಿಷೇಧಿಸಲಾಗಿದೆ ಅಲ್ಲ)
ಅನ್ನಕೆ ಏನ್ ದಾಡಿ ಅಂತ ನಾವು ಕೇಳ್ತ ಇರದು.
ನನಗೆ ಗ್ರುಹಸಾಲ, ಶೌಚಾಲಯ ಅಂದ್ರೆ ಅರಿತ ಆಗುತ್ತೆ. ಬೇರೆಯವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಅಂದ್ರೆ ಅದು 'ಅಹಂಕಾರ'ದ ಮಾತಾಗುತ್ತದೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಮಯೇಸ, ವಯ್ಬವ್ ಮತ್ತುಳಿದವರಿಗೆ ಇಷ್ಟು ಒಳ್ಳೊಳ್ಳೇ ವಿಶ್ಯಗಳನ್ನ ತಿಳಿಸಿಕೊಟ್ಟಿದ್ದಕ್ಕೆ ವಂದನೆಗಳು.
ಅವರ್ಯಾರೋ ಸರ್ಟಿಪಿಕೇಟು ಕೊಟ್ಟ ಮಾತ್ರವೇ ನಿಮ್ಮ ಕನ್ನಡ ಸರಿ ಅಂತ ಹೆಂಗೆ ನಿರ್ಧಾರ ಆಗದಿಲ್ವೋ , ಅದೇ ತರ ’ಕೃತಕ ಗರ್ಭಧಾರಣೆ’ category ಅವ್ರಿಗೂ ಹಂಗೇ ಅನ್ಸಲ್ವಾ? ಅಂದ್ರೆ ಅದು ಸುದ್ಧ ಕನ್ನಡ, ತಾನು ಕನ್ನಡಿಗ ಅಂತ ಸಂಕರ ಭಟ್ರ ಪುಸ್ಕ ಓದಿ ನಿಮ್ಮಿಂದ ಸರ್ಟಿಪಿಕೇಟು ತಗಂಡ್ರೇ ಮಾತ್ರ ಕನ್ನಡಿಗ ಅಂತಲಾ? ಮದ್ವ, ರಮನುಜ, ಸಂಕರರಿಗೆ ೪-೫ % ಜನ ಸಿಸ್ಯರದ್ದು ಸಕ್ಕದ ತಾಯ್ನುಡಿ ಏನಾಗಿರ್ಲಿಲ್ವಲ್ಲಾ. ಅವರೆಲ್ಲರೂ ಕನ್ನಡ, ತಮಿಳಿ, ಮಲಯಾಳಂ ಮುಂತಾದ ತಾಯ್ನುಡಿಯವ್ರೇ ತಾನೆ?
(ಮೊನ್ನೆ ಕುದುರೆಮುಖದಲ್ಲಿ ಹೊಸತಾಗಿ ಸಿಕ್ಕಿದ ಜೀವ ಪ್ರಭೇದವೊಂದಕ್ಕೆ ಇಂಗ್ಲೀಸಲ್ಲಿ ಹೆಸ್ರಿಟ್ಟವ್ರೆ ನಮ್ಮ ಕರ್ನಾಟಕದ ವಿಜ್ಞಾನಿಗಳು !!. ಅದೇ ತರ ಆ ಕಾಲಕ್ಕೆ ಸಕ್ಕದ ಇತ್ತು ಅಂತ ಅನ್ನಿಸಲ್ವಾ?)
ಇನ್ನುಳಿದಂತೆ ಈ ಆವೇಶ ಸಕ್ಕದದ ಮೇಲೆ ಯಾಕೆ? ಪುರುಸರ ಶೌಚಾಲಯದಲ್ಲಿ ಉಚ್ಚೆ ಹೊಯ್ಯಾಕ್ಕಾಗ್ದೇ ಇದ್ದವ್ರಿಗೆ Gents Toiletನಲ್ಲಿ ಸಿಕ್ಕಾಪಟ್ಟೆ ಉಚ್ಚೆ ಎಂಗೆ ಬರ್ತದೆ? ಕೃತಕ ಗರ್ಭಧಾರಣೆಯಲ್ಲಿ ಕಸ್ಟಾ ಆಗೋ ಹೆರಿಗೆ ಅದೆಂಗೆ artificial inseminationನಲ್ಲಿ ಸುಲ್ಬ ಆಗೋಯ್ತದೆ? ಅಲ್ಲಿ ಹುಟ್ಟೋ ಕರ ಮಾತ್ರ ಆರೋಗ್ಯವಾಗಿ ಎಂಗಿರ್ತದೆ? ಹಸ ಹಾಲು ಜಾಸ್ತಿ ಎಂಗೆ ಕೊಡ್ತದೆ?(artificial insemination ge ಕೃತಕ ಗರ್ಭಧಾರಣೆ ಸರಿಯಾದ ಪದ ಅಲ್ಲ ಗೊತ್ತು, ಆದರೆ ವಿಸ್ಯ ಇರೋದು ಇಲ್ಲಿ ಇಂಗ್ಲಿಸು, ಸಕ್ಕದದ್ದು)
ಈಗ ಸಕ್ಕದ , ಕನ್ನಡ ಅಂತ ಹೊಡೆದಾಡದು ಬಿಡಣ. ನಮ್ಮ ಕನ್ನಡದಲ್ಲಿ ಬ್ಯಾಡದೇ ಇದ್ರೂ ನುಸುಳಿ ಕನ್ನಡ ಕಸ್ಟ ಮಾಡಿರೋ ಸಕ್ಕದದ ಪದಗಳನ್ನ ತೆಗೆದುಹಾಕೋದು ಹೇಗೆ ಅಂತ ತಿಳಿಸಿಕೊಡಿ. ಬ್ರಾಮಣ, ಸೂದ್ರ ಅಂತ ಹಳೇಕಾಲದ ಹೊಡೆದಾಟ, ಬೈಗುಳ ಬಿಟ್ಟು ಈಗಿನ ಸ್ಥಿತಿಗೆ್, ಇನ್ನು ಮುಂದೆ ಏನು/ಹೇಗೆ ಮಾಡಿದರೆ ಚೆನ್ನ ಕನ್ನಡದ ಒಳಿತಿಗೆ ಅಂತ ತಿಳಿಸಿಕೊಡಿ.
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಲೇ.. ವಿಕಾಸ ಯಗ್ಡೆ...
ವಸಿ ಸರಿಯಾಗೋದಲೇ.......
ನೀನ್ ಒಂದಾರ ಸಂಕರ ಬಟ್ರ ಹೊತ್ಗೆ ಓದಿದ್ದೀಯಾ?? ಮಳ್ಳ
"ತಾನು ಕನ್ನಡಿಗ ಅಂತ ಸಂಕರ ಭಟ್ರ ಪುಸ್ಕ ಓದಿ ನಿಮ್ಮಿಂದ ಸರ್ಟಿಪಿಕೇಟು ತಗಂಡ್ರೇ ಮಾತ್ರ ಕನ್ನಡಿಗ ಅಂತಲಾ? "
ಹಿಂಗೆ ಸರ್ಟಿಪಿಕೇಟು ಕೊಡ ಬುದ್ದಿ ಸಂಕರಬಟ್ರ ನಾ ಓದಿದ ಯಾವ ಹೊತ್ಗೆನಲ್ಲೂ ಇಲ್ಲ.. ಅವ್ರು ಯಾಳೋದೇ ಬೇರೆ....
ಒಂದ್ ಕೆಲಸ ಮಾಡಲೇ...
ಮೊನ್ನೆ ಬಂದ "ಕನ್ನಡ ನುಡಿ ನಡೆದು ಬಂದ ದಾರಿ" ಓದು.. ಅದ್ರಾಗೆ ನಿಮ್ ಹವ್ಯಕ ಕನ್ನಡ ಬಗ್ಗೆ ಸಕ್ಕತಾಗಿ ಬರೆದವ್ರೆ..
ಹಂಗ ಬರೆದು.. ಹೆಂಗೆ ಹವ್ಯಕಗನ್ನಡ, ಬಡಗಗನ್ನಡ, ಬಡಗುಒಳನಾಡುಗನ್ನಡ, ತೆಂಕಣೊಳನಾಡುಗನ್ನಡ, ಕರಾವಳಿಗನ್ನಡ, ಹಾಲಕ್ಕಿಗನ್ನಡ, ಸೋಲಿಗಗನ್ನಡ, ಚಮರಾಜನಗರದ ಕನ್ನಡ, ಹಾಸನದ ವಕ್ಕಲಿಗ್ರ ಕನ್ನಡ, ನಂಜನಗೂಡು ಹಾರ್ವಗನ್ನಡ.. ಹಿಂಗೆ ಒಂದು ನಲ್ವತ್ತು ಬಗೆಯ ಕನ್ನಡಗಳನ್ನು ಹೇಳಿ.. ಎಲ್ಲವೂ ಸರಿ ಅಂದವ್ರೆ....
ಇನ್ನು ಅವರ "ಕನ್ನಡ ಬರಹವನ್ನು ಸರಿಪಡಿಸೋಣ" ಈ ಹೊತ್ಗೆ ಓದಿದ್ರೆ.. ನಿಂಗೆ ತಿಳಿತಯ್ತೆ.. ಅವ್ರು ಏನ್ ಹೇಳವ್ರೆ ಅಂತ. ಅವ್ರು ಸರ್ಟಿಪಿಕೇಟು ಕೊಡೋ ತಂಟೇಗೇ ವಾಗಿಲ್ಲ..
ಲೇ ಇಲ್ಲ ವಿಸ್ಯ ಏನು ಅಂತ ಬರೆದೋರೆ ಹೇಳವ್ರೆ.. ವಿಸ್ಯ ಇರಾದು "ಕನ್ನಡ ಮತ್ತು ಸಮ್ಸುಕುರುತದ" ನಡುವೆ.. ಇಂಗ್ಲೀಸ್ ತಂದು ನೀ ಸೇರ್ಸಿದ್ದೀ ಈಗ.
ಒಂದ್ ಕೆಲಸ ಮಾಡಲೇ,,,,,,,,,,, ನೀನೇ ಒಂದು ವಸ ಎಳೆ ತೆಗೆದು.. ಅದ್ರಾ "ಕನ್ನಡ, ಇಂಗ್ಲೀಸ್ ಬಡಿದಾಟ" ಅನ್ನು...
ಆಗ, ಅಲ್ಲಿ ವಾಗಿ,, ಇದನ್ನೆಲ್ಲ ಯಾಳು...
ನೆಟ್ಗೆ ಓದುದ್ರೆ.... ಮೊದಲ್ನೇ ಬರೆಪ ಇರೋದೇ ಕನ್ನಡ ಮತ್ತು ಸಮ್ಸುಕುರುತದ ನಡುವೆ, ಆವಯ್ಯ ಇಂಗ್ಲೀಸ್ ಬಗ್ಗೆ ಸೊಲ್ಲೇ ಎತ್ನಿಲ್ಲ...
ಇನ್ನೊಂದ್ ದಪ ಓದು.
--------------
ಈ ವಿಕಾಸ ಯಗ್ಗೆ ನಂಗೆ ಗೊತ್ತು..
ಹೇಳು = ಯಾಳು
ಹೋಗು = ವಾಗು ( ನಮ್ ಕನ್ನಡ )
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ನಿಂದ್ ಕತೆಗಳೆಲ್ಲಾ ಬೇಡ ಕಣಯ್ಯಾ ! ಅದೇ ಕೇಳ್ತಿರದು ನಾನು, ಅದ್ಯಾವ್ದೋ ಪುಸ್ಕ ಓದಿ ಓದಿ ನಮ್ಮ ಕನ್ನಡ ಸುದ್ದ ಮಾಡ್ಕ್ಯಂಡು ಕನ್ನಡಿಗ ಅನ್ಸ್ಕಬೇಕಾ ! ಎಲ್ರೂ ಹೆಂಗಿದಾರೋ ಅಂಗೇ ಕನ್ನಡಿಗರು. ನಿಮ್ಮ (ನಮ್ಮ) ಹಾಸನದ ಕನ್ನಡ ಕೂಡ ಸುದ್ದ ಕನ್ನಡ ಅಂತ ಹೆಂಗೆ ನೀನು ಹೇಳ್ತೀಯೋ ಹಂಗೆ ಅವ್ರವ್ರಿಗೆ ಅವರ ಕನ್ನಡ ಸರಿ. ನಿಂಗೆ ನಿನ್ನ ಕನ್ನಡ ಸರಿ ಆದ್ರೆ ಸಕ್ಕದದ ಪದ ಬರೆಯೋರಿಗೆ ಅವರ ಕನ್ನಡ ಸರಿ. ಓದಕ್ಕೆ ಬರೆಯಕ್ಕೇ ಬರ್ದೇ ಇದ್ದೋರು ಕನ್ನಡಿಗರೇ, ಪುಸ್ಕ ಓದದೇ ಇದ್ದೋರು ಕನ್ನಡಿಗರೇ ತಿಳ್ಕ. ನೀನು ಸರ್ಟಿಪಿಕೇಟು ಕೊಡೋ ಕೆಲ್ಸ ಮಾಡೋದು ಬೇಡ, ಪರೀಕ್ಷೆ ಬರಿ ಅಂತ ಹೇಳೋದು ಬೇಡ.
ಅವ್ರು ಸಕ್ಕದ ಸೇರ್ಸಿ ಬರದ್ರೆ ಕಸ್ಟ ಆಗೋಯ್ದದೆ ಅಂತ ಅರ್ಕತೀಯ, ಇಂಗ್ಲೀಷ್ ನಲ್ಲಿ ಬರದ್ರೆ ಸುಮ್ಕಿರ್ತೀಯಾ ಯಾಕೆ ಅಂತ ಕೇಳಿದ್ದು. ಇಲ್ಲಿ ವಿಶ್ಯ ಸಕ್ಕದ ಇಂಗ್ಲೀಸಿಂದು ಅದ್ರೆ ಕಸ್ಟಕ್ಕೆ ಸಂಬಂಧಪಟ್ಟಿದ್ದು. ನಿಜವಾಗ್ಲೂ ಕನ್ನಡದ ಬಗ್ಗೆ ಕಳಕಳೀ ಇರೋದಾಗಿದ್ರೇ ಸಕ್ಕದ ಮಾತ್ರ ವಿರೋಧ ಮಾಡೇ ಕಳಕಳೀ ತೋರ್ಸೋದು ಯಾಕೆ ಅಂತ? ಅದನ್ನ ಜಾತಿಗೆ ಸಂಬಂದ ಹಾಕಿ ಮಾಡೋದು ಯಾಕೆ?(ನೀನು ಇಲ್ಲ ಅಂತ ಹೇಳ್ಬೋದು ಆದ್ರೆ ಕೆಲವ್ರು ಅದನ್ನ ಮಾಡಕ್ಕೇ ಬಂದಿರ್ತವೆ. ಆ ಜಾತಿಯವ್ರು ನಿಮ್ಮತ್ರ ಬೈಸ್ಕಂಡು ಕನ್ನಡಿಗರಾಗ್ಬೇಕಾ?)
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಲೇ
ಇಂಗ್ಲಿಸ್ ಬಗ್ಗೂ ಬರೆಯುಮ.. ಅದಕ್ಕೊಂದು ಎಳೆ ತೆಗೆಲೇ...
ನಮ್ಕೆ ಎಲ್ಡು.. ಏಟ್ ಬೇಕೋ ಆಟ್ ಬೇಕು.. ಏಟ್ ಬ್ಯಾಡ್ವೋ, ಆಟ್ ಬ್ಯಾಡ...
"(ನಮ್ಮ) ಹಾಸನದ ಕನ್ನಡ ಕೂಡ ಸುದ್ದ ಕನ್ನಡ ಅಂತ ಹೆಂಗೆ ನೀನು ಹೇಳ್ತೀಯೋ ಹಂಗೆ ಅವ್ರವ್ರಿಗೆ ಅವರ ಕನ್ನಡ ಸರಿ. "
ನಿಂಗ್ ಏನ್ ಮರುಳಾ? ಎಲ್ಲೀ ಹೇಳೀನಿ,, ಹಾಸನದ ಕನ್ನಡವೇ ಸರಿ ಅಂತ..
ಮಗಾ ವಸಿ.. ಮಲ್ಗೆ... ಏನೇನೋ ಅನ್ಕೋ ಬ್ಯಾಡ....
ಎಲ್ಲ ಕಂನಡವೂ ಸರಿಯೇ... ಆದ್ರೆ.. ಇಲ್ಲೊಬ್ರು ಬಂದು ... ವಾರಾಟ, ವುಟ್ಟು ಇವೆಲ್ಲ ತೆಪ್ಪು ಅಂದು, ಸರ್ಟಿಪಿಕೇಟ್ ಕೊಡಕ್ಕೆ ಬಂದಿದ್ರು.. ಅವರಿಗೆ ಯಾಳಿದ್ದು...
"ಅವ್ರು ಸಕ್ಕದ ಸೇರ್ಸಿ ಬರದ್ರೆ ಕಸ್ಟ ಆಗೋಯ್ದದೆ ಅಂತ ಅರ್ಕತೀಯ, ಇಂಗ್ಲೀಷ್ ನಲ್ಲಿ ಬರದ್ರೆ ಸುಮ್ಕಿರ್ತೀಯಾ ಯಾಕೆ ಅಂತ ಕೇಳಿದ್ದು."
ಲೇ.. ನಾನು ಇಂಗ್ಲೀಸಲ್ಲೂ ಬರೆದಾಗ್ಲೂ... ಯಣ್ಣೋ ಈ ಪಾಟಿ ಇಂಗ್ಲೀಸಾ ಅಂದೀನಿ...
ಅದಕ್ಕೆನೇನೇಯ ಯಾಳಿದ್ದು.. ನೀನೇನೇಯ ಮುಂದಾಳ್ತನ ತಕ್ಕೊಂಡು.. "ಕನ್ನಡ, ಇಂಗ್ಲೀಸು, ಸಮ್ಸುಕುರುತ" ಅಂತ ಆಕು.. ಅಲ್ಲಿ ಮಾತಾಡುಮ... ಇಲ್ಲಿ ಇರಾದು "ಕನ್ನಡ ಮತ್ತು ಸಮ್ಸುಕುರುತ" ಈಟೇ... ಇಂಗ್ಲೀಸ್ ನೀ ಸೇರ್ಸಿದ್ದು...
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
"ನಿಜವಾಗ್ಲೂ ಕನ್ನಡದ ಬಗ್ಗೆ ಕಳಕಳೀ ಇರೋದಾಗಿದ್ರೇ ಸಕ್ಕದ ಮಾತ್ರ ವಿರೋಧ ಮಾಡೇ ಕಳಕಳೀ ತೋರ್ಸೋದು ಯಾಕೆ ಅಂತ? ಅದನ್ನ ಜಾತಿಗೆ ಸಂಬಂದ ಹಾಕಿ ಮಾಡೋದು ಯಾಕೆ?(ನೀನು ಇಲ್ಲ ಅಂತ ಹೇಳ್ಬೋದು ಆದ್ರೆ ಕೆಲವ್ರು ಅದನ್ನ ಮಾಡಕ್ಕೇ ಬಂದಿರ್ತವೆ. ಆ ಜಾತಿಯವ್ರು ನಿಮ್ಮತ್ರ ಬೈಸ್ಕಂಡು ಕನ್ನಡಿಗರಾಗ್ಬೇಕಾ?)"
ಲೇ ಸಮ್ಸುಕುರುತ, ಇಂಗ್ಲೀಸು.. ನಮ್ ಹದದಲ್ಲಿ ಇರದಿದ್ರೆ.. ಕೆಟ್ಟದ್ದೇನೇನೇಯ... ಸಂತೋಸವಾ!! ಇಂಗ್ಲೀಸು ಬ್ಯಾಡ....( ಎಲ್ಲಿ ಬೇಕೋ ಅಲ್ಲಿ ಬೇಕು, ಸಮ್ಸುಕುರತವೂ ಕೂಡ )...
ಅವನು ಯಾವೋನು ಜಾತಿ ಬಗ್ಗೆ ಮಾತಾಡಿದ್ದು ವಾಗಿ ಅವನ್ನೇ ಕೇಳು...
ನಾವೆಲ್ಲ ಹಿಂದುಗಳಂತೆ ಅದಕ್ಕೇನೇಯ ಸಮ್ಸುಕುರುತವ ತಲೆಮ್ಯಾಲ್ ವೊತ್ಕೊಳ್ಳಿ ಅಂದೋರ್ನ ವಾಗಿ ಕೇಳೋ?
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಮಹೇಶರಿಗೆ ಉತ್ತರಕ್ಕಾಗಿ ಧನ್ಯವಾದಗಳು.
ನಾನಲ್ಲಿ ಇಂಗ್ಲೀಷು ಮತ್ತು ಸಂಸ್ಕೃತದ ವಿಷಯ ತಂದದ್ದು, ಕಷ್ಟಕ್ಕೆ ಸಂಬಂಧಿಸಿದಂತೆಯೇ ಹೊರತು ಬೇರೆನಿಲ್ಲ. ಇಲ್ಲಿ ಕನ್ನಡ ಸಂಸ್ಕೃತದ ಬಗ್ಗೆ ಮಾತನಾಡಲಾಗುತ್ತಿದೆ ಎಂದ ಮಾತ್ರಕ್ಕೆ ಬೇರೆ ತರಬಾರದೇನೆಂದಿಲ್ಲ. ಪೂರಕ ಅಂಶಗಳು ಹಲವಾರಿರುತ್ತವೆ. ತರಬೇಕಾಗುತ್ತದೆ.
ಇನ್ನುಳಿದಂತೆ ನಾನು ಹೇಳಿದ್ದು ಬರೀ ನಿಮ್ಮನ್ನುದ್ದೇಶಿಸಿ ಮಾತ್ರವಲ್ಲ (ಜಾತಿ ವಿಷಯ ಎತ್ತಿದವನನ್ನೇ ಕೇಳು ಅಂದಿರುವಿರಲ್ಲಾ). ಎಲ್ಲರನ್ನೂ ಕೇಳುತ್ತಿರುವುದು. ನನಗೆ ಈ ಸಂಸ್ಕೃತದಿಂದಲೇ ಕನ್ನಡ ಕಷ್ಟವಾಗಿರುವುದು ಎನ್ನುವ ವಾದವು ವಿತಂಡವಾಗಿ ಕಾಣುತ್ತದೆ ಮತ್ತು ಈ ವಿಷಯವು ಜಾತಿಯ ವಿಷಯದೆಡೆಗೆ ಹರಿಯುವುದು ವಿಕೃತವೆನಿಸುತ್ತದೆ. ಬೇರೆ ಎಲ್ಲಾ ರೀತಿಯ ಕನ್ನಡಗಳು (ಉದಾ: ಓರಾಟ, ವುಟ್ಟು ಕನ್ನಡ, ಗ್ರಾಮೀಣ ಕನ್ನಡ, ಅವರವರ ಜಾತಿ, ಪ್ರಾಂತ್ಯಗಳ ಕನ್ನಡ ಇತ್ಯಾದಿ ನೀವೇ ಇಷ್ಟುದ್ದ ಪಟ್ಟಿ ಕೊಟ್ಟಿರುವಿರಿ) ತಪ್ಪು ಎಂದು ಸಂವಿಧಾನದಲ್ಲೇನು ಘೋಸಿಸಿಲ್ಲ. ಅವರವರ ಕನ್ನಡ ಅವರು ಬಳಸುತ್ತಾರೆ. ಅದೇ ರೀತಿ ಈ ಸಂಸ್ಕೃತ ಕನ್ನಡವೂ ಅಂದುಕೊಂಡರಾಯಿತು. ನೀವು ನಿಮ್ಮ ಕನ್ನಡ ಬಳಸಿ ಅವರು ಅವರ ಕನ್ನಡ ಬಳಸಲಿ. ಯಾರೂ ಯಾರಿಗೂ ಪ್ರಮಾಣಿಸುವುದು ಬೇಡ. ಬೈಯುವುದೂ ಬೇಡ. ಕನ್ನಡದಿಂದ ಸಂಸ್ಕೃತ ಪದಗಳನ್ನು ತೆಗೆದ ಮಾತ್ರಕ್ಕೆ ಅದು ಸುಲಭವಾಗಿ ಶಾಲಾ ಮಕ್ಕಳು , ಸಾರ್ವಜನಿಕರು ಕನ್ನಡದ ಕಡೆಗೆ ಆಕರ್ಷಿತರಾಗುತ್ತಾರೆ, ಎಲ್ಲರೂ ಕನ್ನಡ ಸಾಹಿತ್ಯ ಓದತೊಡಗುತ್ತಾರೆ ಅನ್ನುವುದು ಕನಸೇ ಸೈ.
ಅದೆಲ್ಲಾ ಬಿಡಿ. ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಗಲಿಲ್ಲ. ಸಂಸ್ಕೃತದಿಂದ ಕನ್ನಡವನ್ನು ಬಿಡುಗಡೆಗೊಳಿಸಿ ಸುಲಭ ಮಾಡಿಸಲು ಉಪಾಯಗಳೇನು ಎಂದು ಕೇಳಿದ್ದೆ. ನಿಮ್ಮ ಜ್ಞಾನವನ್ನು ಇಂತಹುದರಲ್ಲಿ ಬಳಸಿದರೆ ಎಲ್ಲರಿಗೂ ಉಪಯೋಗ. ಇಲ್ಲದಿದ್ದರೆ ಸುಮ್ಮನೇ ಜಗಳ, ಮನಸ್ತಾಪ, ಕೊಂಕುಗಳಲ್ಲೇ ಸಮಯ ಹಾಳಾಗುತ್ತದೆ.
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
"ಸಂಸ್ಕೃತದಿಂದ ಕನ್ನಡವನ್ನು ಬಿಡುಗಡೆಗೊಳಿಸಿ ಸುಲಭ ಮಾಡಿಸಲು ಉಪಾಯಗಳೇನು ಎಂದು ಕೇಳಿದ್ದೆ."
( ಈ ಸಾಲು, ಏನು ಕನ್ನಡ ಸಮ್ಸುಕ್ರುತದ ಸೆರೆಯಲ್ಲಿದೆ ಎಂದೇ? .)
ಇದಕ್ಕುತ್ತರ ಅಯ್ತೆ.. ತಿಳಿದುಕೋಬೇಕು ಅಂತ ಇದ್ರೆ...
"ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಮತ್ತು "ಕನ್ನಡ ಬರಹವನ್ನು ಸರಿಪಡಿಸೋಣ" ಓದಿ...
೧) ಕನ್ನಡಕ್ಕೆ ತಕ್ಕವು ಬೇಕು.. ಅಂದ್ರೆ ಒರೆಗಳು ಎಲ್ಲ ಕನ್ನಡಿಗರ ಬಾಯಲ್ಲೂ ಸಲೀಸಾಗಿ ಉಲಿಯಲಾಗಬೇಕು( ಬರೀ ಸಮ್ಸುಕ್ರುತದ ಕನ್ನಡದವರಿಗೆ ಮಾತ್ರ ಅಲ್ಲ )
೨) ಕನ್ನಡಕ್ಕೆ ಕನ್ನಡದ್ದೇ ಆದ ಗುಣವಿದೆ.. ಅದು ಇಂಡೋ-ಯುರೋಪಿಯನ್ ಸಮ್ಸುಕ್ರುತಕ್ಕಿಂತ ವಿಬಿನ್ನವಾದ ದ್ರಾವಿಡ-ನುಡಿ ಕೂಟಕ್ಕೆ ಸೇರಿದ್ದು.. ಅದರ ರಚನೆ ಹಲವು ಸಂಗತಿಗಳಲ್ಲಿ ಬೇರೆಯೇ ಆಗಿದೆ...
ಅದಕ್ಕೆ ಕನ್ನಡದ ದಿಟಗುಣವನ್ನು ಕಂಡುಕೊಂಡು ಅದನ್ನು ಬೆಳಸಬೇಕು...
ಅಗಲೀಕರಣ ಅಲ್ಲ ಅಗಲಿಸುವಿಕೆ
ಮುಂದಾಳತ್ವ ಅಲ್ಲ ಮುಂದಾಳ್ತನ
ಬೃಹತ್ ಬೆಂಗಳೂರು ಅಲ್ಲ ದೊಡ್ಡ ಬೆಂಗಳೂರು.
ಡಂಬರೀಕರಣ ಅಲ್ಲ ಡಂಬರಿಸುವಿಕೆ, ಡಂಬರಿಕೆ
ಇಂದು ಹೆಚ್ಚು ಎಲ್ಲೆಡೆ ಸಂಸ್ಕೃತದ ಪದಗಳಲ್ಲದೇ, ಅದರಂತೆಯೇ ವ್ಯಾಕರಣಗಳನ್ನು ಕನ್ನಡಕ್ಕೆ ಹೇರಲಾಗುತ್ತಿದೆ...
ಕಲಿಕಾ ಕೇಂದ್ರ ಅಲ್ಲ ಕೆಲಿಕೆಯ ಕೇಂದ್ರ.
ಹೊತ್ತಿಗೆ ಅಂಗಡಿ ಹೊರತು ಹೊತ್ತಿಗಾ ಅಂಗಡಿಯಲ್ಲ.
೩) ಹೊಸ ಸಂಗತಿಯನ್ನು ಮೊದಲ ಕನ್ನಡದಲ್ಲೇ ಹೇಳಲೆಳಸದೇ.. ಕುರಡಾಗಿ ಸಂಸ್ಕೃತ ತುಂಬುವುದು.. ಹಲವು ಸರತಿ ಇದೇ ನಮ್ಮ ಆಡುನುಡಿಗೂ ಬರಹಕ್ಕೂ ದೊಡ್ಡ ಕಂದಕ..
Diglossia ಅನ್ನೋದು ಎಷ್ಟು ಕೆಟ್ಟದ್ದು ಅಂತ ಹುಡುಕಿ ಓದಿಕೊಳ್ಳಿ..
ಬ್ಯಾಹಾಕಾಶ = ಹೊರಬಾನು
ಮುದ್ರಣಾಲಯ = ಅಚ್ಚುಮನೆ, ಅಚ್ಚು-ಅಂಗಡಿ
ಕೇಂದ್ರ ಕಾರಾಗೃಹ = ಕೇಂದ್ರದ ಸರೆಮನೆ
೪) ಕನ್ನಡದಲ್ಲಿ ಒರೆ ಇದ್ರೂ, ಇಲ್ವೇ ನಮಗೆ ಬೇರೆ ನುಡಿಯಿಂದ ಸುಲಬವಾಗಿ ಒರೆ ಸಿಕ್ಕಿದ್ರೂ ಅಲ್ಲೂ ಸಂಸ್ಕೃತದ ಬಳಕೆ
ಬಸ್ಸಲ್ಲಿ ಕಂಡಕ್ಸರ್ರು "ರೀ ಇದು ಹೆಂಗಸರ ಸೀಟು( ಲೇಡಿಸ್ ಸೀಟು.. ಏಳಿ" ಅಂತಾರೆ ಹೊರತು ಇದು "ಸ್ತ್ರೀಯರ ಆಸನ", "ಮಹಿಳೆಯ ಆಸನ" ಅಲ್ಲ...( ತಮಾಷೆ ಅಲ್ಲ )
ಆದ್ರೆ ಅಲ್ಲಿ ಬರೆಯೋದು ಸ್ತ್ರೀ, ಮಹಿಳೆ ಯಾಕೆ?
ನಕಲಿ ಬದಲು ಕೃತಕ( ಆಡುಮಾತಲ್ಲಿಲ್ಲ )
ಇಂಜಿನಿಯರ್ ಬದಲು ಅಭಿಯಂತ ( ಆಡುಮಾತಲ್ಲಿಲ್ಲ )
೫) ನಮ್ಮದು ಕನ್ನಡ ತಾಯ್ನುಡಿ, ಸಂಸ್ಕೃತವಲ್ಲ.. ಸಂಸ್ಕೃತಕ್ಕೇಕೆ ವಿಶೇಶ ಸ್ತಾನ?.. ಅದು ಹಲವು ಸರತಿ ಕನ್ನಡಕ್ಕೂ ಮೀರಿದ್ದು?
"ನಿಮ್ಮ ಜ್ಞಾನವನ್ನು ಇಂತಹುದರಲ್ಲಿ ಬಳಸಿದರೆ ಎಲ್ಲರಿಗೂ ಉಪಯೋಗ. ಇಲ್ಲದಿದ್ದರೆ ಸುಮ್ಮನೇ ಜಗಳ, ಮನಸ್ತಾಪ, ಕೊಂಕುಗಳಲ್ಲೇ ಸಮಯ ಹಾಳಾಗುತ್ತದೆ."
ಇದಕ್ಕೆ ಕಾರಣ ಏನು ಅಂದ್ರೆ
"ಸಂಸ್ಕೃತವೇ ಸರ್ವಭಾಷಾ ಜನನಿ.
ಸಂಸ್ಕೃತವೇ ದೇವಭಾಷೆ,
ಸಂಸ್ಕೃತವೇ ನಮ್ಮ ಸಾಂಸ್ಕೃತಿಕ ಭಾಷೆ,
ಸಂಸ್ಕೃತವೇ ಕಂಪ್ಯೂಟರಿಗೆ ಸೂಕ್ತ,
ಸಂಸ್ಕೃತವಿಲ್ಲದ ಕನ್ನಡ ಜಾಳು
ಕನ್ನಡದ ಒರೆಗಳನ್ನೂ ಸಂಸ್ಕೃತದಿಂದಲೇ ಬಂದಿದೆ ಎಂದು ತೋರಿಸಲು ಮಾಡಿರುವ ಸುಳ್ಳು ದೊಡ್ಡ ತತ್ಸಮ-ತತ್ಭವ ಪಟ್ಟಿಗಳು,
ಸಂಸ್ಕೃತದ ಲಾಬಿ( ೬೦೦ ಕೋಟಿ ರೂ ಯಾಕೆ ಪ್ರತಿ ವರ್ಶ? )
ನಾವೆಲ್ಲ ಹಿಂದುಗಳು ಅದಕ್ಕೇ ನಾವು ಸಂಸ್ಕೃತಕ್ಕೆ ಮೊದಲ ಸ್ತಾನ ಕೊಡಬೇಕು,
ನಮ್ಮ ಧರ್ಮಸಾರವೇ ಸಂಸ್ಕೃತ.. ಕನ್ನಡದಲ್ಲಿ ದರ್ಮವೇ ಇಲ್ಲ
................." ಮುಂತಾದ ಕುರುಡು ನಂಬಿಕೆ, ಮೊಂಡುವಾದ, ಅಪ್ಟಟ ಸುಳ್ಳುಗಳು....
ಅಯ್ಯ.. ನಮ್ಮ ಮಾತುಗಳನ್ನೆಲ್ಲ ಜಾತಿ ವಾದ ಅಂತ ಹೇಳಿ ನೀವು.. ಕೊನೆ ಮಹಾತ್ಮರಾದಿರಿ.."ನಿಮ್ಮ ಜ್ಞಾನವನ್ನು ಇಂತಹುದರಲ್ಲಿ ಬಳಸಿದರೆ ಎಲ್ಲರಿಗೂ ಉಪಯೋಗ. ಇಲ್ಲದಿದ್ದರೆ ಸುಮ್ಮನೇ ಜಗಳ, ಮನಸ್ತಾಪ, ಕೊಂಕುಗಳಲ್ಲೇ ಸಮಯ ಹಾಳಾಗುತ್ತದೆ." ಈ ಡೈಲಾಗಿಂದ ಅಂತ ತಿಳಿದಿದ್ರೆ ತಪ್ಪು....
ಒಮ್ಮೆ ನಿಮ್ಮ ಬರಹವನ್ನು ನೀವೇ ಓದಿಕೊಳ್ಳಿ, ನಲವತ್ತು ಸರತಿ ಜಾತಿ ಜಾತಿ ಅಂದ ಮಹಾತ್ಮರು.
ಇಲ್ಲಿದೆ ನೋಡಿ ನಿಮ್ಮ ಅಮೂಲ್ಯವಾದ ಮಾತು + ದೃಷ್ಟಿ
ವಿಕಾಸರ ಜಾತಿಗಣ್ಣು ( ಮೂರ ಕಮೆಂಟಲ್ಲಿ, ಎರಡರಲ್ಲಿವೆ )
೧)"ಈಗ ಸಕ್ಕದ , ಕನ್ನಡ ಅಂತ ಹೊಡೆದಾಡದು ಬಿಡಣ. ನಮ್ಮ ಕನ್ನಡದಲ್ಲಿ ಬ್ಯಾಡದೇ ಇದ್ರೂ ನುಸುಳಿ ಕನ್ನಡ ಕಸ್ಟ ಮಾಡಿರೋ ಸಕ್ಕದದ ಪದಗಳನ್ನ ತೆಗೆದುಹಾಕೋದು ಹೇಗೆ ಅಂತ ತಿಳಿಸಿಕೊಡಿ. ಬ್ರಾಮಣ, ಸೂದ್ರ ಅಂತ ಹಳೇಕಾಲದ ಹೊಡೆದಾಟ, ಬೈಗುಳ ಬಿಟ್ಟು ಈಗಿನ ಸ್ಥಿತಿಗೆ್, ಇನ್ನು ಮುಂದೆ ಏನು/ಹೇಗೆ ಮಾಡಿದರೆ ಚೆನ್ನ ಕನ್ನಡದ ಒಳಿತಿಗೆ ಅಂತ ತಿಳಿಸಿಕೊಡಿ."
೨)"ಇನ್ನುಳಿದಂತೆ ನಾನು ಹೇಳಿದ್ದು ಬರೀ ನಿಮ್ಮನ್ನುದ್ದೇಶಿಸಿ ಮಾತ್ರವಲ್ಲ (ಜಾತಿ ವಿಷಯ ಎತ್ತಿದವನನ್ನೇ ಕೇಳು ಅಂದಿರುವಿರಲ್ಲಾ). ಎಲ್ಲರನ್ನೂ ಕೇಳುತ್ತಿರುವುದು. ನನಗೆ ಈ ಸಂಸ್ಕೃತದಿಂದಲೇ ಕನ್ನಡ ಕಷ್ಟವಾಗಿರುವುದು ಎನ್ನುವ ವಾದವು ವಿತಂಡವಾಗಿ ಕಾಣುತ್ತದೆ ಮತ್ತು ಈ ವಿಷಯವು ಜಾತಿಯ ವಿಷಯದೆಡೆಗೆ ಹರಿಯುವುದು ವಿಕೃತವೆನಿಸುತ್ತದೆ. "
ನಿಮಗೆ ಜಾತಿ ಅನ್ನೋದೇ ಒತ್ತು, ಕನ್ನಡಕ್ಕಿಂತ, ಸಂಸ್ಕೃತವನ್ನು ಜಾತಿಗೆ ಬಿಗಿಯುತ್ತಿದ್ದೀರಿ, ಅಂದ್ರೆ ನಿಮ್ಮರ್ತದಲ್ಲಿ ಸಂಸ್ಕೃತ ಒಂದು ಜಾತಿ ನುಡಿಯೇ?....!!
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ಮಯೇಸಂಗೆ ಉತ್ತರಗಳು,
---"ಸಂಸ್ಕೃತದಿಂದ ಕನ್ನಡವನ್ನು ಬಿಡುಗಡೆಗೊಳಿಸಿ ಸುಲಭ ಮಾಡಿಸಲು ಉಪಾಯಗಳೇನು ಎಂದು ಕೇಳಿದ್ದೆ." ( ಈ ಸಾಲು, ಏನು ಕನ್ನಡ ಸಮ್ಸುಕ್ರುತದ ಸೆರೆಯಲ್ಲಿದೆ ಎಂದೇ? .)---
ಅದನ್ನ ನಾನು ಹೇಳ್ತಾ ಇಲ್ಲ. ನೀವೆ ಬಡ್ಕತಾ ಇರದು ಕನ್ನಡ ಸಂಸ್ಕೃತದಿಂದ ಹಾಳಾಗಿದೆ ಅಂತ , ಕನ್ನಡ ದಲ್ಲಿರೋ ಸಂಸ್ಕೃತ ಪದಗಳಿಂದಲೇ ಕನ್ನಡ ಎಲ್ರಿಗೂ ಕಷ್ಟ ಆಗಿರದು ಅಂತ. ನನಗೆ ಯಾವುದು ಯಾರ ಸೆರೆಯಲ್ಲೂ ಇಲ್ಲ ಅನ್ನಿಸುತ್ತಿದೆ.
---ಒಮ್ಮೆ ನಿಮ್ಮ ಬರಹವನ್ನು ನೀವೇ ಓದಿಕೊಳ್ಳಿ, ನಲವತ್ತು ಸರತಿ ಜಾತಿ ಜಾತಿ ಅಂದ ಮಹಾತ್ಮರು.
ನಿಮಗೆ ಜಾತಿ ಅನ್ನೋದೇ ಒತ್ತು, ಕನ್ನಡಕ್ಕಿಂತ, ಸಂಸ್ಕೃತವನ್ನು ಜಾತಿಗೆ ಬಿಗಿಯುತ್ತಿದ್ದೀರಿ, ಅಂದ್ರೆ ನಿಮ್ಮರ್ತದಲ್ಲಿ ಸಂಸ್ಕೃತ ಒಂದು ಜಾತಿ ನುಡಿಯೇ?....!! ---
ಅದನ್ನೇ ನಾನೂ ಕೇಳ್ತಾ ಇರೋದು. ಸಂಸ್ಕೃತ ಒಂದು ಜಾತಿ ಭಾಷೆನಾ ಅಂತ. ಸಂಸ್ಕೃತನ್ನ ನಿಮ್ಮಂತ ಅಚ್ಚ ಕನ್ನಡದ ಕಲಿಗಳು ಕೆಲವರು(ನೀವು ಮಾತ್ರ ಆಗ್ಬೇಕು ಅಂತಿಲ್ಲ) ಜಾತಿ