ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ

December 17, 2007 - 6:04pm — raghottama koppar

ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ

ತಿಂಗಳು ಶುರುವಾದರೆ ಎಲ್ಲರೂ ಸಂಬಳವನ್ನು ಡ್ರಾ ಮಾಡುವುದಕ್ಕಾಗಿ ಬ್ಯಾಂಕಿಗೆ ಧಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಏ.ಟಿ.ಎಂ (ಅಟೋಮೆಟೆಡ್ ಟೆಲ್ಲರ್ ಮಶಿನ್), (ಆಲ್ ಟೈಂ ಮನಿ ಅಂತಲೂ ಕರೆಯಬಹುದು) ಬಂದಿದೆ. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಸಂಬಳವನ್ನು ಪಡೆಯಬೇಕಾದ ಪರಿಸ್ಥಿತಿ ಈಗಿಲ್ಲ ಅಂತ ಎಲ್ಲರೂ ನಿಟ್ಟುಸಿರು ಬಿಟ್ಟರೂ ಈ ಸರದಿ ನಿಲ್ಲುವುದು ತಪ್ಪಲಿಲ್ಲ ನೋಡಿ. ಹೌದು ಈಗ ಏ.ಟಿ.ಏಂ. ಕೌಂಟರ್ ಗಳಲ್ಲೂ ಸರದಿ ದೊಡ್ಡದಾಗಿಯೇ ಇರುತ್ತದೆ. ಆ ಸರದಿಯಲ್ಲಿ ಕೆಲವು ಜನರಿಗೆ ಏ.ಟಿ.ಎಂ. ಹೇಗೆ ಬಳಸುವುದು ಎಂದು ಗೊತ್ತು, ಆದರೆ ಬಹುತೇಕ ಜನ ಬೇಕಾ ಬಿಟ್ಟಿ ಆಗಿ ಉಪಯೋಗಿಸುತ್ತಿರುವಾಗ ಹಿಂದೆ ಸರದಿಯಲ್ಲಿ ನಿಂತ ಜನ ಶಪಿಸುತ್ತಿರುವುದನ್ನು ನೋಡಬೇಕು. ಮೊನ್ನೆ ಒಂದು ಸಾರಿ ಹಣ ತೆಗೆದುಕೊಳ್ಳಲು ಹೋದಾಗ, ಉದ್ದನೆಯ ಸಾಲನ್ನು ಕಂಡು ಹೆದರಿದೆ. ಆದರೆ ಹಣ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಿಂದ ಆ ಸಾಲಲ್ಲೆ ನಿಲ್ಲಬೇಕಾಯಿತು. ಅಲ್ಲಿ ನನ್ನ ಮುಂದೆ ೧೦ ಜನ ಇದ್ದರು. ಒಬ್ಬ ಮಹಿಳೆ ಒಳಗಡೆ ಡ್ರಾ ಮಾಡ್ತಾ ಇದ್ದರು. ಅವರಿಗೆ ಡ್ರಾ ಮಾಡುವ ವಿಧಾನ ಸರಿಯಗಿ ಗೊತ್ತಿಲ್ಲವೇನೊ ಅಥವಾ ಬೇರೆ ಎನೋ ತೊಂದರೆ ಆಗಿದ್ದರಿಂದ ಒಬ್ಬರನ್ನು ಕರೆದು ಸಹಾಯ ಮಾಡಿ ಅಂದರು. ಅವರೂ ಆ ಮೇಡಂ ಗೆ ಸಹಾಯ ಮಾಡಿದರು. ಹಿಂದಿನ ಜನರು ಲೊಚಗುಡುತ್ತಿದ್ದರು. ನಂತರ ಒಂದು ಕುಟುಂಬ ಪೂರ್ತಿ ಏ.ಟಿ.ಎಂ. ಕೌಂಟರ್ ಗೆ ಧಾವಿಸಿತು. ಮಗ, ಅಮ್ಮ, ಅಪ್ಪ ಎಲ್ಲರೂ ಒಳಗೆ ಹೋದರು. ಮಗನ ಕೇಕೆ, ನಾನೇ ಹಣ ತೆಗೆಯುತ್ತೇನೆ ಎಂಬ ಮಗಳ ಹಠ ಹೀಗೆ ಅವರು ನಾಲ್ಕು ನಿಮಿಷವಾದರೂ ಹೊರಗೆ ಬರಲಿಲ್ಲ. ಅಲ್ಲಿದ್ದವರು ಎನ್ರಿ ಇವ್ರು ಬುದ್ಧಿ ಇಲ್ವಾ ಇವರಿಗೆ ಹಾಗೆ ಹೀಗೆ ಬೈತಾನೇ ಇದ್ದರು. ಒಟ್ಟು ಎಂಟು ನಿಮಿಷಗಳ ಕಾಲದ ನಂತರ ಹೊರಗೆ ಬಂದು ಎಲ್ಲರತ್ತ ನೋಡಿ ಹಾಗೆ ಹೋದರು. ಶಪಿಸಿದವರು ಮಾತ್ರ ತೆಪ್ಪಗೆ ನಿಂತಿದ್ದರು. ಇನ್ನೊಬ್ಬರು ಮೊದಲನೇಯ ಬಾರಿ ಬ್ಯಾಲೆನ್ಸ್ ಚೆಕ್ ಮಾಡಿ ನಂತರ ಹಣ ತೆಗೆದುಕೊಂಡರು. ಹಿಂದೆ ನಿಂತವರು ಲೊಚಗುಡುತ್ತಿರುತ್ತಾರೆ. ತಮ್ಮ ಪಾಳಿ ಬಂದಾಗ ಹಿಂದಿನವರು ಹಾಗೆ ಅನ್ನಬಹುದು ಅಲ್ಲವೆ. ಆದರೆ ಎಲ್ಲರೂ ಹಾಗೆ ಇರುವುದಿಲ್ಲ ಅನ್ನೊದು ಸತ್ಯ. ಈ ಬಾರಿ ನೀವು ಏ.ಟಿ.ಎಂ.ಗೆ ಹೋದಾಗ ಸರದಿ ದೊಡ್ಡದಿದ್ದರೂ ಅಲ್ಲಿನ ಜನರನ್ನು ನೋಡಿ, ನನಗೆ ಸಿಕ್ಕಂತವರು ನಿಮಗೆ ಸಿಕ್ಕರೆ ಬರೆಯಿರಿ. ಎನೇ ಹೊಸತು ಬರಲಿ, ಸರದಿ ನಿಲ್ಲೊದು ಮಾತ್ರ ತಪ್ಪಲ್ಲ ನೋಡಿ.....

  • ಪ್ರಚಲಿತ
~.~
  • Login or register to post comments
  • 374 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 17, 2007 - 6:49pm — hpn

ಉ: ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ

hpn's picture

ನಿಮಗೆ ಸಿಕ್ಕವರೇ ಪರವಾಗಿಲ್ಲ Smiling ನಾನು ಇತ್ತೀಚೆಗೆ ಬಂದು ವಾಸವಾಗಿರುವ ಲೊಕ್ಯಾಲಿಟಿಯ ಹತ್ತಿರ ಇರುವುದು ಒಂದೇ ಏ ಟಿ ಎಮ್ - ಅದೂ ಇಲ್ಲಿಂದ ೩ ಕಿ.ಮೀ ಹತ್ತಿರದಲ್ಲಿ ಅಷ್ಟೇ. ಅದು ಬಿಟ್ಟರೆ ೬-೭ ಕಿ,ಮೀ ದೂರ ಹೋದರೆ ಮಾತ್ರ ಮತ್ತೊಂದು ಏ ಟಿ ಎಮ್ ದರ್ಶನವಾಗೋದು. (ಬೇರೆ ಬ್ಯಾಂಕಿನ ಏ ಟಿ ಏಮ್ ನಲ್ಲಿ ತೆಗೆದುಕೊಳ್ಳಬಹುದಾದರೂ ಹೆಚ್ಚು ಚಾರ್ಜ್ ಹಾಕುತ್ತಾರೆ - ಗೊತ್ತಲ್ವೆ)

ಚಳಿ ಹಿಡಿದು ಕೂತಿದ್ದ ಸಂಜೆಯೊಮ್ಮೆ ಈ ಏಕೈಕ ಏ ಟಿ ಏಮ್ ನಲ್ಲಿ ನಿಮಗೆ ಸಿಕ್ಕಂತವರೇ ಒಬ್ಬರು ಮಹಿಳೆ ಒಳ ಹೋದವರು ಸಾಕಷ್ಟು ಹೊತ್ತು ಕಾರ್ಡ್ ಹಾಕಿ ತೆಗೆದು ಮಾಡುತ್ತಿದ್ದರು. ಸಾಲದೆಂಬಂತೆ ಫೋನಿನಲ್ಲಿ ಬೇರೆ ಮಾತು! ಬಹುಶಃ ಕಸ್ಟಮರ್ ಕೇರ್ ಗೆ ಬಯ್ಯುತ್ತಿದ್ದಾರೆಂದು ಎಣಿಸಿದ್ದೆ. ಆದರೆ ಬಹಳ ಹೊತ್ತಾದ ನಂತರ ಕೆಲವರು ಬಾಗಿಲು ತಟ್ಟಿ ತೆಗೆದರು. ಏನೂ ಗಾಬರಿಯಿಲ್ಲದೆ ಫೋನಿನಲ್ಲಿ ಮಾತು ಆಗಲೂ ಮುಂದುವರೆದಿತ್ತು. ಗಮನವಿಟ್ಟು ಕೇಳಿದರೆ ಆಶ್ಚರ್ಯ ಕಾದಿತ್ತು - ಗೆಳತಿಯೊಬ್ಬರೊಂದಿಗೆ ಯಾವುದೋ ಸಂಸಾರದ ವಿಷಯ ಚರ್ಚೆ ಮಾಡುತ್ತಿದ್ದಾರೆ! ಕಾರ್ಡ್ ಬಹಳ ಹೊತ್ತು ರೀಡ್ ಆಗದೆ ಹಿಂದಿರುವ ದೊಡ್ಡ ಸರದಿಯನ್ನೂ ಲೆಕ್ಕಿಸದೆ ತಮ್ಮಷ್ಟಕ್ಕೆ ಅಷ್ಟೂ ಹೊತ್ತು ಫೋನಿನಲ್ಲಿ ಮಾತನಾಡುತ್ತ ಕಾರ್ಡ್ ಹಾಕಿ ತೆಗೆದು ಮಾಡುತ್ತಿದ್ದರು!
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 18, 2007 - 9:58am — agilenag

ಉ: ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ

agilenag's picture

ಎಟಿಎಂ ನಿಜಕ್ಕೂ ಒಳ್ಳೆಯ ಹಣ ಸಂಪನ್ಮೂಲ ಸಾಧನವೇ ಸರಿ. ನಾವು ನಮ್ಮ ಖಾತೆಗೆ ತುಂಬಿದಷ್ಟನ್ನೂ ಕೇಳಿದಾಗಲೆಲ್ಲ ಕಕ್ಕುತ್ತದೆ, ವಿನಿವಿಂಕ್ ಶಾಸ್ತ್ರಿಯಂತಲ್ಲ. ಮೊದಲು ಬ್ಯಾಂಕುಗಳಲ್ಲಿ ಕ್ಯೂ ನಿಂತು ತಡವಾದಂತೆಲ್ಲಾ ಬ್ಯಾಂಕಿನ ಕೆಲಸಗಾರರನ್ನು ಬಯ್ಯುತ್ತಿದ್ದೆವು. ಈಗ ಎಟಿಎಂ ಮುಂದೆ ನೀವು ಹೇಳಿದ ಹಾಗೆ ಉದ್ದನೆಯ ಕ್ಯೂನಲ್ಲಿ ನಿಂತು ನಮ್ಮನ್ನು ನಾವೇ ಬೈದುಕೊಳ್ಳುತ್ತೇವೆ. ಲಕ್ಕಿದ್ದರೆ ನಮ್ಮ ಹಣ ನಮಗೆ ದೊರೆಯುತ್ತದೆ, ಇನ್ನೊಬ್ಬರಿಗೆ ಲಕ್ಕಿದ್ದರೆ ನಮ್ಮ ಹಣ ಅವರಿಗೆ ದೊರೆಯುತ್ತದೆ. ಅಲ್ಲದೆ ಎಟಿಎಂ ಎಂಬುದು ಮನೆ ಮಂದಿಗೆಲ್ಲಾ ಮೋಜನ್ನು ನೀಡುವ ಪುಕ್ಕಟೆ ಉಪಕರಣವೂ ಆಗಿರುತ್ತದೆಂದು ನಿಮ್ಮ ಲೇಖನ ಚೆನ್ನಾಗಿ ತಿಳಿಸಿಕೊಟ್ಟಿದೆ.
ಮೆ ದಿ ಎಟಿಎಂ ಲೀವ್ ಲಾಂಗ್
ಎ.ವಿ.ನಾಗರಾಜು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ
  • ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ
  • ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ
  • ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
  • ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
Syndicate content

ಲೇಖಕರು

raghottama koppar's picture

ಪೂರ್ಣ ಹೆಸರು
Raghottama Ravindra Koppar

ಪರಿಚಯ

I am Raghottama Ravindra Koppar. Working as Technical Writer in Bangalore. Also worked as sub-editor in Prajavani Kannada Daily. Written many articles in Prajavani and Deccan Herald. Also writing for shvoong.com and writingcampus.com. I am from Gadag. I have also written some lyrics, but no producers ha ha ha...........

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 157 ಅತಿಥಿಗಳು ಆನ್ಲೈನ್ ಇರುವರು.


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator