ಮೇರಾ ಧರಂ ಮಹಾನ್!
ಒಂದು ತಮಾಷೆಯ ಸಂಗತಿಯನ್ನು ಹೇಳುತ್ತೇನೆ ಕೇಳಿ, ನಮ್ಮ ನಡುವಿನ ‘ಹಿಂದು' ಸಂಘಟನೆಗಳು, ಹಿಂದುತ್ವ ಒಂದು
ಜೀವನವಿಧಾನ, ಅದು
ಒಂದು ಧರ್ಮವಲ್ಲ ಎನ್ನುತ್ತಲೇ ಇತರ ಧರ್ಮಗಳೆದುರು ಹಿಂದುಗಳು ಒಗ್ಗೂಡಬೇಕು, ನಮಗೆ ಹಿಂದೂ ಧರ್ಮವೇ
ಮುಖ್ಯ ಎಂದೆನ್ನೆವ ಡೈನಮಿಕ್ ಯುವ ಪತ್ರಕರ್ತರ ವಾದವಿದು. ಅದು ಅಮೀರ್ ಖಾನ್ ಮೇಧಾ ಪಾಟ್ಕರ್‌ಳ ಹೋರಾಟಕ್ಕೆ ನಿಂತ
ವೇಳೆಯಾಗಲಿ, ಅರುಂಧತಿ
ರಾಯ್, ಅನಂತಮೂರ್ತಿಯಂತಹ
ಸಮಾಜ ಗುರುತಿಸಿದ ಚಿಂತಕರು ಗುಜರಾಥಿನ ಸರಕಾರಿ ಬೆಂಬಲಿತ ಕೋಮು ಗಲಭೆಯನ್ನು ಖಂಡಿಸಿ ಮಾತನಾಡಿದಾಗ
ಅಲ್ಲಿ ಕಾಶ್ಮೀರದಲ್ಲಿ ಲಕ್ಷಾಂತರ ಮಂದಿ ಹಿಂದುಗಳ ಮಾರಣಹೋಮ ನಡೆಯುವಾಗ ಇವರೆಲ್ಲಾ ಎಲ್ಲಿದ್ದರು? ಎಂದು
ಪ್ರಶ್ನಿಸುತ್ತಾರೆ. ತಾಕತ್ತಿದ್ದರೆ
ಮುಸ್ಲೀಮ ಧರ್ಮವನ್ನು ಟೀಕಿಸಿ ನೋಡೋಣ ಅಂತ ಉಗ್ರವಾಗಿ ಪ್ರತಾಪವನ್ನು ತೋರಿಸುತ್ತಾರೆ. ಅಯ್ಯೋ ಈ
ಮುಸ್ಲೀಮರಿಗೆ ಒಳ್ಳೆಯವರು ಆದರ್ಶವಾಗುವುದೇ ಇಲ್ಲವೇ ಎಂದು ಅಪಾರ ವೇದನೆಯನ್ನು ಅನುಭವಿಸುವವರಂತೆ
ಹುಯಿಲಿಡುತ್ತಾರೆ.
ಗಮನಿಸಿ ನೋಡಿ, ಅದು ರಾಮಸೇತುವಿನ ವಿವಾದವಿರಬಹುದು, ರಾಮ ಎಂಬ ಐತಿಹಾಸಿಕ
ವ್ಯಕ್ತಿಯ ಅಸ್ತಿತ್ವವನ್ನು ಪ್ರಶ್ನಿಸಿದ ಘಟನೆಯಾಗಿರಬಹುದು ಈ ಫೈರ್ ಬ್ರ್ಯಾಂಡ್
ಹಿಂದುತ್ವವಾದಿಗಳು ಹಾಗೂ knee jerk reactionary ಬರಹಗಾರರು ವಿವಾದವನ್ನು ವಸ್ತುನಿಷ್ಠವಾಗಿ ಪರಿಶೀಲಿಸುವ
ಬದಲು ರಸ್ತೆಯ ಬದಿಯಲ್ಲಿ ನಿಂತು ಭಾವಾದ್ವೇಗದಿಂದ ಅರಚುವ ಅಂಧಾಭಿಮಾನಿಯಂತೆ ‘ಹಾಗಿದ್ದರೆ
ಮುಸ್ಲೀಮರನ್ನು ನಿಂದಿಸಿ ನೋಡೋಣ, ಕ್ರೈಸ್ತರ ನಂಬಿಕೆಗಳನ್ನು ಸುಳ್ಳು ಎನ್ನಿ ನೋಡೋಣ' ಎಂದು ಸವಾಲು ಹಾಕುತ್ತಾರೆ. ಹಿಂದು ಧರ್ಮವನ್ನು
ಟೀಕಿಸಿದಾಗ, ನಂಬಿಕೆಗಳನ್ನು
ಪ್ರಶ್ನಿಸಿದಾಗ ತಮ್ಮ ಭಾವನೆಗಳಿಗೆ ನೋವಾಗುತ್ತದೆ ಎನ್ನುವವರು ಬೇರೆ ಧರ್ಮವನ್ನು ಟೀಕಿಸಿ ಆಗ
ನಮಗೆ ನೋವಾಗುವುದಿಲ್ಲವೆನ್ನುತ್ತಾರೆಂದರೆ ಇವರ ಭಾವನೆಗಳಾದರೂ ಎಂಥವು?
ಹಿಂದುಗಳು ಸೌಮ್ಯ ಸ್ವಭಾವದವರು, ಸಹಿಷ್ಣುಗಳು ಅವರು
ಧರ್ಮ ನಿಂದನೆಯನ್ನು ಸಹಿಸಿಕೊಂಡು, ಸಹಿಸಿಕೊಂಡು ಬಂದಿದ್ದರಿಂದಲೇ ಮಾತನಾಡುವವರಿಗೆ ಇಷ್ಟು ಧಿಮಾಕು ಎಂಬ ಧಾಟಿಯಲ್ಲಿ
ಮಾತನಾಡುವ ಯುವ ಹಿಂದು ನಾಯಕರು, ಪತ್ರಕರ್ತರು ಹಿಂದು ಧರ್ಮ ಇಸ್ಲಾಮಿಗಿಂತ ಎಷ್ಟೋ ಪ್ರಗತಿಹೊಂದಿದೆ, ಅಭಿಪ್ರಾಯ
ಸ್ವಾತಂತ್ರ್ಯವನ್ನು ಹತ್ತಿಕ್ಕುವ ತಾಲಿಬಾನಿ ಮನಸ್ಥಿತಿ ಇಲ್ಲ ಎಂದು ಸಾರುತ್ತಲೇ ಅದನ್ನೇ
ಅಪ್ಪಿಕೊಳ್ಳುವತ್ತ ಸಾಗುತ್ತಿದ್ದಾರೆಯೇ? ಕರುಣಾನಿಧಿಯ ವಿರುದ್ಧ ಘೋಷಣೆಯಾದ ‘ಹಿಂದು ಫತ್ವಾ' ಇರಬಹುದು, ‘ಪ್ರೀತಿ ಏಕೆ ಭೂಮಿ
ಮೇಲಿದೆ' ಚಿತ್ರದ
ಬಗ್ಗೆ ಅನಗತ್ಯ ವಿವಾದವನ್ನು ಎಬ್ಬಿಸಿದ್ದಿರಬಹುದು, ಮತಾಂತರ ಮಾಡುತ್ತಿದ್ದಾರೆ ಎಂಬ ಪುಕಾರು ಹಬ್ಬಿಸಿ ಅಮಾಯಕ
ಕ್ರೈಸ್ತರ ಮೇಲೆ ಹಲ್ಲೆ ನಡೆಸುವುದಿರಬಹುದು ಇವೆಲ್ಲಾ ಎಲ್ಲಿಯ ಹಿಂದು ಧರ್ಮದ ಗುಣಗಳಯ್ಯಾ? ಇವನ್ನೆಲ್ಲಾ
ಪ್ರಶ್ನಿಸುವವರು ‘ಲದ್ದಿ
ಜೀವಿಗಳು'... ಮೇರಾ
ಧರಂ ಮಹಾನ್!

- Login or register to post comments
- 327 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: