ರಾಜ ಮಾರ್ಗ
ರಾಜ ಮಾರ್ಗ
ಇಲ್ಲ,
ರಾಜಮಾರ್ಗ ಬಂದಾಗಲೂ ಇಲ್ಲ
ಅದು ಪ್ರತಿಬಂದಿತವೂ ಅಲ್ಲ
ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ
ಗಮ್ಯದ ತನಕ ಸುದೃಢ ಘನ ಗಂಭೀರಿ
ಆದರೆ ಕೃಮಿಸರು ಅದರಲಿ ಮಾನವರು
ಅವರೋ ತಾವೇ ಕಿರುದಾರಿ ಹುಡುಕುವರು
ಅಲೆದಲೆದು ಬಳಲಿ ಗಮ್ಯಕೆ ತಲುಪದವರು
ಸೋತು ಕೈ ಕೈ ಹಿಸುಕಿ ಮರುಗುವರು
ಆದರೂ ರಾಜಮಾರ್ಗ ಇನ್ನೂ ಹಾಗೆಯೇ ಇದೆ
ಸುವಿಹಾರಿ ಚೇತೋಹಾರಿ ಘನ ಗಂಭೀರದೆ
ಕಾಯುತಲಿದೆ ಅದು ಒಯ್ಯಲು ತೀರಕೆ
ಸೋತು ಬಳಲಿ ಬರುವರೆಲ್ಲರ ಗಮ್ಯಕೆ

- Login or register to post comments
- 226 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: