ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು

December 21, 2007 - 7:54pm — csomsekraiah

( ನನ್ನ ’ಭಗವದ್ಗೀತೆಯ ಬೆಳಕಿನಲ್ಲಿ” ಪುಸ್ತಕದಿಂದ )
ಭಾರತದ ಅತ್ಯಂತ ಪ್ರಾಚೀನ ಸಾಂಸ್ಕೃತಿಕ , ಸಾಹಿತ್ಯಕ , ದಾರ್ಶನಿಕ ಕೃತಿಗಳೆಂದರೆ ವೇದಗಳೇ . ಆದರೆ ಅವುಗಳಲ್ಲಿರುವ ವಿಷಯ
ವೈವಿಧ್ಯತೆಯಿಂದಾಗಿ , ಆಧ್ಯಾತ್ಮ ಜ್ಝಾನ ಅಥವಾ ತತ್ವ ಜ್ಝಾನ ಸಾರವನ್ನು ಹೆಕ್ಕಿ ತೆಗೆಯುವುದೆಂದರೆ , ಬಣವೆಯಲ್ಲಿ ಸೂಜಿಯನ್ನು ಹುಡುಕಿ ತೆಗೆಯುವಷ್ಟು ಕಠಿಣತಮವಾದ ಕೆಲಸ . ಇದರಿಂದಾಗಿ ವೇದ ಮೀಮಾಂಸೆ ಬರಿಯ ತೌಡು ಕುಟ್ಟುವ ಕೆಲಸ ಎಂಬ ಟೀಕೆಗೊಳಗಾಯಿತು .ಈ ಕೊರತೆಯನ್ನು ನಿವಾರಿಸಲು , ಉಪನಿಷತ್ತುಗಳು ರಚಿತವಾದವು .ವೇದದ ಸಾರವನ್ನು , ಜೊತೆಗೆ ಸ್ವತಂತ್ರ ಚಿಂತನೆಗಳನ್ನೊಳಗೊಂಡ ಈ ಉಪನಿಷತ್ತುಗಳು ,’ವೇದಾಂತ’ ಅಂದರೆ ವೇದದ ಕೊನೆಯ ಭಾಗ ಎಂದೇ ಪ್ರಸಿದ್ದವಾದವು . ಉಪನಿಷತ್ತಿನೊಳಗಣ ಚಿಂತನೆಗಳೂ ಸಹ, ಅವುಗಳಲ್ಲಿನ ವಿಷಯದ ಗಂಭೀರತೆಯಿಂದಾಗಿ, ಸಾಮಾನ್ಯರಿಗೆ ಕಬ್ಬಿಣದ ಕಡಲೆಗಳೇ ಆದವು . ಇದರಿಂದಾಗಿ ಗಹನ ವಿಷಯಗಳನ್ನು ಮತ್ತಷ್ಟು ಸರಳಗೊಳಿಸುವ ದೃಷ್ಟಿಯಿಂದ , ಕಥಾರೂಪದ ಮಹಾಭಾರತದಂತಹ ಕೃತಿಗಳ ರಚನೆಯಾಯಿತು . ಹೀಗಾಗಿ ಮಹಾಭಾರತ ’ಪಂಚಮವೇದ’ವೆಂಬ ಮನ್ನಣೆಯನ್ನು ಪಡೆಯಿತು .

ವ್ಯಕ್ತಿಯೊಬ್ಬನು ಅವನ ಜೀವನದಲ್ಲಿ ಎದುರಾಗುವ ಸನ್ನಿವೇಶಗಳಿಗೆ , ಸ್ಪಂದಿಸುವ ರೀತಿಯೇ ಅವನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ . ವಿಭಿನ್ನ ವ್ಯಕ್ತಿಗಳು , ವಿಭಿನ್ನ ಪರಿಸ್ಥಿತಿಗಳಲ್ಲಿ , ತಮ್ಮ ಸಂಸ್ಕಾರಕ್ಕನುಗುಣವಾಗಿ ವ್ಯವಹರಿಸಿದ ರೀತಿ ನೀತಿಗಳಿಂದಲೇ ಸಾಮಾಜಿಕ ಅಲ್ಲೋಲ ಕಲ್ಲೋಲಗಳಿಗೆ ಪ್ರೇರಣೆಯಾದ ಅದ್ಭುತ ಕಥಾನಕವೇ ಮಹಾಭಾರತ .

ಪ್ರಧಾನವಾಗಿ ಮಹಾಭಾರತದಲ್ಲಿ ಭೀಷ್ಮ, ವಿದುರ, ಧರ್ಮನಂದನ ಮುಂತಾದ ಸತ್ವಗುಣ ಪ್ರಧಾನ ಪಾತ್ರಗಳು ; ಭೀಮ , ಅರ್ಜುನ, ದುರ್ಯೋಧನ , ಕರ್ಣ, ಅಭಿಮನ್ಯು, ದ್ರೌಪತಿ - ಮುಂತಾದ ರಾಜಸ ಗುಣ ಪ್ರಧಾನ ಪಾತ್ರಗಳು ; ಶಕುನಿ, ಶಿಶುಪಾಲ, ಜರಾಸಂಧ , ದುಶ್ಯಾಸನ - ಮುಂತಾದ ತಾಮಸಗುಣ ಪ್ರಧಾನ ಪಾತ್ರಗಳೂ ಮತ್ತು ಈ ಎಲ್ಲ ಗುಣಗಳ ತಾಕಲಾಟದಿಂದ ಉದ್ಭವಿಸುವ ವಿವಿಧ ರೀತಿಯ ಉತ್ಪಾತಗಳಿಂದ ಕಿಂಚಿತ್ತೂ ವಿಚಲಿತವಾಗದ , ಸ್ಥಿತಪ್ರಜ್ಝ ಪಾತ್ರವಾಗಿ ಕೃಷ್ಣನೂ ಸೇರಿ , ಮಹಾಭಾರತ ಭಾರತೀಯ ತತ್ವಜ್ಝಾನ ಮತ್ತು ಸಂಸ್ಕೃತಿಯ ಪ್ರತ್ಯಕ್ಷ ದರ್ಶನ ಮಾಡಿಸುವ ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದೆ .

ಈ ಮಹಾಭಾರತಾಂತರ್ಗತವಾಗಿ ಸನಾತನ ತತ್ವಶಾಸ್ತ್ರದ ಸಾರಭೂತ ವಿವರಣೆಯಾಗಿ , ಭಗವದ್ಗೀತೆ ಮೈದಾಳಿದೆ .ವೇದ, ಉಪನಿಷತ್ತುಗಳ ಗಹನ ತತ್ವಗಳೇ ಇಲ್ಲಿ ಸರಳಗೊಂಡು ಸೂಕ್ತ ವಿವರಣೆಗಳೊಂದಿಗೆ ಲಭ್ಯವಾಗುತವೆ .ಅದರಿಂದಾಗಿಯೇ
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ , ಪಾರ್ಥೋವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಮ್ ಮಹತ್ . ಗೀತಾಧ್ಯಾನ ಶ್ಲೋಕ ೪

ಉಪನಿಷತ್ತುಗಳೆಂಬ ಹಸುಗಳಿಂದ , ಗೋಪಾಲ ನಂದನನಾದ ಕೃಷ್ಣನು , ಪಾರ್ಥನೆಂಬ ಕರುವಿನ ಮೂಲಕವಾಗಿ ಮಹತ್ತರವಾದ ಗೀತಾಮೃತವನ್ನು ಕರೆದನೆಂದು , ಗೀತೆಗೂ ಉಪನಿಷತ್ತುಗಳಿಗೂ ಇರುವ ಅವಿನಾಸಂಭಂಧವನ್ನು ಸೂಚಿಸಲಾಗಿದೆ .

ಸಹಸ್ರಾರು ವರ್ಷಗಳಿಂದ ತತ್ವಜ್ಝಾನಿಗಳ , ದಾರ್ಶನಿಕರ ಕೈದೀವಿಗೆಯಾಗಿ ,ಪ್ರಾಪಂಚಿಕರ ಆರಾಧನಾ ಗ್ರಂಥವಾಗಿ , ಸಾಗಿ ಬರುತ್ತಿರುವ ಭಗವದ್ಗೀತೆಯಲ್ಲಿ ಅದರ ಯಶಸ್ಸಿಗೆ ಕಾರಣವಾದ ಅನೇಕ ಅಂಶಗಳಿವೆ . ಈ ಲೇಖನದಲ್ಲಿ , ಅತ್ಯಂತ ಕುತೂಹಲಕರವೂ ; ವಿಚಿತ್ರವೂ ; ವಿಸ್ಮಯಜನಕವೂ ಆದ ಮನುಷ್ಯನ ಮನಸ್ಸನ್ನು ಕುರಿತು ಭಗವದ್ಗೀತೆ ನೀಡುವ ವಿವರಣೆಗಳನ್ನು ವಿವೇಚಿಸಲಾಗಿದೆ .

ಜಗತ್ತಿನ ದಂಗುಬಡಿಸುವ ವೈಜ್ಝಾನಿಕ ಸಾಧನೆಗಳು , ಮೊದಲು ಮೈದಾಳಿದ್ದು ಮನುಷ್ಯನ ಮನಸ್ಸಿನಲ್ಲಿ . ಅದ್ಭುತ ಕಲಾಕೃತಿಗಳೂ , ವಿಸ್ಮಯ ತರಿಸುವ ಭವ್ಯಮಂದಿರಗಳೂ, ರೂಹು ತಳೆದದ್ದು ಮನುಷ್ಯನ ಮನಸ್ಸಿನಲ್ಲಿ . ಮನುಷ್ಯಕೃತ ಸಮಸ್ತ ಸಾಧನೆಗಳ ಮೂಲ ನಕ್ಷೆ ಸಿದ್ದವಾಗಿದ್ದು, ಮಾನವನ ಕ್ರಿಯಾಶೀಲ ಮನಸ್ಸಿನಲ್ಲಿಯೇ ! ಮನಸ್ಸು ಬಹಿರ್ಮುಖವಾಗಿ ಹರಿದಾಗ ಭೌತಿಕ ಸಾಧನೆಗಳನ್ನೂ : ಅಂತರ್ಮುಖವಾಗಿ ಹರಿದಾಗ ಆಧ್ಯಾತ್ಮಿಕ ಸಾಧನೆಗಳನ್ನೂ ಸಾಧಿಸಬಲ್ಲ ವಿಚಿತ್ರ ಶಕ್ತಿ .

ಇದೇ ಶಕ್ತಿ , ಕೊಲೆ, ಅತ್ಯಾಚಾರ , ದುರಾಸೆ , ಅಸೂಯೆಗಳ ತವರು ಮನೆಯೂ ಆಗಿ , ಈ ಲೋಕದ ಪಾಪಕೃತ್ಯಗಳಿಗೆ , ಮತ್ತು ಇಲ್ಲಿನ ನೆಮ್ಮದಿಯ ನಾಶಕ್ಕೆ , ಕಾರಣೀಭೂತವಾಗಿರುವುದು ವಿಚಿತ್ರವಾದರೂ ಸತ್ಯ .ಹೀಗೆ ಪರಮಾವಧಿ ಅಧೋಗತಿಗೂ ಇಳಿಯಬಲ್ಲ ,ಹಾಗೆಯೇ ಮಾನವಾನುಕಂಪದಿಂದ , ಜೀವದಯಾಭಾವದಿಂದ ಊಹಿಸಲಾರದಷ್ಟು ಉತ್ತುಂಗದ ಶಿಖರಕ್ಕೂ ಏರಬಲ್ಲ ,ವಿಚಿತ್ರ ಸ್ವಭಾವದ ಮನಸ್ಸು
ಅಧ್ಯಯನ ಮಾಡಿದಷ್ಟೂ ನಿಗೂಢ .

ಈ ಮನಸ್ಸು ಎಂಬುದು ಒಂದು ಕಡಿವಾಣವಿಲ್ಲದ ಕುದುರೆಯಂತೆ . ಸವಾರನು ಎಷ್ಟೇ ಶಕ್ತಿಶಾಲಿಯಗಿದ್ದರೂ , ಕಡಿವಾಣವಿಲ್ಲದ ಕುದುರೆ ಅವನನ್ನು ಪ್ರಪಾತಕ್ಕೆ ಕೆಡವಿ , ಕಾಡುಪಾಲು ಮಾಡಿ ಓಡಿಹೋಗಬಲ್ಲದು . ಸರಿಯಾದ ಕಡಿವಾಣ ತೊಡಿಸಿದರೆ , ಸವಾರನನ್ನು ಅವನ ಗುರಿಗೆ ತಲುಪಿಸಲೂ ಬಲ್ಲದು. ಈ ರೀತಿಯ ಅದ್ಭುತ ಶಕ್ತಿಸಂಪನ್ನವಾದ ಮನಸ್ಸನ್ನು ,ಹದ ಮಾಡುವ , ಸಂಸ್ಕರಿಸುವ ,ತನ್ಮೂಲಕ ಉಪಯುಕ್ತಗೊಳಿಸಿ, ಲೋಕ ಕಲ್ಯಾಣದ ಕಡೆಗೆ ಅದನ್ನು ತಿರುಗಿಸುವ, ವಿವಿಧ ಉಪಾಯಗಳನ್ನು ಗೀತೆಯಲ್ಲಿ ಅತ್ಯಂತ ಉಚಿತವಾಗಿ ವಿವರಿಸಲಾಗಿದೆ .

ಮನಸ್ಸಿನ ಮೂಲಭೂತ ಸ್ವರೂಪಗಳನ್ನೂ , ಅದರ ದೌರ್ಬಲ್ಯ ; ಸಾಮರ್ಥ್ಯಗಳನ್ನೂ ಸಹ ಗೀತೆಯ ರಚನಕಾರರು ಸ್ಪಷ್ಟವಾಗಿ ಅರ್ಥಮಾಡೀಕೊಂಡು , ಮನೋವೈಜ್ಝಾನಿಕವಾಗಿ ವಿಶದೀಕರಿಸಲು ಸಮರ್ಥರಾಗಿದ್ದಾರೆ . ಈ ದೃಷ್ಟಿಯಿಂದಲೂ ಭಗವದ್ಗೀತೆ ಒಂದು ಪರಿಣಾಮಕಾರಿ ಮನಃಶಾಸ್ತ್ರೀಯ ಗ್ರಂಥವೂ ಆಗಿದೆ . ( ಮುಂದುವರಿಯುವುದು)

  • ಜ್ಞಾನವಾಹಿನಿ
~.~
  • Login or register to post comments
  • 295 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸ್ಸು ( ಮತ್ತೂ ಮುಂದುವರಿದುದು)
  • ಭಗವದ್ಗೀತೆಯ ಬೆಳಕಿನಲ್ಲಿ (ಮುಂದುವರಿದುದು)
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು (ಇನ್ನೂ ಮುಂದುವರಿದುದು )
  • ವಚನ ಚಿಂತನ: ೫: ಮನಸ್ಸು ಘನ
  • ಕಾರಂತರ ಜೀವಂತ ಪಾತ್ರಗಳು
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator