ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಸ್ವ ಸಹಾಯ ಸಹಕಾರಿಗಳು ಮಾಡಿದ ಕ್ರಾಂತಿ

November 18, 2005 - 3:53pm — anoopkittur

ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ. ಇಲ್ಲಿನ ಪ್ರತಿಭಾ ಮಹಿಳಾ ಸ್ವಕೃಷಿ ಪೊದಪು ಪರಸ್ಪರ ಸಹಾಯಕ ಸಹಕಾರ ಪರಿಮಿತ ಸಂಘಂ ಇಲ್ಲಿನ ಜನರಲ್ಲಿ ಅಂತಹ ಬದಲಾವಣೆ ತಂದಿದೆ.

"1991 ರಲ್ಲಿ ಸಿಡಿಎಫ್ ನಿಂದ ಆಗಮಿಸಿದ ಶ್ರೀಮತಿ ವಸುಂಧರಾ ಸ್ವ ಸಹಾಯ ಗುಂಪಿನ ಬಗ್ಗೆ ಮಾಹಿತಿ ನೀಡಿ ಅದರಲ್ಲಿ ತೊಡಗಲು ಪ್ರೇರೇಪಿಸಿದ ನಂತರ ಮೂರೇ ದಿನದಲ್ಲಿ 150 ಜನರನ್ನು ಸೇರಿಸಿಕೊಂಡು ಸಂಘವನ್ನು ಆರಂಭಿಸಿದೆವು. ನಂತರ ಪರಸ್ಪರ ಸಹಾಯ ಸಹಕಾರ ಕಾಯ್ದೆ ಜಾರಿಗೆ ಬಂದ ನಂತರ 1996 ರಲ್ಲಿ ನಮ್ಮ ಸಂಘವನ್ನು ಸಹಕಾರಿ ಸಂಸ್ಥೆಯಾಗಿ ನೋಂದಾಯಿಸಿಕೊಂಡು ಇನ್ನಷ್ಟು ಹುಮ್ಮಸ್ಸಿನಿಂದ ಚಟುವಟಿಕೆಯಲ್ಲಿ ತೊಡಗಿದೆವು" ಎಂದು ಅಧ್ಯಕ್ಷೆ ಶ್ರೀಮತಿ ಶೋಭಾರಾಣಿ ನೆನಪಿಸಿಕೊಳ್ಳುತ್ತಾರೆ.
ಈ ಸಂಘ ಆರಂಭವಾದ ನಂತರ ನಮ್ಮ ಹಳ್ಳಿಯಲ್ಲಿ ಖಾಸಗಿ ಲೇವಾದೇವಿ ವ್ಯವಹಾರ ಸಂಪೂರ್ಣವಾಗಿ ನಿಂತಿದೆ, ಜನರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಮಹಿಳೆಯರಲ್ಲಿ ಆತ್ಮ ವಿಶ್ವಾಸ ಎದ್ದು ಕಾಣುತ್ತಿದೆ. ಜಾತಿಗಳ ಆಧಾರದ ಮೇಲೆಯೇ ಗಲ್ಲಿಗಳಿರುವ ಈ ಗ್ರಾಮದಲ್ಲಿ ನಮ್ಮ ಸಂಸ್ಥೆ ಆರಂಭವಾದಾಗಿನಿಂದ ಕೇವಲ ಆರ್ಥಿಕ ಸುಧಾರಣೆಯಲ್ಲ, ಜಾತಿಗಳ ನಡುವಿನ ಕಂದಕವೂ ಕಡಿಮೆಯಾಗಿದೆ ಎಂದು ಶೋಭಾರಾಣಿ ಹೇಳುತ್ತಾರೆ. 31 ಡಿಸೆಂಬರ್ 2003 ರಂದಿನಂತೆ 2 ಲಕ್ಷ ರೂಪಾಯಿ ಲಾಭ ಗಳಿಸಿದ ಈ ಸಂಘದಲ್ಲಿ ಇಂದು ಒಟ್ಟು 836 ಸದಸ್ಯರ ಬಲ ಹೊಂದಿದ ಈ ಸಂಘದ ಸದಸ್ಯರು ಮಾಡುವ ಕಡ್ಡಾಯ ಉಳಿತಾಯದ ಹಣ ರೂ. 13, 35, 150 /- ಮತ್ತು ಒಟ್ಟು ವಿವಿಧ ರೀತಿಯ ಉಳಿತಾಯ ಖಾತೆಯಲ್ಲಿರುವ ನಿಧಿ ರೂ 33 ಲಕ್ಷ.
ಈ ರೀತಿಯ ಸ್ವ ಸಹಾಯ ಸಹಕಾರಿ ಸಂಘಗಳು ಒಟ್ಟು ಗೂಡಿ ತಮ್ಮದೇ ಆದ ಒಕ್ಕೂಟವನ್ನು ರಚಿಚಿಕೊಂಡಿವೆ. ಅಂತಹ ಒಂದು ಒಕ್ಕೂಟ ಕೊತ್ತ ಪಲ್ಲಿಯ ಶ್ರೀ ವಿಶ್ವ ಭಾರತಿ ಮಹಿಳಾ ಪೊದಪು ಸಮಿತಿ. 1991 ರಲ್ಲಿ ಆರಂಭವಾದ ಇದು 1995 ರಲ್ಲಿ ಪರಸ್ಪರ ಸಹಾಯಕ ಕಾಯ್ದೆ ಜಾರಿ ಬಂದ ನಂತರ ಅದರಡಿ ನೋಂದಾಯಿತವಾಗಿದೆ. 11 ಮಹಿಳಾ ಪರಸ್ಪರ ಸಹಾಯಕ ಸಂಘಗಳು ಸೇರಿ ರಚಿಸಿಕೊಂಡ ಒಕ್ಕೂಟವಿದು. ಈ ಒಕ್ಕೂಟಕ್ಕೆ ಎಲ್ಲಾ ಸಂಘಗಳು ತಮ್ಮಲ್ಲಿ ಸಂಗ್ರಹವಾದ ಕಡ್ಡಾಯ ಉಳಿತಾಯ ಹಣದ ಶೇ 5 ನ್ನು ಕಳುಹಿಸುತ್ತಾರೆ. ಒಕ್ಕೂಟವು ಸದಸ್ಯ ಸಂಘಗಳಿಗೆ ಅಗತ್ಯವಿದ್ದಲ್ಲಿ ಅವುಗಳಿಗೆ ಈ ಕಡ್ಡಾಯ ಉಳಿತಾಯದ 85 ರಷ್ಟು ಸಾಲ ಒದಗಿಸುತ್ತವೆ. ಈ ಒಕ್ಕೂಟದ ಒಟ್ಟು ನಿಧಿ ರೂ 2 ಕೋಟಿಗಳಷ್ಟು. ಎಲ್ಲಾ ಸದಸ್ಯ ಸಂಘಗಳು ತಮ್ಮಲ್ಲಿನ ಎಲ್ಲಾ ಹಣವನ್ನು ಈ ಒಕ್ಕೂಟದಲ್ಲಿರುವ ಖಾತೆಯಲ್ಲಿಡುತ್ತಾರೆ. ಒಕ್ಕೂಟ ಬ್ಯಾಂಕ್ ಖಾತೆ ಹೊಂದಿರುತ್ತದೆ. ಸದಸಯ ಸಹಕಾರಿಗಳ ಆಗು ಹೋಗುಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಈ ಒಕ್ಕೂಟದಲ್ಲಿ ಚರ್ಚೆಯಾಗಿ ಅವುಗಳಿಗೆ ಸಮಾಧಾನ ಕಂಡುಕೊಳ್ಳುವ, ಸದಸ್ಯರುಗಳಿಗೆ ಮಾರ್ಗದರ್ಶನ ನೀಡುತ್ತದೆ. ಇದುವೇ ನಿಜವಾದ ಸದಸ್ಯ ನಿಯಂತ್ರಣ. ಪ್ರಜಾರಾಜ್ಯ.

  • ಅನುಭವ ಕಥನ
~.~
  • Login or register to post comments
  • 875 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 20, 2005 - 4:17am — ಶ್ಯಾಮ ಕಶ್ಯಪ

ಖಂಡಿತ!

ಶ್ಯಾಮ ಕಶ್ಯಪ's picture

ಒಳ್ಳೆಯ ಮಾಹಿತಿ ಅನೂಪ್. ಹಲವು ಸ್ತ್ರೀ ಶಕ್ತಿ ಸಂಘಗಳನ್ನು ನಾನೂ ನೋಡಿದ್ದೇನೆ. ಪ್ರಜಾರಾಜ್ಯದ ಅಸ್ಥಿತ್ವ ನಿಂತಿರುವುದೇ ಇಂತಹ ಸಂಘಟನೆಗಳ ಕಾರ್ಯಾಚರಣೆಯಲ್ಲಿ.. ಆದರೆ ಹಲವು ಕಡೆ ಇಂತಹ ಸಂಘಗಳು ಕೇವಲ ಪುಸ್ತಕದಲ್ಲಿವೆಯೇ ಹೊರತು ವಾಸ್ತವಿಕವಾಗಿ ಇಂತಹ ಸಂಘಗಳಲ್ಲಿಯೂ ಶೋಷಣೆ ನಡೆಯುತ್ತಲೇ ಇದೆ. ಆದರೆ ನೀವು ಹೇಳಿದಂತಹ ಸಕ್ಸಸ್ ಸ್ಟೋರಿಗಳೇ ಪ್ರಜಾರಾಜ್ಯದ ಚಳುವಳಿಗೆ ಸ್ಪೂರ್ತಿ.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 21, 2005 - 1:10pm — anoopkittur

ಖಂಡಿತಾ ಸಾಧ್ಯ

anoopkittur's picture

ಪ್ರತಿಕ್ರಿಯಿಸಿದ್ದಕ್ಕೆ ಶ್ರೀ ನಾಡಿಗರಿಗೆ, ಶ್ರೀ ಶ್ರೀನಿವಾಸರಿಗೆ ಧನ್ಯವಾದಗಳು. ಇನ್ನು ಶ್ರೀ ಗೋಪೀನಾಥ ರಾವ್ ಇವರು ಕೇಳಿದ ಪ್ರಶ್ನೆ: ಕನ್ನಡ ಲೇಖಕ ಹಾಗೂ ಪ್ರಕಾಶಕರ ಗುಂಪು ಮಾಡುವುದು ಸಾಧ್ಯವೇ ಎಂಬುದಕ್ಕೆ ನಾನು ಹೇಳುವುದು ಖಂಡಿತಾ ಸಾಧ್ಯ. ಆದರೆ, ಒಂದು ಮಾತು ಸ್ಪಷ್ಟ. ಸ್ವ ಸಹಾಯ ಸಹಕಾರಿಗಳು ಸೇವಾ ಸಂಸ್ಥೆಗಳಲ್ಲ. ವ್ಯವಹಾರ ನಡೆಸುವ ಸಂಸ್ಥೆಗಳು. ವ್ಯವಹಾರವಿದ್ದ ಎಲ್ಲಾ ಚಟುವಟಿಕೆಗಳನ್ನು ಸಹಕಾರಿಯ ಅಡಿಯಲ್ಲಿ ತರಬಹುದು.
ತಾವೆಲ್ಲ ಸಹೃದಯತೆಯಿಂದ ಮುಂದೆ ಬಂದಲ್ಲಿ ನಿಮ್ಮ ಬೆಂಬಲಕ್ಕೆ ಸದಾ ಸಿದ್ಧ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2005 - 7:20pm — Gopinath Rao

ಕನ್ನಡ ಲೇಖಕರ ಸ್ವಸಹಾಯ ಗುಂಪು ಮಾಡಲು ಸಾಧ್ಯವೇ?

Gopinath Rao's picture

ಒಂದು ಚಿಂತನೆ: ಲೇಖಕರನ್ನೂ ಪ್ರಕಾಶಕರನ್ನೂ ಒಟ್ಟುಗೂಡಿಸಿ ಸಂಪದದ ಪ್ರಾಯೋಜಕತ್ವದಲ್ಲಿ ಒಂದು ಸ್ವಸಹಾಯ ಗುಂಪು ಮಾಡಿದರೆ ಹೇಗೆ?
- ಗೋಪೀನಾಥ ರಾವ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2005 - 7:56pm — tvsrinivas41

ಕಪ್ಪೆ ತಕ್ಕಡಿ

tvsrinivas41's picture

ಪ್ರಕಾಶಕರನ್ನು ಮತ್ತು ಲೇಖಕರನ್ನು ಒಟ್ಟಿಗೆ ಒಂದೇ ಮನೆಯಲ್ಲಿ ಸೇರಿಸೋಕ್ಕಾಗತ್ತಾ? ಪ್ರಯತ್ನವನ್ನಂತೂ ಮಾಡಬಹುದು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2005 - 8:32pm — hpn

Re: ಕನ್ನಡ ಲೇಖಕರ ಸ್ವಸಹಾಯ ಗುಂಪು ಮಾಡಲು ಸಾಧ್ಯವೇ?

hpn's picture

Gopinath Rao wrote:
ಒಂದು ಚಿಂತನೆ: ಲೇಖಕರನ್ನೂ ಪ್ರಕಾಶಕರನ್ನೂ ಒಟ್ಟುಗೂಡಿಸಿ ಸಂಪದದ ಪ್ರಾಯೋಜಕತ್ವದಲ್ಲಿ ಒಂದು ಸ್ವಸಹಾಯ ಗುಂಪು ಮಾಡಿದರೆ ಹೇಗೆ? - ಗೋಪೀನಾಥ ರಾವ್

ಸುಲಭದ ಮಾತಲ್ಲ. ಎಲ್ಲರೂ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರು ಒಂದೊಂದು ತರಹ. ಯಾವಾಗ ಯಾರು ಹೇಗೆ ನಡೆದುಕೊಳ್ತಾರೆ ಅನ್ನೋದೇ ತಿಳಿಯೋದಿಲ್ಲ. ಸ್ವಲ್ಪ ದಿನಗಳ ಹಿಂದೆಯೇ ಈ ರೀತಿಯ ಕಹಿ ಅನುಭವಗಳಾಗಿರುವಾಗ ಎಲ್ಲರನ್ನೂ ಒಟ್ಟು ಹಾಕುವ ಸಾಹಸಕ್ಕಂತೂ ನಾನು ಕೈ ಹಾಕುವುದಿಲ್ಲ. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2005 - 7:47pm — tvsrinivas41

ಒಳ್ಳೆಯ ಮಾಹಿತಿ

tvsrinivas41's picture

ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ತಾವು ನಬಾರ್ಡ್ ನಲ್ಲಿದ್ಡೀರಾ?

ಇಂತಹ ಇನ್ನೂ ಹೆಚ್ಚಿನ ಉತ್ತ್ತಮ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸಿ ಕೊಡುವಿರಾ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ
  • ಹಂಪಿ
  • ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
  • ಹಿರೋಷಿಮ ಮತ್ತು ನಾಗಸಾಕಿ ಇಂದು !
  • ಭಾರತದ ಎನ್.ಜಿ.ಓಗಳು: ಕಾರ್ಯಕ್ಷೇತ್ರಗಳು
Syndicate content

ಲೇಖಕರು

anoopkittur's picture

ಪರಿಚಯ

Am Anoop, working in a cooperative concern in Bangalore.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ
  • ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?
  • Splendours of Royal Mysore
  • A Bicycle in Bettalli - ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಿಂದ ಆಯ್ದ ಭಾಗದ ಇಂಗ್ಲಿಶ್ ಅನುವಾದ

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:01am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:59am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 10:58am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:57am
  • mahesha
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 10:56am
  • mahesha
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 10:53am
  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 85 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator