ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕನ್ನಡ ರಣಧೀರರ ಕೆಲಸ ಬೆಳಗಾವಿಗೆ ಕುತ್ತು

November 16, 2005 - 4:09pm — anoopkittur

ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ.

ಆದರೆ ಇತ್ತೀಚೆನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿಯ ವಾತಾವರಣ ಕಡಿಮೆ ಆಗುತ್ತಿದೆ. ಬೆಳಗಾವಿಯ ಮರಾಠಿ ಭಾಷಿಗರು ಕನ್ನಡಿಗರ ಜೊತೆಗೆ ಸೌಹಾರ್ದತೆಯಿಂದ ಬಾಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅದು ಅವರಿಗೆ ಅನಿವಾರ್ಯವೂ ಮತ್ತು ಅಗತ್ಯವೂ ಆಗಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಕೂಗು ಸತ್ತು ಹೋಗಿದೆ. ಇದರಿಂದಾಗಿಯೇ ಭಾಷೆಯ ಆಧಾರದ ಮೇಲೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಒಂದೇ ಅಜೆಂಡಾದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಎಂ.ಇ.ಎಸ್, ನೆಲ ಕಚ್ಚಿದೆ. ಇತ್ತೀಚೆನ ಕೆಲವು ವರ್ಷಗಳಲ್ಲಿ ಬೆಳಗಾವಿಯ ಮೇಯರ್ ಆಗಿ ಕನ್ನಡದ ಶ್ರೀ ಸಿದ್ದನಗೌಡ ಪಾಟೀಲರು ಕಾರ್ಯ ನಿರ್ವಹಿಸಿದ್ದಾರೆ.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ನಗರ ಪಾಲಿಕೆ ಸಾಕಷ್ಟು ಬಾರಿ ನಿರ್ಣಯ ತೆಗೆದುಕೊಂಡಿದೆ. ಆನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಅವರ ನಿರ್ಣಯಕ್ಕೆ ತುಂಬಾ ಪ್ರಚಾರ ಸಿಕ್ಕಿದ್ದು ಈ ಸಲವೇ ಇರಬೇಕು. ಇರಲಿ, ಅವರ ನಿರ್ಣಯದ ವಿರುದ್ಧ ಧರಣಿ, ಸತ್ಯಾಗ್ರಹ, ಮೆರವಣಿಗೆ, ಪ್ರತಿಕೃತಿ ದಹನ, ಬಂದ್ ಎಲ್ಲವೂ ಸರಿ. ಆದರೆ, ಮೇಯರ್ ಗೆ ಕಪ್ಪು ಮಸಿ ಬಳಿದು, ಅದರ ಮೂಲಕ ಪ್ರತಿಭಟನೆ ವ್ಯಕ್ತ ಪಡಿಸಿದ್ದು ಕನ್ನಡದ ಹೋರಾಟಕ್ಕೇ ಮಸಿ ಬಳಿದಂತೆ. ಇದರಿಂದ ಆಗಿದ್ದೇನು? ಬೆಳಗಾವಿಯ ನಮ್ಮ ಗೆಳೆಯರು ಹೇಳಿದ್ದು, "ಸತ್ತು ಹೋದ ಎಂ.ಇ.ಎಸ್ ಗೆ ಜೀವ ತುಂಬಿದರು".

ಈ ಕುರಿತು ಚಂಪಾ ಆದಿ ಎಲ್ಲಾ ಸಾಹಿತಿ ವರೇಣ್ಯರು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ

  • ಪ್ರಚಲಿತ
~.~
  • Login or register to post comments
  • 901 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 18, 2005 - 2:19am — jaideva

prathibhatane sookthavaagide emba abhipraaya....

jaideva's picture

kannada para dhwani , kriyaathmakavaaguva samayadalli , saama daana bheda danda ivugallevoo sookthavaagi salluththave endu nanna abhipraaya. heegaagi mrudu dhorane thaleyuvavarondige ..., vishaya vannu jaaheeru maadi , sanchalane kodalikke intha kriyegaloo beke beku.

nimma,

jaideva. 

vi.soo. : mundina sala kannada lipi upayogisalu prayathnisuve.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 18, 2005 - 2:40am — hpn

ಪ್ರಯತ್ನಿಸೋದಲ್ಲ...

hpn's picture

ಪ್ರಯತ್ನಿಸೋದಲ್ಲ, ಕನ್ನಡ ಲಿಪೀಲ್ಲೆ ಕಡ್ಡಾಯವಾಗಿ ಬರೀಬೇಕು

ಇಲ್ದಿದ್ರೆ ನಮ್ಮ ನಿರ್ವಾಹಕರುಗಳ ಮೂಲಕ ನಿಮ್ಮ ಕಾಮೆಂಟನ್ನ ಕಿತ್ತು ಹಾಕಲಾಗುತ್ತೆ.

--  
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 18, 2005 - 2:44am — jaideva

ಆಯ್ತು ಬುಧ್ಧೀ...

jaideva's picture

ಈ ಸಲ ಕನ್ನಡದಾಗೇ ಬರೆದಿವ್ನಿ ... ಸರೀಗಿದ್ರೆ ..ಸಭಾಸ್ ಅನ್ರಿ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 18, 2005 - 3:16am — hpn

ತಮ್ದು ದೊಡ್ ಮನ್ಸು!

hpn's picture

ಸರೀಗದೆ! ಶಭಾಸ್‌ರೀಪ್ಪ! ದೊಡ್ ಮನ್ಸು ನಿಮ್ದು. ಹೇಳಿಸ್ಕೊಂಡ್ ಸ್ವಲ್ಪ್ ಹೊತ್ನಲ್ಲೇ ಕನ್ನಡ್ ಲಿಪಿ ಬಳ್ಸಿದ್ರಿ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 18, 2005 - 6:03am — tvsrinivas41

ಒಳ್ಳೆಯ ಕೆಲಸ!

tvsrinivas41's picture

ಶಾಭಾಸ್ ರೀ ಯಪ್ಪ. ತುಂಬಾ ಒಳ್ಳೆಯ ಕೆಲಸ ಮಾಡೀರಿ.

ಸಂಪದದಲ್ಲಿ ನಿಮ್ಮೆಲ್ಲ ಬರಹಗಳೂ ಕನ್ನಡದಲ್ಲೇ ಬರುವುದೆಂದು ಆಶಿಸುಬೆ. ಹಾಗೆಯೇ ಸಂಪದ ಸಿರಿವಂತಿಕೆಯಿಂದ ತುಂಬಿ ತುಳುಕಲಿ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 18, 2005 - 2:27am — hpn

ಇದೇ ಕುರಿತ ಇತರ ಲೇಖನಗಳು, ಅಭಿಪ್ರಾಯಗಳು

hpn's picture

ನಿಮ್ಮ ಗಮನಕ್ಕೆ:
* 'ಮೋರೆ'ಗೆ ಕಪ್ಪು ಬಳಿದರು - ಈ ಥ್ರೆಡ್ಡಿನಲ್ಲಿ ದೊಡ್ಡ ಡಿಸ್ಕಶನ್ ನಡೆದಿತ್ತು.
* ಮರಾಠಿಗರಿಗೆ ಜೀವ ತುಂಬಿದ ಕನ್ನಡ ರಣಧೀರ ಪಡೆ - ನೀವೇ ಬರೆದದ್ದು Smiling

ಒಟ್ಟಾರೆ ಬುದ್ಧಿಜೀವಿಗಳಿಗೆ ಕನ್ನಡ ರಕ್ಷಣಾ ವೇದಿಕೆಯ activism ಸರಿಯೆನಿಸಿಲ್ಲ. Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರಾಠಿಗರಿಗೆ ಜೀವ ತುಂಬಿದ ಕನ್ನಡ ರಣಧೀರ ಪಡೆ
  • ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
  • ಕನ್ನಡದ ಕಂಪು
  • ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ,
  • ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?
Syndicate content

ಲೇಖಕರು

anoopkittur's picture

ಪರಿಚಯ

Am Anoop, working in a cooperative concern in Bangalore.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 57 ಅತಿಥಿಗಳು ಆನ್ಲೈನ್ ಇರುವರು.


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator