ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

December 22, 2007 - 6:08pm — venkatesh

ಚೆಂಬೂರ್ ಕರ್ನಾಟಕ ಸಂಘದ ಸ್ಥಾಪನೆಯಾಗಿ ೫೨ ವರ್ಷಗಳಾಗಿವೆ. ಅದರ ಬಂಗಾರದ ಹಬ್ಬವನ್ನು ಈದಿನ ಆಚರಿಸಲಾಗುತ್ತಿದೆ.

೨೭ ವರ್ಷಗಳ ಹಿಂದೆ, ಬೊಂಬಾಯಿನ ಶಣ್ಮುಖಾನಂದ ಹಾಲ್ ನಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿದ ನೆನಪು ಇನ್ನೂ ಮಾಸಿಲ್ಲ. ಮಹಾರಾಷ್ಟ್ರರಾಜ್ಯಸರಕಾರದ ಶಾಸಕಿಯಾಗಿದ್ದ, ಕನ್ನಡಿತಿ, ಡಾ. ಲಲಿತಾರಾವ್ ರವರ ಘನ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ೬ ಮಂದಿಸಮಾಜಸೇವಕರನ್ನು ಗುರುತಿಸಿ ಸನ್ಮಾನಿಸಿದ್ದರು. ಈ ಹಿರಿಯ ಕನ್ನಡ ಸಂಘವು, ಪ್ರತಿಷ್ಠಿತ ಕನ್ನಡ ಹಾಗೂ ಆಂಗ್ಲ ಶಾಲೆಯೊಂದನ್ನು ನಡೆಸಿಕೊಂಡುಬರುತ್ತಿದೆ.

ಈದಿನ, ತಾ, ೨೨ ರ, ಡಿಸೆಂಬರ್, ೨೦೦೭, ರ ಅಪರಾನ್ಹ, ೧ ಗಂಟೆಗೆ, ಚೆಂಬೂರ್ ಫೈನ್ ಆರ್ಟ್ಸ್ ಸೊಸೈಟಿಯ, " ಶಿವಸ್ವಾಮಿ ಸಭಾಂಗಣ, "ದಲ್ಲಿ, ಸುವರ್ಣಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ, ಶ್ರೀ ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಗೌರವ ಅತಿಥಿಗಳಾಗಿ, ಬಿಸಿ.ಸಿ.ಐ. ನ ಮುಖ್ಯ ಆಡಳಿತಾಧಿಕಾರಿ, ಪ್ರೊ. ರತ್ನಾಕರ ಶೆಟ್ಟಿ, ಮತ್ತು ಕೈಗಾರಿಕೋದ್ಯಮಿ, ಬಿ. ಡಿ. ಶೆಟ್ಟಿಯವರು ಉಪಸ್ಥಿತರಿರುವರು.

ಸಮಾರಂಭದಲ್ಲಿ, ಸಾಮಾಜಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಸಾಧನೆಗಳಿಗಾಗಿ ಬಿಲ್ಲವರ ಸಂಘದ ಅಧ್ಯಕ್ಷ, ಶ್ರೀ. ಜಯ . ಸಿ. ಸುವರ್ಣರಿಗೆ, ಬಿರುದನ್ನು ದಯಪಾಲಿಸಿ ಗೌರವಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಗಮವಾರ್ಹ ಸೇವೆಯನ್ನು ಸಲ್ಲಿಸಿದ, ೭ ಮಂದಿ ಮಹನೀಯರಿಗೆ, ಗೌರವವನ್ನು ಸಲ್ಲಿಸಿ, ಸನ್ಮಾನಿಸಲಾಗುತ್ತದೆ. ಕಲಾಸೌರಭದ ಸಂಗೀತ ರಸಮಂಜರಿ ಕಾರ್ಯಕ್ರಮದೊಂದಿಗೆ ಶಾಲಾಮಕ್ಕಳು, ಸಂಘದ ಸದಸ್ಯರುಗಳಿಂದ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದಾಗಿದೆ.

೧. ಹಿರಿಯ ಕಾದಂಬರಿಕರ, ಶ್ರೀ. ವ್ಯಾಸರಾಯಬಲ್ಲಾಳರು :

ವ್ಯಾಸರಾಯಬಲ್ಲಾಳರು, ೫೦ ವರ್ಷಕ್ಕಿಂತ ಹೆಚ್ಚು ಸಮಯ ಮುಂಬೈ ನ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಖ್ಯಾತ ಕಾದಂಬರಿಗಾರ ಬೆಂಗಳೂರಿನಲ್ಲಿ ವಿಶ್ರಾಂತಜೀವನ ನಡೆಸುತ್ತಿದ್ದಾರೆ.

೨. ಪ್ರಖ್ಯಾತಪತ್ರಿಕಾಕರ್ತ, ಶ್ರೀ. ಎಂ. ವಿ.ಕಾಮತ್ :

ಎಂ. ವಿ.ಕಾಮತ್, ರಾತ್ರಿಶಾಲೆಯಲ್ಲಿ ಓದಿ ಪತ್ರಿಕೋದ್ಯಮದಲ್ಲಿ ಒಂದು ತಮ್ಮದೇ ಆದ ಛಾಪನ್ನು ಸೇರಿಸಿರುವ ಪ್ರಖ್ಯಾತ ಅಂಕಣಕಾರ, ಪತ್ರಿಕಾಕರ್ತರು. ೧೯೭೮-೧೯೮೧ ರಲ್ಲಿ, ಇಲ್ಲ್ಯು ಸ್ಟ್ರೇಟೆಡ್ ವೀಕ್ಲಿಯ ಸಂಪಾದಕರ್‍ಆಗಿಯೂ ದುಡಿದಿದ್ದಾರೆ.

೩. ಅಂಕಲ್ ಶ್ರೀ. ಅನಂತ ಪೈ :

ಅನಂತ ಪೈ. ಮಕ್ಕಳ ಮಾನಸಿಕ ವಿಕಾಸಕ್ಕೆ ಹೆಸರಾದ ಅವರು, ಅಮರಚಿತ್ರ ಕಥೆಯ ಮೂಲಸ್ಥಾಪಕರು. ಈಗ, ಅಮರಚಿತ್ರ ಕಥಾಮಾಲಿಕೆಯನ್ನು ಅಭ್ಯಸಿಸಿ, ಅದರಲ್ಲಿ ಪಿ. ಎಚ್. ಡಿ ಮಾಡಲು ಕೆಲವರು ಉದ್ಯುಕ್ತರಾಗಿರುವುದು ಹೆಮ್ಮೆಯ ಸಂಗತಿ.

೪. ರಂಗ ಕಲಾವಿದ ಶ್ರೀ. ಸದಾನಂದ ಸುವರ್ಣ :

ಸದಾನಂದ ಸುವರ್ಣ ಮುಂಬೈ ರಂಗಭೂಮಿಗೆ ಹೊಸದನ್ನು ತಂದ ಕಲಾವಿದ.

೫. ಶ್ರೀ. ಜಯ ಸಿ. ಸುವರ್ಣ :

ಜಯ ಸಿ. ಸುವರ್ಣ ಇವರೊಬ್ಬ ಯಶಸ್ವಿ ಉದ್ಯಮಿ. ಸಮರ್ಥ ಜನ-ನಾಯಕ. ಬಿಲ್ಲವ ಮಹಾಮಂಡಲದ ವ್ಯವಸ್ಥಾಪಕ ಅಧ್ಯಕ್ಷರು.

೬. ಕವಿ, ಶ್ರೀ. ಬಿ. ಎಸ್. ಸನದಿ :

ಬಿ. ಎಸ್. ಸನದಿ ಬೆಳಗಾವಿ ಜಿಲ್ಲೆಯ ಸಿಂದೊಳಿಯ ಕವಿಯವರು, ಬಹುಭಾಷಾವಿಷಾರದರು, ಭಾವಗೀತೆಗಳನ್ನು ಬರೆಯುತ್ತಾರೆ ಹಾಡುತ್ತಾರೆ. ಎರಡು ದಶಕಗಳಿಂದ ಮುಂಬೈನಲ್ಲೆ ಇದ್ದು, ಕರ್ನಟಕ ಸಂಘದ ಕನ್ನಡ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದವರು.

೭. ಶ್ರೀ. ಸದಾನಂದ ಎಮ್. ಶೆಟ್ಟಿ :

ಸದಾನಂದ ಎಮ್. ಶೆಟ್ಟಿಯವರು, ಕೊಡುಗೈ ದಾನಿ. ರಾತ್ರಿಶಾಲೆಯಲ್ಲಿ ಕಲಿತು, ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಮ್. ಬಿ. ಎ ಗಳಿಸಿದ, ಹಾಗೂ ೪ ಎಸ್ ಸಂಸ್ಥೆಯ ಸ್ಥಾಪಕರು. ಕಳೆದ ವರ್ಷವೇ ಕಣ್ಣುಮುಚ್ಚಿದ ಶೆಟ್ಟಿಯವರು, ಒಬ್ಬ ಸಮರ್ಥ ಉದ್ಯಮಿ, ಹಾಗೂ ಚಿಂತಕರು. ಸುಮಾರು ದಶಕಕಾಲ ಮುಂಬೈಕರ್ನಾಟಕ ಸಂಘದ ಅಧ್ಯಕ್ಷರಾಗಿ, ಅದಕ್ಕೆ ಗೌರವ ಸ್ಥಾನವನ್ನು ತಂದುಕೊಟ್ಟವರು. ಈ ಚೇತನಕ್ಕೆ, ಮರಣೋತ್ತರ ಸನ್ಮಾನವನ್ನು ಮಾಡಲಾಗುತ್ತಿದೆ.

-ಕರ್ನಾಟಕ ಮಲ್ಲ ದೈನಿಕಪತ್ರಿಕೆ.

  • ಪ್ರಚಲಿತ
~.~
  • Login or register to post comments
  • 284 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 23, 2007 - 4:35pm — ಸಂಗನಗೌಡ

ಉ: ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

ಸಂಗನಗೌಡ's picture

ಬಾಳಾಸಾಹೇಬರಿಗೆ ಹೇಳಬೇಡಿ... ಉರ್ಕೊಂತಾರೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 24, 2007 - 5:32am — venkatesh

ಉ: ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

venkatesh's picture

ಈತರಹದ ಭಾವನೆಗಳಿಗೆ ಈಗ ಅವಕಾಶವಿಲ್ಲ. ಮಹಾರಾಷ್ಟ್ರದ ಜನತೆಗೆ ಬಾ......ಬ್ರು. ಒಬ್ಬ ಪ್ರತ್ಯಕ್ಷ ದೈವ. ಅದಲ್ಲದೆ ಮುಂಬೈ ನಗರದ ಬಿ. ಎಮ್. ಸಿ. ಯಲ್ಲಿ ಅವರದೇ ಕೈವಾಡ. ಗೆದ್ದಿದ್ದಾರೆ. ಈಗ ಏನಿದ್ದರು ಹಣ ಮಾಡುವುದುಮಾತ್ರ ಅವರ ಧ್ಯೇಯ. ಚಿನ್ನದಮೊಟ್ಟೆಯಿಡುವ ಕೋಳಿಗಳ್ಯಾರು ? ನಮ್ಮ ಕನ್ನಡ ದ ಶೆಟ್ಟಿ ಬಾಂಧವರು. ಅವರಿಲ್ಲದ ಜಾಗ ಯಾವುದು ಶಿಲ್ಪ ಶೆಟ್ಟಿಯವರಿಂದ ಬಿ. ಸಿ. ಸಿ ಐ ಮತ್ತೆ ಶಿವಸೇಬೆಯ ಶಾಖಾಪ್ರಮುಖರತನಕ ನಮ್ಮವರೆ. ಜಾಣರು, ಸಮಯಬಂದರೆ ಹೊಡೆದಾಡಲು ಸಿದ್ಧರಾದವರು. ಎಸ್. ಎಮ್. ಕೃಷ್ಣರವರಿಗೆ ಇಲ್ಲಿ ಕೂಡಲು ಮೊದಲು ಸಹಾಯಮಾಡಿದ ಧೀರರು ಯಾರು ? ಶಿವಸೆನೆಗೆ ಮುಹ್ ತೊಡ್ ಜವಾಬ್ ಅವರಲ್ಲದೆ ಬೇರೆಯಾರಿಗೆ ಕೊಡಲು ಸಾಧ್ಯಹೇಳಿ, ಸಂ ....ಡ್ರೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 24, 2007 - 11:27pm — ಸಂಗನಗೌಡ

ಉ: ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

ಸಂಗನಗೌಡ's picture

ನಾವುಗಳಿಲ್ಲಿ ಕರ್ನಾಟಕದಲ್ಲಿ ಇದ್ಕೊಂಡು, "ಮರಾಟಿಗರು ಒಂದೊಮ್ಮೆ ಕನ್ನಡಿಗರೇ ಆಗಿದ್ರು" ಅಂತ ಬಾಲಗಂಗಾದರ ಟಿಳಕರು ಹೇಳಿದ್ರು ಅಂತ... ಮಹಾರಾಸ್ಟ್ರ ಒಂದೊಮ್ಮೆ ಕನ್ನಡವೇ ಆಗಿತ್ತು ಅಂತ ಏನೆಲ್ಲಾ ಕೂಗಾಡಿದ್ರೂ ಮಾಹಾರಸ್ಟ್ರದಲ್ಲಿ ಕನ್ನಡಿಗರ ಪಾಡು ಅಸ್ಟೇನು ಚೆನ್ನಾಗಿಲ್ಲ ಬಿಡಿ... ಇಂಟರನೆಟ್ಟಿನಲ್ಲಿ ಸಿಗುವ ಮಾರಾಟಿಗರೆಲ್ಲ ಅಂತವ್ರೇ.... ಅವರಿಗೆ ತಮಿಳರು ಅಂದ್ರೆ, ತೆಲುಗರು ಅಂದ್ರೆ ಎಲ್ಲಿಲ್ಲದ ಆದರ, ಪಿರುತಿ... ಕನ್ನಡಿಗರೆಂದರೆ ಆಗದು.. ಮರಾಟಿ ಕನ್ನಡದಿಂದಲೇ ಎಲ್ಲ ಸಾಮಗ್ರಿ ಪಡಕೊಂಡು ಬೆಳೆದಿದ್ದು ಅನ್ನೋದು ದಿಟ ತಾನೆ? ಕಾನಾಡಿ ದೇವ ಪಾಂಡುರಂಗನೆಂದರೆ ಅವರಿಗೆ ತುಂಬಾ ಭಕುತಿ, ಪಾಂಡುರಂಗ ಕನ್ನಡಿಗ ಅಂತ ಗೊತ್ತಾದರೆ ಅವರಿಗೆ ತುತ್ತು ಗಂಟಲೊಳಗೇ ಇಳಿದೀತಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 24, 2007 - 11:33pm — ಸಂಗನಗೌಡ

ಉ: ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

ಸಂಗನಗೌಡ's picture

ಜಾಣರು ಎಲ್ಲೇ ಹೋದ್ರೂ ಅವರಿಗೆ ಬೆಲೆ ಇದೆ.. ತಾಯ್ನುಡೀ ಲೆಕ್ಕಕ್ಕೆ ಬರಲ್ಲ ಅಲ್ಲಿ... ಇರಲಿ ನಿಮ್ಮ ಮಾತು ಕೇಳಿ ನಲಿವಾಯ್ತು...


ಎಸ್. ಎಮ್. ಕೃಷ್ಣರವರಿಗೆ ಇಲ್ಲಿ ಕೂಡಲು ಮೊದಲು ಸಹಾಯಮಾಡಿದ ಧೀರರು ಯಾರು ?

ಅಯ್ಯೋ ವೆಂಕಟೇಶರೇ ಇಂತಾ ಸೊಗಸಾದ ತಂಪು ತಂಪು ಚಳಿಗಾಲದಲ್ಲಿ ಯಾಕ್ರಿ ಎಸ್.ಎಂ.ಕ್ರಿಸ್ನ ಅವರ ಮಾತು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !
  • ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ
  • " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
  • ದಿ|| ರಾಶಿ (ಡಾ| ಎಂ ಶಿವರಾಂ) ಜನ್ಮ ಶತಾಬ್ದಿ ಸಮಾರೋಪ ಸಮಾರಂಭ
  • ನಾಟಕ ಅಕಾಡೆಮಿ ಪ್ರಶಸ್ತಿಗಳು
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕಡೇಹುಟ್ಟು
    October 7, 2008 - 1:48pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:45pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:39pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:35pm
  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 1:33pm
  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 1:32pm
  • ASHOKKUMAR
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 12:57pm
  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 239 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator