Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ

ಬರ್ತ-ಮಾಯ್ಸರ ಹರಟೆ !!

December 8, 2007 - 6:03pm — ವೈಭವ

ಬರ್ತ-ಮಾಯ್ಸರ ಹರಟೆ
-----------
ಮಾಯ್ಸ: ಏನಣ್ಣ, ಬರ್ತಣ್ಣ ಏನ್ ಪತ್ತೇನೆ ಇಲ್ಲ. ಎಲ್ಗೆ ಓಗಿದ್ದಣ್ಣ?
ಬರ್ತ:  ಇದ್ಯಾಕಣ್ಣ ನಾನು ನಿಂಗೆ ದೂರುಲಿ ಮಾಡಿರ್ನಿಲ್ವ  ಕಿಸುವೊಳಲಿಂದ. ಯೋಳಿದ್ನಲ್ಲಪ್ಪ ತಿರುಳ್ಗನ್ನಡ ನಾಡು,ಬೇಂದ್ರೆ ನಾಡು ಸುತ್ತಕ್ಕೆ ಹೊಂಟಿವ್ನಿ ಅಂತ. ನೀನೊಳ್ಳೆ
ಮಾಯ್ಸ: ಹೂಂ. ಈಗ ಗೆಪ್ತಿ ಬಂತು. ಎಂಗಯ್ತಣ್ಣ ನಮ್ ಪುಲಿಕೇಸಿ ಆಳಿದ ನೆಲ ?
ಬರ್ತ: ಚಂದಾಗೈತೆ. ಏನ್ ಗವಿ, ಏನ್ ಗುಡಿಗಳು. ಬದುಕಿದ್ ಮ್ಯಾಕೆ ಒಂದ್ ಕಿತ ನೋಡ್ಲೆ ಬೇಕು ಕಣಣ್ಣ. ಅಂಗೆ ಗವಿಗಳ್ನೇ ಕೊರದ್ಬುಟ್ಟವ್ರೆ ಕಣಣ್ಣ. ಆಗಿನ ಕಾಲ್ದಾಗೆ  ನಮ್ಮವ್ರು (ಕನ್ನಡಿಗರು) ಬೊ ಸಂದಾಕ್ ಕೆಲ್ಸ ಮಾಡೋರೆ. ನಾವು ಇವುನ್ನೆಲ್ಲ ನೋಡ್ ಕಲತ್ಕಬೇಕು.
ಮಾಯ್ಸ: ಅದಿರ್ಲಿ ಕಣಣ್ಣ. ಅದೆಲ್ಲೆಲ್ಲಿ ಓಗಿದ್ದೆ ಅಂತ ವಸಿ ಬಿಡ್ಸಿ ಯೋಳ್ಬಾರ್ದ ಅಂತಿನಿ. ನೀ ಒಳ್ಳೆ ಬಾಶ್ಣ ಬಿಗೀತ ಕುಂತ್ಕಬುಟ್ಟಲ್ಲ
ಬರ್ತ: ಯೋಳ್ತಿನಿ ಇರಣ್ಣ. ಮೊದಲು ಪಟ್ಟದಕಲ್ಲಿಗೆ ಹೋಗಿದ್ದೆ. ಇದರ ಅಳೆ ಯೆಸರು 'ಕಿಸುವೊಳಲು' ಅಂತ. ಕಿಸು ಅಂದ್ರೆ ಕೆಂಪು ಹೊಳಲು ಅಂದ್ರೆ ಪಟ್ಟಣ/ನಗರ. ಅಲ್ಲಿ ಕೆಂಪ್ ಕಲ್ಗೊಳು ಮಸ್ತನಾಗೆ ಅವಂತೆ. ಅದಕ್ಕೆ ಆ ಯೆಸರು ಬಂದಿರದು. ಅಲ್ಲಿ ಕಲ್ನಾಗೆ ಅಂಗೆ ವತ್ತಟಿಯಿಂದ(ಒಂದ್ ಕಡೆಯಿಂದ) ಕೆತ್ತಬುಟ್ಟವ್ರೆ. ಇದು ಇಂತ ವೊಳಲಾಗಿತ್ತು, ಇಲ್ಲಿ ಇಂತಿಂತವರು ಅಱ(ದಾನ) ಕೊಟ್ಟಿದ್ರು ಗುಡಿಗೊಳ್ನ ಕಟ್ಸದುಕ್ಕೆ. ಬಸಿರ್ಗುಡಿ(ಗರ್ಬಗುಡಿ) ಕಟ್ದವನು ಇಂತವನು ಕಯ್ಸಾಲೆ ಕಟ್ದವ್ನು ಇಂತವನು. ಇಂತವ್ನು ಮುಂದಾಳತ್ವ  ವಯಿಸ್ಕಂಡಿದ್ದ ಅಂತ. ಅಲ್ಲಿ ಇಲ್ಲ ಅಂದ್ರೂ ಅಯ್ದಾರು ಗುಡಿಗಳವೆ ಕಣಣ್ಣ. ಅದ್ರಲ್ಲಿ ಒಂದು ಇಸ್ಯ ನಾಮ್(ನಾವು) ಗೆಪ್ತಿ ಇಟ್ಕಬೇಕು ನೋಡ್ ಮತ್ತೆ.
ಮಾಯ್ಸ: ಅದೇನಪ್ಪ ಅಂತಾ ಇಸ್ಯ
ಬರ್ತ: ಅಲ್ಲಿ ನಮ್ಮ ತೆಂಕು(ದ್ರಾವಿಡ) ಬಗೆಯಲ್ ಗುಡಿ ಕಟ್ಟವ್ರೆ ಮತ್ತು ಬಡಗು(ಆರ್ಯನ್) ಬಗೆಯಲ್ಲೂ ಗುಡಿ ಕಟ್ಟವ್ರೆ ಮತ್ತೆ ಇವೆಲ್ಲದ್ರ ನಡು ಗೆಲ್ಕಂಬ(ವಿಜಯ ಸ್ತಂಬ)ಬೇರೆ ನೆಟ್ಟವ್ರೆ  ಅದ್ರ್ ಮ್ಯಾಗು ಅಂಗೆ ಅಳೆಗನ್ನಡದಾಗೆ ಅಂಗೆ ಕೆತ್ಬುಟ್ಟವ್ರೆ. ಇವುನ್ನೆಲ್ಲ ನೋಡ್ಬುಟ್ಟು ನಂಗೆ ವಸಿ ಬೇಜಾರ್ ಆಯ್ತಪ್ಪ.
ಮಾಯ್ಸ: ಇದೇನಣ್ಣ ಇಂಗತ್ತೀಯ.
ಬರ್ತ: ಹೂಂ, ಮತ್ತೆ. ಒಂದೂ..ಅವುನ್ನೆಲ್ಲ ನೋಡಕ್ಕೆ ಬಂದಿದವ್ರಲ್ಲಿ ಹೆಚ್ಚು ಬಿಳಿಯರೆ(ಹೊರದೇಸಿಗಳೇ). ನಮ್ ದೇಸ್ ದವರಿಗೆ ಅವ್ರಿಗೆ ಇರ ಅಶ್ಟು ಹುರುಪಿಲ್ವಲ್ಲ ಅಂತ  ಎರಡು, ಅಲ್ಲಿ ಬರೆದಿರದ್ನೆಲ್ಲ ಓದಕ್ಕೆ ಆಗಕಿಲ್ವಲ್ಲ ಅಂತ.
ಮಾಯ್ಸ: ಇರಲಿ. ಇಂಗೆ ನಡು ಬ್ಯಾಸರ ಮಾಡ್ಕೋಬೇಡ. ಅದೇನ್ ಯೋಳ್ತಿದ್ದೊ ಅದನ್ನೇ ಮುಂದ್ವರೆಸು
ಬರ್ತ: ಈ ಕಿಸುವೊಳಲು ಅಂತಿಂತದಲ್ಲಪ್ಪ.. ಕವಿರಾಜಮಾರ್ಗದಾಗೆ ಇದನ್ನ ತಿರುಳ್ಗನ್ನಡ ನಾಡಿನ ಒಂದು ಗಡಿ ಅಂತ ಗುರುತ್ಸವ್ರೆ.
ಮಾಯ್ಸ: ಅದು ನಂಗೂ ಗೊತ್ತು. ಅದಕ್ಕೆ ಪಟ್ಟದಕಲ್ಲು ಅಂತ್ಯಾಕೆ ಯೆಸರ್ ಬಂತು ?
ಬರ್ತ: Sad ಓ ಅದಾ. ನಾನ್ ತಿಳಿದ್ಕೊಂಡ ಮಟ್ಟಿಗೆ ಬಾದಮಿನೇ ನಮ್ ಚಾಲುಕ್ಯರ ಅರಸೊಳಲು(ರಾಜಧಾನಿ). ಆದ್ರೆ ಅಲ್ಲಿ ಯಾವ್ ಹೊಳೆನೂ ಪಕ್ಕದಲ್ಲಿ ಹರಿಯಾಕಿಲ್ಲ  ಅದ್ರೆ ಪಟ್ಟದಕಲ್ಲಿನಾಗೆ ಪಕ್ಕದಲ್ಲೆ ನೆಮ್ಮದಿಯಿಂದ ಮಲಪ್ರಬೆ(ಮಲ್ಲಪ್ರಬೆ) ಹರೀತಾಳೆ. ಅದು ತೆಂಕಿನಿಂದ ಬಡಗಿಗೆ. ಅಲ್ಲಿನ ಗೈಡ್ ಯೋಳ್ದಂಗೆ ಇದೊಂದೆ ಅಂತೆ ತೆಂಕಿನಿಂದ ಬಡಗಿನ ಕಡೆ ಹರಿಯೋದು. ಅದಕ್ಕೆ ಇಲ್ಲೇ ಬಂದು ಚಾಲುಕ್ಯರು ಪಟ್ಟ ಮಾಡ್ಸಕಂಡ್ ಓಗ್ತಾ ಇದ್ರಂತೆ. ಅವರಂತೆ ರಟ್ಟಕೂಟರು ಮತ್ತು ಇನ್ನಿತರ ಅರಸರು ಇಲ್ಲೆ ಪಟ್ಟ ಮಾಡ್ಸಕಳ್ಳಕೆ ಸರಿಯಾದ ತಾಂವ ಅಂತ ಇಲ್ಲೆ ಬರ್ತ ಇದ್ರಂತೆ.
ಮಾಯ್ಸ: ಓ ....ಅಂಗ  Smiling

.......ಮುಂದುವರಿಯುವುದು

 

Ornamental seperator
  • Login or register to post comments
  • 224 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ನಾನು ಯಾವ ಆತ್ಮ
  • ಪುರದ ಪಾಪಿಗಳು
  • ಗಂಡು-ಗಾದೆ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾರಂತರ ಜೀವಂತ ಪಾತ್ರಗಳು ೬ (೨)
  • ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
  • ಕಾರಂತರ ಜೀವಂತ ಪಾತ್ರಗಳು ೬ (೧)
  • ಗಾಂಧಿ ಎಂಬ ರೂಪಕ, ಜೀವನವೆಂಬ ನಾಟಕ!
  • ವಿಂಡೋಸ್ ಪರ ಸರಕಾರಗಳ ಲಾಬಿ!
  • ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ," ಡಾ. ಎಮ್. ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಏರ್ಪೋರ್ಟ್," ಎಂದು ಹೆಸರಿಡಬೇಕೆಂಬುದು ನಮ್ಮೆಲ್ಲರ ಕಳ-ಕಳಿಯ ಮನವಿ" !
  • ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಯು ಮಿ ಔರ್ ಹಮ್
    May 22, 2008 - 12:14am
  • hamsanandi
    ಉ: ಉಳ್ಳವರು ಶಿವಾಲಯವ ಮಾಡುವರು
    May 21, 2008 - 10:02pm
  • hamsanandi
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 9:55pm
  • Sunil Jayaprakash
    ಉ: ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
    May 21, 2008 - 9:28pm
  • ಕರಿ ತವಳೆ
    ಉ: ಚಾಗದ ಭೋಗದಕ್ಕರದ...
    May 21, 2008 - 8:26pm
  • harshab
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 8:01pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 21, 2008 - 7:52pm
  • Sunil Jayaprakash
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 7:34pm
  • ವೈಭವ
    ಉ: ಕಲಿತರೆ ಹೀಗೆ...
    May 21, 2008 - 7:32pm
  • ವೈಭವ
    ಉ: ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
    May 21, 2008 - 7:21pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator