ಭರತೇಶ ವೈಭವ ಕಲ್ಪು ೭ - ರತ್ನಾಕರವರ್ಣಿಯ ಕಾಲದ ವಿಚಾರ
ಗೆಳೆಯರೆ, ಈ ದಿನ "ಕನ್ನಡ ಸಾಹಿತ್ಯ ಪರಿಷತ್ತು" ನಡೆಸುವ ಪುಸ್ತಕ ಸಂತೆಗೆ ಹೋಗಿದ್ದೆ. ಸಂತೆಯಲ್ಲಿ ತಡಕಾಡುತ್ತಿದ್ದಾಗ "ಭರತೇಶ ವೈಭವ"ದ ಕ್ಯಾಲಿಕೋ ಪ್ರತಿ ಸಿಕ್ಕಿತು. ನಾನು ಇಷ್ಟು ದಿನ ಓದಿದ್ದು, ಕುವೆಂಪು ಅವರು ಸಂಪಾದಿಸಿದ್ದ, "ಭರತೇಶ ವೈಭವ ಸಂಗ್ರಹ"ವನ್ನು. ಈ ದಿನ ಕೊಂಡಿದ್ದು ಪ್ರೊ.ಜಿ.ಬ್ರಹ್ಮಪ್ಪ, ಡಾ.ಹಂಪ ನಾಗರಾಜಯ್ಯ ಮತ್ತು ಡಾ.ಸಿ.ಆರ್.ಕಮಲಮ್ಮ ಹಂಪನಾ ಸಂಪಾದಿಸಿದ ಕೃತಿ. ೫೦% ಡಿಸ್ಕೌಂಟಿನಿಂದಾಗಿ ಈ ದಿನ ಅದರ ಬೆಲೆ "ಕೇವಲ" ನೂರು ರೂ!!!
ಕುವೆಂಪು ಅವರ ಸಂಗ್ರಹವನ್ನು ಓದುವಾಗ ಬಗೆಹರಿಯದಿದ್ದ ಕೆಲವೊಂದು ಸಮಸ್ಯೆಗಳಿಗೆ ಈ ಪುಸ್ತಕದಲ್ಲಿ ಉತ್ತರ ದೊರೆಯಿತು. ಅದರಲ್ಲಿ ಮೊಟ್ಟಮೊದಲನೆಯದು ಭರತೇಶ ವೈಭವದ ಕರ್ತೃವಾದ ರತ್ನಾಕರವರ್ಣಿಯ ಕಾಲದ ವಿಚಾರ. ಅದರ ವಿಚಾರಗಳು ಇಂತಿವೆ.
ರತ್ನಾಕರವರ್ಣಿಯ ಜಾತಕ ರೂಪುರೇಷೆ
ರತ್ನಾಕರನ ಜನನ - ಸುಮಾರು ೧೫೩೨
ತ್ರಿಲೋಕಶತಕದ ರಚನೆ - ಸುಮಾರು ೧೫೫೭
ಭರತೇಶವೈಭವದ ರಚನೆ - ಸುಮಾರು ೧೫೬೭ (ಅಂದರೇ ಆಗ ಕವಿಗೆ ೩೫ ವರ್ಷ ವಯಸ್ಸು)
ರತ್ನಾಕರ ವೀರಶೈವನಾದುದು - ಸುಮಾರು ೧೫೭೨
ರತ್ನಾಕರ ಮತ್ತೆ ಜೈನನಾದುದು - ಸುಮಾರು ೧೫೭೫
ರತ್ನಾಕರಶತಕದ ರಚನೆ - ಸುಮಾರು ೧೫೭೭
ಅಪರಾಜಿತಶತಕದ ರಚನೆ - ಸುಮಾರು ೧೫೮೨
ಅಧ್ಯಾತ್ಮಗೀತದ ರಚನೆ - ಸುಮಾರು ೧೫೮೭
ರತ್ನಾಕರನ ಮರಣ ಕ್ರಿ.ಶ. ೧೬೦೦ರ ನಂತರ.
ಇವಿಷ್ಟು ವಿಷಯಗಳನ್ನು ಸಂಪಾದಿಸಿ ಕೊಟ್ಟ ಮತ್ತು ಲೇಖಕರಿಗೆ ನೆರವಾದ ಪ್ರತಿಯೊಬ್ಬರಿಗೂ ನಾವು ನನ್ನಿಗಳನ್ನು ತಿಳಿಸಲೇಬೇಕು.
ಕೊಕೊ - ಮೇಲೆ ಹೆಸರಿಸಲಾದ ಕೆಲವೊಂದು ಪುಸ್ತಕಗಳು ಡಿ.ಎಲ್.ಐನಲ್ಲಿವೆ.

- Login or register to post comments
- 207 hits
- Email this page





RSS: