ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಭರತೇಶ ವೈಭವದಲ್ಲಿ ಬೊಂಬೆಯಾಟ - ಕಲ್ಪು ೫

December 15, 2007 - 6:57pm — Sunil Jayaprakash

ಭರತೇಶ ವೈಭವದಲ್ಲಿ "ಉತ್ತರ-ನಾಟಕ" ಎಂಬ ಒಂದು ಸಂಧಿ ಬರುತ್ತದೆ. ಕರ್ನಾಟಕ ಸಂಗೀತ, ನಾಟಕ, ಗಮಕ, ಕನ್ನಡ-ಸಂಸ್ಕೃತಿ ವಿಚಾರವಾಗಿ ಹೆಚ್ಚು ಮಾಹಿತಿ ತಿಳಿಯ ಬಯಸುವವರಿಗೆ ಈ ಕೆಲವೊಂದು ಸಂಧಿಗಳು ತುಂಬಾ ಮಾಹಿತಿಯನ್ನೊದಗಿಸುತ್ತವೆ. ಉದಾ: "ದಶಮಿ-ಪ್ರಸ್ಥಾನ" ಎಂಬ ಸಂಧಿಯಿಂದ ನಮಗೆ "ವಿಜಯದಶಮಿ" ಎಂಬ ಆಚರಣೆಯು ವಿಜಯನಗರದ ಕಾಲದಲ್ಲಿ ಇತ್ತೆಂಬುದಾಗಿಯೂ, ಅದು ಸಮಸ್ತ ಜನಸ್ತೋಮದ ಅಚ್ಚಳಿಯದ ಹೆಗ್ಗಳಿಕೆಯ ವಿಷಯವಾಗಿತ್ತು ಎಂಬುದನ್ನೂ ತಿಳಿಯಬಹುದು.

ಸರಿ, ಈಗ "ಉತ್ತರ-ನಾಟಕ" ಸಂಧಿಗೆ ಹಿಂದಿರುಗೋಣ. ಈ ಸಂಧಿಯ ವೈಶಿಷ್ಟ್ಯವೆಂದರೆ, ಇಲ್ಲಿ ಆಗಿನ ಕಾಲದ ನಾಟಕಗಳ ಕುರಿತಾಗಿ ಕೆಲವು ವಿಚಾರಗಳು ಸಿಗುತ್ತವೆ. ಆಗಿನ ಕಾಲದ ನಾಟಕಗಳಲ್ಲಿ, ಕರ್ಣಾಟಕ ಸಂಗೀತ ಹಾಸುಹೊಕ್ಕಾಗಿತ್ತು ಎಂಬುದನ್ನು ತಿಳಿದುಕೊಳ್ಳಬಹುದು. ಹೀಗೆ ಸಂಧಿ ಮುಂದುವರಿಯುತ್ತಿದ್ದಾಗ, ಕುತೂಹಲಕಾರಿಯಾದ ಒಂದು ಪದ್ಯ ನಮ್ಮನ್ನು ಆಕರ್ಷಿಸುತ್ತದೆ.

ಬೆಳಗಿನ ಬೊಂಬೆ ಬೆಳ್ದಿಂಗಳ ಬೊಂಬೆ ತಿಂ
ಗಳ ಬೊಂಬೆ ಜೊನ್ನದ ಬೊಂಬೆ
ತಿಳಿವಿನ ಬೊಂಬೆ ಬೋಧದ ಬೊಂಬೆಯೆಂದಾತ್ಮ
ಕಲೆಯ ಕನ್ನಡಿಸಿ ಹಾಡಿದರು || ೪೭ ||

ಬೆಳಗಿನ ಬೊಂಬೆ, ಬೆಳ್ದಿಂಗಳ ಬೊಂಬೆ, ತಿಂಗಳ ಬೊಂಬೆ, ಜೊನ್ನದ ಬೊಂಬೆ, ತಿಳಿವಿನ ಬೊಂಬೆ, ಭೋದದ ಬೊಂಬೆ ಎಂದು ಆತ್ಮಕಲೆಯ "ಕನ್ನಡಿಸಿ" ಹಾಡಿದರು.

ಭರತೇಶ ವೈಭವ ಒಂದು ಜೈನಕಾವ್ಯ, ಆದರೆ ಕವಿ ಇದ್ದದ್ದು ವಿಜಯನಗರ ಕಾಲದ ಕರ್ನಾಟಕದಲ್ಲಿ. ಹಾಗಾಗಿ, ರತ್ನಾಕರವರ್ಣಿ ಆಗಿನ ಕನ್ನಡ ನಾಡಿನ ರಾಜಕೀಯ ಹಾಗು ಸಾಂಸ್ಕೃತಿಕ ಚೌಕಟ್ಟಿನಲ್ಲಿಯೇ ಜೈನ ಪರಿಭಾಷೆಯ ವಿಷಯಗಳನ್ನು ಕನ್ನಡ ಕಾವ್ಯದ ಮೂಲಕ ಮುಂದಿಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಕೆಲವೊಂದು ಅಂಶಗನ್ನು ಗಮನಿಸಿ.

೧. ಕರ್ನಾಟಕದ ಕೆಲವು ವೈಶಿಷ್ಟ್ಯಪೂರ್ಣ ಕಲಾಪ್ರಕಾರಗಳಲ್ಲಿ "ತೊಗಲು ಬೊಂಬೆ ಆಟ"ವೂ ಒಂದು. ಮೇಲಿನ ಪದ್ಯವನ್ನು " 'ಬೊಂಬೆ ಆಟ', ಕನ್ನಡದ ಒಂದು ಸಾಂಸ್ಕೃತಿಕ ಚೌಕಟ್ಟು. ಜೈನ ಪರಿಭಾಷೆಯ ಆತ್ಮಕಲೆಯನ್ನು ಕನ್ನಡದ ಈ 'ಬೊಂಬೆ ಆಟದ' ಮೂಲಕ ಭರತೇಶನ ಮುಂದೆ ಪ್ರಸ್ತುತಪಡಿಸಲಾಯಿತು" ಎಂಬುದಾಗಿ ಅರ್ಥೈಸಿಕೊಳ್ಳಬಹುದು.

೨. ನವರಾತ್ರಿಯ ಸಂದರ್ಭದಲ್ಲಿ ಕನ್ನಡಿಗರು ಆಚರಿಸುವ "ಬೊಂಬೆ ಹಬ್ಬ"ವನ್ನು ಗಮನಿಸಿ. ಇಂದಿಗೂ ಕೂಡ "ಬೊಂಬೆ ಹಬ್ಬ", ಕನ್ನಡಿಗರ ಒಂದು ಪ್ರತಿಷ್ಠೆಯ ಸಂಕೇತವಾಗಿ ವರ್ಷವರ್ಷಕ್ಕೂ ಬೆಳೆಯುತ್ತಲೇ ಇದೆ. ನಮ್ಮ ಚೆನ್ನಪಟ್ಟಣದ ಅತ್ಯಾಕರ್ಷಕ ಬೊಂಬೆಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.

ಟಿಪ್ಪಣಿಗಳು
೧. ಇಂದು, ಈ ಇಪ್ಪತ್ತೊಂದನೆಯ ಶತಮಾನದಲ್ಲಿ, ನಾವುಗಳು "ತೊಗಲು ಬೊಂಬೆ ಆಟದ" ಮುಂದುವರಿದ ಪ್ರಯೋಗಗಳಂತಿರುವ ಅನೇಕ ಕಲಾಪ್ರಕಾರಗಳು ಬೇರೆ ಬೇರೆ ದೇಶಗಳಲ್ಲಿ ಕಾಣಬಹುದು.
೨. ಈ ಬಾರಿಯ ನವರಾತ್ರಿ ಸಂದರ್ಭದಲ್ಲಿ, ಸಹೃದಯರೊಬ್ಬರ ಕುಟುಂಬವರ್ಗದಲ್ಲಿ ಇರಿಸಲಾಗಿದ್ದ ಬೊಂಬೆಗಳನ್ನು, ಅವರ "ಗೊಂಬೆ ಹಬ್ಬ" ಆಲ್ಬಮಿನಲ್ಲಿ ನೋಡಬಹುದು Eye-wink

  • ಪುಸ್ತಕ ವಿಮರ್ಶೆ
~.~
  • Login or register to post comments
  • 369 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?
  • ರಾಮೇಶ್ವರಕ್ಕೆ ಹೋದ್ರೂ
  • ತಾಯಿ.
  • ಬೊಗಸೆ ಕಣ್ಣುಗಳಲ್ಲಿ ಆಸೆ
  • ಸೀತಾ- ಸ್ವಯಂವರ- ಬೊಂಬೆಗಳ ಪ್ರದರ್ಶನದಲ್ಲಿ, ಅದೂ ಎಲ್ಲಿ ? ಅಮೆರಿಕದಲ್ಲಿ !
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 7:22pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator