ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸ್ಸು ( ಮತ್ತೂ ಮುಂದುವರಿದುದು)

December 22, 2007 - 10:51am — csomsekraiah

ಮುನಿಯಿದೇನೈ ಚಿತ್ರವಾಯ್ತ
ರ್ಜುನನ ಚಿತ್ತದೊಳೇನು ತಾಮಸ
ಜನಿತ ಕರ್ಮವೋ ಶುದ್ದ ತತ್ವ ಜ್ಝಾನ ಜಲಧಿಯಲಿ /
ಮನ ಮುಳುಗಿ ಮಗುಳೆದ್ದು ಶಿತಿಕಂ
ಠನಲಿ ಶಸ್ತ್ರಾಸ್ತ್ರವನು ಬೇಡಿದ
ನೆನಲು ಜನಮೇಜಯಗೆ ಮುನಿಯಿಂತೆಂದ ನಸು ನಗುತ //

ಅರಸ ಕೇಳೈ ರಾಜಸಾಂತಃ
ಕರಣವದು ಕಾಮ್ಯೈಕ ಸಿದ್ದಿ
ಸ್ಫುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ /
ಹರ ಚರಣ ನಿಕ್ಷಿಪ್ತ ಚೇತಃ
ಸ್ಫುರಣೆ ತತ್ಪರಿಯಂತ ಉಕ್ಕಿತು
ಪರಮ ವಸ್ತು ನಿಜ ಸ್ವಭಾವಕೆ ಚಿತ್ರವೇನೆಂದ // ( ಕುಮಾರ ವ್ಯಾಸ ಮಹಾಭಾರತ , ಅರಣ್ಯ ಪರ್ವ , ಸಂಧಿ ೮ , ಪದ್ಯ ೮-೯ )

ಕೇವಲ ಪವನಾಹಾರದಿಂದ ,ನಿಷ್ಕಲಿತ ಶಿವಪದ ಭಕ್ತಿ ಸುಧೆಯಲಿ , ಪರಶಿವನನ್ನೇ ಮೆಚ್ಚಿಸಿದ ಪಾರ್ಥ , ಅವನಿಂದ ಬೇಡಿದ್ದು ಕೇವಲ ವಿನಾಶಕಾರಿಯಾದ ಪಾಶುಪತಾಸ್ತ್ರವನ್ನು ! ಇದು ವಿಚಿತ್ರವಲ್ಲವೇ? ಎಂಬುದು ಜನಮೇಜಯನ ಉದ್ಗಾರ ."ವಿಚಿತ್ರವೇನು ಬಂತು ? ಅವನದು ರಾಜಸಾಂತಃಕರಣ ; ತಪಸ್ಸಾದರೂ ’ಕಾಮ್ಯೈಕಸಿದ್ದಿಸ್ಪುರಣೆಗೋಸುಗ’ ನಿಜ ಸ್ವಭಾವಕ್ಕೆ ವಿಚಿತ್ರವೇನು ಬಂತು ?" ಎಂದು ಮುನಿ ಸಮಾಧಾನವನ್ನು ಹೇಳುತ್ತಾನೆ . ಅರ್ಜುನನ ಸ್ವಭಾವವೆಂತಹುದೆಂಬುದನ್ನು ಕವಿ ಅವನ ಬಾಯಲ್ಲೇ ಹೇಳಿಸುತ್ತಾನೆ -

ನಿಮಂತ್ರಣೋತ್ಸವೋ ವಿಪ್ರಾಃ
ಗಾವೋ ನವ ತೃಣೋತ್ಸವಃ
ಸುಭರ್ತಾರೋತ್ಸವಾ ನಾರ್ಯಾಃ
ಅಹಂ ಕೃಷ್ಣ ರಣೋತ್ಸವಃ ( ಕುಮಾರವ್ಯಾಸ ಮಹಾಭಾರತ , ಅರಣ್ಯ ಪರ್ವ,ಸಂಧಿ ೩ ,ಪದ್ಯ ೨೯ಕ್ಕೆ ಮೊದಲ ಶ್ಲೋಕ)

ಬೇರೆಯವರ ಮನೆಯ ಊಟಕ್ಕೆ ವಿಪ್ರರು ,ಹೊಸ ಹುಲ್ಲಿಗೆ ಪಶುಗಳು , ಪತಿವ್ರತೆಯರು ಗಂಡನ ಬರವಿಗೆ ಉತ್ಸಾಹಿಸುವ ಹಾಗೆ ಕೃಷ್ಣಾ ನನಗೆ ರಣರಂಗವೆಂದರೆ ಉತ್ಸವವಿದ್ದಂತೆ .ಹೀಗೆ ಪ್ರತಿಯೊಬ್ಬ ಮನುಷ್ಯನೂ, ಅವನ ಸ್ವಭಾವ ಏನೋ ಅವನು ಅದೇ ಆಗಿರುತ್ತಾನೆ .ಅದೇ ರೀತಿ ಧರ್ಮನಂದನನ ಸ್ವಭಾವವನ್ನು ಗಮನಿಸಿ :

ಮಾತೃವತ್ ಪರದಾರಾಣಿ
ಪರ ದ್ರವ್ಯಾಣೀ ಲೋಷ್ಟವತ್
ಆತ್ಮವತ್ ಸರ್ವ ಭೂತಾನಿ
ಯಃ ಪಶ್ಯತಿ ಸ ಪಶ್ಯತಿ (ಕುಮಾರವ್ಯಾಸ ಮಹಾಭಾರತ , ಅರಣ್ಯಪರ್ವ , ಸಂಧಿ೩ ಪದ್ಯ ೨೬ಕ್ಕೆ ಮೊದಲ ಶ್ಲೋಕ)

" ಪರರ ಸತಿ ನನ್ನ ತಾಯಿ , ಪರರ ಧನ ಮಣ್ಣಿನ ಸಮಾನ , ಪರರ ನೋವೇ ನನ್ನ ನೋವು ಈ ರೀತಿಯಾಗಿ ನೋಡೂತ್ತೇನೆ ಮತ್ತು ಭಾವಿಸುತ್ತೇನೆ ,, ಇದು ಧರ್ಮನಂದನನ ಸ್ವಭಾವ .

ಈ ವಿವಿಧ ರೀತಿಯ ಮನಃಸ್ಥಿತಿಗಳನ್ನು , ಭಗವದ್ಗೀತೆ ಮೂರು ಮುಖ್ಯ ವಿಭಾಗಗಳಾಗಿ ಗುರುತಿಸುತ್ತದೆ . ಅವು ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಗುಣಗಳು . ಈ ಮೂರು ಮುಖ್ಯ ಗುಣಗಳ ಬೇರೆ ಬೇರೆ ರೀತಿಯ ಮಿಶ್ರಣಗಳೇ , ಇಡೀ ಜಗತ್ತಿನ ಕೋಟಿಗಟ್ಟಲೆ ವಿವಿಧ ರೀತಿಯ ಮನಸ್ಸಿನ ವೈಖರಿಗಳು .ಭಗವದ್ಗೀತೆ ಇನ್ನೂ ಮುಂದುವರಿಯುತ್ತಾ , ಈ ತ್ರಿಗುಣಗಳೆಂಬುವು ಸಮಸ್ತ ವಿಶ್ವದ ಚೇತನಾಚೇತನಗಳೆಲ್ಲದರ ಕ್ರಿಯೆಗಳ , ಮೂಲವೆಂದು ಪ್ರತಿಪಾದಿಸುತ್ತದೆ . ಈ ಮೂರನ್ನು ಮೀರಿದ ವ್ಯಕ್ತಿ ಅಥವಾ ವಸ್ತು , ಈ ಇಡಿಯ ವಿಶ್ವದಲ್ಲೇ ಇಲ್ಲ . ಎಂಬುದೇ ಅದರ ಪ್ರತಿಪಾದನೆ . ಈ ಶರೀರದಲ್ಲಿ ಆತ್ಮನನ್ನು ಬಂಧಿಸುವ ಬಂಧಕ ಶಕ್ತಿಯೂ ಸಹ ಇವೇ ತ್ರಿಗುಣಗಳು .

ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿ ಸಂಭವಾಃ /
ನಿಬಧ್ನಂತಿ ಮಹಾ ಬಾಹೋ ದೇಹೇ ದೇಹಿನಮವ್ಯವಯಂ // ( ಭಗವದ್ಗೀತೆ ಅ ೧೮ , ಶ್ಲೋ ೫ )

ಪ್ರಕೃತಿಯಲ್ಲಿ ಸಂಜನಿಸುವ ಸತ್ವ, ರಜಸ್ , ತಮಸ್ ಈ ಗುಣಗಳೇ ಅವ್ಯನೆನಿಸಿದ ಆತ್ಮನನ್ನು , ಈ ಶರೀರದಲ್ಲಿ ಬಂಧಿಸಿಡುವವು .

ತತ್ರ ಸತ್ವಂ ನಿರ್ಮಲತ್ವಾ ತ್ಪ್ರಕಾಶಕಮನಾಮಯಂ /
ಸುಖ ಸಂಗೇನ ಬಧ್ನಾತಿ ಜ್ಝಾನ ಸಂಗೇನಚಾನಘ // ( ಭಗವದ್ಗೀತೆ , ಅ ೧೪ , ಶ್ಲೋ ೬)

ಸತ್ವ ಗುಣವು ನಿರ್ಮಲವಾದುದರಿಂದ , ಪ್ರಕಾಶಪೂರ್ಣವೂ , ನಿರುಪದ್ರವವೂ ಆಗಿದೆ ; ಅದು ಸುಖ ಮತ್ತು ಜ್ಝಾನಗಳಿಂದ , ಶರೀರದಲ್ಲಿ ಆತ್ಮನನ್ನು ಬಂಧಿಸುತ್ತದೆ .

ರಜೋ ರಾಗಾತ್ಮಕಮ್ ವಿದ್ದಿ ತೃಷ್ಣಾ ಸಂಗ ಸಮುದ್ಬವಂ /
ತನ್ನಿಬಧ್ನಾತಿ ಕೌಂತೇಯ ಕರ್ಮ ಸಂಗೇನ ದೇಹಿನಮ್ //

ರಜವು ರಾಗಾತ್ಮಕವದುದು , ಅದು ತೃಷ್ಣೆ ಮತ್ತು ಸಂಗ ಇವುಗಳನ್ನುಂಟುಮಾಡುತ್ತಾ , ಕರ್ಮ ಸಂಗದಿಂದ ಆತ್ಮನನ್ನು ಶರೀರದಲ್ಲಿ ಬಂಧಿಸುತ್ತದೆ .

ತಮಸ್ತ್ವಜ್ಝಾನಜಂವಿದ್ದಿ ಮೋಹನಂ ಸರ್ವ ದೇಹಿನಾಂ /
ಪ್ರಮಾದಾಲಸ್ಯ ನಿದ್ರಾಭಿಸ್ತನ್ನಿಬಧ್ನಾತಿ ಭಾರತ // (ಭಗವದ್ಗೀತೆ ಅ ೧೪ ಶ್ಲೋ ೮)

ಅಜ್ಝಾನ ಮೂಲದಿಂದ ಹುಟ್ಟುವ ತಮವು , ಸಕಲ ಆತ್ಮರನ್ನು ಮೋಹದಿಂದ, ತಪ್ಪು, ಸೋಮಾರಿತನ ಹಾಗೂ ನಿದ್ರೆಗಳಿಂದ ದೇಹದಲ್ಲಿ ಬಂಧಿಸುವುದು .

ಈ ಮೂರು ರೀತಿಯ ಮೂಲ ಸ್ವಭಾವಗಳಿಂದಲೇ ಜಗತ್ತಿನ ಎಲ್ಲ ರೀತಿಯ ವಿವಿಧ ಸ್ವಭಾವಗಳು ಹೇಗೆ ಪ್ರಕಟವಾಗುವುವೆಂಬುದನ್ನು , ಅವುಗಳ ಗುಣ , ಕರ್ಮ , ಲಾಭ, ನಷ್ಟ ಮುಂತಾದ ಸಮಸ್ತ ಪರಿಣಾಮಗಳನ್ನು ಭಗವದ್ಗೀತೆಯ ೧೪,೧೬ ಮತ್ತು ೧೭ನೇ ಅಧ್ಯಾಯಗಳಲ್ಲಿ ವಿವರವಾಗಿ ಚರ್ಚಿಸಲಾಗಿದೆ . (ಮುಂದುವರಿಯುವುದು )

  • ಜ್ಞಾನವಾಹಿನಿ
~.~
  • Login or register to post comments
  • 223 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಗವದ್ಗೀತೆಯ ಬೆಳಕಿನಲ್ಲಿ (ಮುಂದುವರಿದುದು)
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು (ಇನ್ನೂ ಮುಂದುವರಿದುದು )
  • ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೧)
  • ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೨)
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator