ಭರತೇಶ ವೈಭವ – ಕಲ್ಪು ೧
ಮನುಷ್ಯ ಲವಲವಿಕೆಯಿಂದ ಸಂತೋಷದಿಂದ ಸಂಪೂರ್ಣವಾಗಿ ಜೀವನವನ್ನು ಅನುಭವಿಸಲು ಆತನ ನೆರವಿಗೆ ಬರುವುದೇ ಅವನ ಹವ್ಯಾಸಗಳು. ಮನುಷ್ಯನ ಜೀವಿತದ ಎಲ್ಲ ಸಾಧನೆಗಳಿಗೂ ಆತನ ಕನಸು, ಕಣಸು(vision), ಆಕಾಂಕ್ಷೆ, ತುಡಿತ ಇವುಗಳು ಸಲೆ (awfully) ಮುಖ್ಯವಾಗುತ್ತದೆ. ಮನುಷ್ಯನ ಉತ್ಸಾಹವನ್ನು ಹೆಚ್ಚಿಸುತ್ತಾ ಸದಾ ಆತನನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವುದೇ ಈ ಹವ್ಯಾಸಗಳು. ನಿಮಗೆಲ್ಲರಿಗೂ ಇರುವಂತೆ ನನಗೂ ಒಂದಷ್ಟು ಮಣ
ಹವ್ಯಾಸಗಳಿವೆ.
ನಿಮ್ಮ ಹಾಗೆಯೇ, ನನ್ನ ಕನ್ನಡ ಓದೂ ಕೂಡ “ದಿನಕ್ಕೊಂದು ಕತೆ”, “ದಿನಕ್ಕೊಂದು ಮಕ್ಕಳ ಕತೆ”, “ಚಂದಮಾಮ”(ಇದನ್ನು ಚಂದಾಮಾಮ ಎಂದು ಗೇಲಿ ಮಾಡುತ್ತಿದ್ದುದೂ ಉಂಟು), “ಸುಧಾ”, “ತರಂಗ”, ಪೇಪರುಗಳಿಂದಲೇ ನೆಗಳ್ಚಿದ್ದು. ಕತೆ, ಕಾದಂಬರಿ, ಬ್ಲಾಗು, ಚರ್ಚೆ ಇವುಗಳಿಂದಾಗಿ ನಮಗೆಲ್ಲ ಸಮಕಾಲೀನ ವಿಷಯಗಳು ಪರಿಚಿತವಾಗಿ ಇದ್ದೇ ಇರುತ್ತದೆ. ಆದರೆ ನಮ್ಮ ಹೆಮ್ಮೆಯ ಕನ್ನಡ-ಸಂಸ್ಕೃತಿಯ ತಳಹದಿ, ಬೇರುಗಳನ್ನು ನವರತ್ನಗಳಂತೆ ತನ್ನ ಗರ್ಭದಲ್ಲಿ ಮುಚ್ಚಿಟ್ಟುಕೊಂಡಿರುವ, ಆ ಕಪ್ಪೆ-ಚಿಪ್ಪುಗಳನ್ನು ಎಲ್ಲಿ ಹೇಗೆ ಅಂತ ಹುಡುಕೋದು.
ಗೆಳೆಯರೇ, ಕಳೆದ ಮೂರು-ನಾಲ್ಕು ವಾರಗಳಿಂದ ನಾನು “ಭರತೇಶ ವೈಭವ” ಎನ್ನುವ ಕಾವ್ಯವನ್ನ ಓದ್ತಾ ಇದ್ದೀನಿ. ಇದರ ರೋಚಕತೆ ಶುರುವಾಗುವುದೇ ಅದನ್ನು ಬರೆದ ರತ್ನಾರಕವರ್ಣಿಯ ಜೀವನದ ವಿವರಣೆಯಿಂದ. ಬನ್ನಿ "ಭರತೇಶ ವೈಭವ"ದ ಬಗ್ಗೆ ನಮ್ಮಗೆ ಏನೇನೆಲ್ಲಾ ತಿಳಿದಿದೆ, ಅದು ನಮ್ಮಲ್ಲಿ ಸ್ಫುರಿಸಿದ ಭಾವನೆಗಳಾವುವುದ, ಅದರಿಂದ ನಾವು ಪಡೆದದ್ದು ಏನು, ಭರತೇಶ ವೈಭವದ ಹಿನ್ನೆಪ್ಪು (ನಾಸ್ಟಾಲ್ಜಿಯಾ) ಎಲ್ಲವನ್ನೂ ಒಟ್ಟುಗೂಡಿಸುವತ್ತೆ ಹೆಜ್ಜೆ ಹಾಕೋಣ.
ಸಾಹಿತ್ಯ ಆಳವಾದ ಸಾಗರ. ಬನ್ನಿ ಅಂತಹ ಸಾಗರದ ಆಳವನ್ನು ಹೊಕ್ಕಿ, ಅದರಲ್ಲಿರುವ ಒಂದೊಂದು ರತ್ನವನ್ನೂ ನಮ್ಮದಾಗಿಸಿಕೊಳ್ಳುತ್ತಾ ಅದರ ಹೊಳಪನ್ನು ಎಲ್ಲರೂ ಸವಿಯೋಣ.
ಸುಮ್ಮನೆ ಕುಚೇಷ್ಟೆಗೆ - ನಮ್ಮ ಸಂಪದದಲ್ಲಿ ಒಬ್ಬರು ವೈಭವ ಅಂತ ಇದ್ದಾರೆ, ಅವರು ಭರತೇಶ ಎಂಬ ಕಾವ್ಯನಾಮದಿಂದ ಕೆಲವು ಪದ್ಯಗಳನ್ನೂ ಬರೆದಿದ್ದಾರೆ ![]()

- Login or register to post comments
- 346 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಭರತೇಶ ವೈಭವ – ಕಲ್ಪು ೧
ಇದನ್ನು ಅಡಿಪಾಯ ಬರೆಹ ಎನ್ನಬೇಕು ( ಪೀಠಿಕೆಗಾಗೇ ಬರೆದ ಬರೆಪು)!
ಮುಂದೆ.... ಏನೇನು ವೈಭವ ಹೇಳಲಿರುವರೋ ಚನ್ನೀಲರು!
ಉ: ಭರತೇಶ ವೈಭವ – ಕಲ್ಪು ೧
ಸುನೀಲಣ್ಣ,
ನಾನು ಭರತೇಶ ವಯ್ಬವ ಬಗ್ಗೆ ಏನಾದ್ರೂ ಇರುತ್ತೆ ಅಂದ ಓದುದ್ರೆ ಇನ್ನು ಅಡಿಪಾಯ ಹಾಕ್ತ ಇದ್ದೀಯ. ನಿಮ್ಮ ಬರಹದ ತಿರುಳುಗಾಗಿ ಎದುರುನೋಡುತ್ತಿದ್ದೇನೆ.
ಭರತೇಶ ವಯ್ಬವದ ನೆವದಲ್ಲಿ ನನ್ನನ್ನು ಚೇಶ್ಟೆ ಮಾಡಿದ್ದಕ್ಕೆ ನನ್ನಿ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು