ಏನ್ರೀ ಗೌಡ್ರೇ!
ನೆಲಕ್ಕೆ ಬಿದ್ದರೂ ಮೀಸೆ
ಮಣ್ಣಾಗಿಲ್ಲ ಅಂತೀರಾ?
ನನಗೆ ಮೀಸೆ ಇಲ್ವಲ್ರೀ.
ತಲೆ ಯಾಕ್ರೀ ಗುಡಿಸಿ
ಗುಂಡಾಂತರ ಮಾಡೀರಿ?
ನನ್ನಿಂದೇನು ಸಿಗವಲ್ದಂತಾ...
ನಿಮಗೂ ಹೀಗೇ ಮಾಡಬೇಕಂತ.
ರಾಜ್ಯಕ್ಕೆ ನೀವು ಶನಿ, ಅನಿಷ್ಟ,
ದರಿದ್ರ ಅಂತಾರಲ್ರೀ?
ಅದಕ್ಕೆ ತಗೂರೀ ನಾನು,
ನನ್ಮಗ ಸಿಎಮ್ ಆಗಿದ್ದು.
ಇಡೀ ಪದ್ಮನಾಭನಗರ ನಿಮ್ಮದಂತ್ತಲ್ರೀ?
ಆಲಾದ್ ನಿದ್ರೆ, ಇಲ್ಲಾಂದ್ರೆ ಇಸ್ಟೊತ್ತಿಗೆ
ಬೆಂಗಳೂರೇ ನಂದಾಗ್ತಿತ್ತು.
ಎಲ್ಲಾ ಆಸೆ ನೆರವೇರಿದೆ,
ಇನ್ನಾರ ಬಿಡ್ರಲಾ ರಾಜಕೀಯ?
ಇನ್ನು ಇಬ್ಬರು ಗಂಡು ಹಾಗು
ಮೊಮ್ಮಕ್ಲು ಇದಾರಲ್ರೀ.
ದಳದ ಜೊತೆ, ಹಿರಿಯ ನಾಯಕರನ್ನೆಲ್ಲ
ನುಂಗಿ ನೀರಕುಡಿದರಲ್ಲ?
ಇನ್ನು ಒಬ್ಬ ಇದಾನ್ರೀ ಎಂಪಿ ಪ್ರಕಾಶ.
ನೀವು ಜಾಣ ಕುರುಡ, ಜಾಣ ಕಿವುಡ,
ಜಾಣ ಮೂಖ ಅಂತಾರಲ್ರೀ?
ಓಹೋ ಹೌದೆನ್ರೀ. ಏನಂದ್ರೀ?
ನೀವು ಇರೋವರಿಗೂ ನಮ್ಮ
ರಾಜ್ಯ ಉಧ್ಧಾರ ಆಗಲ್ಲ ಬಿಡ್ರೀ?
ಸುಳ್ಳ್ರೀ, ನಾನಾಗ್ತೀನಿ ನೋಡ್ರಿ?
ಥೂ ನಿಮ್ಮ, ನಾಚಿಕೆ, ಮಾನ,
ಮರ್ವಾದೆ ಏನು ಇಲ್ಲವಲ್ರೀ?
ಇದ್ದಾಗ ಊರಲ್ಲಿದ್ದೆ,
ಬಿಟ್ಟಿದ್ದಕ್ಕೆ ಪಿಎಮ್ ಆದೆ.
ನಿಮ್ಮಿಂದ ಒಂದಾದರೂ ಒಳ್ಳೆ
ಕೆಲಸ ಆಗೈತೇನ್ರಿ?
ರಾಗಿ ಮುದ್ದೆ, ಮಸ್ಸೊಪ್ಪು
ಭಾರಿ ಫೇಮಸ್ ಆತಲ್ರೀ.

- Login or register to post comments
- 236 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: