Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಏರ್ಟೆಲ್ ತಪ್ಪೋ, ಪೋಲೀಸರ ದಬ್ಬಾಳಿಕೆಯೋ?

November 6, 2007 - 1:09pm — hpn

ತನ್ನದಲ್ಲದ ತಪ್ಪಿಗೆ ನಿರ್ದೋಶಿಯೊಬ್ಬನನ್ನು ಜೈಲಿಗೆ ಎಳೆದುಕೊಂಡು ಹೋಗೋದೆಲ್ಲ ಫಿಲ್ಮುಗಳಲ್ಲಿ ನೋಡಿರುತ್ತೀರಿ. ನಿಜಸ್ಥಿತಿ ಎಷ್ಟು ಕೆಟ್ಟದಿರಬಹುದು ಎಂಬುದರ ಅರಿವು ಪರದೆಯ ಮೇಲಿನ ಕಥೆ ನೋಡಿಯೂ ಆಗುವುದು ಕಡಿಮೆ.

ಟೈಮ್ಸ್ ಆಫ್ ಇಂಡಿಯಾದ ಈ ವರದಿ ಓದಿ.

ತನ್ನದಲ್ಲದ ತಪ್ಪಿಗೆ ಬೆಂಗಳೂರಿನ ಇಂಜಿನೀಯರನ್ನು ಇದೇ ಆಗಸ್ಟಿನಲ್ಲಿ ಪೋಲೀಸರು ಪುಣೆಗೆ ಎಳೆದುಕೊಂಡು ಹೋಗಿ ಅಲ್ಲಿ ೫೦ ದಿನ ಜೈಲಿಗೆ ಹಾಕಿದ್ದಾರಂತೆ. ಆರ್ಕುಟ್ ನಲ್ಲಿ ಛತ್ರಪತಿ ಶಿವಾಜಿ ಫೋಟೋ ಕೆಡಿಸಿ ಅವಮಾನ ಮಾಡಿದರೆಂಬುದು ಅವನ ತಲೆಯ ಮೇಲೆ ಹೇರಿದ್ದ ತಪ್ಪು. ಇಷ್ಟು ದಿನ ಜೈಲು ವಾಸದ ನಂತರ ಅವನ ತಪ್ಪೇ ಇರಲಿಲ್ಲ, ಏರ್ಟೆಲ್ ನೀಡಿದ ಐ ಪಿ ವಿಳಾಸ ತಪ್ಪಾಗಿತ್ತು ಎಂಬ ವಿಷಯ ಹೊರಬಂದಿದೆಯಂತೆ.

ಮಾಹಿತಿ ನೀಡಿ ತಿಂಗಳುಗಳೇ ಆದ ಮೇಲೆ ಏರ್ಟೆಲ್ "ಅರೆ, ತಪ್ಪು ಐ ಪಿ ವಿಳಾಸ ಕೊಟ್ಟುಬಿಟ್ಟೆವು" ಎಂದು ಹೇಳುವುದಕ್ಕೆ ಇದೇನು ಮಕ್ಕಳಾಟವೆ? ಲಕ್ಷ್ಮಣ ಕೈಲಾಶ್ ಜಾಗದಲ್ಲಿ ಏರ್ಟೆಲ್ ಬಳಸುವ ಅಮಾಯಕರು ಯಾರೊಬ್ಬರೂ ಆಗಬಹುದಿತ್ತು! ಹೇಳದೆ ಕೇಳದೆ ಪೋಲೀಸರು ಹೀಗೆ ಹೊತ್ತುಕೊಂಡು ಹೋದರೆ ಪಾಪ ಅಮಾಯಕರ,ದುಡ್ಡಿಲ್ಲದವರ ಗತಿಯೇನು?

ಒಂದು ವಿಷಯವನ್ನು ಒಪ್ಪಿಕೊಳ್ಳೋಣ - ನಮ್ಮ ಭಾರತದ ಸರ್ಕಾರವಾಗಲಿ, ಅಂತರ್ಜಾಲದ ಸೌಕರ್ಯ ನೀಡುತ್ತಿರುವ ISPಗಳಾಗಲಿ (Internet Service Providers), ತಂತ್ರಜ್ಞಾನದ ಮಟ್ಟಿಗೆ ಬಹಳ ಹಿಂದೆ ಬಿದ್ದಿವೆ. ನಮ್ಮ ಭಾರತ, ನಮ್ಮ ಕರ್ನಾಟಕ - ನಾವೇ ಮೇಲು,ನಾವೇ ಐಟಿ ಗುರುಗಳು ಅನ್ನೋ ಕುರುಡು ಮಾತು, ಹೆಮ್ಮೆ, ಒಣಜಂಭಗಳಿಗೆ ಒಳಗಾಗಿ ಈಗಿರುವುದನ್ನೇ "ಗ್ಲೋಬಲ್ ಸ್ಟ್ಯಾಂಡರ್ಡ್" ಎಂದು ನಾವೇ ಕರೆದುಕೊಂಡು ಆಗಬೇಕಾದ ಪ್ರಗತಿಗೆ ಮುಳುವಾಗುತ್ತಿದ್ದೇವೆ.

ನಿಜಸ್ಥಿತಿ ಏನೆಂದರೆ, ಐ ಟಿ ಮಟ್ಟಿಗೆ, ಐ ಟಿ ಕಾಯ್ದೆಗಳ ಮಟ್ಟಿಗೆ ಭಾರತದಲ್ಲಿ ಪಹಾಡದೆತ್ತರ ಕೆಲಸ ಆಗೋದಿದೆ. ಬಹಳಷ್ಟು ದೂರ ಹೋಗೋದಿದೆ. ಇನ್ನೂ ಕೆಲವೇ ಹೆಜ್ಜೆಗಳನ್ನು ಇಟ್ಟಿರುವುದು ಎಂದು ಕೂಡ ಹೇಳಬಹುದು.

ಕಾಯ್ದೆಗಳ ಮಟ್ಟಿಗಾದರೂ ಕೆಲಸ ಆಗದಿದ್ದರೆ ಇಂತಹ ಘಟನೆಗಳು ಇನ್ನಷ್ಟು ನಡೆಯುತ್ತಿರುತ್ತವೆ. ಸೈಬರ್ ಕಾಯ್ದೆ ಅಮಾಯಕರನ್ನು ಶೋಷಣೆಯಿಂದ ಪಾರು ಮಾಡಬೇಕೆ ಹೊರತು ಅಮಾಯಕರನ್ನು ಇಂತಹ ಸನ್ನಿವೇಶಗಳಿಗೆ ತಂದಿಡುವಂತದ್ದಾಗಬಾರದು.

(ಈ ಬಗ್ಗೆ ಮತ್ತೊಮ್ಮೆ ಸವಿವರವಾಗಿ ಬರೆಯುವೆ)

ಮತ್ತಷ್ಟು ಓದು:

  • ನನ್ನ ಇಂಗ್ಲೀಷ್ ಬ್ಲಾಗಿನಲ್ಲಿ ಇದರ ಬಗ್ಗೆ ಬರೆದದ್ದು.
  • Times of India Coverage - "We made a mistake, so what?" says Police.
  • A blunder unpardonable
  • Wrong man jailed for 50 days.

ಫೋಟೋ: ಟೈಮ್ಸ್ ಆಫ್ ಇಂಡಿಯ.

  • ಪ್ರಚಲಿತ
Ornamental seperator
  • Login or register to post comments
  • 543 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 6, 2007 - 5:56pm — anivaasi

ಉ: ಏರ್ಟೆಲ್ ತಪ್ಪೋ, ಪೋಲೀಸರ ದಬ್ಬಾಳಿಕೆಯೋ?

anivaasi's picture

ಈ ಐಟಿಏ-೨೦೦೦ ಕಾಯಿದೆ ಏನು?
ಅದನ್ನು ಇಷ್ಟು ಸುಲಭವಾಗಿ ಬಳಸಿ ಒಬ್ಬರನ್ನು ಜೈಲಿಗೆ ತಳ್ಳಬಹುದ?
ನಮ್ಮ ಪೋಲೀಸರ ಬಗ್ಗೆಗಿನ ನಿರಾಶೆ ಹೊಸ ವಿಷಯವಲ್ಲ.
ಆದರೆ, ಗೂಗಲ್ ಹೇಗೆ ಅಷ್ಟು ಸುಲಭದಲ್ಲಿ ತನ್ನ ಸೇವೆ ಪಡಕೊಳ್ಳುವವರ ವಿವರಗಳನ್ನು ಪೋಲೀಸಿಗೆ ನೀಡಿತು?
ಏರ್‌ಟೆಲ್ ಅಷ್ಟು ಸುಲಭವಾಗಿ ತನ್ನ ಗ್ರಾಹಕನ ಐಪಿಯನ್ನು ಪೋಲೀಸಿಗೆ ನೀಡಿತು?
ಒಂದು ಮನೆಯನ್ನು ಹುಡುಕಲು ಕೋರ್ಟಿನ ವಾರಂಟ್ ಬೇಕಾದಂತೆ ಇದಕ್ಕೂ ಕೋರ್ಟಿನ ವಾರಂಟ್ ಬೇಡವೆ?
ಅದು ಬೇಕಾಗಿದ್ದರೆ ಕೋರ್ಟು ಅಷ್ಟು ಹಗುವಾಗಿ ಕೊಟ್ಟಿತೆ?
ಇವೆಲ್ಲ ಇರಲಿ, ಈಗ ಸಿಕ್ಕಿದ್ದಾರೆ ಎನ್ನುವ ಮೂರು ಜನ "ನಿಜವಾದ ಅಪಾದಿತ"ರ ವಿಷಯದಲ್ಲಿ ತಪ್ಪಾಗಿಲ್ಲ ಎಂದು ಹೇಗೆ ಹೇಳವುದು? ಅಪಾದನೆ ಏನು? ಅಪಾದನೆ ಪ್ರೂವ್ ಆಗಬಲ್ಲದೆ? ಇವೆಲ್ಲಾ ನೋಡಿದ ನಂತರ ತಾನೆ ಜೈಲು? ಯಾಕೋ ಎಲ್ಲ ತಳಕಂಬಳಕ ಅನಿಸುತ್ತಿದೆ.

ಗೂಗಲ್ ಮತ್ತು ಏರ್‍ಟೆಲ್‌ ಕಂಪನಿಗಳನ್ನು ಸಾರ್ವಜನಿಕವಾಗಿ (ಬಹುಶಃ ಟಿವಿಯಲ್ಲಿ) ನಾಚಿಸುವ ದಾರಿ ನೋಡಬೇಕಲ್ಲವೆ? ಅದು ಹೇಗೆ ಮಾಡಬಹುದು?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಸರ್ಕಾರಕ್ಕೆ ಸಂಯುಕ್ತ ರಾಷ್ಟ್ರದ ಪ್ರಶಸ್ತಿ
  • ಸಂಪದ ಆರ್ಕೈವ್
  • ನಮ್ಮ ಭಾರತದ ಡೈನೊಸಾರ್ ಗಳು ಹುಲ್ಲು ತಿನ್ನುತ್ತಿದ್ದವಂತೆ!
  • ದ್ರಾವಿಡ ವಿಜಯ :)
  • ಇವರೀಗ ಯಾವ ಕಾಲದಲ್ಲಿದ್ದಾರೆ!
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator