ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಹಿಂಸೆ , ಅಹಿಂಸೆ , ಅಧಿಕಾರಗಳ ಸುತ್ತ

November 1, 2007 - 9:21pm — csomsekraiah

(ಸಂಕಲನ ದ್ವೈಮಾಸಿಕ ಪತ್ರಿಕೆಯಲ್ಲಿ ಪ್ರಕತವಾದ ಲೇಖನ)
ಹಿಂಸೆ , ಅಹಿಂಸೆ ಎಂಬುವು ಅನಾದಿ ಕಾಲದ ಗೊಂದಲಗಳು ; ಇವು ಪ್ರಕೃತಿಯ ಸ್ವರೂಪಗಳೇ ಆದುದರಿಂದ , ಮಾನವನ ನಿರ್ಣಾಯಕ ಬುದ್ದಿಯು , ಭಾವದ ಬೆಂಬಲವಿಲ್ಲದೆ ಇವುಗಳ ಅಂತರವನ್ನು ಗ್ರಹಿಸಲರಾರದು.

ಹಿಂಸೆ ನೈಸರ್ಗಿಕವೇ ಆಗಿದ್ದರೂ ಅಲ್ಲಿ ಅದು ತಹಬಂದಿಗೊಳಪಟ್ಟಿದೆ , ಲೋಕ ಸಂರಕ್ಶಣೆಗೆ ಅದರ ಬಳಕೆಯೇ ಹೊರತು ಲೋಕ ವಿನಾಶಕ್ಕಲ್ಲ . ಆದರೆ ಮನುಷ್ಯನ ಕೈಗೆ ಅದು ದೊರಕಿದಾಗ ವಿಕೃತಗೊಡು , ಅಸಹನೀಯವಾಗುತ್ತದೆ , ಮನುಷ್ಯ ಆಯುಧಗಳನ್ನು ಕಂಡುಕೊಂಡ ಕ್ಷಣದಿಂದಲೇ ಪ್ರಾಣಿ ಲೋಕದಿಂದ ಬೇರಾಗಿ ಹೋದ, ಎಲ್ಲಿಯೋ ದೂರದಲ್ಲಿಯೇ ನಿಂತು , ಕಲ್ಲಿನಿಂದಲೋ, ಕವಣೆಯಿಂದಲೋ ದಾಳಿ ಮಾಡಬಲ್ಲ ಈ ವಿಚಿತ್ರ ಜೀವಿಯ ಕೈ ಚಳಕ ಪ್ರಾಣಿ ಲೋಕದಲ್ಲಿ ವಿಸ್ಮಯವನ್ನೇ ಮೂಡಿಸಿತು. ಅವು ಈ ಹೊಸ ಜೀವಿಗೆ ಹೆದರಿ ಇವನಿಂದ ದೂರ ಉಳಿದವು. ನಾಯಿಯೊಂದನ್ನು ಹೊರತುಪಡಿಸಿ! ಮನುಷ್ಯನ ಹಿಂಸಕ ಬುದ್ದಿಗೆ ಶಹಬ್ಬಾಶ್ ಹೇಳಲು ಈ ಪಾಪದ ನಾಯಿಗೆ ಯಾವ ತುರ್ತು ಇತ್ತ್ತೋ ಗೊತ್ತಿಲ್ಲ . ಅಂತೂ ಅದು ಅವನ ಅನಾದಿ ಕಾಲದ ಸಹಪಾಟಿ.

ಈ ಆಯುಧ ಜೀವ ಲೋಕದಲ್ಲಿ ಕೋಲಾಹಲವನ್ನೇ ಸೃಷ್ಟಿಸುವ ವಿಕೃತ ಸೃಷ್ಟಿ. ಅಂದ ಮಾತ್ರಕ್ಕೆ ಅದು ಮನುಷ್ಯನದೇ ಕರಾಮತ್ತೇನೂ ಅಲ್ಲ; ಬಲವಾದ ಹಲ್ಲು , ಉಗುರು , ಕೊಂಬು ಇವೆಲ್ಲಾ ನೈಸರ್ಗಿಕವೇ ಅಲ್ಲವೇ ? ಆದರೆ ನಿಸರ್ಗ ಮನಷ್ಯನ ಬುದ್ದಿಯೊಷ್ಟು ವ್ಯಾಪಕ ವಿನಾಶಕಾರಿ ಅಲ್ಲ. ಈ ಆಯುಧಗಳ ಅನ್ವೇಷಣೆಯಲ್ಲಿ ಮಾನವ ತಲುಪಿರುವುದು ಎಲ್ಲಿಗೆಂದರೆ , ತಾನಿರುವ ಭೂಮಂಡಲವನ್ನು ಕ್ಶಣಾರ್ಧದಲ್ಲಿ ನಾಶಗೊಳಿಸಿಕೊಳ್ಳುವಷ್ಟು ಮೂರ್ಖ್ಹತನದ ಶಿಖರಕ್ಕೆ !

ನೈಸರ್ಗಿಕವೇ ಆಗಿರಲಿ , ಮಾನವ ಕೃತವೇ ಆಗಿರಲಿ , ಆಯುಧ ಹೊಂದಿದ ಜೀವಿ ಉಳಿದ ಸಂಕುಲಗಳ ಭ್ಹಯ ಆಂದೋಳನಕ್ಕಂತೂ ಕಾರಣವಗುತ್ತದೆ ; ಮತ್ತು ಆಯುಧ ಹೊಂದಿದ ಕಾರಣಕ್ಕೆ ಸ್ವತಃ ತಾನೂ ಸಹ ಭಯದ ನೆರಳಲ್ಲಿಯೇ ಬದುಕಬೇಕಾಗುತ್ತದೆ . ಮನೆಯ ಗೋಡೆಯ ಮೇಲೆಲ್ಲಾ ಹಲ್ಲಿ ಹರಿದಾಡಿದರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ; ಆದರೆ ಒಂದು ಚೇಳು ಕಂಡರೆ ಮುಗಿಯಿತು ಅದರ ಕತೆ, ಕಂಡ ತಕ್ಷಣ ಅದೇನೂ ಕುಟುಕಿಯೇಬಿಡುವುದಿಲ್ಲ , ಆದರೆ ಯಾವಾಗ ಬೇಕಾದರೂ ಕುಟುಕೀತೆಂಬ ಭಯವೇ ಅದರ ಜೀವಕ್ಕೆ ಮುಳುವಾಗಿಬಿಡುತ್ತದೆ. ಹಾಗಾಗಿ ಚೇಳಿಗೆ ಹಲ್ಲಿಯ ಸ್ವಾತಂತ್ರ್ಯವಿಲ್ಲ , ಅದು ಅಡಗಿಕೊಂಡೇ ಬಾಳಬೇಕು. ಕಾಂಪೌಂಡಿನಲ್ಲೆಲ್ಲಾ ಹಾವುರಾಣಿ ಹರಿದಾಡಿದರೆ ಉದಾಸೀನ ಮಾಡೂವ ಜನ , ಕಾಂಪೌಂಡಿನಲ್ಲಿ ಹಾವು ಕಂಡರೆ ಹೌಹಾರಿಬಿಡುತ್ತಾರೆ ; ಹಾವೂ ಕೂಡಾ ಜನರನ್ನು ಕಂಡ ಕೂಡಲೇ ಪರಾರಿಯಾಗಿ ಅವಿತುಕೊಂಡುಬಿಡುತ್ತದೆ . ಅದರ ಅನುಕೂಲಕ್ಕೋ ಆಹಾರ ಸಂಪಾದನೆಗೋ ನಿಸರ್ಗ ಅದಕ್ಕೆ ಕೊಟ್ಟಿರುವ ಆಯುಧವೇ ಅನೇಕ ಸಾರಿ ಅದರ ಪ್ರಾಣಕ್ಕೆ ಸಂಚಕಾರ ತರುವ ವಸ್ತುವಾಗಿ ಹೋಗುತ್ತದೆ . ಇದೇ ಆಯುಧಗಳ ದ್ವಂದ್ವ . ಸಣ್ಣ ಪುಟ್ಟ ಪ್ರಾಣಿಗಳು ಮಾತ್ರವಲ್ಲ , ಹುಲಿ, ಸಿಂಹಗಳಂತಹ ಬಲಶಾಲಿ ಜೀವಿಗಳೂ ಸಹ ತಮ್ಮಲ್ಲಿರುವ ಕ್ರೂರ ಆಯುಧಗಳಿಂದಾಗಿ ಅಡಗಿಕೊಂಡೇ ಬಾಳಬೇಕಾಗುತ್ತದೆ . (ನಾಳೆಗೆ ಮುಂದುವರಿಯುತ್ತದೆ)

  • ಪ್ರಬಂಧ
~.~
  • Login or register to post comments
  • 284 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು -೫ (೧)
  • ಪೋಲಿಷ್ ಕವಿತೆ: ಹಿಂಸೆ
  • ಕಾರಂತರ ಜೀವಂತ ಪಾತ್ರಗಳು ೭ (೧)
  • ಆಂಟಿ-ಉಪದ್ರವ ಆಯುಧ (ಆಉಆ) ಸಂಶೋಧನೆ
  • ನಮಗೆ ಮಾತ್ರ ವಿರಾಮವೇ?
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator