ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಪಿಳ್ಳನ ಸಪೋಟ ಪ್ರಸಂಗ...

December 10, 2007 - 2:26pm — ymravikumar

ಪಿಳ್ಳನ ಸಪೋಟ ಪ್ರಸಂಗ...
-----------------------

ಒಂದು ದಿನ ನಮ್ಮ ಯಡಗೊಂಡನಹಳ್ಳಿ ಪಿಳ್ಳ ರಸ್ತೇಲಿ ನಡ್ಕೋಂಡು ಮನೆಕಡೆಗೆ ಹೊರಟಿದ್ದ. ಅವನು ರಸ್ತೇಲಿ ನಡೀಬೇಕಾದ್ರೆ ಅವನ್ ಕಣ್ಣ್ ಮಾತ್ರ ನೆಲದ ಮೇಲೆ ಇರಲ್ಲ. ರಸ್ತೆ ಅಕ್ಕ ಪಕ್ಕ ಕೆಕ್ಕರಿಸ್ತಾ ಇರುತ್ತೆ. ಹಿಂಗೇ ಕೆಕ್ಕರಿಸ್ತಾ ಬರಬೇಕಾದ್ರೆ ಅವನ ಕಣ್ಣು ಒಬ್ಬ ಹಣ್ಣು ಮಾರೋವ್ನ ಮೇಲೆ ಬಿತ್ತು ನೋಡಿ. ಹಣ್ಣ್ ಮಾರೋವ್ನ ಹತ್ತಿರ ಹೋಗಿ ಯಾವ ಹಣ್ಣು ತಗೋಳೋದು ಅಂತ ಯೋಚನೆ ಮಾಡ್ತ ಇದ್ದಂಗೇ ಅವನ ಕಣ್ಣಿಗೆ ಬಿದ್ದಿದ್ದು ಸಪೋಟ ಹಣ್ಣು. ಘಮ ಘಮ ಅಂತ ವಾಸನೆ ಇಲ್ದಿದ್ರೂ ಪಿಳ್ಳನ ಬಾಯಲ್ಲಿ ಜೊಲ್ಲು ಸುರಿಯಾಕೆ ಶುರುವಾಯ್ತು. ಎರಡು ರುಪಾಯಿ ಕೊಟ್ಟು ಒಂದೇ ಒಂದು ಹಣ್ಣ್ ತಗೊಂಡ ಆಸಾಮಿ ಸ್ವಲ್ಪ ಕಂಜೂಸೇ ಅನ್ನಿ. ಅದನ್ನ ಮನೇಗೆ ತಗೊಂಡು ಹೋದ್ರೆ ಅಂಕು ಸುಬ್ಬಿ ಹೆಂಡ್ತಿ ಕಾಟ ಅಂತ ದಾರೀಲೆ ತಿಂತಾ ಮನೆಕಡೆಗೆ ಹೊರಟ. ಇವನ ಗ್ರಾಚಾರ ನೆಟ್ಟಗಿಲ್ಲ ನೋಡಿ ಇವನು ಇನ್ನೇನು ತಿಂದು ಮುಗಿಸ್ಬೇಕು ಅನ್ನೊಷ್ಟರಲ್ಲಿ ಮನೆ ಬಂದೇಬಿಡ್ತು. ಸುಬ್ಬಿ ಬಾಗಲಲ್ಲೆ ನಿಂತಿದ್ದು ಇವನ ಕಣ್ಣಿಗೆ ಬಿತ್ತು. ಸಿಕ್ಕನೊ, ಕೆಟ್ಟನೋ ಅಂತ ಕೈಲಿದ್ದ ಹಣ್ಣನ್ನ ಬೀಜಾ ತೆಗೀದೇನೆ ಕೌರಿ ತಿಂದುಬಿಟ್ಟ. ಸಪೋಟ ಬೀಜ ಹೊಟ್ಟೆ ಒಳಕ್ಕೋಗಿದ್ದು ನಿದಾನಕ್ಕೆ ಗೆಪ್ತಿ ಬಂದ್ರೂ..ಹೆಂಡ್ತಿ ಎದುರಿಗಿದ್ದ ಪರಿಣಾಮ ಮರೆತುಬಿಟ್ಟ.

ಇನ್ನ ರಾತ್ರಿಗೆ ಸುಬ್ಬಿ ಮಾಡಿದ್ದ ಗೊಡ್ಡು ಕಾರದಾಗೆ ಇಟ್ಟ್ ತಿಂದು ಮಲ್ಕೊಂಡ. ಚೆನ್ನಾಗಿ ತಿಂದಿಂದ್ದ ಅಂಕು ಸುಬ್ಬಿ ಬೇಗಾನೆ ಗೊರಕೆ ಹೊಡೆಯಕ್ಕೆ ಶುರು ಮಾಡಿದ್ಲು. ಸುಬ್ಬೀ ಗೊರಕೆ ಸದ್ದು ಕೇಳ್ತಾ ಇದ್ದಂಗೆ ಪಿಳ್ಳನಿಗೆ ಬೀಜ ನುಂಗಿದ್ದ ಗೆಪ್ತಿ ಬಂದುಬಿಡ್ತು. ಆ ಬೀಜ ಕಕ್ಕಾಕೆ ಪಿಳ್ಳ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಪಾಪ. ಬೋರಲು ಮಲಗಿದ.., ಕ್ಯಾಕರಿಸಿ ಕ್ಯಾಕರಿಸಿ ಹುಗ್ದಾ.., ತಲೆ ಕೆಳಕ್ಕಾಕಿ ಕಾಲು ಮೆಲೆ ಎತ್ತಿ ಏನು ಮಾಡಿದ್ರೂ ಬೀಜ ಉದರೇ ಇಲ್ಲ. ಥೂ ಕಳ್ಳನನ್ ಮಗನ್ ಬೀಜ ಅಂತ ದಿಗಿಲ್ ದಿಗಿಲಾಗೆ ಮಲ್ಕೊಂಡ. ಆ ಬೀಜ ಒಳಗೋಗಿದ್ದು ಉಳಾತರ ಬುಳು ಬುಳು ಅಂತ ಓಡಾಡೊ ತರ ಅನ್ನಿಸ್ತು ಪಿಳ್ಳನಿಗೆ. ಈ ದರಿದ್ರ ಬೀಜ ಮೊಳಕೆ ಹೊಡೆದ್ರೆ ಏನಪ್ಪ ಗತಿ ಅಂತ ಅನ್ಕೊಂಡು ಕಷ್ಟಪಟ್ಟು ಕಣ್ ಮುಚ್ಚಿದ...

ಅಯ್ಯೋ ಅಯ್ಯಯ್ಯೋ ಏಳ್ರೀ ಮ್ಯಾಲಕ್ಕೆ..ಏಳ್ರೀ ಮ್ಯಾಲಕ್ಕೆ.. ನಿಮ್ ಬಾಯಾಗ ಎಂತದ್ದೊ ಮೊಳಕೆ ಕಾಣಿಸ್ತಾ ಅಯ್ತೆ...ಅಂತ ಸುಬ್ಬಿ ಸುಪ್ರಭಾತ ಶುರುವಾಯ್ತು. ಸುಪ್ರಭಾತ ಕೇಳ್ತಿದ್ದಂಗೇ ಪಿಳ್ಳ ಎದ್ದು ನೋಡಿದ್ರೆ ಮೊಳಕೇನೆ!, ಬಾಯಲ್ಲಿ ಬಂದುಬಿಟ್ಟಯ್ತೆ!. ನಮ್ ಪಿಳ್ಳನಿಗೆ ಒಂದು ಕಡೆ ಮೊಳಕೆ ಭಯ..ಇನ್ನೊಂದು ಕಡೆ ಸುಬ್ಬೀಗೆ ತಿಳೀದಂಗೆ ಸಪೋಟ ತಿಂದಿದ್ದ್ ಗೊತ್ತಾದ್ರೆ ಅಂತ ಭಯ. ಸುಬ್ಬಿ ಏನೇನೊ ಮಾಡಿ ಕೀಳಾಕ್ ಪ್ರಯತ್ನ ಪಟ್ಟು ಮೊಳಕೇನ ಮುರಿದಾಕಿದ್ಲು. ಬಾಯಲ್ಲಿ ಮುರಿಯೊಷ್ಟೊತ್ತಿಗೆ ಕಿವೀಲಿ ಇದ್ದ ಮೊಳಕೆ ಕಾಣಿಸ್ತು. ಹೀಗೆ ಮುಖದಲ್ಲಿದ್ದ ಸಪ್ತ ರಂಧ್ರಗಳಲ್ಲಿ ಮೊಳಕೆ ಈಚೆ ಬಂದಿತ್ತು. ಬೇರು ಮಾತ್ರ ಕೆಳಗಡೆ ಬಿಟ್ಟಿತ್ತು ಸೊಂಪಾಗಿ ಗೊಬ್ಬರ ಸಿಕ್ಕಿದ್ದ್ರಿಂದ !.

ಹೊರಗಡೆ ಜನಕ್ಕೆ ಹೇಳಕ್ಕ್ ನಾಚಿಕೆ ಪಾಪ. ಅದಕ್ಕೆ ಪಿಳ್ಳ ಈಚೇನೆ ಬಂದಿಲ್ಲ, ಅದಕ್ಕೆ ಸುಬ್ಬೀದು ಸಹಾಯ ಇತ್ತು ಅನ್ನಿ. ಹಾಗೇ ಒಂದು ವಾರ ಕಳೆಯೊಷ್ಟೊತ್ತಿಗೆ ಅದ್ಯಾವ ಗೊಬ್ಬರದ ಮಹಿಮೇನೊ ಸಪೊಟ ಗಿಡ ಮಾತ್ರ ಮರದಂತೆ ಬೆಳೆದುಬಿಡ್ತು. ಇನ್ನ ಸುಮ್ನೆ ಇದ್ರೆ ಪ್ರಾಣಕ್ಕೆ ಅಪಾಯ ಅಂತ ಆಸ್ಪತ್ರೆಗೆ ಹೋದ್ರು. ಸೊಂಪಾಗೆ ಬೆಳೆದ ಸಪೋಟ ಮರ ನಡ್ಕಂಡು ಹೋಗ್ತಾ ಇದ್ರೆ ಜನಕ್ಕೆ ಆಶ್ಚರ್ಯ. ಪಿಳ್ಳ ಮರದ ಸಂದೀಲಿ ಕಾಣಿಸ್ದೆ ಇದ್ರು ನಾಚಿಕೆ ಇತ್ತು ಅವನಿಗೆ. ಸೊಂಪಾಗಿ ಬೆಳೆದ ಮರ ಅಂದ ಮೇಲೆ ಹೂವು, ಕಾಯಿ ಬೇಗಾನೆ ಶುರುವಾಗಿತ್ತು ಅನ್ನಿ. ಅದಕ್ಕೇ ಹೈಕಳೆಲ್ಲ ಪರಿಷೆ ತರಾ ಗುಂಪಾಗಿ ಇವರಿಂದೆ ಇದ್ರು. "ಈಗ ಕೈ ಮೀರಿಹೋಗಿದೆ, ಇನ್ನು ಸ್ವಲ್ಪ ಮುಂಚೆ ಬರಬೇಕಿತ್ತು, ಈಗ ಇವನ ಜೀವ ಬೇರೆ ಅಲ್ಲ, ಮರದ ಜೀವ ಬೇರೆ ಅಲ್ಲ, ಮರಾ ಕಡಿದ್ರೆ ಇವನ ಜೀವಕ್ಕೆ ಅಪಾಯ" ಅಂದುಬಿಟ್ರು ಡಾಕ್ಟರ್ ದೊಡ್ಡಣ್ಣ.

ಸುಬ್ಬೀಗೆ ಆಕಾಶಾನೆ ತಲೆಮೇಲೆ ಬಿದ್ದಂಗಾಯ್ತು. ಯಾಕಂದ್ರೆ ಮರಕ್ಕೆ ಮತ್ತೆ ಪಿಳ್ಳನಿಗೆ ಇಬ್ಬರಿಗಾಗೊಷ್ಟು ಬೇಯಿಸಾಕೋದು ಅವಳ ಕಷ್ಟ. ಅಷ್ಟರಲ್ಲೆ ನಮ್ ಪ್ಲಾನ್ ಪಾಪಣ್ಣ ಪ್ರತ್ಯಕ್ಷ ಆಗಿ ಸುಬ್ಬೀಗೆ ಸೂಪರ್ ಐಡಿಯಾ ಕೊಟ್ಟ ನೋಡಿ. ರೆಂಬೆ ಜೌರಿದರೆ ನಿನಗೆ ಸ್ವಲ್ಪ ಅನುಕೂಲ ಆಗಬಹುದು ಅಂದ ಪಾಪಣ್ಣ. ಇನ್ನೇನು ಅದನ್ನೇ ಪ್ರಯೋಗ ಮಾಡೊಣ ಅನ್ನೊಷ್ಟೊತ್ತಿಗೆ ಪರಿಸರ ಪ್ರ್‍ಎಮಿ ಮಿಟುಕಲಾಡಿ ಪ್ರಮೀಳ ಪ್ರತ್ಯಕ್ಷ ಆದ್ಲು. ಮರ ಕಡಿಯೋದು, ಪಸಲಿರೊ ಮರದ ರೆಂಬೆ ಜೌರ್‍ಓದು ಕಾನೂನು ವಿರುದ್ದ ಅಂತ ಕೋರ್ಟಲ್ಲಿ ಕೇಸ್ ಹಾಕಿ ಸ್ಟೇ ಆರ್ಡರ್ ತಂದೇ ಬಿಟ್ಲು. ಪಿಳ್ಳನಿಗೂ ಒಂತರ ರೆಂಬೆ ಜೌರದೆ ಇದ್ರೆ ಖುಷೀನೆ, ಯಾಕಂದ್ರೆ ರೆಂಬೆ ಜೌರೊವಾಗ ಇವನದ್ದು ಏನಾದ್ರು ಜೌರಿಬಿಟ್ರೆ ಅಂತ ದಿಗಿಲು!. ಪಿಳ್ಳ ಒಳಗೊಳಗೇ ಪ್ರಮೀಳನಿಗೆ ಥ್ಯಾಂಕ್ಸ್ ಹೇಳಿಕೊಂಡ.

ಈ ಮರದ ಗಂಡನ ಜೊತೆ ಏಗಿ ಏಗಿ ಸಾಕಗಿದ್ದ ಸುಬ್ಬಿ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗಿ, ಏನಾದ್ರು ಮಾಡಿ ಕೊನೆಪಕ್ಷ ರೆಂಬೆ ಜೌರಕ್ಕಾದ್ರು ಅನುಕೂಲ ಮಾಡಿಸಿ ಅಂತ ಅತ್ಕಂಡ್ಲು. ಹಾಗು ಹೀಗು ಕೋರ್ಟ್ ಎಲ್ಲ ವಾದ ವಿವಾದ ಕೇಳಿ, ಸುಬ್ಬಿ ಮೇಲೆ ಕರುಣೆ ತೋರಿಸಿತು. "ಪಸಲೆಲ್ಲ ಕಿತ್ಕೊಂಡು ರೆಂಬೆ ಜೌರಬಹುದು, ಮತ್ತೆ ಯುಗಾದಿಗೆ ಹೇಗಿದ್ರೂ ಮರಚಿಗುರುತ್ತೆ" ಅಂತ ತೀರ್ಪು ಕೊಟ್ಟೇಬಿಡ್ತು. ಪಸಲೆಲ್ಲ ಕಿತ್ಕೊಂಡು ಒಂಚೂರು ಕಾಸು ಮಾಡಿಕೊಂಡ ಸುಬ್ಬಿ ರೆಂಬೆ ಜೌರಕ್ಕೆ ಜನ ಸೇರಿಸೇಬಿಟ್ಲು. ಇನ್ನೇನು ಮರ ಕಡಿಯೋನು ಪಿಳ್ಳನ ಕಿವೀಗೆ ಸರಿಯಾಗಿ ಮಚ್ಚಲ್ಲಿ ಹೊಡೀಬೇಕು ಅನ್ನೊಷ್ಟರಲ್ಲಿ ಎಚ್ಚರ ಆಯ್ತು ಕನಸಲ್ಲಿ ಇದ್ದ ಪಿಳ್ಳನಿಗೆ ಎರಡಕ್ಕ್ ಹೋಗಕ್ಕೆ Smiling.

ಆಮೇಲೆ ಬೀಜ ವಾಪಸ್ಸು ಬಂದ ಖುಷಿ ತಡಿಲಾರದೆ ನಡೆದಿದ್ದೆಲ್ಲ ಕನಸಿನ ಸಮೇತ ಸುಬ್ಬೀಗೆ ಹೇಳ್ದ ನೋಡಿ. ಎರಡು ನಿಮಿಷ ನಗೂ ತಡೆಯಕ್ಕಾಗದ ಸುಬ್ಬಿ ನಕ್ಕೂ ನಕ್ಕೂ, ತನಗೆ ಕೊಡದೆ ಕದ್ದು ಒಬ್ಬನೆ ಸಪೋಟ ತಿಂದಿದ್ದು ಗೆಪ್ತಿ ಆಗ್ತಿದ್ದಂಗೇ ಪಿಳ್ಳನಿಗೆ ಜಾಡಿಸಿ ಒದ್ದಳು ನೋಡಿ. ಬಿದ್ದ ಒದೇಗೆ ಪಕ್ಕೆಲಬು ಮುರಿದ ಪಿಳ್ಳ ಈಗ ಬೋರಿಂಗ್ ಆಸ್ಪತ್ರೇಲಿ ಇದ್ದಾನೆ. ಹೋಗಿ ನೋಡ್ಕೊಂಡು ಬನ್ನಿ ಪಾಪ....!!

(ರವಿಕುಮಾರ ವೈ.ಎಂ)

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 307 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 11, 2007 - 2:14pm — Sunil Jayaprakash

ಉ: ಪಿಳ್ಳನ ಸಪೋಟ ಪ್ರಸಂಗ...

Sunil Jayaprakash's picture

ಈಗಷ್ಟೇ ನೋಡ್ಕೊಂಡ್ ಬಂದೆ. ಆದರೆ ಒಂದು ವಿಷಯ ಗೊತ್ತಾ, ಆ ದಿನ ಏನಾಗಿತ್ತು ಅಂದ್ರೆ, ಪಿಳ್ಳ ಸಪೋಟ ತಿಂದಿದ್ನಲ್ಲಾ ಅದೇ ದಿನ ಮಿಟಕಲಾಡಿ ಸುಬ್ಬಿ ಗಂಡನಿಗೆ ಕೊಡದೆ, ಬಬ್ಬಲ್ಗಮ್ ತಿಂದಿದ್ಲಂತೆ. ಆ ಕಾರಣದಿಂದಾಗಿ ಇವಳೂ ಕೂಡ ಅದೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾಳೆ. ಆಸ್ಪತ್ರೆಯ ಈ ಕಡೆ ಹಾಸಿಗೆಯಲ್ಲಿ ಒಣಕಲುತಿಮ್ಮ ಪಿಳ್ಳ ಆ ಕಡೆ ಹೆಬ್ಬಂಡೆ, ಗಜಗಮನೆ ಸುಬ್ಬಿ. ಇಂಥ ಸಂಸಾರ ನೋಡಲು ಎರಡು ಕಣ್ಣು ಸಾಲದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 11, 2007 - 2:35pm — ymravikumar

ಉ: ಪಿಳ್ಳನ ಸಪೋಟ ಪ್ರಸಂಗ...

ymravikumar's picture

ತುಂಬಾ ದನ್ಯವಾದಗಳು ಸಾರ್ ಸುಬ್ಬಿ ವಿಷ್ಯ ತಿಳಿಸಿದ್ದಕ್ಕೆ Smiling :-)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕದ್ದು ಕದ್ದು ನೋಡಿ
  • ಹತ್ತಿ ಗಿಡ ; ಅಲ್ಲ ...ಮರದಲ್ಲಿ, ....ಹತ್ತಿಕಾಯ್ ಬಿಟ್ಟಿದೆ. ನಿಮಿಗ್ ಕಾಣ್ಸ್ತಾಇದ್ಯಾ ?
  • ಸಂಚಿ ನಾಗಿ ಮತ್ತು ಮೂರು ತಲೆಮಾರು
  • ಲವ್ ಅಂದ್ರೆ?
  • ಏಕಾಕ್ಷರೀ
Syndicate content

ಲೇಖಕರು

ymravikumar's picture

ಪೂರ್ಣ ಹೆಸರು
ರವಿಕುಮಾರ ವೈ.ಎಂ

ಪರಿಚಯ

Call on 9880029811

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 6:08pm
  • Sunil Jayaprakash
    ಉ: ಬಾಲ್ಯದ ನೆನಪುಗಳು
    September 8, 2008 - 6:07pm
  • Sunil Jayaprakash
    ಉ: ದಿನಕ್ಕೊಂದು ಪದ
    September 8, 2008 - 6:05pm
  • Shivakumar.Revadi
    ಉ: ದಿನಕ್ಕೊಂದು ಪದ
    September 8, 2008 - 6:01pm
  • Shivakumar.Revadi
    ಉ: ಬಾಳ್, ಬಾೞ್
    September 8, 2008 - 5:57pm
  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 155 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator