ಹಳೆಯ ನೆನಪೇ
ಹಳೆಯ ನೆನಪೇ
ಚುಚ್ಚದಿರು ಮತ್ತೆ ಮತ್ತೆ
ಮರೆಯಲೆಂದೇ ನಿನ್ನ
ಸೋತಿಹೆನು ಪ್ರತಿದಿನ
ಕಹಿಯಾದ ಘಟನೆಗಳ
ಹಳೆಯ ಪುಟಗಳಲಿ
ಮುಚ್ಚಿಟ್ಟು ಆಳದಲಿ
ಮತ್ತೆ ಎದ್ದು ಬರದಿರಲೆಂದು
ಹತ್ತಾರು ವರುಷಗಳಿಂದ
ಹಲವು ಊರುಗಳದಾಟಿ
ನಿತ್ಯ ಹಸಿರನು ಹೊತ್ತು
ನಿನ್ನ ಮರೆಯಲೆಂದೇ
ನಿನ್ನ ತೊರೆಯಲು ನಾ
ಮರಳಿ ಯತ್ನವ ಮಾಡೆನು
ಇರುವೆ ನಿನ್ನ ಜೊತೆಗೇ
ನಾ ಮರೆಯಾಗುವವರೆಗೆ

- Login or register to post comments
- 254 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಹಳೆಯ ನೆನಪೇ
ಪದ್ಯ ಚೆನ್ನಾಗಿದೆ. ನಿಮ್ಮ ಕೆಲವು ಕವನಗಳನ್ನು ಓದಿದೆ, ಇಷ್ಟವಾದವು.
ಉ: ಹಳೆಯ ನೆನಪೇ
ಪೂರ್ಣಿಮಾ ಅವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....
ನಿಮ್ಮ ಪಯಣ ಹಾಗು ಮಳೆ ಎಂದರೆ... ಕವನಗಳು ಸೊಗಸಾಗಿವೆ.