ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ಮೈಸೂರು ಸಂಸ್ಥಾನದ ರಾಜ್ಯಗೀತೆಯಾಗಿದ್ದ, " ಕಾಯೌ ಜಯಗೌರಿ, ಕರುಣಾ ಲಹರಿ.....", ಗೀತೆಯನ್ನು, ನಮ್ಮ ಬಾಲ್ಯದ ಶಾಲೆಯದಿನಗಳಲ್ಲಿ, ಹೇಳುತ್ತಿದ್ದದ್ದು ಇಂದಿಗೂ, ನನ್ನ ನೆನಪಿನ ಹಲಿಗೆಯಲ್ಲಿ ಮಾಸದೆ, ಉಳಿದುಕೊಂಡಿದೆ !
" ಕಾಯೌ ಶ್ರೀ ಗೌರೀ ಕರುಣಾಲಹರೀ
ತೋಯಜಾಕ್ಷೀ ಶಂಕರೀಶ್ವರೀ [ಪ]
ವೈಮಾನಿಕ ಭಾಮಾರ್ಚಿತ ಕೋಮಲತರ ಪಾದೇ
ಸೀ ಮಾತಿಗ ಭೂಮಾಸ್ಪದೆ ಕಾಮಿತ ಫಲದೇ [೧]
ಶುಂಭಾದಿಮದಾಂಬೋನಿಧಿ ಕುಂಭಜನಿಭೆ ದೇವೀ
ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ [೨]
ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜಚಾಮ
ನಾಮಾಂಕಿತ ಭೂಮೀಂದ್ರ ಲಾಮನ
ಮುದದೇ." [೩]
ಮೈಸೂರು ಅರಸರ ಕುಲದೇವತೆಯಾದ ಶ್ರೀ ಚಾಮುಂಡೇಶ್ವರಿ ಅಥವ ಗೌರಿಯನ್ನು ಪ್ರಾರ್ಥಿಸುವ ರಾಜ್ಯಗೀತೆಯನ್ನು ಆಸ್ಥಾನ ಸಾಹಿತಿ, ವಿದ್ವಾನ್, ಶ್ರೀ. ಬಸಪ್ಪ ಶಾಸ್ತ್ರಿಗಳು, ೧೦ ನೆಯ ಮಹಾರಾಜರಾಗಿದ್ದ, ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್, ಜೆ. ಸಿ. ಐ. ಇ ; ರವರಿಗಾಗಿ, ರಚಿಸಿದರು. ತಮ್ಮ ಬ್ಯಾಂಡ್ ಮಾಸ್ಟರ್ ಬಾರ್ಟೈಸ್, ಹಾಗೂ ಆಸ್ಥಾನವಿದ್ವಾಂಸ, ವೈಣಿಕಶಿಖಾಮಣಿ, ಶೇಷಣ್ಣನವರ ಸಹಯೋಗದಿಂದ, ರಾಗ-ಸಂಯೋಜನೆ ನಡೆಸಿದರು. ಹಳೆಯಮೈಸೂರಿನ ಜನತೆಯ ದೈನಂದಿಕ ವ್ಯವಹಾರದಲ್ಲಿ, ಈ ಗೀತೆ ಅವಿಭಾಜ್ಯ ಅಂಗವಾಗಿತ್ತು. ಮಹಾರಾಜರ ಮರಣದ ನಂತರ ನಾಲ್ಮಡಿಕೃಷ್ಣರಾಜ ಒಡೆಯರು ಪಟ್ಟಕ್ಕೆ, ಬಂದರು. ರಾಜ್ಯಗೀತೆಯ ರಚನೆಯ, ಅಂತಿಮ ಚರಣದಲ್ಲಿ, " ಚಾಮ," ಎಂಬ ಪದದ ಜಾಗದಲ್ಲಿ " ಕೃಷ್ಣ " ಎಂಬ ಹೊಸಪದ ಸೇರ್ಪಡೆಯಾಯಿತು. ಇದೇತರಹ, ಜಯಚಾಮೇಂದ್ರ, ಎನ್ನುವ ಮತ್ತೊಂದು ಹೊಸಪದ, ಶ್ರೀ ಜಯಚಾಮರಾಜ ಒಡೆಯರು, ಅಧಿಕಾರಕ್ಕೆಬಂದಾಗ, ಸೇರಿಸಲಾಯಿತು. ವೈಣಿಕಪ್ರವೀಣ, ಶ್ರೀ. ವಿ. ವೆಂಕಟಗಿರಿಯಪ್ಪನವರು, ಬೇಕಾಗಿದ್ದ ರಾಗಸಂಯೋಜನೆಯನ್ನು, ತಾವೇ ಮಾಡಿಕೊಟ್ಟರು. ಮೈಸೂರು ರಾಜಧ್ವಜದ ಬಣ್ಣ, ಕೆಂಪು. ರಾಜಲಾಂಛನ, ಗಂಡುಭೇರುಂಡ.
'ಮೈಸೂರು-ನೂರಿನ್ನೂರು ವರ್ಷಗಳ ಹಿಂದೆ'. ಲೇ : ಪ್ರೊ. ಪಿ. ವಿ. ನಂಜರಾಜ ಅರಸು. ತರಂಗ, ೨೫, ಅಕ್ಟೊಬರ್, ೨೦೦೭.
ಪುಟ- ೫೬.

- Login or register to post comments
- 679 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ಈ ಹಾಡನ್ನು ನೀವು ಇಲ್ಲಿಂದ ಕೇಳಬಹುದು:
http://boomp3.com/m/4420f663656a
-ಹಂಸಾನಂದಿ
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ವೆಂಕಟೇಶರ ಲೇಖನ ಮೂರು ಸಾರಿ submit ಆಗಿಬಿಟ್ಟಿತ್ತು
ಹಂಸಾನಂದಿಯವರೆ, ಆ ಹಾಡು ನೀವೇ ಅಪ್ಲೋಡ್ ಮಾಡಿದ್ದಾ? ಹಾಡು ಕೇಳಿರಲಿಲ್ಲ - ಥ್ಯಾಂಕ್ಸ್ರೀ ಸರ್ರ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ಹೌದು ನಾಡಿಗರೆ, ನಾನೇ ಅಪ್‍ಲೋಡ್ ಮಾಡಿದ್ದು. ನನಗೆ ಯಾರೋ ಕೊಟ್ಟಿದ್ದನ್ನು ನಾನು ಎಲ್ಲರೊಡನೆ ಹಂಚಿಕೊಂಡೆ, ಅಷ್ಟೇ.
-ಹಂಸಾನಂದಿ
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ಹೌದು, ಹರಿಯವರೆ,
ನನ್ನ ಇಂಟರ್ನೆಟ್ ಸ್ವಲ್ಪ ನಿಧಾನವಾಗಿತ್ತು. ಅದಕ್ಕೆ ಕ್ಲಿಕ್ ಮಾಡಿದೆ. ಆದರೆ ಆಗ ನನಗೆ ನನ್ನ ತಪ್ಪಿನ ಅರಿವಾದದ್ದು.
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ತುಂಬಾ ಚೆನ್ನಾಗಿದೆ.
ಧನ್ಯವಾದಗಳು
ವೆಂ.
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
'ಕಾಯೌ ಶ್ರೀ ಗೌರಿ' ಹಾಡನ್ನು ಕೈಲಾಸಂ ರವರು ತಮ್ಮ ನಾಟಕಗಳಲ್ಲಿ ಯಾವಾಗಲೋ ಪ್ರಸ್ತಾಪಿಸಿದ್ದು ನೆನಪಿಗೆ ಬಂತು. ವೆಂಕಟೇಶ್ ಹಾಗೂ ಹಂಸಾನಂದಿಯವರಿಗೆ ನನ್ನ ಧನ್ಯವಾದಗಳು.
ನಿಮ್ಮಲ್ಲಿ ಯಾರಿಗಾದರೂ 'ಲೋಕಮಾತೆ ವಿಮಲಚರಿತೆ ದೇವಿ ಶಾರದಾಂಬೆಯೇ' ಗೀತೆಯ ಪೂರ್ಣ ಸಾಹಿತ್ಯ ತಿಳಿದಿದ್ದರೆ ದಯವಿಟ್ಟು ನಮ್ಮೊಡನೆ ಹಂಚಿಕೊಳ್ಳುವಿರಾ?
ಶಾಮಲ
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ಈ ಅದ್ಭುತ ಹಾಡನ್ನು ಕೇಳುವ ಆಸೆ. ಒದಗಿಸಿ ಸಾರ್.
ವೆಂ.
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
"ಕಾಯೌ ಶ್ರೀ ಗೌರೀ ಕರುಣಾಲಹರೀ " ಹಾಡಿನ ಬಗ್ಗೆ ತಿಳಿಸಿದ್ದಕ್ಕೆ ಮತ್ತು ಹಾಡು ಕೇಳಿಸಿದ್ದಕ್ಕೆ ಧನ್ಯವಾದಗಳು. ಮೈಸೂರು ಅರಸರ ಗತವೈಭವ ನೆನಪಿಗೆ ಬಂದಿತು.
ಹಾಡು ಕೇಳಿ ತುಂಬಾ ಸಂತೋಷವಾಯಿತು.
ಎಷ್ಟು ಚೆನ್ನಾಗಿದೆ!!
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ಈ ಎಳೆಯನ್ನು ಮೊದಲು ಮಾಡಿದ ವೆಂಕಟೇಶರಿಗೆ ಮತ್ತು ಹಾಡನ್ನು ಎಲ್ಲರೊಡನೆ ಹಂಚಿಕೊಂಡ ಹಂಸಾನಂದಿಯವರಿಗೆ ತುಂಬಾ ತುಂಬಾ ನನ್ನಿ. ಅಂದಹಾಗೆ, ಈ ರಾಷ್ಟ್ರಗೀತೆಯ ಎಲ್ಲ ಚರಣಗಳೂ ಇರುವ ಹಾಡು ಕೇಳಬೇಕೆಂಬ ಆಸೆ ಇದೆ. ಹಂಸಾನಂದಿಯವರು ಈ ನಿಟ್ಟಿನಿಲ್ಲಿ ಏನಾದರೂ ನೆರವು ನೀಡಲು ಸಾಧ್ಯವೇ ?
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ಸುನಿಲರೆ,
ಕಾಯೌ ಶ್ರೀ ಗೌರೀ - ಮೂರೂ ಚರಣಗಳೊಂದಿಗೆ, ಇಲ್ಲಿ ಕೆಳಗಿನ ಕೊಂಡಿಯಲ್ಲಿ ಕೇಳಿ.
http://boomp3.com/m/da0f7ca03eab
ಮುದ್ರಿಕೆಯ ಗುಣಮಟ್ಟ ಅಷ್ಟು ಚೆನ್ನಾಗಿಲ್ಲ. ಕ್ಷಮೆ ಇರಲಿ. ಈ ಕಾರಣಕ್ಕಾಗೇ ನಾನು ಮೊದಲು ಇದನ್ನು ಅಪ್‍ಲೋಡ್ ಮಾಡಿರಲಿಲ್ಲ.
ಮೊದಲ ಚರಣದಲ್ಲಿ ವೆಂಕಟೇಶರು ಬರೆದಿರುವ ಸೀ ಮಾತಿಗ ಎನ್ನುವುದು "ಸೀಮಾಧಿಕ" ಇರಬೇಕೆನಿಸುತ್ತೆ.
ಈ ಹಾಡುಗಳನ್ನು ನನಗೆ ಕೊಟ್ಟವರು, ಮೈಸೂರು ಅರಮನೆಗೆ ಸಂಬಂಧ ಪಟ್ಟ ಒಬ್ಬ ಸಹೃದಯರು. ಅವರಿಗೆ ನನ್ನ, ಹಾಗೂ ನಿಮ್ಮ ಧನ್ಯವಾದಗಳು ಸಲ್ಲಬೇಕು.
-ಹಂಸಾನಂದಿ
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
ನನ್ನಿ ನನ್ನಿ ನನ್ನಿ :ಚಪ್ಪಾಳೆ: :ತಲೆದೂಗಿದೆ:
ಉ: ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !
" ಸೀ ಮಾತಿಗ.... "ಲದೇ [೧ ]
ಪುಸ್ತಕದಲ್ಲಿರುವುದನ್ನು ನಾನು ದಾಖಲಿಸಿದ್ದೇನೆ. ನನಗೂ ಹಾಗೆ ಅನ್ನಿಸುತ್ತೆ. ಪ್ರೊ. ವಿ. ನಂಜರಾಜುರವರನ್ನು ಕೇಳೊಣ.