ಪೊಗಳಿ ನಲ್ನುಡಿಗಳುಂ...
ಹಳೆಗನ್ನಡ:
ಪೊಗಳಿ ನಲ್ನುಡಿಗಳುಂ ಪೇಳ್ವರ್ ಪಲವರಿರ್ಪರ್
ಎನ್ನಂ ಒಡಗೂಡಿ ಕೂರ್ಪರ್ ಪಲವರಿರ್ಪರ್
ಎಡರ್ಬೊೞ್ತಿನಲ್ ನೆರವಾಗುವರ್ ಪಲವರಿರ್ಪರ್
ಎನ್ನಡೆನುಡಿಗಳುಂ ದಿಟದಿಂ ಬಗೆದು ಕಟುನುಡಿಗಳಾಳ್ಪರ್ ನಾ ಕಾಣೆ ಬರ್ತೇಸ
(ನನಗೆ ಗೊತ್ತಿಲ್ಲದಂತೆ ೨,೩,೪ ನೇ ಸಾಲಿನಲ್ಲಿ ಸುರುವಿನಲ್ಲಿ 'ಎ' ಪ್ರಾಸ ಬಂದಿದೆ
)
----------------------------------------
ಹೊಸಗನ್ನಡ:
ಹೊಗಳಿ ಒಳ್ಳೆನುಡಿಗಳನ್ನು ಹೇಳುವವರು ಹಲವರಿರುವರು
ನನ್ನನ್ನು ಒಡಗೂಡಿ ಪ್ರೀತಿಸುವವರು ಹಲವರಿರುವರು
ಕಶ್ಟದ ಹೊತ್ತಿನಲ್ಲಿ ನೆರವಾಗುವವರು ಹಲವರಿರುವರು
ನನ್ನ ನಡತೆಯನ್ನು ನಿಜವಾಗಿ ತಿಳಿದು ಟೀಕಿಸುವವರ ನಾ ಕಾಣೆ ಬರ್ತೇಸ
ಯಾಕೋ ಏನೋ ಹಳೆಗನ್ನಡದಲ್ಲಿ ಕಬ್ಬ ಬರೆಯುವುದು ಹೊಸಗನ್ನಡಕ್ಕಿಂತ ಹೆಚ್ಚು ಸರಿ ಅನ್ನಿಸಿತು ಅತ್ವ ಹಳೆಗನ್ನಡ ಕಬ್ಬದ ಚೆಲುವನ್ನ ಹೆಚ್ಚಿಸುತ್ತೆ ಅನ್ನಿಸಿತು.
(ತಪ್ಪುಗಳು ನುಸುಳಿದ್ದರೆ ಮನ್ನಿಸಿ)

- Login or register to post comments
- 472 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಪೊಗಳಿ ನಲ್ನುಡಿಗಳುಂ...
ಎನ್ನನಿಸುಗಳು
ಎಡರ್ಬೊೞ್ತಿನಲ್ = ಇದು ಎಡರ್ವೊೞ್ತಿನೊಳ್ ಇರಬೇಕು
ನೆರವಾಗುವರ್ ಗಿಂತ ನೆರೆವರ್ ಚೆನ್ನು.
ಕಟುನುಡಿ ಇದು ಸರಿಯಿಲ್ಲ
ಕಟು ಸಕ್ಕದ.. ಟೀಕೆ ಯಾವಾಗಲೂ ಕಟು/ಕಹಿಯಾಗಿ ಇರಬೇಕೆಂದಿಲ್ಲ..
ಕಡುನುಡಿ ಅಂತ ಹೇಳಿದ್ರೆ ಚೆನ್ನು..
ಕಡುನುಡಿ = ಕೆಡೆದ ನುಡಿ, ಕೆತ್ತನೆಯಂತ ನುಡು, ಬಲು ನುಣುಪಾಗಿ ಆಡಿದ ನುಡಿ
ಕೆಡುನುಡಿ/ಕಿಡುನುಡಿ = ಕೆಟ್ಟು ಮಾತು
ಬರ್ತೇಸ ಹೊರತು ಬೇರೆಯದನ್ನು ಹುಡುಕಿ.. ! ಬರತೇಸ ಸರಿ ಹೊಂದಬೋದು.
ಉ: ಪೊಗಳಿ ನಲ್ನುಡಿಗಳುಂ...
ಇದೇ ಗೊಂದಲ ನಂಗೆ,
ಕರ್+ಪೊನ್ = ಕರ್ಬೊನ್ ಆಗುತ್ತೆ
ಎಡರ್+ಪೊೞ್ತು = ಎಡರ್ವೊೞ್ತು ? ಎಂಗೆ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪೊಗಳಿ ನಲ್ನುಡಿಗಳುಂ...
ಕರ್+ಪೊನ್ = ಕರ್ಬೊನ್ ಆಗುತ್ತೆ ಎಲ್ಲಿ?
ಉ: ಪೊಗಳಿ ನಲ್ನುಡಿಗಳುಂ...
ಶಂಕರಬಟ್ಟರ ಹೊತ್ತಿಗೆ ಓದಣ್ಣ ( ನಿಜಕ್ಕೂ ಹಳೆಗನ್ನಡದ ವ್ಯಾಕರಣ ಎಂತಹುದು?) .. ಇದು 'ಪಂಪಬಾರತ'ದಲ್ಲಿ ಬಂದಿದೆ ಅನ್ಸುತ್ತೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪೊಗಳಿ ನಲ್ನುಡಿಗಳುಂ...
ಅಣ್ಣಾ
ಪವರ್ಗ ವಕಾರಾಗಮ ಎಂಬ ಸಂಧಿ ಇದೆ ( ಶಬ್ದಮಣಿದರ್ಪಣ )!
ಹಾಗೇ ಮೂಗುಲಿ ಹಿಂದೆ ಬಂದ ಕತಪ ಗಳು, ತರುವಾಯಿಂದ ಗದಬಗಳಾಗುವುವು.!
"ಇದು ನಡುಗನ್ನಡದ ಓರ್ವ => ಒಬ್ಬ, ಈರ್ವ => ಇಬ್ಬ, ಪೆರ್ಚು => ಹೆಚ್ಚು ಮುಂತಾದ ಮಾರ್ಪಿಗೆ ಹೊರತು. ಅಲ್ವ! ನಡುಗನ್ನಡದ ಸಂಗತಿ ಬೇರೆ.! ಇಲ್ಲಿ ಆ ಮಾರ್ಪು ಸಂಧಿ/ಕೂಡಿಕೆ ಇಂದಲ್ಲ.!"
ಆದ್ರೆ...
ರ ಮತ್ತು ಱ ಗಳ ಹಿಂದೆ ಬಂದ ಕತಪಗಳು, ಮತ್ತು ಳ ಮತ್ತು ೞ ಹಿಂದೆ ಬಂದ ಕತಪಗಳು ಎಂತು ಮಾರ್ಪಾಗುವುವು ಎಂಬುದು, ಇಲ್ಲಿರುವ ಸಂಗತಿ.
ಕರ್ + ಪೊನ್ = ?
ಈರ್ + ಪತ್ತು = ಈರ್ಪತ್ತು => ಇಪ್ಪತ್ತು ( ಪ ಹಾಗೆ ಉಳಿದಿದೆ )
ಮೂಱ್ + ಪತ್ತು =ಮೂಱ್ವತ್ತು => ಮುವ್ವತ್ತು ( ಪ ಹೋಗಿ ವ ಆಯ್ತು ) ( ಮೂನ್ಱು => ಮೂಱು )
ಆಱ್ + ಪತ್ತು = ಆಱ್ವತ್ತು => ಅರವತ್ತು ( ಪ => ವ )
ಏೞ್ + ಪತ್ತು = ಏೞ್ಪತ್ತು => ಎಪ್ಪತ್ತು ( ಪ ಉಳಿಯಿತು )
ಎಣ್ + ಪತ್ತು = ಎಂಬತ್ತು ( ಎಣ್ಬರ್ = ಎಂಟು ಮಂದಿ )
ಒಣ್ + ಪತ್ತು = ಒಂಬತ್ತು
ಓ/ಒನ್ಱ್ => ಓಱ್/ಒಱ್
ಓಱ್ + ಪ = ಓಱ್ವ => ಒಬ್ಬ ( ನಡುಗನ್ನಡ? )
.....
ಹೀಗೆ ಗವನಿಸಿದ್ರೆ..
ೞ್/ರ್ ಮುಂದೆ ಬಂದ ಪ ಹಾಗೇ ಉಳಿಯುವುದು
(ಳ್?)ಱ್ ಮುಂದೆ ಬಂದ ಪ => ವ ಆಗುವುದು
=============
ಹಾಗೇ
ಅಱತು, ಕುಱಿತು, ಕುೞಿತು ... ಮುಂತಾದವು ( ಱ್/ೞ್ ಮುಂದೆ ತು )
ಅರಿದು, ಕೊರೆದು, ಹೊಳೆದು.. ಮುಂತಾದವು ( ರ/ಳ ಮುಂದೆ ದು )
ತಪ್ಪಿದ್ರೆ ಹೇಳಿ
ಉ: ಪೊಗಳಿ ನಲ್ನುಡಿಗಳುಂ...
ಹಾಗಾದರೆ ಕರ್ಬೊನ್(ಕಬ್ಬಿಣ) ಬಿಡಿಸುವುದೆಂತು. ?
ಇವೊತ್ತು ಪ್ರ.ವಾ ದಲ್ಲಿ ಒಂದು ಶ್ರವಣಬೆಳಗೊಳದ ಶಾಸನ ಹೀಗಿದೆಯಂತೆ:
http://www.prajavani.net/Content/Dec182007/balabuti.asp
"ಸುರಚಾಪಂಬೋಲೆ ವಿದ್ಯುಲ್ಲತೆಗಳವೋಲ್ ಮಂಜುವೋಲ್ ತೋರಿ ಬೇಗಂ ಪಿರಿಗುಂ ಶ್ರೀರೂಪ...."
ಸುರಚಾಪಂಬೋಲೆ = ಸುರಚಾಪಮ್+ಪೋಲ್+ಎ (ಇಲ್ಲಿ ಪ -> ಬ ಆಗಿದೆ ಅನ್ಸುತ್ತೆ)
ವಿದ್ಯುಲ್ಲತೆಗಳವೋಲ್ = ವಿದ್ಯುಲ್ಲತೆಗಳ್+ಅ+ಪೋಲ್( ನೀ ಹೇಳಿದಂತೆ ಇಲ್ಲಿ ಪ -> ವ ಆಗಿದೆ )
ಮಾಯ್ಸ,
ಕೆಲವು ಪದಜೋಡಣೆಗಳು ನೀ ಹೇಳಿದ ಕಟ್ಟಳೆಗಳಿಗೆ ಹೊರತಾಗಿರುವ ಸಾದ್ಯತೆ ಇದೆ ಅಲ್ವ?
ಮಾದರಿ: ಆದೇಶ ಎಂಬ ವ್ಯಂಜನ ಸೇರಿಕೆ/ಸಂದಿ ಹಳೆಗನ್ನಡದ್ದು
ಹೆಣ್+ಕರುಳು= ಹೆಂಗರುಳು
ಆದರೆ ಈ ವ್ಯಂಜನ ಸಂದಿ ಸೊರದಿಂದ ಕೊನೆಗಳ್ಳುವ ಹೊಸಗನ್ನಡಲ್ಲೂ ಆಗುತ್ತೆ (exception)
ಮಾದರಿ: ಸುಡ್+ಉ+ಕಾಡು= ಸುಡುಗಾಡು. (ಕ --> ಗ)
ಆದರೆ ಒಂದೊಂದು ಸಲ ಸೇರಿಕೆಯಿಂದ ಯಾವರ ಬದಲಾವಣೆಯೂ ಆಗಲ್ಲ
ಆನೆ+ಕಾಲು = ಆನೆಕಾಲು( ಕ-->ಕ)
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪೊಗಳಿ ನಲ್ನುಡಿಗಳುಂ...
"ಕೆಲವು ಪದಜೋಡಣೆಗಳು ನೀ ಹೇಳಿದ ಕಟ್ಟಳೆಗಳಿಗೆ ಹೊರತಾಗಿರುವ ಸಾದ್ಯತೆ ಇದೆ ಅಲ್ವ?"
ಶಬ್ದಮಣಿದರ್ಪಣದ ಸಂಧಿಪ್ರಕರಣ ಓದಿ
ಮಾದರಿ: ಸುಡ್+ಉ+ಕಾಡು= ಸುಡುಗಾಡು. ತಪ್ಪು ಬಿಡಿಸಿಕೆ
ಸುಟ್ ಬೇರು....
ಸುಡು + ಕಾಡು = ಸುಡುಗಾಡು
ಆನೆಕಾಲು ಅನ್ನೋದನ್ನ ಆನೆಗಾಲು ಅಂತಲೂ ಹೇಳ್ತಾರೆ. ಆನೆಕಾಲು ಬೇನೆ ಅನ್ನೋದಕ್ಕೆ ಹೊಸದಾಗಿ ಒರೆ ಹುಟ್ಟಿಸಿದಾಗ ತಪ್ಪುಮಾಡಿದ್ದಾರೆ ಅಂತ ಹೇಳಬೋದು., "ಆನೆಗಾಲಿಂತ ಕಂಬಗಳು"
ಅರಿತ ಕೆಡುವಂತಿದ್ರೆ ಕನ್ನಡದಲ್ಲಿ ಕೂಡಿಕೆ ಇಲ್ಲ.
ದಾರಿತಪ್ಪಿತು.
ಕರ್ಬೊನ್ ಎಲ್ಲಿದೆ? ಅದು ಹೇಗೆ?
ಉ: ಪೊಗಳಿ ನಲ್ನುಡಿಗಳುಂ...
ಕರ್ಬೊನ್ ಇರಲಿ ಹೆಬ್ಬುಲಿ ಬಿಡಿಸಣ್ಣ
ಪೆರ್+ಪುಲಿ = ಪೆರ್ಬುಲಿ = ಹೆಬ್ಬುಲಿ ( ಹೆವ್ವುಲಿ ಅಲ್ಲ
)
ಇಲ್ಲೂ ಪ-- ಬ ನೇ ಆಗಿರದು. ಪ--ವ ಅಲ್ಲ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪೊಗಳಿ ನಲ್ನುಡಿಗಳುಂ...
ನೋಡಿ...
ಓರ್ವ => ಒಬ್ಬ ಇದು ನಡುಗನ್ನಡದ ಮಾರ್ಪಲ್ವ!!
ಹಾಗೆ
ಪೆರ್ + ಪುಲಿ = ಪೆರ್ವುಲಿ => ಹೆಬ್ಬುಲಿ ( ಆಗಿರಬೋದಲ್ಲ.. ಓರ್ವ => ಒಬ್ಬ )
ನೀವು ನೋಡಿ.!
ಅದಕ್ಕೆ ನಾನು ಯಾವ ಸಂಧಿ ನಿಯಮದಂತೆ ಕರ್ + ಪೊನ್ => ಕರ್ಬೊನ್ ಆಯ್ತು ಅಂತ ಕೇಳಿದೆ!
ಉ: ಪೊಗಳಿ ನಲ್ನುಡಿಗಳುಂ...
’ಹಲವರಿರುವರು’ - ಇದನ್ನು ’ಹಲವರಿಹರು’ ಎಂದು ಮಾಡುತ್ತೀರೋ ನೋಡಿ - ಸ್ವಲ್ಪ ಕರ್ಕಶತೆ ಕಡಿಮೆ ಆಗುವದು .
ನಾನೊಬ್ನೇ ಹೊಸಗನ್ನಡ ಆವೃತ್ತಿ ಕುರಿತು ಟಿಪ್ಪಣಿ ಮಾಡ್ದೋನು ! ಹ್ಹೆ ಹ್ಹೆ !!
( ಹಳೆಗನ್ನಡ ನನಗ್ಗೊತ್ತಿಲ್ಲ ; ಅ ಮಾತು ಬೇರೆ)
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪೊಗಳಿ ನಲ್ನುಡಿಗಳುಂ...
ಒಂತರ ನೀವು ಹೇಳೋದು ಸರಿ. ಆದರೆ ಮಾಯ್ಸ ಪ-->ವ ನೇ ಆಗ್ಬೇಕು ಅಂತಿದಾರೆ.
ಪಲವರಿರ್ಪರ್ = ಹಲವರಿರುವರು= ಹಲವರಿಹರು. ಎಲ್ಲ ಸರಿ ಅನ್ಸುತ್ತೆ.
ನಿಮ್ಮ ಟಿಪ್ಪಣಿಗೆ ನನ್ನಿ.
ಒಂದು ಮಾತು : ಯಾವಾಗಲೂ 'ನನಗೊತ್ತಿಲ್ಲ' ಅನ್ನೋರೆ ಸಕ್ಕತ್ ತಿಳ್ಕೊಂಡಿರ್ತಾರೆ.
ತುಂಬಿದ ಕೊಡ ತುಳುಕೊಲ್ವಂತೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪೊಗಳಿ ನಲ್ನುಡಿಗಳುಂ...
http://sampada.net/article/6701#comment-14054
ಈ ಗೊಂದಲದಿಂದೇ...
ಇರ್ಪರ್ ಅಂದ್ರೆ ಇರುವರು..ತಾನೇ
ಆದ್ರೆ ಇಹರು ಅಂದ್ರೆ ಇದ್ದಾರೆ ಅಲ್ವ?
ಹಲವರಿರ್ಪರ್ = ಹಲವರಿರುವರು..
ನೋಡಿ..
ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು.. ಅಂದ್ರೆ
ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿದ್ದೇನೆ ಎಂದೋ,
ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿರುತ್ತೇನೆ/ಇರುವೆನು ಎಂದೋ?
ಇದ್ದರು,ಇದ್ದಾರೆ, ಇರುವರು/ಇರುತ್ತಾರೆ ಇವಕ್ಕೆ ಹೞಗನ್ನಡದ ಒರೆಗಳೇನು?
ಉ: ಪೊಗಳಿ ನಲ್ನುಡಿಗಳುಂ...
ನೀವು ಗಮನಿಸಿಲ್ವೆ ?
ಖಾಲೀ ಕೊಡಾನೂ ತುಳುಕೋದಿಲ್ಲ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪೊಗಳಿ ನಲ್ನುಡಿಗಳುಂ...
"ಬರಿಗೊಡಗಳಿಗೆ ಸಮಾಧಾನ" ಹೇಳುತ್ತಿದ್ದೀರಿ...
ಉ: ಪೊಗಳಿ ನಲ್ನುಡಿಗಳುಂ...
ಅದಕ್ಕೇ ನೋಡಿ - ಸಂಸ್ಜೃತದಲ್ಲಿ ಜಾಣತನವಾಗಿ " ಅರ್ಧ ಘಟೋ ಘೋಷಮುಪೈತಿ ನೂನಂ" - ಅರ್ಧ ತುಂಬಿದ ಕೊಡಗಳು ಖಂಡಿತವಾಗಿ ಸದ್ದುಮಾಡುತ್ತವೆ - ಎಂದುಬಿಡುತ್ತಾರೆ
-ಹಂಸಾನಂದಿ
ಉ: ಪೊಗಳಿ ನಲ್ನುಡಿಗಳುಂ...
ಹೌದು ಬರಿಗೊಡಗಳೂ ’ನಾವೂ ತುಂಬಿದ ಕೊಡದ ತರಾನೇ , ನಾವೂ ತುಳುಕೊಲ್ಲ ’ ಅಂತ ಸಮಾಧಾನ ಮಾಡ್ಕೋಬಹುದು.!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪೊಗಳಿ ನಲ್ನುಡಿಗಳುಂ...
"...ಖಾಲೀ ಕೊಡಾನೂ ತುಳುಕೋದಿಲ್ಲ...."
ತುಳುಕೋದಿಲ್ಲ ಅಲ್ಲ ತುಳುಕುವುದಕ್ಕೆ ಎಡೆ(chance) ಯಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪೊಗಳಿ ನಲ್ನುಡಿಗಳುಂ...
ಶ್ರೀಕಾಂತ್ ಸಾರ್..
ನಂಗೊಂದು ಗಲಿಬಿಲಿ..
ಹಲವರಿರುವರು != ಹಲವರಿಹರು
ಇಹರು = ಇದ್ದಾರೆ
ಇರುವರು = ಇರುತ್ತಾರೆ ಅಲ್ವ!
ಹಲವರಿರುವರು ಅಂದ್ರೆ ಮುಂದೂ, ಇಂದೂ ಹಲವರು ಇರ್ತಾರೆ ಎಂದು..
ಇಲ್ವ.. ನಾನೇ ಬಲು ಗೊಂದಲಗೊಂಡಿದ್ದೀನಾ?
ಉ: ಪೊಗಳಿ ನಲ್ನುಡಿಗಳುಂ...
ನಿಮಗೆ ಇಂದಿನ(ವರ್ತಮಾನ) ಕಾಲ ಮತ್ತು ಮುಂದಿನ (ಭವಿಷ್ಯತ್) ಕಾಲ ದ ಬಗ್ಗೆ ಗೊಂದಲ ಉಂಟಾಗಿದೆ. ಅಲ್ಲವೇ?
ಕನ್ನಡದಲ್ಲಿ ಎರಡೂ ಒಂದೇನೇ ; ಕನ್ನಡದಲ್ಲಿ ಎರಡೇ ಕಾಲ - ಹಿಂದಿನ (ಭೂತ) ಕಾಲ ಮತ್ತು ಹಿಂದಿನದಲ್ಲದ ಕಾಲ - ಇದನ್ನು ನೀವು ಶಂಕರಭಟ್ಟರ ಪುಸ್ತಕದಲ್ಲಿ ಓದಿಲ್ವೇ ?
-ಬಹುಶ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ದಲ್ಲಿದೆ ಈ ವಿಷಯ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪೊಗಳಿ ನಲ್ನುಡಿಗಳುಂ...
ಮಿಶ್ರಕೋಟಿ ಸಾರ್...
ನನ್ನ ಗೊಂದಲ ಇಂದಿನ-ಮುಂದಿನ ಹೊತ್ತುಗಳ ಬಗ್ಗೆ ಅಲ್ಲ.. ಇನ್ನೊಮ್ಮೆ ನೋಡಿ ದಯವಿಟ್ಟು.
ಇಹನು = ಇದ್ದಾನೆ, ಅಲ್ವ!
ಇರುವನು = ಇರುತ್ತಾನೆ, ಅಲ್ವ?
ಇದ್ದಾನೆ != ಇರುತ್ತಾನೆ
ಹಾಗೇ
ಇಹನು != ಇರುವನು ...
ನಾನು ಎರಡು ಈ ಬಗ್ಗೆ ಎರಡು ಸರತಿ ಕಮೆಂಟಿದ್ದೇನೆ/ ಕಮೆಂಟಿಹೆನು.
ಉ: ಪೊಗಳಿ ನಲ್ನುಡಿಗಳುಂ...
ಪೊಗೞ್ದು ನಲ್ನುಡಿಗಳುಂ ಪೇೞ್ವರ್ ಪಲವರಿರ್ಪರ್
ಎನ್ನನೊಡಗೂಡಿ ಕೂರ್ಪರ್ ಪಲವರಿರ್ಪರ್
ಎಡರ್ಬೊೞ್ತಿನೊಳ್‍ನೆರವಾಗುವರ್ ಪಲವರಿರ್ಪರ್
ಎನ್ನನಡೆನುಡಿಗಳನುಂ ದಿಟದಿ ಬಗೆದು ಕಟುನುಡಿಗಳಾೞ್ವರಂ ನಾ ಕಾಣೆ ಬರ್ತೇಸ
ಇದು ನನಗೆ ಸರಿಯೆನಿಸುತ್ತಿದೆ.
ಉ: ಪೊಗಳಿ ನಲ್ನುಡಿಗಳುಂ...
ಕನ್ನಡಕಂದ,
ನೀವು ಸರಿ. ಆದರೆ ಅದು ಎಡರ್ವೊೞ್ತಿನೊಳ್ ಆಗಬೇಕಿತ್ತು ಅಲ್ವ . ಈಗಾಗಳೆ ಚರ್ಚಿಸಿದ ಹಾಗೆ ಹಿರಿಗನ್ನಡ(ಹಳೆಗನ್ನಡ)ದ ಮಟ್ಟಿಗೆ
ಎಡರ್+ಪೊೞ್ತಿ = ಎಡರ್ವೊೞ್ತಿ ( ಅಂದರೆ ಪ--> ವ). ಇದು ಮೊದಲನೆ ಒರೆಯ ಕೊನೆಯಲ್ಲಿ 'ಮೂಗುಲಿ' ಇಲ್ಲದಿದ್ದರೆ ಆಗುತ್ತದೆ.
ಆದರೆ ಮೊದಲನೆ ಒರೆಯ ಕೊನೆಯ ಅಕ್ಕರ 'ಮೂಗುಲಿ'(ನ,ಣ,ಮ) ಆಗಿದ್ದರೆ ಆಗ (ಪ--> ಬ) ಆಗುತ್ತದೆ.
ಮಾದರಿ: ಮಣಿಹಾರಮ್+ಪೋಲ್ = ಮಣಿಹಾರಂಬೋಲ್
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು