ಯೋಗಿ??
ಯೋಗಿ??
ಎನ್ನ ಜನ್ಮಕ್ಕೆ ಕಾರಣರೆನ್ದು ಗೌರವವಿಲ್ಲ
ಎನ್ನ ನೀರೆರೆದು ಸಾಕಿ ಸಲಹಿದರೆಮ್ಬ ನನ್ನಿಯಿಲ್ಲ
ಹಲವರಿಗೆ ನೆರಳಿತ್ತೆನೆಮ್ಬ ಬಿಗುಮಾನವಿಲ್ಲ
ಸ್ವಾರ್ಥಕ್ಕೆನ್ನ ಬಳಸಿದರೆಮ್ಬ ಕೋಪವಿಲ್ಲ
ಇನ್ದಲ್ಲ ನಾಳೆ ಸಾವು ಬರಬಹುದೆಮ್ಬ ಭಯವಿಲ್ಲ
ನಾ ಯೋಗಿಯಲ್ಲ,ತ್ಯಾಗಿಯೂ ಅಲ್ಲ
ಬೀದಿ ಕೊನೆಯ ಸಾಲುಮರ

- Login or register to post comments
- 608 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: