ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ

October 31, 2007 - 4:53pm — raghottama koppar

ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ತಮಗೆಲ್ಲರಿಗು. ನವೆಂಬರ್ ಮೊದಲನೆ ದಿನ ಹತ್ತಿರ ಬರುತ್ತಿದ್ದಂತೆ ಕನ್ನಡ ಬಾವುಟ ಹಾರಿಸುವುದಕ್ಕೆ ನಾವೆಲ್ಲ ಉತ್ಸುಕರಾಗಿರುತ್ತೇವೆ. ಆ ದಿನ ಕನ್ನಡಾಂಬೆಯ ಹಾಡುಗಳು, ಅಣ್ಣಾವ್ರ ಹಾಡುಗಳು ಎಲ್ಲೆಲ್ಲಿಯೂ ಕೇಳಿಬರುತ್ತಿರುತ್ತವೆ. ಇಷ್ಟೆಲ್ಲ ಸಂತೋಷ ಒಂದೆಡೆ. ಇನ್ನೊಂದೆಡೆ ನಮ್ಮನ್ನು ಎಷ್ಟು ರೀತಿ ಒಡೆಯುತ್ತಿದ್ದಾರೆ ಎಂಬ ಭೀತಿ. ಜಾತಿ, ಉಪಜಾತಿ, ಪಕ್ಷ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮನ್ನು ಒಡೆಯುತ್ತಿದ್ದರೂ ನಾವು ಸುಮ್ಮನೆ ಕುಳಿತಿದ್ದೇವೆ. ಬೆಂಗಳೂರಿನಲ್ಲಿ ಅನ್ಯ ಭಾಷೆಯ ಜನ ಕಿಕ್ಕಿರಿದು ಬರುತ್ತಿದ್ದಾರೆ. ಅವರೊಂದಿಗೆ ನಾವು ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನೇ ಮಾತಾಡಬೇಕಾಗಿದೆ. ಕನ್ನಡಿಗರು ಬೇರೆ ರಾಜ್ಯಗಳಿಗೆ ಹೋದಾಗ ಆ ಭಾಷೆಯನ್ನು ಕಲಿಯಲು ಯತ್ನಿಸುತ್ತಾರೆ. ಆದರೆ ಬೆಂಗಳೂರಿನಲ್ಲಿರುವ ಬಹಳಷ್ಟು ಅನ್ಯ ಭಾಷಿಗರು ಕಲಿಯಲು ಯತ್ನಿಸಿಲ್ಲ ಎಂಬುದೇ ವಿಷಾದದ ಸಂಗತಿ. ಅಷ್ಟೆ ಅಲ್ಲ ಅವರು ಕಲಿಯಲಿಲ್ಲ ಇರಲಿ, ಆದರೆ ಕನ್ನಡಿಗರೆ ಅವರ ಭಾಷೆ ಕಲಿಯಲು ಇಚ್ಛಿಸುತ್ತಿದ್ದಾರಲ್ಲ ಏನು ಹೇಳಬೇಕು ಇವರಿಗೆ. ಮಿತ್ರರೇ ನೀವು ಯಾವುದೇ ಸಂಸ್ಠೆಯಲ್ಲಿ ಕೆಲಸಮಾಡುತ್ತಿದ್ದರೂ ಅಲ್ಲಿರುವ ಕನ್ನಡಿಗರ ಜತೆಗೆ ಕನ್ನಡವನ್ನು ಮಾತನಾಡಿ. ಕನ್ನಡದಲ್ಲಿ ಇ-ಮೇಲ್ ಕಳಿಸಿ. ಕನ್ನಡದಲ್ಲೇ ಶುಭ ಹಾರೈಸಿ. ಬೇರೆ ಭಾಷೆಯವರಿಗೂ ಕನ್ನಡವನ್ನು ಕಲಿಸಿ. ನಮ್ಮ ರಾಜಕಾರಣಿಗಳಿಗಂತೂ ಸಮಯವೇ ಇಲ್ಲ. ಹಸ್ತಾಂತರದ ಅವಾಂತರದಲ್ಲಿ ಎಲ್ಲವನ್ನು ಮರೆತಿದ್ದಾರೆ. ಆದರೆ ನಾವು ಮರೆಯಲು ಸಾಧ್ಯವೇ. ಜೈ ಕರ್ನಾಟಕ ಮಾತೆ.
ರಘೋತ್ತಮ್ ಕೊಪ್ಪರ

~.~
  • Login or register to post comments
  • 320 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 22, 2007 - 4:16pm — girish.rajanal

ಉ: ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ

girish.rajanal's picture

ನಮಸ್ಕಾರ ರಘು,
ನಿಮಗೂ ಕೂಡ ಕರ್ನಾಟಕ ರಾಜ್ಯೋತ್ಸವದ ಶಭಾಶಯಗಳು.ಬೆಂಗಳೂರಿನಲ್ಲಿ ಮಾತ್ರ ಈ ಪರಿಸ್ಥಿತಿ ನನಗೆ ಬೇಸರ ತಂದಿದೆ. ಕನ್ನಡಿಗರಾಗಿ ಕನ್ನಡ ಮಾತಾಡುವುದನ್ನು ಕೀಳುರಿಮೆ ಅಂನ್ನುತ್ತಾರೆ. ನಾನಂತೂ ಯಾವಾಗಲೂ ಕನ್ನಡ ಮಾತಾಡುತ್ತೇನೆ ಅದೂ ಬೆಂಗಳೂರಿಗೆ ಬಂದ ಮೇಲೆ ಸ್ವಲ್ಪ ಹೆಚ್ಚಾಗೇ ಕನ್ನಡ ಮಾತಾಡುತ್ತಿದ್ದೇನೆ. ಸಮಸ್ಯೆ ಏನಂದರೆ ಇಲ್ಲಿ ಎಲ್ಲಿ ನೋಡಿದರೂ ಕನ್ನಡ ರಾಜ್ಯೋತ್ಸವ ಮಾಡ್ತಾರೆಯೇ ಹೊರತು ಕರ್ನಾಟಕ ರಾಜ್ಯೋತ್ಸವ ಮಾಡಲ್ಲ. ಸುಮ್ಮನೆ ಬಾವುಟ ಹಾರಿಸಿ, ಒಂದು ಆರ್ಕೆಸ್ಟ್ರಾ ನೆಡೆಸಿಬಿಟ್ರೆ ಮುಗೀತು; ಅದನ್ನೇ ತಿಂಗಳಾನುಗಟ್ಟಲೇ ಮಾಡುತ್ತಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೂಡಿದ ಒಂದು ಕರ್ನಾಟಕ ರಾಜ್ಯೋತ್ಸವವನ್ನೂ ನಾನು ಬೆಂಗಳೂರಲ್ಲಿ ನೋಡಿಲ್ಲ.
ನಿಮ್ಮವ,
ಗಿರೀಶ ರಾಜನಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹನಿಗವನ-ರಘೋತ್ತಮ್ ಕೊಪ್ಪರ
  • ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ
  • ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ
  • ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)-ರಘೋತ್ತಮ್ ಕೊಪ್ಪರ
  • ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ
Syndicate content

ಲೇಖಕರು

raghottama koppar's picture

ಪೂರ್ಣ ಹೆಸರು
Raghottama Ravindra Koppar

ಪರಿಚಯ

I am Raghottama Ravindra Koppar. Working as Technical Writer in Bangalore. Also worked as sub-editor in Prajavani Kannada Daily. Written many articles in Prajavani and Deccan Herald. Also writing for shvoong.com and writingcampus.com. I am from Gadag. I have also written some lyrics, but no producers ha ha ha...........

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 131 ಅತಿಥಿಗಳು ಆನ್ಲೈನ್ ಇರುವರು.


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator