ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪಾಕ-ಫಜೀತಿ

December 25, 2007 - 8:52pm — umadevin

ಮಯ್ಯ ಸರ್ ನ "ನಳಪಾಕ" ಪುಸ್ತಕ ಕೈಗೆ ಬಂದದ್ದೇ ತಡ, ತುದಿಯಿಂದ ಕಡೆಯ ವರೆಗೆ ಓದಿ ಮುಗಿಸಿದೆ. ಮಾತ್ರವಲ್ಲ, ಕ್ರಿಸ್ಮಸ್ ರಜೆಗೆ ಮನೆ ಸೇರಿದ ಕೂಡಲೇ ಒಂದೊಂದಾಗಿ ಎಲ್ಲಾ ಅಡುಗೆ ಮಾಡಿ ಎಲ್ಲರಿಗೂ ತಿನ್ನಿಸಿ 'ಭೇಷ್' ಎನಿಸಿಕೊಳ್ಳಬೇಕೆಂದು ಲೆಕ್ಕ ಹಾಕಿದೆ.
ಅಂತೂ ರಜೆ ಬಂದಾಗ ಮನೆಯಲ್ಲಿ ವಿಧ ವಿಧ ರುಚಿಗಳು ತಯಾರಾಗಲು ಶುರುವಾಗುವುದರ ಜೊತೆಗೆ ಕಾಂಪ್ಲಿಮೆಂಟ್ಸೂ ಬರತೊಡಗಿತು(ನನಗಲ್ಲ, ಮಯ್ಯಸರ್ ಗೆ! ನನ್ನ ಅಡುಗೆಗಳೂ ರುಚಿ ಪಡೆದುಕೊಳ್ಳಲು ಕಾರಣರಾದುದಕ್ಕೆ!) "ನಿನ್ನ ವಯಸ್ಸಿಗೆ ಎಲ್ಲಾ ಅಡುಗೆ ಕಲಿತಿದ್ದೆ" ಎಂದು ಆಗಾಗ ಬೆನ್ನು ತಟ್ಟಿಕೊಳ್ಳುತ್ತಿದ್ದ ಅಮ್ಮನೆದುರು ಮೆರೆದದ್ದೇ ಮೆರೆದದ್ದು! ಸಣ್ಣ ಪುಟ್ಟ ಅಡುಗೆಗಳು ನನಗೆ ಸಂಪೂರ್ಣವಾಗಿ ಕರಗತವಾಗಿದೆ, ಹಾಗಾಗಿ ಇನ್ನು ದೊಡ್ಡ ಅಡುಗೆಗಳಿಗೆ ಕೈ ಹಾಕೋಣವೆಂದು ಯೋಚಿಸಿದೆ. ಸಾರು, ಪಲ್ಯಗಳು ಬಹು ಸುಲಭ. ನನಗೆ ಸವಾಲಾಗಲಾರವು, ಇನ್ನು.... ಎಣ್ಣೆ ತಿಂಡಿಗಳು... ಅಕಾಸ್ಮಾತ್ ಮಾಡಿದ ಹಿಟ್ಟು ಎಡವಟ್ಟಾಗಿ ಎಣ್ಣೆಯೆಲ್ಲಾ ಸುರ್ರ್...ನೆ ಹೀರಿ, ತೆಂಗಿನ ಗಾತ್ರ ಪಡೆದರೆ ತಿನ್ನುವವರಾರು? ಪುಟ ತಿರುವಿದಾಗ "ಕಡ್ಲೆ ಬೇಳೆ ಹೋಳಿಗೆ" ಕಣ್ಣಿಗೆ ಬಿತ್ತು. 'ಗಟ್ಟಿಗಳೆನಿಸಿದರೆ ಇದರಲ್ಲಿ ಎನಿಸಬೇಕು' ಎಂದುಕೊಂಡಾಗ, ಅಮ್ಮ "ಸದ್ಯಕ್ಕೆ ನಿತ್ಯದಡುಗೆಗಳನ್ನು ಕಲಿ" ಎಂದಳು. 'ಮುಖಭಂಗ'ವಾಯಿತು. ಅಮ್ಮನಿಗೇನು ಗೊತ್ತು ನನ್ನ ಪಾಕ ಪ್ರಾವೀಣ್ಯ? ಇರಲಿ, ತೊರಿಸುತ್ತೇನೆಂದು ಪಾಕಶಾಲೆ ಸೇರಿದೆ.
ಒಂದು ಸೇರು ಕಡ್ಲೆ ಬೇಳೆಗೆ ೫೦ ಹೋಳಿಗೆ ಎಂದು ಬರೆದಿತ್ತು. ಸದ್ಯಕ್ಕೆ ೨೫ ಸಾಕಾದುದರಿಂದ ಎಲ್ಲಾ ಅಳತೆಗಳನ್ನು ಅರ್ಧಕ್ಕಿಳಿಸಿದೆ. ರುಚಿ ನೋಡಿದ ಬಳಿಕ ೧೦೦ ಹೋಳಿಗೆಗಳಿಗೆ ಆರ್ಡರು ಬಂದರೂ ಹೆಚ್ಚೇನಲ್ಲ ಎಂಬುದು ನನ್ನ ನಂಬಿಕಯಾಗಿತ್ತು. ನಾದಿದ ಕಣಕ ಒಂದು ಗಂಟೆ ಕಾಲ ಹಾಗೆಯೇ ಇಡಬೇಕಂದು ಪುಸ್ತಕದಲ್ಲಿ ಬರೆದಿತ್ತು. ನಾನು ಎಲ್ಲವನ್ನೂ ಅರ್ಧಕ್ಕಿಳಿಸಿದುದರಿಂದ ಅರ್ಧವೇ ಗಂಟೆ ಮುಚ್ಚಿಟ್ಟು ಕೆಲಸ ಮುಂದುವರಿಸಲು ಹೊರಟಾಗ ಅಮ್ಮನಿಂದ ನಗೆಪಾಟಲಿಗೀಡಾಗಬೇಕಾಯಿತು. ಇನ್ನೊಮ್ಮೆ ಮುಖಭಂಗವಾಯಿತು. ಇರಲಿ, "ಫೈಲ್ಯೂರ್ ಈಸ್ ದ ಸ್ಟೆಪ್ಪಿಂಗ್ ಸ್ಟೋನ್ ಆಫ್ ಸಕ್ಸೆಸ್" ಆದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿರುವ ಹೋಳಿಗೆ ತಯಾರಾಗುವ ಲಕ್ಷಣ ಎಂದಾಯಿತು. ಹೋಳಿಗೆ ತಯಾರಾಗುತ್ತಿದ್ದಂತೆ ಹೂರಣ "ಜವುಗು ಮಣ್ಣಿನ" ರೂಪ ಪಡೆಯಿತು. ಮಣೆ, ಲಟ್ಟಣಿಗೆಗಳೆಲ್ಲಾ ಅಂಟಂಟು ಹಿಟ್ಟುಮಯ. ಅಂತೂ ಹರಸಾಹಸದಿಂದ ಕಾವಲಿಯಿಂದ ಬಲವಂತವಾಗಿ ಹಿಡಿದೆಳೆದು ಬಡಿಸಿದಾಗ, ಹೊಟ್ಟೆಗೆ ಸೇರಿಸಿಕೊಂಡವರ ಮುಖ 'ಹರಳೆಣ್ಣೆ' ಕುಡಿದವರಂತಾಯಿತು. ಹೋಳಿಗೆಯ ಪರಿಮಳವಂತೂ ಇಲ್ಲವೇ ಇಲ್ಲ. ರಾಗಿ ಮುದ್ದೆಯ ಅಂಟು ಬೇರೆ! ಪುಸ್ತಕದಲ್ಲಿರುವಂತೆಯೇ ಮಾಡಿದ್ದೆ, ಹೀಗೇಕಾಯಿತು? ಅಮ್ಮನಿಗೆ ಅನುಮಾನ ಬಂದು ಕಡಲೆಬೇಳೆಯ ಡಬ್ಬ ತೋರಿಸಲು ಹೇಳಿದಾಗ, ಕರೆದೊಯ್ದು ತೋರಿಸಿದೆ. 'ಲಾಫಿಂಗ್ ಗ್ಯಾಸ್' ಮೂಸಿದಂತೆ ನಗಲು ಸುರು ಮಾಡಿದ ಅಮ್ಮ ಡಬ್ಬವನ್ನು ಇತರರಿಗೂ ತೋರಿಸಿದಾಗ ನಗು ಸಾಂಕ್ರಾಮಿಕವಾಯಿತು. ತಲೆ ಬುಡ ಅರ್ಥವಾಗದಿದ್ದ ನನಗೆ ಅದು ತೊಗರಿಬೇಳೆಯೆಂದು ತಿಳಿದಾಗ ೩ ನೇ ಮುಖಭಂಗ! "ಮಾನನಷ್ಟ ಪರಿಹಾರ"ಕ್ಕೆ ಅಪ್ಪನಿಗೆ ಅರ್ಜಿ ಹಾಕಿದೆ. ಪುಣ್ಯಕ್ಕೆ ಅಪ್ಪ ನನ್ನ ಪಕ್ಷ ಸೇರಿ, ನನಗಿನ್ನೊಂದು ಅವಕಾಶ ನೀಡಿ, ಜಹಂಗೀರ್ ನನ್ನ ಕೈಯಿಂದ ಮಾಡಿಸುವುದೆಂಬ ತೀರ್ಪು ನೀಡಿದರು. ಆದರೂ ಆ ದಿನವಿಡೀ ಅಮ್ಮ ಕಂತು ಕಂತಿನಲ್ಲಿ ಮತ್ತೆ ಮತ್ತೆ ನೆನೆದು ನಗು ಉಕ್ಕಿಸುತ್ತಿದ್ದಳು.
ಇನ್ನೊಮ್ಮೆ ನನ್ನ 'ಪ್ರ್ಯಾಕ್ಟಿಕಲ್ಸ್' ಆರಂಭವಾಯ್ತು. "ಇದೇನು ಕಷ್ಟದ ಕೆಲಸ! ಏನೆಂದುಕೊಂಡೆ ನನ್ನ?" ಕೊಚ್ಚಿಕೊಳ್ಳುವಿಕೆ ಮುಂದುವರಿಸಿದೆ "ನಳ ಮಹಾರಾಜ ನನ್ನ ಕೈ ಕೆಳಗೆ ಟ್ರೈನಿಂಗ್ ತೆಗೊಂಡು...." ಅಮ್ಮನಿಂದ ತಲೆಗೆ ಮೊಟಕಿಸಿಕೊಳ್ಳಬೇಕಾಯಿತು "ಲಾಟು ಬಿಟ್ಟದ್ದು ಸಾಕು! ಅಸಂಬದ್ಧ ಹೇಳಿ ಅವರಿಗೆಲ್ಲ ಅವಮಾನ ಮಾಡ್ಬೇಡ!"
ಅಂತೂ ಈ ಬಾರಿ ಉದ್ದಿನಬೇಳೆಯನ್ನು ಎರಡೆರಡು ಬಾರಿ ಪರೀಕ್ಷಿಸಿ ಹೆಸರು ಬೇಳೆಯಲ್ಲವೆಂದು ಖಚಿತಪಡಿಸಿಕೊಂಡೇ ಪಾತ್ರೆಗೆ ಹಾಕಿದೆ. ಕೊನೆಗೆ ಹಿಟ್ಟನ್ನು ತೂತಿರುವ ಬಟ್ಟೆಗೆ ಹಾಕಿ ಎಣ್ಣೆಗೆ ಸುರಿಯುವಾಗ ಹಿಟ್ಟಿನ ಭಾರ ಹೆಚ್ಚಾಗಿ ತೆಳು ಬಟ್ಟೆಯ ತೂತು ಹರಿದೇ ಹೋಯ್ತು! ಜಹಂಗೀರ್ ಹೋಗಿ ಮದ್ದೂರು ವಡೆಯಾಯ್ತು. ಗ್ರಹಚಾರವೇ! ಸಕ್ಕರ ಪಾಕಕ್ಕೆ ಹಾಕಿದಾಗಲಂತೂ ನನ್ನ "ಪ್ರಯೋಗಶಿಶು" ಕ್ಷಣ ಕ್ಷಣಕ್ಕೂ ಉಬ್ಬತೊಡಗಿತು! ನಿಂತಲ್ಲೇ ನಾನು ಡ್ಯಾನ್ಸ್ ಮಾಡತೊಡಗಿದೆ.
ಅಲ್ಲಿಗೆ ನನ್ನ ಮಾನ ಲಗಾಡಿ ತೆಗೆಯಲು ಅಮ್ಮನ ಸವಾರಿಯೂ ಬಂತು! ಸತ್ತೆ! ನನ್ನ ಕರ್ಮವೇ?! ಅಮ್ಮನ ಪ್ರಶ್ನೆ... "ಏನಾಯ್ತು?" ಬೇಗ ಬೇಗನೆ ಮುಚ್ಚಿಡುತ್ತಾ ಹೇಳಿದೆ "ಏನಿಲ್ಲ" ಅಮ್ಮನೆದುರು ಗುಟ್ಟು ರಟ್ಟಾಗದೆ ಉಳಿದೀತೇ? ಕೇಳಿಯೇ ಬಿಟ್ಟಳು "ಮತ್ಯಾಕೆ ಹಡಗು ಮುಳುಗಿದ ಹಾಗೆ ಮಾಡ್ತಾ ಇದ್ದೀ?" "ಓ ಅದಾ...?" ಮುಚ್ಚಳ ಸರಿಸಿ ಹಲ್ಲು ಕಿರಿದೆ! ನನ್ನ ಬ್ಯಾಟ್ರಿ ಅಲ್ಲಿಗೆ ಖಾಲಿ! ಕಡಿಮೆಯೆಂದರೆ, ಇನ್ನೊಂದು ನಾಲ್ಕು ತಿಂಗಳಿಗೆ ಸಾಕು "ಇವಳು ಅಡುಗೆ ಮಾಡಿದ ಹಾಗೆ" ಎನ್ನುವ ಗಾದೆ ಮಾತು! ಇಷ್ಟೆಲ್ಲಾ ನಡೆದರೂ ನಾನು ಅಡುಗೆ ಮಾಡುವುದು ನಿಲ್ಲಿಸಲಿಲ್ಲ. "ಟ್ರೈ ಆಂಡ್ ಟ್ರೈ ಅಂಟಿಲ್ ಯು ಸಕ್ಸೀಡ್". ಆದರೆ ಕ್ರಿಸ್ಮಸ್ ರಜೆ ಮಾತ್ರ ಮುಗಿಯಿತು. ಮುಂದಿನ ರಜೆಯಲ್ಲಿ ಮೂರನೇ ಬಾರಿಗೆ ಸಿಹಿತಿಂಡಿ ಮಾಡಲಿದ್ದೇನೆ. ಅದರ ರುಚಿ ನೋಡಿದವರು ಹಿಂದೆ ನನ್ನನ್ನು ಛೇಡಿಸಿದ್ದಕ್ಕೆ ಬೇಸರ ಪಟ್ಟು "ಅಡುಗೆ ಅಂದ್ರೆ ಇವಳ ಅಡುಗೆ" ಎಂಬ ಹೊಸ ಗಾದೆ ಮಾತು ಕಂಡುಕೊಳ್ಳಲಿದ್ದಾರೆ. ಖಂಡಿತವಾಗಿಯೂ ನಿಮಗೂ ಹಂಚುತ್ತೇನೆ. ರುಚಿ ನೋಡಿ ಮತ್ತೆ ಹೇಳಿ!!!

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 420 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 26, 2007 - 11:09pm — hpn

ಉ: ಪಾಕ-ಫಜೀತಿ

hpn's picture

ಬಹಳ ಚೆನ್ನಾಗಿ ಬರೆದಿದ್ದೀರ.

ಹೋಳಿಗೆ ಮಾಡುವುದು ಬಹಳ ಕಷ್ಟವೆಂದು ಕೇಳಿರುವೆ. ತೊಗರಿಬೇಳೆ ಬಳಸ್ತಾರೆ ಹೂರ್ಣಕ್ಕೆ ಅಂದ್ಕೊಂಡಿದ್ದೆ. ಏನೇ ಆದರೂ ಈ ರೀತಿಯ ಹೋಳಿಗೆ ಕಾಯಿ ಹೋಳಿಗೆಯಷ್ಟು ಚೆಂದ ಇರೋದಿಲ್ಲ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 28, 2007 - 7:16pm — ಶಿವ

ಉ: ಪಾಕ-ಫಜೀತಿ

ಶಿವ's picture

ಬೇಳೆಗಳ ಸಹವಾಸ!! ಕೆಲವೊಮ್ಮೆ ತಲೆ ಕೆಟ್ಟು ಹೋಗುತ್ತೆ.

Quote:

'ಲಾಟು ಬಿಟ್ಟದ್ದು ಸಾಕು'

'ಲಾಟು' ಕೇಳಿ ತುಂಬ ದಿವಸಗಳಾಗಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 28, 2007 - 8:47pm — Sunil Jayaprakash

ಉ: ಪಾಕ-ಫಜೀತಿ

Sunil Jayaprakash's picture

ಉಮಾದೇವಿ ಅವರೇ, ಚಾಂಗ್(=ಸೂಪರ್ ಸುಪ್ರೀಂ) ಬರಹ ಕಣ್ರೀ. ನಮ್ಮನೇಲಂತೂ ಅವಾಗವಾಗ ಬೇಳೆ ಒಬ್ಬಟ್ಟು ತಯಾರಾಗ್ತಾನೇ ಇರತ್ತೆ Eye-wink ನಾನು ಹಿಂದೆ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಗೋಧಿ ರೊಟ್ಟಿ ಮಾಡ್ಕೊಳ್ತಾ ಇದ್ದೆ. ಈಗ ಒಂದು ವೇಳೆ ಅವಾಗ್ಲೋ ಇವಾಗ್ಲೋ ನಾನೇ ಅಡಿಗೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದರೆ ಮಾಡೋದು ಒಂದೇ ಅವಲಕ್ಕಿ-ಹಾಲು-ಸಕ್ಕರೆ(ಜೇನುತುಪ್ಪ) Laughing out loud ಅದೊಂದು ನೋಡಿ, ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎಲ್ಲದಕ್ಕೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಆಗಿಹೋಗತ್ತೆ Sticking out tongue

ಹಾಂ!!! ಮರೆತಿದ್ದೆ, ಮುಂದಿನ ಬಾರಿ ಚೆನ್ನಾಗಿ ಮಾಡಿ ನಿಮ್ಮಮ್ಮನ ಕೈಲಿ ಭೇಷ್ ಅನ್ನಿಸಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 29, 2007 - 6:39pm — rameshbalaganchi

ಉ: ಪಾಕ-ಫಜೀತಿ

rameshbalaganchi's picture

ಬೇಡ ಉಮಾದೇವಿಯವರೆ,
ನಿಮ್ಮ ಲಾಟು ಓದಿಯೆ ಹೈರಾಣಾಗಿದ್ದೇನೆ. ಇನ್ನು ನೀವು ಹಂಚುವ ಪಾಕವನ್ನು ತಿನ್ನುವ ಧೈರ್ಯ ಯಾಕೋ ಆಗುತ್ತಿಲ್ಲ. Smiling). ನಿಮ್ಮ ಊರು ಯಾವ ದಿಕ್ಕಿಗಿದೆ ಹೇಳಿದರೆ ನಾನು ನನ್ನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 30, 2007 - 12:11pm — kpbolumbu

ಉ: ಪಾಕ-ಫಜೀತಿ

kpbolumbu's picture

ಉಮಾದೇವಿ,
ಮರಳಿ ಯತ್ನವ ಮಾಡಿರಿ...ಇನ್ನೂ ಚೆನ್ನಾಗಿ ಅಡಬಲ್ಲಿರೆನ್ನುವುದರಲ್ಲಿ ಅನುಮಾನವಿಲ್ಲ.
______
ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಡುಗೆಯ ಸಂಭ್ರಮ
  • ನಿಂಬೆ ಹಣ್ಣಿಗೆ ಮುಕ್ತಿ
  • ಹೀಗು ಉಂಟೆ ನಮ್ಮಜ್ಜಿ...!!
  • ಅಮ್ಮನ ದಿನ
  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೪)
Syndicate content

ಲೇಖಕರು

umadevin's picture

ಪೂರ್ಣ ಹೆಸರು
ಉಮಾದೇವಿ ನೆಟ್ಟಾರು

ಪರಿಚಯ

ವಿದ್ಯಾರ್ಥಿನಿ, ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 53 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator